Chandan Kumar: ನಟ ಚಂದನ್ ಕುಮಾರ್​ ಹೇಳ್ತಿರೋದೆಲ್ಲಾ ಸುಳ್ಳಾ? ವಾಟ್ಸಪ್​ನಲ್ಲಿ ಹರಿದಾಡ್ತಿದೆ ಒಂದಿಷ್ಟು ಪ್ರಶ್ನೆಗಳು!

Serial Actor Chandan Kumar: ಈ ರೀತಿಯಾಗಿ ಕೆಲವೊಂದು ಪ್ರಶ್ನೆಗಳು ಸದ್ಯ ವಾಟ್ಸಪ್​ನಲ್ಲಿ ಹರಿದಾಡುತ್ತಿದ್ದು, ಇದನ್ನು ಬರೆದವರು ಯಾರು ಎಂಬುದು ಮಾತ್ರ ಎಲ್ಲಿಯೂ ಬಹಿರಂಗವಾಗಿಲ್ಲ.

ಚಂದನ್ ಕುಮಾರ್

ಚಂದನ್ ಕುಮಾರ್

  • Share this:
ಕನ್ನಡದ ಪ್ರಸಿದ್ದ ಧಾರಾವಾಹಿ ನಟ ಚಂದನ್​ ಕುಮಾರ್ ನಿನ್ನೆಯಿಂದ ಸುದ್ದಿಯಲ್ಲಿದ್ದಾರೆ. ತೆಲುಗು ಧಾರಾವಾಹಿ (Telugu Serial) ಶೂಟಿಂಗ್ ಸೆಟ್ ನಲ್ಲಿ ನಟ ಚಂದನ್ (Chandan) ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗಿತ್ತು. ನಂತರ ಈ ಬಗ್ಗೆ ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಿದ್ದ ನಟ, ತೆಲಗು ಚಿತ್ರರಂಗದವರು ನನ್ನ ಮೇಲೆ ಹಲ್ಲೆ ಮಾಡಿದ್ರು. ಇದು ಕನ್ನಡದ ಮೇಲೆ ಆಗಿರುವ ಹಲ್ಲೆ ಎಂದಿದ್ದಾರೆ. ಆದರೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ವಿಚಾರಗಳು ಹರಿದಾಡುತ್ತಿದೆ. ವಾಟ್ಸ​ಪ್​ನಲ್ಲಿ ಚಂದನ್​ ವಿಚಾರವಾಗಿ ಕೆಲ ಸುದ್ದಿಗಳು ಕೇಳಿಬಂದಿದೆ. ಅನಾಮಧೇಯ ವ್ಯಕ್ತಿಯೊಬ್ಬರು ನಟನಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಏನದು? ಇಲ್ಲಿದೆ ನೋಡಿ.

ಚಂದನ್​ ಹೇಳ್ತಿರೋದು ಸುಳ್ಳಾ?

ತೆಲಗು ಚಿತ್ರರಂಗದವರು ನನ್ನ ಮೇಲೆ ಹಲ್ಲೆ ಮಾಡಿದ್ರು. ಇದು ಕನ್ನಡದ ಮೇಲೆ ಆಗಿರೋ ಹಲ್ಲೆ ಅಂತ ಕಥೆ ಹೇಳುತ್ತಿರುವ ನಟ ಚಂದನ್ ಅವರಿಗೆ ಕೆಲವು ಪ್ರಶ್ನೆಗಳು. ಮೊದಲನೆಯದಾಗಿ ನಾನು ನನ್ಮ ತಾಯಿಯ ಅರೋಗ್ಯದ ಚಿಂತೆಯಲ್ಲಿ ಇದ್ದೆ ಅಂತ ಕಪಾಳದಲ್ಲಿ ಹೋದ ಮರ್ಯಾದೆಯನ್ನು ಅಮ್ಮನ ಆರೋಗ್ಯದ ಮೂಲಕ ಹ್ಯಾಂಡಲ್​ ಮಾಡ್ತಾ ಇದ್ದೀರಿ ? ನಿಮ್ಮ ತಾಯಿ ಆಸ್ಪತ್ರೆ ಸೇರಿ ಎಷ್ಟು ದಿನ ಆಗಿತ್ತು ? ಯಾಕೆ ಈ ಘಟನೆಗೆ ಅದನ್ನು ತಳುಕು ಹಾಕ್ತಾ ಇದ್ದೀರಿ ? ಅವರು ಡಿಸ್ಚಾರ್ಚ್ ಆದ ಮೇಲೆ ನೀವು ಯಾಕೆ ನಾಟಕ ಮಾಡ್ತಾ ಇದೀರಿ ? ಅವರನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡಿದ ಮೇಲೆ ಅಲ್ಲವೇ ನೀವು ಹೈದರಾಬಾದ್ ವಿಮಾನ ಹತ್ತಿದ್ದು?

ನಿಮ್ಮ ವರ್ತನೆ ಬಗ್ಗೆ   ಕನ್ನಡ ನಿರ್ಮಾಪಕರೆಲ್ಲರೂ ಅಸಮಾಧಾನ ವ್ಯಕ್ತಪಡಿಸುತ್ತಾರಲ್ಲ ? ಲಕ್ಷ್ಮಿ ಬಾರಮ್ಮ ಧಾರಾವಾಹಿಯ ತಂಡಕ್ಕೆ ನೀವು ಕೊಡಬಾರದ ಕಾಟ ಕೊಟ್ಟು. ನಂತರ ಅದರ  ನಿರ್ಮಾಪಕ ಮಿಲನ ಪ್ರಕಾಶ್ ನಿಮ್ಮನ್ನು ಕೊರಳಪಟ್ಟಿ ಹಿಡಿದು ಆಚೆ ಹಾಕಿದ್ದರಲ್ಲಾ ? ಇದು ಸುಳ್ಳಾ ? ಅದಾದ ಮೇಲೆಯೇ ಅಲ್ವಾ ಆ ಧಾರಾವಾಹಿಗೆ ಬೇರೆ ಹೀರೋ ಬಂದಿದ್ದು ? ಕಲರ್ಸ್ ಕನ್ನಡ ವಾಹಿನಿಯವರು ಯಾಕೆ ನಿಮ್ಮನ್ನು ಶಾಶ್ವತವಾಗಿ ಬ್ಯಾನ್ ಮಾಡಿದ್ದಾರೆ ?  ನಿಮ್ಮ ಹೆಸರು ಹೇಳಿದರೆ ಸಾಕು ಯಾಕೆ ಅವರೆಲ್ಲ ಸಾಕಪ್ಪೋ ಚಂದನ್ ಸಹವಾಸ ಅಂತ ಕೈ ಮುಗಿಯುತ್ತಾರೆ ?

ತೆಲಗು  maa TV ನಲ್ಲಿ ಈ ಹಿಂದೆ ಪ್ರಸಾರವಾಗ್ತಾ ಇದ್ದ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿಯಿಂದ ಕೂಡಾ ಯಾಕೆ ನಿಮ್ಮನ್ನ ತೆಗೆದು ಹಾಕಲಾಯಿತು ? ಅಲ್ಲೂ ಕೂಡಾ ನಿಮ್ಮ ಕಿರಿಕ್ ವರ್ತನೆ ಸಮಸ್ಯೆ ಆಗಿತ್ತು ಅಲ್ವಾ ?  ಮದುವೆ ಇತ್ತು ಅದಕ್ಕೆ ಸಾವಿತ್ರಮ್ಮ ಧಾರಾವಾಹಿ ಬಿಟ್ಟೆ ಅಂತ ಆಮೇಲೆ ಯಾಕೆ ಕಥೆ ಹೊಡೆದ್ರಿ ? ಮದುವೆ ಆಗೋ ಎಷ್ಟು ಜನ ನಟ ನಟಿಯರು ಧಾರಾವಾಹಿ ಬಿಡ್ತಾರಾ ಚಂದನ್ ? ಸ್ವಲ್ಪ ಹೇಳ್ತೀರಾ ? ನಟ ನಟಿಯರು ಮದುವೆ ಅಂತ ಧಾರಾವಾಹಿ ಬಿಟ್ರೆ ನಿರ್ಮಾಪಕರು ಮತ್ತೆ ಚಾನಲ್​ನವರು ಏನು  ಮಾಡಬೇಕು? ಅವರಿಗೂ ಅದು ಹೊಟ್ಟೆ ಪಾಡಿ‌ನ ಪ್ರಶ್ನೆ ಅಲ್ವಾ?

ನೀವು ಪತ್ರಿಕಾಗೋಷ್ಠಿಯಲ್ಲಿ ಪಕ್ಕ ಕೂರಿಸಿಕೊಂಡ ಸರ್ವಮಂಗಳ ಮಾಂಗಲ್ಯ ಮತ್ತು ಮುದ್ದು ಲಕ್ಷ್ಮೀ ಧಾರಾವಾಹಿಯ ನಿರ್ಮಾಪಕ ಹರೀಶ್  ಎಷ್ಟು ಸತ್ಯವಂತರು ? ಬೇಕಾದ್ರೆ ಇವರನ್ನ ಕೇಳಿ ನಾನೆಷ್ಟು ಅಮಾಯಕ ಅಂತ  ಹರೀಶ್ ಮುಖ ತೋರಿಸ್ತಾ ಇದ್ರಲ್ಲ ? ಅವರನ್ನ TRP ಟ್ಯಾಂಪರಿಂಗ್ ಹಗರಣದಲ್ಕಿ ಕನ್ನಡ ಕಿರುತೆರೆ ಬ್ಯಾನ್ ಮಾಡಿರೋ ವಿಚಾರ ನಿಮಗೆ ಗೊತ್ತಾ ? ಸುವರ್ಣ ಚಾನಲ್ ನಲ್ಲಿ ಈಗ ಬರ್ತಾ ಇರೋ ಮುದ್ದು ಲಕ್ಷ್ಮಿ ಹೊರತಾಗಿ ಬೇರೆ ಯಾವ ವಾಹಿನಿಯಲ್ಲಿ ಕೂಡಾ ಅವರಿಗೆ ಸ್ಲಾಟ್ ಕೊಡಬಾರದು ಅಂತ ಬಾರ್ಕ್ ಸಂಸ್ಥೆ ಆದೇಶ ಹೊರಡಿಸಿರುವ ವಿಷಯ ನಿಮಗೆ ಗೊತ್ತಿಲ್ಲವಾ ?  ಅಥವಾ ನಿಮ್ಮ ಸರ್ಕಲ್ ನಲ್ಲಿ ಇಂಥವರೇ ಇರೋದಾ ? ಯಾಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಪ್ರಕಾಶ್ ಅವರನ್ನು ಪಕ್ಕ ಕೂರಿಸಿಕೊಂಡು ಪ್ರೆಸ್ ಮೀಟ್ ಮಾಡಲಿಲ್ಲ ನೀವು ? ಅವರೂ‌ ಕೂಡಾ ನಿಮ್ಮ ನಿರ್ಮಾಪಕರೇ ಅಲ್ವಾ ?

ಮೊನ್ನೆಯಷ್ಟೇ ಮರಳಿ ಮನಸಾಗಿದೆ ಧಾರಾವಾಹಿಯಲ್ಲಿ ಕಿರಿಕ್ ಮಾಡಿದ್ರಾ?

ಪ್ರೇಮ ಬರಹ ಸಿನಿಮಾ ಶುರು ಆದಾಗ ಕಿರುತೆರೆಗೆ ನಾನಿನ್ನು ಬರಲ್ಲ ನಾನೇ ಮುಂದಿನ ಯಶ್  ಅಂತೆಲ್ಲ ಕಥೆ ಹೇಳಿದ ನೀವು ಮತ್ತೆ ಸರ್ವಮಂಗಳ ಮಾಂಗಲ್ಯ ಮೂಲಕ ಕಿರತೆರೆಗೆ ವಿನಂತಿಸಿಕೊಂಡು ಬಂದ್ರಿ ಯಾಕೆ  ? ಅಲ್ಲೇ ಸಿನಿಮಾದಲ್ಲೇ ಇರಬಹುದಿತ್ತು ಅಲ್ವಾ?  ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಾ ಇರೋ ಮರಳಿ ಮನಸಾಗಿದೆ ಧಾರಾವಾಹಿಯಲ್ಲಿ ಕೂಡಾ ಇತ್ತೀಚೆಗೆ ನೀವು ಕಿರಿಕ್ ಮಾಡಿಕೊಂಡು ಚಾನೆಲ್ ನವರು ಸಂಧಾನ ಮಾಡಬೇಕಾಗಿ ಬಂದಿತ್ತು ಅಲ್ವಾ ? ಒಂದು ಹಂತದಲ್ಲಿ ಸುವರ್ಣ ಚಾನೆಲ್ ನವರು ಕೂಡಾ ನಿಮ್ಮನ್ನು ಬದಲಾಯಿಸುವ ಯೋಚನೆ ಮಾಡಿದ್ದು ಸುಳ್ಳಾ ?

ನಿಮಗೆ ಹೊಡೆದ್ರಂತೆ ಅಂತ ಸುದ್ದಿ ಬಂದಾಗ  ಇಡೀ ಕನ್ನಡ ಕಿರುತೆರೆ ನಿರ್ಮಾಪಕರು ಸಂಭ್ರಮಪಟ್ಟು ನಾವು ಮಾಡಬೇಕಾದ ಕೆಲಸ ತೆಲಗುನವರು ಮಾಡಿದ್ದಾರೆ ಅಂತ ಮತಾಡಿಕೊಂಡಿದ್ದು ಸುಳ್ಳಾ ? ಶೂಟಿಂಗ್ ಸೆಟ್ ನಲ್ಲಿ ಮಲಗಿದ್ದೆ ನನ್ನ ಎಬ್ಬಿಸಿ ತಪ್ಪು ಮಾಡಿದ್ರು ಎಂಬ ರೀತಿ ತೆಲಗು ಧಾರಾವಾಹಿ ಅಸೋಸಿಯೆಟ್ ಡೈರೆಕ್ಟರ್ ಬಗ್ಗೆ ದೂರುವ ನೀವು ಸ್ವಲ್ಪ ಯೋಚಿಸಿ ಮಾತಾಡಿ.

ಇದನ್ನೂ ಓದಿ: ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಮೇಘನಾ ರಾಜ್​, ಈ ಗೌರವಕ್ಕೆ ಪಾತ್ರರಾದ ಕನ್ನಡದ ಮೊದಲ ನಟಿ

ಯಾಕೆ ಶೂಟಿಂಗ್ ಸೆಟ್ ನಲ್ಲಿ ನಿದ್ರೆ ಮಾಡ್ತೀರಿ  ? ಮನೆಯಲ್ಲಿ ನಿದ್ರೆ ಮಾಡೋಕೆ ಏನು ಸಮಸ್ಯೆ ? ತಿಗಣೆ ಕಾಟವೇ ?  ಸೆಟ್ ನಲ್ಲಿ  ಜನರೇಟರ್ ಓಡ್ತಾ ಇರುತ್ತೆ. ತಂತ್ರಜ್ಞರು ಕಾಯ್ತಾ ಇರ್ತಾರೆ. ತಡವಾದಷ್ಟೂ Location ಬಾಡಿಗೆ ಡಬ್ಬಲ್ ಆಗುತ್ತೆ. ಹೀಗೆ ಅಲ್ಲಿ ಪ್ರತಿ ಕ್ಷಣ ಹಣ ಹರಿದು ಹೋಗುತ್ತೆ. ಜೊತೆಗೆ ಬೇರೆ ಕಲಾವಿದರೂ ಇರ್ತಾರೆ. ಅವರ ಜೊತೆ ನಿಮ್ಮ ಸೀನ್ ಇದ್ದಾಗ ನೀವು ನಿದ್ರೆ ಮಾಡಿ,  ಸ್ವಲ್ಪ ಹೊತ್ತು ಬಿಟ್ಟು ಬರ್ತಿನಿ ಅಂತೆಲ್ಲ ಕಥೆ ಹೊಡೆದ್ರೆ ಹೇಗೆ ಚಂದನ್ ? ನಿರ್ಮಾಪಕರು ಏನು ಮಾಡಬೇಕು? Episode ಸರಿಯಾದ ಸಮಯಕ್ಕೆ ಬರದೇ ಇದ್ರೆ ಚಾನಲ್ ನವರು ಏನು telecast ಮಾಡಬೇಕು ?

ಇಲ್ಲಿ ಅವಕಾಶ ಇಲ್ಲದೇ (ಕೆಟ್ಟ ವರ್ತನೆಯ ಕಾರಣಕ್ಕೆ) ತೆಲುಗಿನಲ್ಲಿ ಅಲೆದಾಡುವ ನೀವು ಯಾಕೆ ಹಲ್ಲೆ ಪ್ರಕರಣವನ್ನು ಕನ್ನಡದ ಮೇಲೆ ಆದ ಹಲ್ಲೆ ಎಂಬಂತೆ ಬಿಂಬಿಸಿಕೊಂಡು ಓಡಾಡ್ತಾ ಇದೀರಿ ? ನೀವು ಕನ್ನಡದ ಯಾವ ಕೆಲಸ ಮಾಡಿದ್ದೀರಿ ? ಏನು ಕೊಡುಗೆ ಕೊಟ್ಟಿದ್ದೀರಿ ? ನಿಮ್ಮ ವರ್ತನೆಯಿಂದ ಕನ್ನಡ ಕಿರುತೆರೆಗೆ ಅವಮಾನ ಆಗಿದಿಯೇ  ಹೊರತು ನಿಮ್ಮ ಮೇಲಿನ ಹಲ್ಲೆಯಿಂದ ಕನ್ನಡಕ್ಕೆ ಯಾವ ನಷ್ಟ ಕೂಡಾ ಇಲ್ಲ ಸ್ವಾಮಿ. ಇದನ್ನು ಕನ್ನಡದ ನಟನ ಮೇಲೆ ಹಲ್ಲೆ ಎಂಬ ರೀತಿ ಬಿಂಬಿಸಬೇಡಿ. ಕನ್ನಡದ ಅನೇಕ ಕಲಾವಿದರು ತೆಲುಗು ಕಿರುತೆರೆನಲ್ಲಿ ಕೆಲಸ ಮಾಡ್ತಾ ಇದಾರೆ ಅವರೆಲ್ಲ ಅಲ್ಲಿ ನೆಮ್ಮದಿಯಾಗಿ ಇದ್ದಾರೆ. ನಿಮಗೆ ಸಮಸ್ಯೆ ಇದ್ದರೆ ಅದನ್ನು ಎಲ್ಲರ ಸಮಸ್ಯೆ ಎಂಬ ರೀತಿ ಬಿಂಬಿಸಬೇಡಿ.

ನಿರ್ಮಾಪಕರ ಕಷ್ಟ ಅರ್ಥ ಆಗಲ್ವಾ?

ಕನ್ನಡ ಕಿರುತೆರೆ ನಿರ್ಮಾಪಕರು ತುಂಬ ಸಂಕಟದಲ್ಲಿ ಇದ್ದಾರೆ. TRP ಹಗರಣ ಮತ್ತು ಕೋವಿಡ್​ ಕಾರಣದಿಂದ ಅವರ ಬದುಕು ಕಂಗೆಟ್ಟು ಹೋಗಿದೆ. ಅಂತದ್ದರಲ್ಲಿ ನಿಮ್ಮ ತರಹದ ಕೆಟ್ಟ ವರ್ತನೆಯ ಕಲಾವಿದರಿಂದ ಅವರುಗಳ ಬದುಕು ಹಾಳಾಗಿ ಹೋಗುತ್ತದೆ. ಸ್ವಲ್ಪ ಯೋಚಿಸಿ.ನಿಮ್ಮ ವರ್ತನೆ ಬದಲಾಯಿಸಿಕೊಳ್ಳಿ. ಇಲ್ಲದೇ ಇದ್ದರೆ ಕಳೆದು ಹೋಗುತ್ತೀರಿ?

ಇದನ್ನೂ ಓದಿ: ಮೋನಾ ಸಿಂಗ್ ಬಗ್ಗೆ ಟೀಕೆ ಮಾಡಿದವರಿಗೆ ಆಮಿರ್ ಕ್ಲಾಸ್​, ಆಕೆಯ ಕೆಲಸ ಹಾಳು ಮಾಡಬೇಡಿ ಎಂದ ನಟ

ಈ ರೀತಿಯಾಗಿ ಕೆಲವೊಂದು ಪ್ರಶ್ನೆಗಳು ಸದ್ಯ ವಾಟ್ಸಪ್​ನಲ್ಲಿ ಹರಿದಾಡುತ್ತಿದ್ದು, ಇದನ್ನು ಬರೆದವರು ಯಾರು ಎಂಬುದು ಮಾತ್ರ ಎಲ್ಲಿಯೂ ಬಹಿರಂಗವಾಗಿಲ್ಲ. ಅಲ್ಲದೇ, ಈ ಪ್ರಶ್ನೆಗಳ ಸತ್ಯಾಸತ್ಯತೆಯ ಬಗ್ಗೆ ಚಂದನ್​ ಕುಮಾರ್ ಆಗಲಿ ಅಥವಾ ಇದನ್ನು ಬರೆದ ವ್ಯಕ್ತಿಯಾಗಲಿ ಎಲ್ಲಿಯು ಅಧಿಕೃತವಾಗಿ ಮಾತನಾಡಿಲ್ಲ. ಇದು ಕೇವಲ ಸದ್ಯ ವಾಟ್ಸಪ್​ನಲ್ಲಿ  ಎಲ್ಲೆಡೆ ಶೇರ್ ಆಗುತ್ತಿದೆ. ಈ ಬಗ್ಗೆ ನಟ ಚಂದನ್ ಹಾಗೂ ಪ್ರಶ್ನೆಗಳನ್ನು ಕೇಳಿದ ವ್ಯಕ್ತಿಯೇ ಉತ್ತರಿಸಬೇಕು. ಆಗ ಮಾತ್ರ ಇದು ಎಷ್ಟು ಸತ್ಯ ಎಂಬುದು ತಿಳಿಯುತ್ತದೆ.
Published by:Sandhya M
First published: