Video: ಯಶಸ್ಸಿನ ಉತ್ತುಂಗದಲ್ಲಿರುವಾಗಲೇ 70 ವರ್ಷದ ವ್ಯಕ್ತಿಯ ಪಾತ್ರಕ್ಕೆ ಸೈ ಎಂದ ವಿಜಯ್​ ಸೇತುಪತಿ!

news18
Updated:July 17, 2018, 12:44 PM IST
Video: ಯಶಸ್ಸಿನ ಉತ್ತುಂಗದಲ್ಲಿರುವಾಗಲೇ 70 ವರ್ಷದ ವ್ಯಕ್ತಿಯ ಪಾತ್ರಕ್ಕೆ ಸೈ ಎಂದ ವಿಜಯ್​ ಸೇತುಪತಿ!
news18
Updated: July 17, 2018, 12:44 PM IST
 ನ್ಯೂಸ್ 18 ಕನ್ನಡ

ತಮಿಳಿನಲ್ಲಿ ಒಬ್ಬ ನಟರಿದ್ದಾರೆ. ಆತ ಯಾವುದೇ ಸಿನಿಮಾ ಮಾಡಲಿ, ಆ ಸಿನಿಮಾದ ಪಾತ್ರವೇ ತಾವಾಗಿಬಿಡುತ್ತಾರೆ. ಹೀಗಾಗಿಯೇ ಆ ನಟನನ್ನ ಅಲ್ಲಿನ ಚಿತ್ರಪ್ರೇಮಿಗಳು ಕಾಮನ್ ಸ್ಟಾರ್ ಎಂದೇ ಕರೆಯುತ್ತಾರೆ. ನಮ್ಮವರು ಅನ್ನೋ ಅಕ್ಕರೆ ಅಭಿಮಾನ ತೋರಿಸುತ್ತಾರೆ. ಯಾರದು ಅಂತೀರಾ? ಈ ವರದಿ ಓದಿ ತಿಳಿಯುತ್ತೆ.

ವಿಜಯ್ ಸೇತುಪತಿ ತಮಿಳಿನ ಈ ನಟ ಒಂಥರಾ ನೀರಿದ್ದಂತೆ. ಯಾವುದೇ ಬಟ್ಟಲಿಗೆ ಹಾಕಲಿ ಅದಕ್ಕೆ ಹೊಂದಿಕೊಂಡು ಬಿಡುತ್ತಾರೆ. ಅವರ ಈ ಪ್ರತಿಭೆಯಿಂದಾಗಿಯೇ ವಿಜಯ್ ಸೇತುಪತಿ ನಾಯಕರಾಗಿ ನಟಿಸಿರೋ ಚಿತ್ರಗಳ ಸಂಖ್ಯೆ ಇನ್ನೂ ಇಪ್ಪತನ್ನೂ ಮುಟ್ಟಿಲ್ಲ. ಆದರೆ ಆಗಲೇ ತಮಿಳು ಜನ ಸೇತುಪತಿಯನ್ನ ತಮಿಳು ಚಿತ್ರರಂಗದ ಅಧಿಪತಿಯಂತೆ ಕಾಣುತ್ತಿದ್ದಾರೆ. ತಲೈವಾ ರಜಿನಿಯ ಪಕ್ಕವೇ ಈ ನಟನನ್ನ ನಿಲ್ಲಿಸಿ ನೋಡಲು ಇಷ್ಟಪಡುತ್ತಾರೆ. ಹಾಗಂತ ಸೇತುಪತಿ ಅವರಿಗೆ ಸುಖಾಸುಮ್ಮನೆ ಇದು ಒಲಿದಿಲ್ಲ. ಇದರಲ್ಲಿ ಅವರ ಶ್ರಮ ಹಾಗೂ ಪರಿಶ್ರಮವಿದೆ. ಒಂದು ಚಿತ್ರ ಹಾಗೂ ಪಾತ್ರಕ್ಕಾಗಿ ತನ್ನನ್ನೇ ತಾನು ಅರ್ಪಿಸಿಕೊಳ್ಳೋ ಗುಣ ಇವರಿಗಿದೆ.

ಮಕ್ಕಳ್ ಸೆಲ್ವನ್ ಅಂತ ಕರೆಸಿಕೊಳ್ಳೋ ವಿಜಯ್ ಸೇತುಪತಿ ಸದ್ಯ 'ಸೀತಾಕತಿ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪಾತ್ರ 70 ವರ್ಷ ವಯಸ್ಸಿನ ವ್ಯಕ್ತಿಯ ಪಾತ್ರ ಇವರದಾಗಿದ್ದು, ಅದಕ್ಕಾಗಿ ವಿಜಯ್ ಸೇತುಪತಿ ತಮ್ಮನ್ನ ತಾವೇ ಆ ಪಾತ್ರವಾಗಿ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ.

ಅಂದಹಾಗೆ ಇದಕ್ಕಾಗಿ ಲಾಸ್ ಎಂಜಲಿಸ್‍ನ ನುರಿತ ಮೇಕಪ್ ಕಲಾವಿದರು ಕೆಲಸ ಮಾಡುತ್ತಿದ್ದು, ವಿಜಯ್ ಹೇಗೆ ಪಾತ್ರವಾಗಿ ಬದಲಾಗುತ್ತಿದ್ದಾರೆ ನೋಡಿ...


ಗಂಟೆ ಗಟ್ಟಲೆ ಸಮಯವನ್ನ ಮೇಕಪ್‍ಗಾಗಿಯೇ ವ್ಯಯಿಸೋ ವಿಜಯ್ ಅವರನ್ನ ಈ ಲುಕ್‍ನಲ್ಲಿ ನೋಡುತ್ತಿದ್ದರೆ, ಅವರು ನಿಜವಾದ ಕಲಾವಿದ ಅನ್ನೋದರಲ್ಲಿ ಎರಡು ಮಾತಿಲ್ಲ. ಒಟ್ಟಾರೆ ಯಶಸ್ಸು ಕಾಣೋದು ಸಾಧನೆಯಲ್ಲ, ಅದನ್ನ ಉಳಿಸಿಕೊಂಡು ಹೋಗೋದು ನಿಜವಾದ ಸಾಧನೆ. ವಿಜಯ್ ಸೇತುಪತಿಯ ಈ ಡೆಡಿಕೇಷನ್ ಹೀಗೆ ಮುಂದುವರೆದರೆ ಅವರನ್ನ ಇನ್ನೂ ಯಶಸ್ಸಿನ ಉತ್ತುಂಗದಲ್ಲಿ ಕಾಣುವುದರಲ್ಲಿ ಅನುಮಾನವೇ ಇಲ್ಲ.

 

First published:July 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ