Actor JK: ಸೂಪರ್​ ಸ್ಟಾರ್ ಜೆಕೆ ಮದುವೆ ಸುದ್ದಿ ಸುಳ್ಳೇ? ಇಲ್ಲಿದೆ Exclusive ಇಂಟರ್​ವ್ಯೂ

ಸ್ಟಾರ್ ಜೆಕೆ ಬಾಲಿವುಡ್ ಸೀರಿಯಲ್​ಗೆ ಫಿಕ್ಸ್ ಆದ್ರಾ ? ಕನ್ನಡ ಚಿತ್ರ ಮಾಡೋದಿಲ್ವೇ ? ಮದುವೆ ಬಗ್ಗೆ ಜೆಕೆ ಹಾಗೆ ಹೇಳಿದ್ಯಾಕೆ ? ಇಲ್ಲಿದೆ ಜೆಕೆ ಜೊತೆಗಿನ ನಮ್ಮ ವಿಶೇಷ ಸಂದರ್ಶನ ಓದಿ. 

ಜೆಕೆ

ಜೆಕೆ

  • Share this:
    ಅಶ್ವಿನಿ ನಕ್ಷತ್ರ ಸೀರಿಯಲ್​ನ ಸೂಪರ್ ಸ್ಟಾರ್ ಜೆಕೆ ಸೀರಿಯಲ್ ಲೋಕದಲ್ಲಿಯೇ ಹೆಚ್ಚು ಮಿಂಚಿರೋದು. ದೊಡ್ಡ ಪರದೆಯಲ್ಲೂ ಈ ನಾಯಕ ನಟನಿಗೆ ಬೇಡಿಕೆ ಇದ್ದೇ ಇದೆ. ಈಗ ಬಾಲಿವುಡ್ ನ ಅದ್ದೂರಿ ಸೀರಿಯಲ್ ಆಗಿರೋ Alibaba Dastan-e-Kabul Chapter 1 ನಲ್ಲಿ ಇಬ್ಲಿಸ್ (Iblis) ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈ ನಡುವೆ ನಮಗೆ ಸಂದರ್ಶನಕ್ಕೆ ಸಿಕ್ಕಿದ್ದಾರೆ. ಸಖತ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಮದುವೆ ವಿಚಾರದಲ್ಲಿ ಹಬ್ಬಿರೋ ಸುದ್ದಿಯ ಬಗ್ಗೆ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್  (Karthik Jayaram) ತೆರೆ ಎಳೆದು ಬಿಟ್ಟಿದ್ದಾರೆ. ಸ್ಟಾರ್ ಜೆಕೆ ಬಾಲಿವುಡ್ ಸೀರಿಯಲ್​ಗೆ ಫಿಕ್ಸ್ ಆದ್ರಾ ? ಕನ್ನಡ ಚಿತ್ರ ಮಾಡೋದಿಲ್ವೇ ? ಮದುವೆ ಬಗ್ಗೆ ಜೆಕೆ ಹಾಗೆ ಹೇಳಿದ್ಯಾಕೆ?  ಇಲ್ಲಿದೆ ಜೆಕೆ ಜೊತೆಗಿನ ನಮ್ಮ ವಿಶೇಷ ಸಂದರ್ಶನ ಓದಿ. 


    ಕನ್ನಡ ಚಿತ್ರರಂಗದಿಂದ ಜೆಕೆ ದೂರ ಆಗುತ್ತಿದ್ದಾರಾ ? ಇಲ್ಲವೇ ಹಿಂದಿ ಸೀರಿಯಲ್ ನಲ್ಲಿ ಬೇಡಿಕೆ ಹೆಚ್ಚಾಗುತ್ತಿದಿಯೇ ?

    ಜೆ.ಕೆ: ಅವಕಾಶ ಸಿಗೋ ಕಡೆಗೆ ಕೆಲಸ ಮಾಡಬೇಕು. ಅದು ಮುಖ್ಯ.

    ಜೊತೆ ಜೊತೆಯಲಿ ಸೀರಿಯಲ್ ಅನಿರುದ್ಧ ಪಾತ್ರಕ್ಕೆ ನಿಮ್ಮ ಹೆಸರು ಕೇಳಿ ಬಂದಿತ್ತು. ಅದು ನಿಜವೇ ? ಅಪ್ರೊಚ್ ಮಾಡಿದ್ರಾ ?

    ಜೆ.ಕೆ: ಅದು ಸುಳ್ಳು. ಅಪ್ರೂಚ್ ಮಾಡಿಲ್ಲ, ನಾನು ಮಾಡೋದೂ ಇಲ್ಲ.

    ಮದುವೆ ಆಗುತ್ತಿದ್ದೀನಿ ಅಂತ ಸಿಹಿ ಸುದ್ದಿ ಕೊಟ್ರಿ. ಆದರೆ, ಮದುವೆ ಯಾವಾಗ ಸರ್?

    ಜೆ.ಕೆ: ಮತ್ತೆ ಸುಳ್ಳು ಸುದ್ದಿ.

    ಅಲಿಬಾಬಾ ಇಬ್ಲಿಸ್ ಬಗ್ಗೆ ಹೇಳಿ? ನಿಮ್ಮನ್ನ ವಿಲನ್ ಪಾತ್ರಗಳೇ ಏಕೆ ಹುಡುಕಿಕೊಂಡು ಬರುತ್ತವೆ?

    ಜೆ.ಕೆ: ಈ ಧಾರಾವಾಹಿಯಲ್ಲಿ ಇಬ್ಲಿಸ್ ಪಾತ್ರ ತುಂಬಾ ಮುಖ್ಯವಾದ ಪಾತ್ರ. ಹೀರೋಗೆ main opposite ಪಾತ್ರ. ತುಂಬಾನೇ globally recognize ಆಗುವಂತ ಪಾತ್ರ. Villain ಅನ್ನೋದಿಕ್ಕಿಂತ performance oriented ಪಾತ್ರ ಇದು.

    Super star Jayaram Karthik
    ಕನ್ನಡದ ಹೀರೋನ ಹಿಂದಿ ಸೀರಿಯಲ್


    ಕನ್ನಡದ ಸೀರಿಯಲ್ ಯಾವುದೂ ಮಾಡೋದಿಲ್ವೇ ? ಅಥವಾ ಕನ್ನಡದಲ್ಲಿ ಸಿನಿಮಾ, ಹಿಂದಿಯಲ್ಲಿ ಸೀರಿಯಲ್ ಅಂತ ಏನಾದರೂ ಪ್ಲಾನ್ ಮಾಡಿದ್ದೀರಾ ?

    ಜೆ.ಕೆ: ಕನ್ನಡ cinema ಹಾಗೂ ಹಿಂದಿಯಲ್ಲಿ serial, cinema ಮಾಡುತ್ತೇನೆ.

    ಈಗಾಗಲೇ ನೀವು ಒಪ್ಪಿಕೊಂಡಿರೋ ಸಿನಿಮಾ ಯಾವುವು ?

    ಜೆ.ಕೆ: ಕನ್ನಡದಲ್ಲಿ ಎರಡು cinema ರಿಲೀಸ್​ಗೆ ಇದೆ. ಒಂದು ಐರಾವನ್ ಮತ್ತೊಂದು ಕಾಡ ಸಿನಿಮಾ.

    ಇದನ್ನೂ ಓದಿ: Vaijanath Biradar: 90 ಬಿಡಿ ಮನೆಗೆ ನಡಿ; ಭಿಕ್ಷುಕ ಪಾತ್ರಕ್ಕೇ ಫೇಮಸ್ ಆಗಿದ್ದ ವೈಜನಾಥ್ ಬಿರಾದಾರ್ ಈಗ ಹೀರೋ!

    Super Star Jayaram Looks Good
    ಜಯರಾಮ್ ಕಾರ್ತಿಕ್ ಲುಕ್ಸ್ ಹ್ಯಾಂಡ್ಸಮ್


    ಗಣೇಶ ಹಬ್ಬದ ಸೆಲೆಬ್ರೇಷನ್ ಬಗ್ಗೆ ಹೇಳಿ ? ನಿಮ್ಮ ಮನೆಯಲ್ಲೂ ಗಣೇಶ್ ಕೂರಿಸ್ತೀರಿ ಅಲ್ವಾ ? ಈ ಹಬ್ಬದ ಬಗೆಗಿನ ಬಾಲ್ಯದ ದಿನಗಳ ಬಗ್ಗೆ ನೆನಪಿಸಿಕೊಳ್ಳಬಹುದಾ ?

    ಜೆ.ಕೆ: ಅಪ್ಪ,ಅಮ್ಮ ಜೊತೆ ಮನೆಯಲ್ಲಿ ಗೌರಿ ಗಣೇಶ ಹಬ್ಬ ಸೆಲೆಬ್ರೇಟ್ ಮಾಡ್ತೀನಿ. ಆದರೆ ಈ ಬಾರಿ ಅಕ್ಕನ ಮನೆಯಲ್ಲಿ ಹಬ್ಬ ಸೆಲೆಬ್ರೇಟ್ ಮಾಡ್ತೀವಿ. ಬಾಲ್ಯದಲ್ಲಿ ಆಚರಣೆ ತುಂಬಾ ಚೆನ್ನಾಗಿತ್ತು. ಹಣ ಕೂಡಿಸಿ ಫ್ರೆಂಡ್ಸ್ ಜೊತೆ ರೋಡ್​ನಲ್ಲಿ ಗಣೇಶ ಇಡ್ತಾ ಇದ್ವಿ. Orchestra, Doctor ರಾಜಕುಮಾರ್ ಅವರ cinema ಗಳ ರೋಡ್​ನಲ್ಲಿ ಸ್ಕ್ರೀನಿಂಗ್, ಸಾಕಷ್ಟು entertainment ಇತ್ತು. ಈಗ ಎಲ್ಲಾ ಕಡಿಮೆ ಆಗಿದೆ.

    ಇದನ್ನೂ ಓದಿ: Dingri Nagaraj Son: ನಾನು ಹಿರಣ್ಯ, ಇರೋದೆಲ್ಲ ರಾಕ್ಷಸ ಗುಣ! ಡಿಂಗ್ರಿ ನಾಗರಾಜ್ ಮಗನ ಹೊಸ ರೂಪ!

    ಹೌದು. ಜೆಕೆ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ. ಉಳಿದಂತೆ ಅಲಿಬಾಬಾ ಸೀರಿಯಲ್ ನ ಇಬ್ಲಿಸ್ ಪಾತ್ರದ ಮೂಲಕ ಬಾಲಿವುಡ್ ಪ್ರೇಕ್ಷಕರ ಮನದಲ್ಲಿ ಹೊಸ ಜಾಗ ಮಾಡಿಕೊಳ್ಳುತ್ತಿದ್ದಾರೆ.
    First published: