HOME » NEWS » Entertainment » SENIOR ACTOR SHANIMAHADEVAPPA PASSES AWAY AND CELEBRITIES PAYS CONDOLENCE AE

ಡಿಂಡಿಮ ಕವಿಯ ಪಾತ್ರಧಾರಿ ಶನಿ ಮಹಾದೇವಪ್ಪ ಇನ್ನಿಲ್ಲ: ಕಂಬನಿ ಮಿಡಿದ ಜಗ್ಗೇಶ್​-ಸುದೀಪ್​..!

ರಂಗಭೂಮಿಯಲ್ಲಿ ನಟನಾ ಜೀವನ ಆರಂಭಿಸಿದಾಗ ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ‘ಬಡವನ ಬಾಳು’, ‘ಅತ್ತೆ ಸೊಸೆ’, ‘ಬಿಡುಗಡೆ’, ‘ಸತ್ಯವಿಜಯ’, ‘ಚಂದ್ರಹಾಸ’ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

Anitha E | news18-kannada
Updated:January 4, 2021, 12:27 PM IST
ಡಿಂಡಿಮ ಕವಿಯ ಪಾತ್ರಧಾರಿ ಶನಿ ಮಹಾದೇವಪ್ಪ ಇನ್ನಿಲ್ಲ: ಕಂಬನಿ ಮಿಡಿದ ಜಗ್ಗೇಶ್​-ಸುದೀಪ್​..!
ಶನಿಮಹದೇವಪ್ಪ
  • Share this:
ಕಮಲೇ ಕಮಲೋತ್ಪತ್ತಿಹಿ.... ಕವಿರತ್ನ ಕಾಳಿದಾಸ ಚಿತ್ರದ ಅತ್ಯಂತ ಜನಪ್ರಿಯ ಡೈಲಾಗ್ ಗಳಲ್ಲಿ ಇದೂ ಒಂದು. ಈ ಸಿನಿಮಾದಲ್ಲಿ ಡಿಂಡಿಮ ಕವಿಯ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಜನಮನ ಗೆದ್ದ ಶನಿ ಮಹಾದೇವಪ್ಪನವರು ನಿಧನರಾಗಿದ್ದಾರೆ. ಹಿರಿಯ ನಟ ಶನಿಮಹದೇವಪ್ಪ ಅವರಿಗೆ  88 ವರ್ಷ. ನಿನ್ನೆ ಸಂಜೆ ಐದು ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶನಿಮಹದೇವಪ್ಪ ಇಂದು ಇಹಲೋಕ ತ್ಯಜಿಸಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ರಂಗಭೂಮಿ ಮೂಲಕ ನಟನೆ ಆರಂಭಿಸಿದ ಅವರು ನಾಟಕ, ಸಿನಿಮಾಗಳ ವೈವಿಧ್ಯಮಯ ಪಾತ್ರಗಳ ಮೂಲಕ ಜನರಿಗೆ ಚಿರಪರಿಚಿತರಾಗಿದ್ದ ಕಲಾವಿದ. ಸುಮಾರು ಐದು ದಶಕಗಳ ಸಿನಿ ಜೀವನದಲ್ಲಿ 380ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  ಅವರು ಅಭಿನಯಿಸಿರುವ ಹತ್ತಾರು ವೈವಿಧ್ಯಮಯ ಪಾತ್ರಗಳಲ್ಲಿ 1983ರಲ್ಲಿ ತೆರೆಕಂಡ 'ಕವಿರತ್ನ ಕಾಳಿದಾಸ' ಚಿತ್ರದ ಡಿಂಡಿಮ ಕವಿಯ ಪಾತ್ರ ಪ್ರಮುಖವಾದುದು. 

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಶನಿಮಹದೇವಪ್ಪರ ಹುಟ್ಟೂರು. ಅವರ ತಂದೆ ಕೆಂಚಪ್ಪ ಹಳ್ಳಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತಂದೆ ನಟಿಸುತ್ತಿದ್ದ ನಾಟಕಗಳನ್ನು ನೋಡುತ್ತಾ ಬೆಳೆದ ಅವರು ರಂಗಭೂಮಿಯತ್ತ ಆಕರ್ಷಿತರಾದರು. ‘ರಾಜಾ ವಿಕ್ರಮ’ ನಾಟಕದೊಂದಿಗೆ ಬಣ್ಣ ಹಚ್ಚಿದ ಅವರಿಗೆ ‘ಶನೀಶ್ವರ ಮಹಾತ್ಮೆ’ಯ ಶನಿದೇವನ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈ ಯಶಸ್ಸಿನೊಂದಿಗೆ ‘ಮಹದೇವಪ್ಪ’ ಮುಂದೆ ‘ಶನಿಮಹದೇವಪ್ಪ’ ಎಂದೇ ಖ್ಯಾತರಾದರು.

Actor Shani mahadevappa dies, Shani mahadevappa Death, Shani mahadevappa dies of COVID19, Shani mahadevappa death, ಶನಿ ಮಹಾದೇವಪ್ಪ ಸಾವು, ಶನಿ ಮಹಾದೇವಪ್ಪ ನಿಧನ, ಡಾ ರಾಜ್ ಕುಮಾರ್ ಮತ್ತು ಶನಿ ಮಹಾದೇವಪ್ಪ, shani mahadevappa, death, passes away, Jaggesh, Jaggesh condolence to shani mahadevappa death, Jaggesh mourns the death of shani mahadevappa, ಶನಿ ಮಹದೇವಪ್ಪ, ನಿಧನ, ಜಗ್ಗೇಶ್, ಶನಿ ಮಹಾದೇವಪ್ಪ ನಿಧನಕ್ಕೆ ಜಗ್ಗೇಶ್ ಟ್ವೀಟ್, ಶನಿ ಮಹಾದೇವಪ್ಪ ನಿಧನಕ್ಕೆ ಕಂಬನಿ ಮಿಡಿದ ಜಗ್ಗೇಶ್,
ಶನಿಮಹದೇವಪ್ಪ


ರಂಗಭೂಮಿಯಲ್ಲಿ ನಟನಾ ಜೀವನ ಆರಂಭಿಸಿದಾಗ ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ‘ಬಡವನ ಬಾಳು’, ‘ಅತ್ತೆ ಸೊಸೆ’, ‘ಬಿಡುಗಡೆ’, ‘ಸತ್ಯವಿಜಯ’, ‘ಚಂದ್ರಹಾಸ’ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ‘ಧರ್ಮಸ್ಥಳ ಮಹಾತ್ಮೆ’ (1962) ಚಿತ್ರದ ಬ್ರಹ್ಮನ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಶನಿಮಹದೇವಪ್ಪ ಮುಂದೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಬಂದರು.

ಇದನ್ನೂ ಓದಿ: ಡಿಸಿಎಂ ಅಶ್ವತ್ಥ ನಾರಾಯಣ ಜತೆ ಶನೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಯಶ್​

‘ಭಕ್ತ ಕುಂಬಾರ’ ಚಿತ್ರದಲ್ಲಿ ಜ್ಞಾನೇಶ್ವರನಾಗಿ, ‘ಮೂರೂವರೆ ವಜ್ರಗಳು’ ಚಿತ್ರದಲ್ಲಿ ಶಕುನಿಯಾಗಿ, ‘ಕವಿರತ್ನ ಕಾಳಿದಾಸ’ ಚಿತ್ರದಲ್ಲಿ ಡಿಂಡಿಮ ಕವಿಯಾಗಿ, ಹೀಗೆ ಹತ್ತಾರು ಪಾತ್ರಗಳ ಮೂಲಕ ಶನಿಮಹದೇವಪ್ಪ ಸಿನಿಪ್ರಿಯರನ್ನು ರಂಜಿಸಿದ್ದಾರೆ. ವರನಟ ರಾಜಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ರಾಜ್ ಅಭಿನಯದ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹಿರಿಯ ನಟನ ಅಗಲಿಕೆಗೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಪುನೀತ್​ ರಾಜ್​ಕುಮಾರ್, ಸುದೀಪ್​, ಸುಮಲತಾ ಹಾಗೂ ಜಗ್ಗೇಶ್​ ಸೇರಿದಂತೆ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ. ಪುನೀತ್​ ಅವರು ತಮ್ಮ ತಂದೆಯ ಜೊತೆ ನಟಿಸಿದ್ದ ಹಿರಿಯ ಕಲಾವಿದನಿಗೆ ಸಂತಾಪ ಸೂಚಿಸಿದ್ದಾರೆ.ಜಗ್ಗೇಶ್​ ಅವರು ಹಿರಿಯ ನಟನೊಂದಿಗೆ ಇದ್ದ ಪರಿಚಯದ ಬಗ್ಗೆ ಒಂದೆರಡು ಸಾಲುಗಳನ್ನು ಬರೆದುಕೊಂಡಿದ್ದಾರೆ.ಸುಮಲತಾ ಅವರೂ ಸಹ ಅಂಬರೀಷ್​ ಜೊತೆ ಶನಿಮಹಾದೇವಪ್ಪ ಅವರು ಇರುವ ಹಳೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸುದೀಪ್​ ಸಹ ನಟನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ಶನಿಮಹದೇವಪ್ಪ ಅವರು ನಂತರದಲ್ಲಿ ಪೋಷಕ ಪಾತ್ರಗಳಲ್ಲಿ
Published by: Anitha E
First published: January 4, 2021, 11:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories