Jayaram Karthik: ಹೊಸ ಅವತಾರದಲ್ಲಿ ಜೆಕೆ, ಈ ಸಲ ಅರೇಬಿಯನ್​ ನೈಟ್ಸ್ ನಲ್ಲಿ ಡಿಫರೆಂಟ್​ ಲುಕ್​ 

ಜೆಕೆ ಮತ್ತೆ ಹಿಂದಿಯ ಸೀರಿಯಲ್​ ನತ್ತ ಮುಖ ಮಾಡಿದ್ದಾರೆ. ಕಳೆದ ವರ್ಷದ ಹಿಂದೆ ಜಯರಾಮ್​ ಕಾರ್ತಿಕ್​ ಅವರು ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ಆರ್ಭಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಇದೀಗ 5 ವರ್ಷಗಳ ನಂತರ ಹಿಂದಿ ಕಿರುತೆರೆಗೆ ಮತ್ತೆ ಕಾಲಿಟ್ಟಿದ್ದಾರೆ. 

ಜಯರಾಮ್ ಕಾರ್ತಿಕ್

ಜಯರಾಮ್ ಕಾರ್ತಿಕ್

  • Share this:
ಕನ್ನಡ (Kannada) ಕಿರುತೆರೆಯಲ್ಲಿ 'ಅಶ್ವಿನಿ ನಕ್ಷತ್ರ' (Ashwini Nakshatra) ಧಾರಾವಾಹಿ ಅಂದಿನ ಸಮಯಕ್ಕೆ ಭರ್ಜರಿಯಾಗಿ ಯಶಸ್ವಿಯಾಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಜಯರಾಮ್​ ಕಾರ್ತಿಕ್ (Jayaram Karthik)​ ಅಲಿಯಾಸ್​ ಜೆಕೆ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದರು. ನಂತರದಲ್ಲಿ ಸ್ಯಾಂಡಲ್​ವುಡ್ ನಲ್ಲಿಯೂ (Sandalwood) ಅನೇಕ ಸಿನಿಮಾ ಗಳಲ್ಲಿ ನಟಿಸಿದ್ದಾರೆ. ಆದರೆ ಅಶ್ವಿನಿ ನಕ್ಷತ್ರ ಸೀರಿಯಲ್ ನಂತರ ಹೆಚ್ಚು ಹಿಂದಿ ಸೀರಿಯಲ್​ ಕಡೆ ಮುಖ ಮಾಡಿದ ಜೆಕೆ, ಹಿಂದಿಯ ಸಿಯಾ ಕೆ ರಾಮ್ ಧಾರಾವಹಿಯಲ್ಲಿ ರಾವಣನಾಗಿ ಆರ್ಭಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಇದೀಗ ಮತ್ತೆ ಹಿಂದಿಯ ಸೀರಿಯಲ್ (Serial )​ ನತ್ತ ಮತ್ತೆ ಮುಖ ಮಾಡಿದ್ದಾರೆ. ಹೌದು, ಹೊಸ ಸೀರಿಯಲ್​ ನಲ್ಲಿ ಆಲಿಬಾಬನಾಗಿ ಜೆಕೆ ಕಾಣಿಸಿಕೊಳ್ಳಲಿದ್ದಾರೆ.

ಆಲಿಬಾಬಾ ಅವತಾರ ತಾಳಿದ ಜೆಕೆ:

ಹೌದು, ಮತ್ತೆ ಜೆಕೆ ಹಿಂದಿಯ ಸೀರಿಯಲ್​ ನತ್ತ ಮುಖ ಮಾಡಿದ್ದಾರೆ. ಕಳೆದ ವರ್ಷದ ಹಿಂದೆ ಜಯರಾಮ್​ ಕಾರ್ತಿಕ್​ ಅವರು ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ಆರ್ಭಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಇದೀಗ 5 ವರ್ಷಗಳ ನಂತರ ಹಿಂದಿ ಕಿರುತೆರೆಗೆ ಮತ್ತೆ ಕಾಲಿಟ್ಟಿದ್ದಾರೆ. ಅದೇ ರೀತಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಅಬ್ಬರಿಸಲು ಜೆಕೆ ಬಂದಿದ್ದಾರೆ. ಹಿಂದಿಯ ಪ್ರಸಿದ್ಧ ನಿರ್ದೇಶಕ ಮಾನ್ ಸಿಂಗ್ ಆಕ್ಷನ್ ಕಟ್ ಹೇಳುತ್ತಿರುವ ‘ಆಲಿಬಾಬಾ ದಸ್ತಾನ್-ಎ-ಕಾಬೂಲ್‘ ಎಂಬ ಸೀರಿಯಲ್​ ನಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್​ನ ಫಸ್ಟ್​ ಲುಕ್​ ಸಹ ರಿಲೀಸ್​ ಆಗಿದೆ.


ಅಲ್ಲದೇ ಈ ಕುರಿತು ಜೆಕೆ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿಯೂ ಫಸ್ಟ್ ಲುಕ್​ ಫೋಟೋವನ್ನು ಹಂಚಿಕೊಂಡಿದ್ದು, ‘ಕಾಯುವಿಕೆ ಮುಗಿದಿದೆ! ಇಲ್ಲಿ ಕಾಲ್ಪನಿಕ ಪ್ರಪಂಚದ ಇತಿಹಾಸದಲ್ಲಿ ಭಯಾನಕ ದುಷ್ಟ ರಾಕ್ಷಸ ಬರುತ್ತಾನೆ. ಸೋನಿ ಸಬ್​ ನಲ್ಲಿ ಆಲಿ ಬಾಬಾ ದಾಸ್ತಾನ್-ಎ-ಕಾಬೂಲ್ ಸೀರಿಯಲ್ ಬರಲಿದೆ. ಅಲಿಬಾಬಾ ಮತ್ತು 40 ಕಳ್ಳರು ಕಥೆಯಿಂದ ಸಣ್ಣ ಎಳೆಯನ್ನು ತೆಗೆದುಕೊಂಡು ಈ ಸೀರಿಯಲ್​ ಅನ್ನು ರೂಪಿಸಲಾಗಿದೆ.ಸೀರಿಯಲ್​ ಶೂಟಿಂಗ್​ ಅನ್ನು ಲಡಾಖ್‌ನಲ್ಲಿ ಪ್ರಾರಂಭಿಸುತ್ತೇವೆ. ಅಲ್ಲದೇ ಈ ಸೀರಿಯಲ್​ ಮೂಲಕ ನಾನು ಜನರ ನಿರೀಕ್ಷೆಯ ಮಟ್ಟವನ್ನು ತಲುಪುತ್ತೇನೆ ಎಂಬ ನಂಬಿಕೆ ಇದೆ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಕಿ ಭಾಯ್ ಅಬ್ಬರಕ್ಕೆ ಬೆಚ್ಚಿದ್ದ ಅಮೀರ್​, KGF 2 ಎದುರು ಬರದೇ ಬದುಕಿದೆವು ಎಂದ ಬಾಲಿವುಡ್​ ಮಿಸ್ಟರ್​ ಪರ್ಫೆಕ್ಟ್!

ವಿವಾಹದ ಕುರಿತು ಸ್ಪಷ್ಟನೆ ನೀಡಿದ್ದ ಕಾರ್ತಿಕ್:

ಇನ್ನು, ಕೆಲ ತಿಂಗಳುಗಳ ಹಿಂದೆ ಜೆಕೆ ಹಂಚಿಕೊಂಡಿದ್ದ ಇನ್ಸ್ಟಾಗ್ರಾಂ ಪೋಸ್ಟ್ ಸಖತ್ ವೈರಲ್ ಆಗಿತ್ತು. ಅದಲ್ಲದೇ ಜೆಕೆ ವಿವಾಹವಾಗುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡಲಾರಂಭಿಸಿತು. ಆದರೆ ಈ ಕುರಿತು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, ‘ಈ ಸುದ್ದಿ ಸುಳ್ಳು, ಅದೆಷ್ಟು ಬಾರಿ ನನಗೆ ವಿವಾಹ ಮಾಡಿಸ್ತಾರೋ ಗೊತ್ತಿಲ್ಲ ಎನ್ನುವ ಮೂಲಕ ಸುಳ್ಳು ಸುದ್ದಿಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜೆಕೆ ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಹೀಗಾಗಿ ಇವರಿಬ್ಬರ ವಿವಾಹವಾಗಲಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡಿದ್ದವು.

ಇದನ್ನೂ ಓದಿ: ಮನೆಯಲ್ಲೇ ಕೂತು ಚಾರ್ಲಿಯ ತುಂಟಾಟ ನೋಡಿ, 777 Charlie ಓಟಿಟಿ ರಿಲೀಸ್ ಡೇಟ್​ ಅನೌನ್ಸ್

ಬಹುಭಾಷೆಗಳಲ್ಲಿ ಮಿಂಚುತ್ತಿರುವ ಕಾರ್ತಿಕ್:

ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಅವರು ಕನ್ನಡ ಮಾತ್ರವ್ಲಲದೇ ಅನೇಕ ಬೇರೆ ಭಾಷೆಗಳ ಸೀರಿಯಲ್​ ಗಳಲ್ಲಿಯೂ ನಟಿಸಿದ್ದಾರೆ. ಅಶ್ವೀನಿ ನಕ್ಷತ್ರ ಸೀರಿಯಲ್ ನಂತರ ಅವರು ಹೆಚ್ಚು ಪ್ರಸಿದ್ಧರಾದರು. ಬಳಿಕ ಜೆಕೆ ಹಿಂದಿನ ಪೌರಾಣಿಕ ಧಾರಾವಾಹಿ ಸಿಯಾ ಕೆ ರಾಮ್ ನಲ್ಲಿ ರಾವಣನಾಗಿ ಅಬ್ಬರಿಸಿದರು. ನಂತರದಲ್ಲಿ ಕನ್ನಡದ ಬಿಗ್​ ಬಾಸ್​ ಸೀಸನ್ 5ರಲ್ಲಿ ರನ್ನರ್ ಅಫ್ ಆಗಿ ವಿಜೇತರಾದರು. ಇವುಗಳ ಮದ್ಯೆ ಸ್ಯಾಂಡಲ್​ ವುಡ್​ ನಲ್ಲಿ ಕೆಂಪೇಗೌಡ, ವರದನಾಯಕ, ಜರಾಸಂಧ, ಆ ಕರಾಳ ರಾತ್ರಿ, ವಿಷ್ಣುವರ್ಧನ, ವಿಸ್ಮಯ, ಜಸ್ಟ್ ಲವ್, ಮೇ 1, ಬೆಂಗಳೂರು 560023 ಚಿತ್ರಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಸಿದ್ದು, ಸದ್ಯ ಚಿತ್ರರಂಗದಲ್ಲಿ ಬ್ಯೂಸಿಯಾಗಿದ್ದಾರೆ.
Published by:shrikrishna bhat
First published: