ಧೋನಿ-2: ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ್ದ ಮಹಿಯ ಲೈಫ್ ಹಿಸ್ಟರಿಗೆ ಈಗ ಹೊಸ ಸೀಕ್ವೆಲ್

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ತೆರೆಮೇಲೆ ಮಿಂಚಲಿದ್ದಾರೆ. ಯೆಸ್ 2016ರಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಧೋನಿ.. ದಿ ಅನ್ಟೋಲ್ಡ್ ಸ್ಟೋರಿ ಚಿತ್ರದ ಪಾರ್ಟ್ 2 ಸದ್ದಿಲ್ಲದೆ ಸೆಟ್ಟೇರಲು ಸಿದ್ಧತೆ ನಡೆಯುತ್ತಿದೆ. ಹಾಗಿದ್ರೆ ಧೋನಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ.


Updated:July 5, 2018, 10:25 AM IST
ಧೋನಿ-2: ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ್ದ ಮಹಿಯ ಲೈಫ್ ಹಿಸ್ಟರಿಗೆ ಈಗ ಹೊಸ ಸೀಕ್ವೆಲ್
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ತೆರೆಮೇಲೆ ಮಿಂಚಲಿದ್ದಾರೆ. ಯೆಸ್ 2016ರಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಧೋನಿ.. ದಿ ಅನ್ಟೋಲ್ಡ್ ಸ್ಟೋರಿ ಚಿತ್ರದ ಪಾರ್ಟ್ 2 ಸದ್ದಿಲ್ಲದೆ ಸೆಟ್ಟೇರಲು ಸಿದ್ಧತೆ ನಡೆಯುತ್ತಿದೆ. ಹಾಗಿದ್ರೆ ಧೋನಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ.

Updated: July 5, 2018, 10:25 AM IST
- ಸಾಗರ ಕನ್ನೆಮನೆ, ನ್ಯೂಸ್18 ಕನ್ನಡ

ಮಹೇಂದ್ರ ಸಿಂಗ್ ಧೋನಿ… ಭಾರತ ಕ್ರಿಕೆಟ್ ಕಂಡ ಅತ್ಯದ್ಭುತ ನಾಯಕ ಹಾಗೂ ಗೇಮ್ ಫಿನಿಷರ್. ಈತ ತಂಡದಲ್ಲಿದ್ರೆ ಸಾಕು ಅರ್ಧ ಪಂದ್ಯ ಗೆದ್ದ ಹಾಗೇ. ಈತನ ಎಕ್ಸ್​​ಪೀಯನ್ಸ್.. ಎದುರಾಳಿಯ ಒಟ್ಟಾರೆ ಬಲಕ್ಕೆ ಸಮ. 3 ಐಸಿಸಿ ಟ್ರೋಫಿ ಗೆದ್ದಿರೋ ಧೋನಿಗೆ ಧೋನಿಯೇ ಸರಿಸಾಟಿ. 2016ರಲ್ಲಿ ಇಂಥ ಲೆಜೆಂಡ್ರಿ ಕ್ರಿಕೆಟಿಗ ಧೋನಿಯ ನೈಜ ಜೀವನಾಧರಿತ ಚಿತ್ರ ಭಾರತದ ಸಿನಿಮಾ ಲೋಕದಲ್ಲಿ ಸಂಚಲನ ಮೂಡಿಸಿತ್ತು. ನೀರಜ್ ಪಾಂಡೆ ನಿರ್ದೇಶನದ "ಧೋನಿ.. ದಿ ಅನ್ಟೋಲ್ಡ್ ಸ್ಟೋರಿ" ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಧೋನಿಯ ರಿಯಲ್ ಲೈಫ್ ಕಹಾನಿಯನ್ನ ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದ ಈ ಸಿನಿಮಾದಲ್ಲಿ ರಾಂಚಿ ಮೂಲದ ಪ್ರತಿಭೆ ಹೇಗೆ ವಿಶ್ವಮಟ್ಟದ ಸ್ಟಾರ್ ಕ್ರಿಕೆಟರ್ ಆಗಿ ಬೆಳೆದ ಎಂಬುದನ್ನ ಚಿತ್ರಿಸಲಾಗಿತ್ತು. ಗೋಲ್​ಕೀಪರ್ ಆಗಿದ್ದ ಹುಡುಗ ಹೇಗೆ ವಿಕೆಟ್ ಕೀಪರ್ ಬ್ಯಾಟ್ಸ್​ಮ್ಯಾನ್ ಆಗಿ ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಬೆವರಿಳಿಸಿದ ಎಂಬುದನ್ನ ತೋರಿಸಲಾಗಿತ್ತು. ಜೊತೆಗೆ ಧೋನಿಯ ಖಾಸಗಿ ಜೀವನದಲ್ಲಿ ಕಂಡ ಏಳು-ಬೀಳುಗಳ ಜೊತೆಗೆ ಮಾಹಿಯ ಮಸ್ತ್ ಪ್ರೇಮ್ ಕಹಾನಿ ಚಿತ್ರ ರಸಿಕರ ಮನ ಗೆದ್ದಿತ್ತು.

ಇನ್ನು, ಈ ಚಿತ್ರದಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ , ಧೋನಿಯ ಪಾತ್ರವನ್ನ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ರು. ಬಾಲಿವುಡ್ ಹಾಟ್ ಬೇಬಿ ದಿಶಾ ಪಟಾನಿ ದೋನಿಯ ಪ್ರಿಯತಮೆಯ ರೋಲ್​ನಲ್ಲಿ ಕಾಣಿಸಿಕೊಂಡಿದ್ರು. ಧೋನಿಯ ಬಾಲ್ಯ ಜೀವನದಿಂದ ಹಿಡಿದು 2011ರ ಐಸಿಸಿ ವಿಶ್ವಕಪ್ ಗೆಲ್ಲೋವರೆಗೋ ಧೋನಿಯ ಲೈಫ್ ಸ್ಟೋರಿಯನ್ನ ತೆರೆಮೇಲೆ ಕಟ್ಟಿಕೊಡಲಾಗಿತ್ತು. ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ ಈ ಚಿತ್ರ 200ಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನ ಬಾಚಿತ್ತು.

ರೆಡಿಯಾಗುತ್ತಿದೆ ಧೋನಿ ಚಿತ್ರದ ಸೀಕ್ವೆಲ್:

2016ರಲ್ಲಿ ಧೂಳೆಬ್ಬಿಸಿದ್ದ ಚಿತ್ರ "ಧೋನಿ ಅನ್ಟೋಲ್ಡ್ ಸ್ಟೋರಿ"ಯ ಪಾರ್ಟ್ 2 ಸೆಟ್ಟೇರಲು ರೆಡಿಯಾಗುತ್ತಿದೆ. ಧೋನಿ ಚಿತ್ರವನ್ನ ಮತ್ತೊಂದು ಭಾಗದಲ್ಲಿ ತೆರೆಯ ಮೇಲೆ ತರಲು ಸಿದ್ಧಗೊಳ್ಳುತ್ತಿದ್ದು,  ಸೀಕ್ವೆಲ್ ತಯಾರಾಗ್ತಿದೆಯಂತೆ. ಈ ಚಿತ್ರದಲ್ಲೂ ಎಂಎಸ್ ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಕಾಣಿಸಿಕೊಳ್ಳಲಿದ್ದಾರೆ. ಸೀಕ್ವೆಲ್​ನಲ್ಲಿ 2011ರ ವಿಶ್ವಕಪ್ ಗೆಲುವಿನ ಬಳಿಕ ಧೋನಿ ಖಾಸಗಿ ಜೀವನದಲ್ಲಾದ ಬದಲಾವಣೆಗಳು ಸೇರಿದಂತೆ ಕ್ರಿಕೆಟ್ ಜರ್ನಿಯ ಇಂಟ್ರೆಸ್ಟಿಂಗ್ ಸ್ಟೋರಿಗಳನ್ನ ಚಿತ್ರಿಸಲಾಗುತ್ತದೆಯಂತೆ.

ವಿಶ್ವಕಪ್ ಗೆಲುವಿನ ಬಳಿಕ ಧೋನಿಯ ಪುತ್ರಿ ಜೀವಾಳ ಎಂಟ್ರಿ, ಸೇರಿದಂತೆ ಈ ವರ್ಷ ನಡೆದ ಐಪಿಎಲ್ ಆವೃತ್ತಿವರೆಗಿನ ಕಥೆಯನ್ನ ಹೆಣೆಯಲಾಗುತ್ತಿದೆಯಂತೆ. ಹೀಗೆ 2011ರ ವಿಶ್ವಕಪ್​ನಿಂದ ಹಿಡಿದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಧೋನಿ ಅಬ್ಬರದ ಆಟದ ವರೆಗೂ ಚಿತ್ರದಲ್ಲಿ ಕಥೆಯನ್ನ ಹೆಣೆಯಲಾಗಿದೆಯಂತೆ.

ಇದೆಲ್ಲದರ ಜೊತೆಗೆ ಐಪಿಎಲ್​ನಲ್ಲಿ ಧೋನಿ ಸಿಎಸ್​ಕೆ ತಂಡವನ್ನ ಮತ್ತೆ ಚಾಂಪಿಯನ್ ಪಟ್ಟಕ್ಕೇರಿಸಿದ ಪರಿಶ್ರಮ ಚಿತ್ರದಲ್ಲಿ ಒಳಗೊಂಡಿರುತ್ತದೆಯಂತೆ. ಈಗಾಗಲೇ ಸುಶಾಂತ್ ಮತ್ತೆ ಧೋನಿ ರೋಲ್​ನಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸ್ತಿದ್ದಾರಂತೆ. ಆರ್​ಎಸ್​ವಿಪಿ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿ ಬರಲಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ ಮುಂದಿನ ವರ್ಷದಲ್ಲಿ ಕೊನೆಯ ವೇಳೆಗೆ ಚಿತ್ರ ತೆರೆಕಾಣಲಿದೆ.
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ