ವಾರೆವ್ಹಾ ವಹೀದಾ.. 83ರ ಇಳಿವಯಸ್ಸಿನಲ್ಲೂ ಕಡಲಾಳದಲ್ಲಿ ಈಜಿ ಸೈ ಎನಿಸಿಕೊಂಡ ಬಾಲಿವುಡ್ ನಟಿ!

ವಹೀದಾರ ಅಂಡರ್ ವಾಟರ್ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಯಸ್ಸು ಕೇವಲ ನಂಬರ್ ಅಷ್ಟೇ, ವಯಸ್ಸು ಎಷ್ಟೇ ಆಗಲಿ ಮನತುಂಬಿ ಬದುಕಬೇಕು ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಳಿವಯಸ್ಸಿನಲ್ಲೂ ಇಂಥಾ ಸಾಹಸಕ್ಕೆ ಕೈ ಹಾಕಿರುವ ವಹೀದಾರಿಗೆ ವಾರೆವ್ಹಾ ಎನ್ನಲೇಬೇಕು ಎಂದು ಫ್ಯಾನ್ಸ್ ಶಹಬ್ಬಾಷ್​ಗಿರಿ ಕೊಟ್ಟಿದ್ದಾರೆ.

ಕಾಶ್ವಿ ಜೊತೆ ವಹೀದಾ ರೆಹಮಾನ್ (ಎಡಭಾಗ)

ಕಾಶ್ವಿ ಜೊತೆ ವಹೀದಾ ರೆಹಮಾನ್ (ಎಡಭಾಗ)

 • Share this:
  ಬಾಲಿವುಡ್ ನಟಿಯರು ಮೈ ಚಳಿ ಬಿಟ್ಟು ಬಿಕಿನಿ ತೊಟ್ಟು ತಮ್ಮ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋದು ಕಾಮನ್. ಸಿನಿಮಾಗಾಗೇ ಬಿಕಿನಿ ತೊಟ್ಟು ಕಡಲತಡಿಯಲ್ಲಿ ಕಾಣಿಕೊಳ್ಳಬೇಕೆಂಬ ಜರೂರತ್ತು ಈಗಿನ ನಟಿಯರಿಗಿಲ್ಲ. ಪ್ರವಾಸಕ್ಕೆ ಹೋದರೂ ಸಾಕು ಕಣ್ಣು ಕುಕ್ಕುವ ಬಿಕಿನಿ ತೊಟ್ಟು ಮಿಂಚುತ್ತಾರೆ. ಇವರೆಲ್ಲರ ಮಧ್ಯೆ 60-70ರ ದಶಕದ ಹಿರಿಯ ನಟಿ ಕೂಡ ಸಾಗರಕ್ಕಿಳಿದು ಸದ್ದು ಮಾಡ್ತಿದ್ದಾರೆ.

  ಬಾಲಿವುಡ್​ನ ಹಿರಿಯ ನಟಿ ವಹೀದಾ ರೆಹಮಾನ್ ತಮ್ಮ 83ರ ಇಳಿ ವಯಸ್ಸಿನಲ್ಲೂ ಹೊಸ ನಟಿಯರು ನಾಚುವಂತೆ ಆಳ ಸಮುದ್ರದಲ್ಲಿ ಈಜಿ ಸೈ ಎನಿಸಿಕೊಂಡಿದ್ದಾರೆ.
  ಪ್ಯಾಸ, ಗೈಡ್, ಕಾಗಝ್ ಕೆ ಪೂಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ವಹೀದಾ ರೆಹಮಾನ್ ಭಾರತೀಯ ಚಿತ್ರರಂಗದ ಅಪ್ಪಟ ಕಲಾವಿದೆ. ತಲೆಗೂದಲು ಬೆಳ್ಳಗಾದರೂ ಆಕೆಯದ್ದು ಮಾಸದ ಚೆಲುವು ಎಂದರೆ ತಪ್ಪಾಗಲಾರದು. ಬಣ್ಣದ ಲೋಕದಾಚೆಗೂ ಲೈಫ್​ ಎಂಜಾಯ್ ಮಾಡುತ್ತಿರುವ ಈ ಹಿರಿಯ ನಟಿ ತಮ್ಮ ಹೊಸ ಸಾಹಸಗಳ ಮೂಲಕ ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಬದುಕಿನ ಸಂಜೆಯನ್ನೂ ಇಷ್ಟು ಚನ್ನಾಗಿ ಕಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.

  ಇದನ್ನು ಓದಿ: ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್‌ನ (ಮಾಮಿ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ದೀಪಿಕಾ ಪಡುಕೋಣೆ

  ಮಗಳೊಂದಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಪ್ರವಾಸ ಕೈಗೊಂಡಿರುವ ವಹೀದಾ ಅವರು ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಹ್ಯಾವ್ಲಾಕ್ ಐಲ್ಯಾಂಡ್​ನಲ್ಲಿ ಕಡಲಿನಾಳಕ್ಕೆ ಇಳಿದು ಸಖತ್ ಎಂಜಾಯ್ ಮಾಡಿದ್ದಾರೆ. ಸಾಗರದಲ್ಲಿನ ಮನಮೋಹಕ ದೃಶ್ಯವನ್ನು ವಹೀದಾ ಅವರು ಕಣ್ತುಂಬಿಕೊಂಡಿರುವ ವಿಡಿಯೋವನ್ನು ಅವರ ಮಗಳು ಇಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ವಾಟರ್ ಬೇಬಿಸ್ ಎಂದು ಬರೆದುಕೊಂಡಿದ್ದಾರೆ.

  ವಹೀದಾರ ಅಂಡರ್ ವಾಟರ್ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಯಸ್ಸು ಕೇವಲ ನಂಬರ್ ಅಷ್ಟೇ, ವಯಸ್ಸು ಎಷ್ಟೇ ಆಗಲಿ ಮನತುಂಬಿ ಬದುಕಬೇಕು ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಳಿವಯಸ್ಸಿನಲ್ಲೂ ಇಂಥಾ ಸಾಹಸಕ್ಕೆ ಕೈ ಹಾಕಿರುವ ವಹೀದಾರಿಗೆ ವಾರೆವ್ಹಾ ಎನ್ನಲೇಬೇಕು ಎಂದು ಫ್ಯಾನ್ಸ್ ಶಹಬ್ಬಾಷ್​ಗಿರಿ ಕೊಟ್ಟಿದ್ದಾರೆ.

  • ವರದಿ: ಕಾವ್ಯಾ ವಿ

  Published by:HR Ramesh
  First published: