Senorita: `ಸೆನೋರಿಟಾ’ ಖ್ಯಾತಿಯ ಜೋಡಿ ಶಾನ್-ಕಮೀಲಾ ಲವ್​ ಬ್ರೇಕ್​ಅಪ್​: ಯಾಕ್​ ಹೀಗಾಯ್ತು ಅಂತಿದ್ದಾರೆ ಫ್ಯಾನ್ಸ್​ !

Senorita: ಆದರೆ, ಗಾಯಕ -ಸಂಗೀತಗಾರ ಶಾನ್ ಮೆಂಡೆಸ್(Shawn Mendes) ಮತ್ತು ಕಮೀಲಾ ಕಬೆಲ್ಲೋ(Camila Cabello) ನಡುವಿನ ಪ್ರೇಮ ಸಂಬಂಧ ಮುರಿದು(Love Breakup) ಬಿದ್ದಿದೆ. ಹಲವಾರು ವರ್ಷಗಳ ಸ್ನೇಹ(Friendship)ದ ನಂತರ, 2019ರ ಜುಲೈ 4 ರಂದು ಅಧಿಕೃತವಾಗಿ ಅವರು ತಮ್ಮ ಪ್ರೇಮ ಸಂಬಂಧವನ್ನು ಆರಂಭಿಸಿದ್ದರು.

ಶಾನ್ ಮೆಂಡೆಸ್​, ಕಮೀಲಾ ಕಬೆಲ್ಲೋ

ಶಾನ್ ಮೆಂಡೆಸ್​, ಕಮೀಲಾ ಕಬೆಲ್ಲೋ

  • Share this:
ಸೆನೋರಿಟಾ(Senorita) ಹಾಡು(Song) ಸಖತ್ ಫೇಮಸ್ ಆಗಿದೆ. ಭಾರತದಲ್ಲೂ ಈ ಹಾಡಿಗೆ ತುಂಬಾ ಜನರು ಫ್ಯಾನ್ಸ್(Fans)​ ಇದ್ದಾರೆ. ಆದರೆ, ಗಾಯಕ -ಸಂಗೀತಗಾರ ಶಾನ್ ಮೆಂಡೆಸ್(Shawn Mendes) ಮತ್ತು ಕಮೀಲಾ ಕಬೆಲ್ಲೋ(Camila Cabello) ನಡುವಿನ ಪ್ರೇಮ ಸಂಬಂಧ ಮುರಿದು(Love Breakup) ಬಿದ್ದಿದೆ. ಹಲವಾರು ವರ್ಷಗಳ ಸ್ನೇಹ(Friendship)ದ ನಂತರ, 2019ರ ಜುಲೈ 4 ರಂದು ಅಧಿಕೃತವಾಗಿ ಅವರು ತಮ್ಮ ಪ್ರೇಮ ಸಂಬಂಧವನ್ನು ಆರಂಭಿಸಿದ್ದರು. ಇದೀಗ ಅವರಿಬ್ಬರು ತಮ್ಮ 2 ವರ್ಷಗಳ ಪ್ರೇಮ ಸಂಬಂಧಕ್ಕೆ ವಿದಾಯ ಹೇಳಿದ್ದಾರೆ. 23 ವರ್ಷ ವಯಸ್ಸಿನ ಮೆಂಡೆಸ್ ಮತ್ತು 24 ವರ್ಷದ ಕಬೆಲ್ಲೋ , ತಮ್ಮ ನಡುವಿನ ಪ್ರಣಯ ಸಂಬಂಧ ಮುಗಿಸುತ್ತಿರುವ ಕುರಿತು ಇನ್‍ಸ್ಟಾಗ್ರಾಂ(Instagram)ನಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಹೇ, ಸ್ನೇಹಿತರೆ, ನಾವು ನಮ್ಮ ಪ್ರಣಯ ಸಂಬಂಧ ಕೊನೆಗೊಳಿಸಲು ನಿರ್ಧರಿಸಿದ್ದೇವೆ. ಆದರೆ ಪರಸ್ಪರರ ಮೇಲೆ ಇರುವ ನಮ್ಮ ಮನುಷ್ಯತ್ವದ ಪ್ರೀತಿ ಮೊದಲಿಗಿಂತಲೂ ಹೆಚ್ಚು ಬಲವಾಗಿದೆ” ಎಂದು ಇಬ್ಬರೂ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸದಾ ಸ್ನೇಹಿತರಾಗಿ ಇರುತ್ತೇವೆ...!

“ನಾವು ಅತ್ಯುತ್ತಮ ಸ್ನೇಹಿತರಾಗಿ ನಮ್ಮ ಸಂಬಂಧವನ್ನು ಆರಂಭಿಸಿದೆವು ಮತ್ತು ಉತ್ತಮ ಸ್ನೇಹಿತರಾಗಿ ಮುಮದುವರೆಯುತ್ತೇವೆ. ಆರಂಭದಿಂದಲೂ ನೀವು ನೀಡಿದ ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಮುಂದುವರೆಯುತ್ತೇವೆ. ಕಮಿಲಾ ಮತ್ತು ಶಾನ್” ಎಂದು ಸಹ ಇನ್ಸ್ಟಾಗ್ರಾಮ್‌ನಲ್ಲಿ ಆ ಪ್ರಕಟಣೆ ತಿಳಿಸಿದೆ. ತಮ್ಮ ನಡುವಿನ ಪ್ರಣಯ ಸಂಬಂಧ ಬಹಿರಂಗಪಡಿಸಿದ ಬಳಿಕ , ಶಾನ್ ಮತ್ತು ಕಮೀಲಾ ಯಾವತ್ತೂ ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿದಿರಲಿಲ್ಲ. ಅವರು ಆಗಾಗ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪ್ರೀತಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು, ರೆಡ್ ಕಾರ್ಪೆಟ್ ಈವೆಂಟ್‍ಗಳಲ್ಲಿ ಮತ್ತು ಜಂಟಿ ಪ್ರದರ್ಶನಗಳಲ್ಲಿ ಬಹಿರಂಗವಾಗಿ ತಮ್ಮ ಪ್ರೀತಿಯನ್ನು ತೋರಿಸಿಕೊಳ್ಳುತ್ತಿದ್ದರು.

ಯಾವಗಲೂ ಒಟ್ಟಗೆ ಕಾಣಿಸಿಕೊಳ್ಳುತ್ತಿದ್ದ ಜೋಡಿ!

ಆಗಸ್ಟ್ ತಿಂಗಳಲ್ಲಿ, ಎಂಟಿವಿ ಮ್ಯೂಸಿಕ್ ವಿಡಿಯೋ ಅವಾರ್ಡ್ಸ್‌ನಲ್ಲಿ ಶಾನ್ ಮತ್ತು ಕಮೀಲಾ , ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರ ತಮ್ಮ ಯುಗಳ ಗೀತೆ ಸೆನೋರಿಟಾವನ್ನು ಪ್ರದರ್ಶಿಸಿದ್ದರು. ಅದೇ ನವಂಬರ್‌ನಲ್ಲಿ, ಅಮೆರಿಕನ್ ಮ್ಯೂಸಿಕ್ ಅವಾರ್ಡ್​ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಗ್ರ್ಯಾಮಿ ನಾಮ ನಿರ್ದೇಶಿತ ಹಿಟ್ ಅನ್ನು ಪ್ರದರ್ಶಿಸಿದರು. ಅವರಿಬ್ಬರು ಕೋವಿಡ್ -19 ಸಮಯದಲ್ಲಿ ಜೊತೆಯಾಗಿ ಕ್ವಾರಂಟೈನ್‍ಗೆ ಒಳಗಾಗಿದ್ದರು. ಆಗಸ್ಟ್ ತಮ್ಮನ್ನು ಇನ್ನಷ್ಟು ಹತ್ತಿರ ತಂದ ಸಮಯವಾಗಿತ್ತು ಎಂದು ಮೆಂಡೆಸ್ ಹೇಳಿಕೆ ನೀಡಿದ್ದರು. ಅಷ್ಟು ಮಾತ್ರವಲ್ಲ, ಲಾಕ್‍ಡೌನ್‍ನ ಆರಂಭದ ಕೆಲವು ತಿಂಗಳುಗಳೇ ತನ್ನ ಸಿಂಗಲ್ ಸಮ್ಮರ್ ಆಫ್ ಲವ್‍ಗೆ ಸ್ಪೂರ್ತಿ ಎಂದು ಕೂಡ ಹೇಳಿದ್ದರು.

ಇದನ್ನು ಓದಿ : ನಯನತಾರಾ ನೋಡಿದ್ರೆ 37 ವರ್ಷ ಅಂತ ಯಾರಾದ್ರೂ ಹೇಳ್ತಾರಾ? ಬೊಂಬಾಟ್ ಫಿಗರ್​ಗೆ ಇದೇ ಕಾರಣವಂತೆ!

ಮೆಂಡಸ್​ ಮೇಲೆ ಅಪಾರ ಪ್ರೀತಿ ಹೊಂದಿದ್ದ ಕಬೆಲ್ಲೋ!

ಕಬೆಲ್ಲೋ ಕೂಡ ಕೊರೋನಾ ಸಾಂಕ್ರಾಮಿಕ ದಿನಗಳ ಕುರಿತು ಇದೇ ರೀತಿಯ ಮಾತುಗಳನ್ನು ಆಡಿದ್ದರು. ಮೆಂಡೆಸ್ ತನಗೆ ಆತಂಕದ ಸಮಯದಲ್ಲಿ ಹೇಗೆ ಸಹಾಯ ಮಾಡಿದ್ದರು ಎಂಬುದನ್ನು ತಿಳಿಸಿದ್ದರು. ಆಗಸ್ಟ್‌ನಲ್ಲಿ ಜಿಮ್ಮಿ ಫಾಲನ್ ನಟಿಸಿದ್ದ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾಗ, ತಾನು ಎಡ ಬೆರಳಿಗೆ ಉಂಗುರ ಧರಿಸಿರುವ ಕುರಿತು ಆನ್‍ಲೈನ್‍ನಲ್ಲಿ ನಿಶ್ಚಿತಾರ್ಥದ ಕುರಿತ ವದಂತಿಗಳು ಹಬ್ಬಿರುವ ಬಗ್ಗೆ ಮಾತನಾಡಿದ್ದ ಕಬೆಲ್ಲೋ, ತಾನು ಹಾಗೂ ಮೆಂಡೆಸ್ ನಿಶ್ಚಿತಾರ್ಥ ಮಾಡಿಕೊಂಡಿಲ್ಲ ಎಂದು ಹೇಳಿದ್ದರು.

ಇದನ್ನು ಓದಿ: 50 ವರ್ಷ ದಾಟಿದರೂ ಸೌಂದರ್ಯದ ಖನಿ ಜೆನ್ನಿಫರ್ ಲೋಪೆಜ್; ಇವರ ನೈಟ್ ಬ್ಯೂಟಿ ರಹಸ್ಯ

2020ರಲ್ಲಿ, ಅವರು ಟಾರ್ಜನ್ ಎಂಬ ಹೆಸರಿನ ನಾಯಿ ದತ್ತು ಪಡೆದುಕೊಂಡಿದ್ದರು, ಆ ವರ್ಷ ಕಬೆಲ್ಲೋ ಜೊತೆ ರಜಾ ದಿನಗಳನ್ನು ಕಳೆಯಲು ಒಂಟಾರಿಯೋಗೆ ಹಿಂದಿರುಗಿದಾಗ, ಕೆನಡಾದ ಮನೆಗೆ ಮೆಂಡೆಸ್ ತೆಗೆದುಕೊಂಡು ಹೋಗಿದ್ದರು. ಇದೀಗ ಏಕಾಏಕಿ ಇಬ್ಬರು ಬ್ರೇಕ್​ ಅಪ್​ ಮಾಡಿಕೊಂಡಿರುವುದು ಅವರ ಅಭಿಮಾನಿಗಳಿ ಬೇಸರ ಮೂಡಿಸಿದೆ.
First published: