• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sonam Kapoor: ಮಗುವನ್ನು ಬರಮಾಡಿಕೊಳ್ಳೋಕೆ ಸೋನಂ ಕಪೂರ್ ಏನೆಲ್ಲಾ ತಯಾರಿ ಮಾಡ್ಕೊಂಡಿದಾರೆ ನೋಡಿ!

Sonam Kapoor: ಮಗುವನ್ನು ಬರಮಾಡಿಕೊಳ್ಳೋಕೆ ಸೋನಂ ಕಪೂರ್ ಏನೆಲ್ಲಾ ತಯಾರಿ ಮಾಡ್ಕೊಂಡಿದಾರೆ ನೋಡಿ!

ಸೋನಂ ಕಪೂರ್

ಸೋನಂ ಕಪೂರ್

ಇತ್ತೀಚಿಗಷ್ಟೆ ಸುದ್ದಿಮಾಧ್ಯಮದ ಜೊತೆ ಇ-ಮೇಲ್ ಮೂಲಕ ಮಾತು ಕತೆ ನಡೆಸಿದ ನಟಿ ತಾವು ಗರ್ಭಿಣಿಯಾಗಿದ್ದಾಗ ಆದ ಅನುಭವಗಳ ಕುರಿತು ಹೇಳಿದ್ದಾರೆ. ಮತ್ತು ಅವರು ಆ ಸಮಯದಲ್ಲಿ ಎದುರಿಸಿದ ಸವಾಲುಗಳ ಕುರಿತು ಸಹ ತಿಳಿಸುತ್ತಾ ಮಗು ಜನಿಸಿದ ನಂತರ ಜೀವನ ಮತ್ತೆ ಅದ್ಭುತ ಏಕಾಗುತ್ತದೆ ಮತ್ತು ನಾವು ಹೇಗೆ ಆ ಮಗುವಿನ ಬಗ್ಗೆ ಕಾಳಜಿವಹಿಸಬೇಕು ಎಂಬುದರ ಬಗ್ಗೆ ಸಹ ತಿಳಿಸಿದ್ದಾರೆ. ಇಲ್ಲಿದೆ ನೋಡಿ ಅವರ ಮಾತುಕತೆಯ ಮುಖ್ಯಾಂಶಗಳು.

ಮುಂದೆ ಓದಿ ...
  • Share this:

ಆನಂದ್ ಆಹುಜ (Anand Ahuja)  ಮತ್ತು ಸೋನಂ ಕಪೂರ್ (Sonam Kapoor) ಅವರು ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಸೋನಂ ಅವರು ತನ್ನ ತಾಯ್ತನದ (MotherHood) ಪ್ರಯಾಣವನ್ನು ಬಹಳ ಸಂತಸದಿಂದ ಅನುಭವಿಸುತ್ತಿದ್ದಾರೆ. ಮತ್ತು ಅವರು ಈ ವಿಷಯಕ್ಕೆ ಸಂಬಂಧ ಪಟ್ಟ ಕೆಲ ಚಿತ್ರಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿಬಿಟ್ಟಿದ್ದಾರೆ. ಸೋನಂ ಅವರು ತನ್ನ ಎಲ್ಲಾ ಪ್ರೀತಿ ಮತ್ತು ಕಾಳಜಿಯನ್ನು ಆ ಮಗುವಿಗೆ ನೀಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಪ್ರಸ್ತುತ ಲಂಡನ್ ಅಲ್ಲಿ (London) ಇರುವ ಈ ಜೋಡಿ ಕೆಲ ದಿನಗಳ ಹಿಂದೆ ಬೇಬಿಮೂನ್ ಗೆ ಎಂದು ಇಟಲಿಗೆ (Italy) ತೆರಳಿದ್ದರು. ಆ ಅದ್ಭುತವಾದ ಚಿತ್ರಗಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.


ಇತ್ತೀಚಿಗಷ್ಟೆ ಸುದ್ದಿಮಾಧ್ಯಮದ ಜೊತೆ ಇ-ಮೇಲ್ ಮೂಲಕ ಮಾತು ಕತೆ ನಡೆಸಿದ ನಟಿ ತಾವು ಗರ್ಭಿಣಿಯಾಗಿದ್ದಾಗ ಆದ ಅನುಭವಗಳ ಕುರಿತು ಹೇಳಿದ್ದಾರೆ. ಮತ್ತು ಅವರು ಆ ಸಮಯದಲ್ಲಿ ಎದುರಿಸಿದ ಸವಾಲುಗಳ ಕುರಿತು ಸಹ ತಿಳಿಸುತ್ತಾ ಮಗು ಜನಿಸಿದ ನಂತರ ಜೀವನ ಮತ್ತೆ ಅದ್ಭುತ ಏಕಾಗುತ್ತದೆ ಮತ್ತು ನಾವು ಹೇಗೆ ಆ ಮಗುವಿನ ಬಗ್ಗೆ ಕಾಳಜಿವಹಿಸಬೇಕು ಎಂಬುದರ ಬಗ್ಗೆ ಸಹ ತಿಳಿಸಿದ್ದಾರೆ. ಇಲ್ಲಿದೆ ನೋಡಿ ಅವರ ಮಾತುಕತೆಯ ಮುಖ್ಯಾಂಶಗಳು.


ಅಭಿನಂದನೆಗಳು! ನಿಮ್ಮ ಜೀವನದ ಈ ಹೊಸ ಹಂತವನ್ನು ನೀವು ಹೆಗೆ ಆನಂದಿಸುತ್ತಿದ್ದೀರಾ?
ಧನ್ಯವಾದಗಳು! ಸ್ವಲ್ಪ ಕಷ್ಟ ಎನಿಸಿದರೂ ತಾಯಿಯಾಗುವ ಪ್ರಯಾಣವೇ ಸ್ವತಃ ಅದ್ಭುತವಾದ ಅನುಭವ. ನನ್ನನ್ನು ನನ್ನ ಎಲ್ಲಾ ಸ್ನೇಹಿತರು ಹಾಗೂ ಕುಟುಂಬದವರು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ನನ್ನ ಜೀವನದ ಈ ಹಂತವನ್ನು ಬಹಳ ವಿಶಿಷ್ಟ ಎಂದು ಭಾವಿಸುತ್ತೇನೆ. ನಾನು ಆದಷ್ಟು ಬೇಗ ತಾಯಾಗುತ್ತೇನೆಂದು ಬಹಳ ಕಾತುರದಿಂದ ಕಾಯುತ್ತಿದ್ದೇನೆ. ನನ್ನ ಎಲ್ಲಾ ಪ್ರೀತಿ ಹಾಗೂ ಕಾಳಜಿಯನ್ನು ಆ ಮಗುವಿಗೆ ನೀಡುವ ಬಗ್ಗೆ ಉತ್ಸಾಹದಿಂದ ಇದ್ದೇನೆ. ನನ್ನ ಜೀವನದ ಈ ಹಂತವು ಬಹಳ ಸವಾಲುಗಳನ್ನು ಒಳಗೊಂಡಿವೆ ಎಂದು ನನಗೆ ತಿಳಿದಿದೆ ಆದರೆ ಅದು ಅಷ್ಟೆ ಅದ್ಭುತವಾಗಿರುತ್ತದೆ ಎಂದು ಸಹ ನನಗೆ ಗೊತ್ತು.


ಇದನ್ನೂ ಓದಿ:  Nayanthara: ಬರ್ತಿದೆ ಲೇಡಿ ಸೂಪರ್ ಸ್ಟಾರ್ ನಯನತಾರ 75ನೇ ಸಿನಿಮಾ!


ನೀವು ನಿಮ್ಮ ತಾಯ್ತನದ ಪ್ರಯಾಣವನ್ನು ಹೇಗೆ ವಿವರಿಸುತ್ತೀರಾ?
ನಾವು ಬಹಳ ಉತ್ಸುಕರಾಗಿದ್ದೇವೆ ಮತ್ತು ನಮ್ಮ ಜೀವನದ ಈ ಹೊಸ ಹಂತಕ್ಕೆ ತಯಾರಾಗಿದ್ದೇವೆ. ಈ ತಾಯ್ತನದ ಪ್ರಯಾಣವು ಸ್ವಲ್ಪ ಕಷ್ಟ ಆಗಿರುತ್ತದೆ, ಪ್ರಮುಖವಾಗಿ ಮೊದಲ ಮೂರು ತಿಂಗಳು. ನಾನು ಊಹಿಸಿರದ ಹಲವು ರೀತಿಯ ತೊಂದರೆಗಳು ಎದುರಾಗುತ್ತವೆ. ಎಂದೂ ಯಾರು ಸಹ ಈ ತಾಯ್ತನದ ಪ್ರಯಾಣವು ಎಷ್ಟು ಸವಾಲುಗಳಿಂದ ಕೂಡಿರುತ್ತವೆ ಎಂಬುದರ ಬಗ್ಗೆ ಹೇಳುವುದಿಲ್ಲ.


ವಾಕರಿಕೆ ಹಾಗೂ ಬಳಲಿಕೆಯೊಂದಿಗೆ ನನ್ನ ದೇಹವು ದಿನೇ-ದಿನೇ ಬದಲಾಗುತ್ತಿದೆ. ಇದು ನನ್ನ ನಿದ್ರೆಯ ಅವಿಧಿಯ ಮೇಲು ಸಹ ಪರಿಣಾಮ ಬೀರಿದೆ, ಹೇಗೆಂದರೆ ಕೆಲವು ಸಲ ನಾನು ಮಧ್ಯ ರಾತ್ರಿಯಲ್ಲೂ ಸಹ ಬಾತ್ ರೂಂಗೆ ಹೋಗಬೇಕಾಗುತ್ತದೆ ಮತ್ತು ನಾನು ನಿರಂತರವಾಗಿ 10-12 ಗಂಟೆಗಳ ಕಾಲ ಹೊರಬರಲು ಸಾಧ್ಯವಾಗದ ದಿನಗಳಿವೆ. ಈ ಎಲ್ಲಾ ಬದಲಾವಣೆಗಳನ್ನು ಹೊರತುಪಡಿಸಿದರೆ ನಾನು ಈ ರೀತಿಯಾಗಿ ಎಂದು ನನ್ನ ದೇಹವನ್ನು ಮತ್ತು ಆರೊಗ್ಯವನ್ನು ಪ್ರೀತಿಸಿಲ್ಲ ಹಾಗೂ ಕಾಳಜಿವಹಿಸಿಲ್ಲ.


ಕೆಲ ದಿನಗಳ ಹಿಂದೆ ನೀವು ನಿಮ್ಮ ಬೇಬಿಮೂನ್ ಗೆ ಎಂದು ಇಟಲಿಗೆ ಹೋಗಿದ್ದರಿ, ಯಾವ ರೀತಿಯಲ್ಲಿ ನಿಮ್ಮ ಈ ಸಲದ ಪ್ರಯಾಣವು ನಿಮಗೆ ವಿಶೇಷ ಎನಿಸಿತು?
ಪ್ರವಾಸದ ಸಮಯದಲ್ಲಿ ನಾನು ಖಂಡಿತವಾಗಿಯು ಬಹಳ ದಣಿದಿದ್ದೆ, ಆದರೆ ನಮ್ಮ ಮಗುವಿನ ಆಗಮನದ ಮುನ್ನ ನಾನು ಹಾಗೂ ಆನಂದ್ ಒಟ್ಟಿಗೆ ಸ್ವಲ್ಪ ಸಮಯ ಕಳೆಯಲು ಬಯಸಿದ್ದೆವು. ಅದು ನಮಗೆ ವಿಶ್ರಾಂತಿ ನೀಡಿತು ಹಾಗೂ ಮುಂದೆ ಬರುವ ಎಲ್ಲಾ ಅದ್ಭುತ ಸಂಗತಿಗಳಿಗೆ ಹುರುಪು ಪಡೆಯಲು ನಮಗೆ ಅವಕಾಶ ಮಾಡಿಕೊಟ್ಟಿತು.


ಗರ್ಭಿಣಿಯಾಗಿದ್ದಾಗ ನಿಮ್ಮ ಆಹಾರದ ಕ್ರಮ ಹಾಗೂ ಜೀವನ ಕ್ರಮ ಹೇಗಿತ್ತು?
ಕೆಲ ತಿಂಗಳುಗಳಿಂದ ತಾಯ್ತನವು ನನ್ನನ್ನು ನನ್ನ ಚರ್ಮ ಹಾಗೂ ನನ್ನ ಆರೋಗ್ಯದ ಬಗ್ಗೆ ಬಹಳ ಕಾಳಜಿವಹಿಸುವಂತೆ ಮಾಡಿದೆ. ನಾನು ಎಲ್ಲವನ್ನು ಅತೀ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಉದಾಹರಣೆಗೆ ನಾನು ತಿನ್ನುವ ತಿಂಡಿಯಲ್ಲಿ ಏನೆಲ್ಲಾ ಸಾಮಗ್ರಿಗಳನ್ನು ಬಳಸಿದ್ದಾರೆ ಎಂದು ನೋಡುತ್ತೇನೆ.


ಇದನ್ನೂ ಓದಿ:   Katrina Kaif: ಕತ್ರಿನಾ ಕೈಫ್ ಗರ್ಭಿಣಿಯೇ? ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ರಾ ನಟಿ?


ನಾನು ಚರ್ಮಕ್ಕೆ ಬಳಸುವ ಕ್ರೀಮ್ ಗಳನ್ನು ಸರಿಯಾಗಿ ನೊಡಿ ಬಳಸುತ್ತೇನೆ ಏಕೆಂದರೆ ಇದೆಲ್ಲಾ ನೇರವಾಗಿ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನಾನು ಬಳಸುವ ಎಲ್ಲಾ ವಸ್ತುಗಳು ನೈಸರ್ಗಿಕವಾಗಿದೆಯ, ಸೇಫ್ ಆಗಿದೆಯೆ? ಎಂಬುದನ್ನು ಮೊದಲು ನಾನು ಖಚಿತಪಡಿಸಿಕೊಳ್ಳುತ್ತೇನೆ. ಇದೆಲ್ಲಕ್ಕಿಂತ ನಾನು ಪ್ರತಿದಿನ ವ್ಯಾಯಾಮ ಮಾಡುತ್ತಿದ್ದೇನೆ. ಇದು ಗರ್ಭಿಣಿಯರಿಗೆ ಬಲು ಮುಖ್ಯ.


ತ್ವಚೆಯ ಕಾಳಜಿ ಹೇಗಿತ್ತು
ಗರ್ಭಿಣಿಯಾದ ನಂತರ ನನ್ನ ತ್ವಚೆಯ ದಿನಚರಿಯು ನಿಜವಾಗಿಯು ಬದಲಾಗಿದೆ. ನಾನು ಆಗಲೇ ಹೇಳಿದಂತೆ ನಾನು ನನ್ನ ಚರ್ಮಕ್ಕೆ ಏನನ್ನು ಉಪಯೋಗಿಸುತ್ತೇನೊ ಎಂಬುದರ ಬಗ್ಗೆ ನಾನು ಬಹಳ ಕಾಳಜಿ ವಹಿಸುತ್ತೇನೆ. ಏಕೆಂದರೆ ನಿಮ್ಮಲ್ಲಿ ಇನ್ನೊಂದು ಜೀವ ಇರುವಾಗ ನೀವು ನಿಮ್ಮ ಬಗ್ಗೆ ಬಹಳ ಕಾಳಜಿ ವಹಿಸಬೇಕು ನಾನು ಉಪಯೋಗಿಸುವ ಚರ್ಮದ ಪ್ರಾಡಕ್ಟ್ ಗಳಲ್ಲಿ ಯಾವುದೆ ರಾಜಿ ಮಾಡಿಕೊಳ್ಳುವುದಿಲ್ಲ. ನಾನು ಸ್ವಲ್ಪ ದಿನದವರೆಗೆ ದ ಮಾಮ್ಸ್ ಕೊ.ನ ಪ್ರಾಡಕ್ಟ್ ಗಳನ್ನು ಉಪಯೋಗಿಸುತ್ತಿದ್ದೇನೆ. ಅದು ನನಗೆ ಬಹಳ ಪರಿಣಾಮಕಾರಿಯಾಗಿದೆ. ಅದಲ್ಲದೆ ಅವರ ನಂಬಿಕೆಗಳು ಹಾಗೂ ನನ್ನ ಅವಶ್ಯಕತೆಗಳು, ಯೋಚನೆಗಳು ಸರಹೊಂದುವುದರಿಂದ ನಾನು ಅವರೊಂದಿಗೆ ಕೊಲಾಬರೇಟ್ ಮಾಡುತ್ತಿದ್ದೇನೆ.


ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ಡೇರಿಂಗ್ ಸ್ಟೆಪ್, ಯಾರೂ ಊಹಿಸಿರಲಿಲ್ಲ ನ್ಯಾಚುರಲ್​ ಬ್ಯೂಟಿಯ ಈ ನಿರ್ಧಾರ!


ನನಗೆ ಬೆಳಗ್ಗಿನ ಸಮಯದಲ್ಲಿ 3 ಪ್ರಾಡಕ್ಟ್ ಗಳ ಅವಶ್ಯಕತೆ ಇರುತ್ತವೆ. ವಿಟಮೀನ್ ಸಿ ಸೀರಮ್, ಸನ್ ಬ್ಲಾಕ್ ಮತ್ತು ಲಿಪ್ ಟಿಂಟ್. ನಾನು ಸಾಮಾನ್ಯವಾಗಿ ಅವರ ವಿಟಮೀನ್ ಸಿ ಅನ್ನು ಉಪಯೋಗಿಸುತ್ತೆನೆ ಏಕೆಂದರೆ ಅದು ನನ್ನ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಹಾಗೂ ಅದಕ್ಕೆ ಹೊಳಪು ನೀಡುತ್ತದೆ. ರಾತ್ರಿಯಲ್ಲಿ ಮೇಕಪ್ ಹಾಗೂ ಸನ್ ಬ್ಲಾಕ್ ತೆಗೆಯಲು ನಾನು ಮೇಕಪ್ ರಿಮೂವರ್ ಅನ್ನು ಬಳಸುತ್ತೇನೆ. ಕ್ಲೆನ್ಸಿಂಗ್ ಲೋಶನ್ ಮತ್ತು ಕ್ಲೆನ್ಸಿಂಗ್ ಬಾಮ್ ಅನ್ನು ಸಹ ಬಳಸುತ್ತೇನೆ. ಕೊನೆಯಲ್ಲಿ ಕಣ್ಣಿನ ಕೆಳಗಿನ ಪ್ರದೇಶವನ್ನು ಸೂಕ್ಷ್ಮಗೊಳಿಸಲು ಕ್ರೀಮ್ ಅನ್ನು ಬಳಸುತ್ತೇನೆ, ಮುಖ ಹಾಗೂ ಕತ್ತಿಗೆ ಮಾಯಿಶ್ಚರೈಸರ್ ಹಾಗೂ ತುಟಿಗಳಿಗೆ ಲಿಪ್ ಬಾಮ್ ಅನ್ನು ಬಳಸುತ್ತೇನೆ.


ನೀವು ನಿಮ್ಮ ಶೈಲಿಯಲ್ಲಿ ವಿಶೇಷ ಉಡುಪುಗಳನ್ನು ಧರಿಸುವ ಮೂಲಕ ಹೆಸರು ಮಾಡಿದ್ದೀರಿ. ನೀವು ಅದೇ ರೀತಿ ಈಗ ಸಹ ವಿಶೇಷವಾಗಿ ಉಡುಪುಗಳನ್ನು ಧರಿಸಲು ಇಚ್ಚಿಸುತ್ತೀರಾ?
ನಾನು ಯಾವಾಗಲೂ ಡ್ರೆಸ್ಸಿಂಗ್ ಅನ್ನು ಆನಂದಿಸುತ್ತೇನೆ. ಅದೇನೂ ವಿಶೇಷ ಅಲ್ಲ. ನಾನು ಯಾವಾಗಲೂ ನನಗೆ ಹೇಗೆ ಬೇಕೊ ಹಾಗೆ ಡ್ರೆಸ್ ಮಾಡಿಕೊಳ್ಳುತ್ತೇನೆ. ಆದರೆ, ಈ ಸಮಯದಲ್ಲಿ ನಾನು ಶಾಂತವಾಗಿರಬೇಕು, ಆರೋಗ್ಯವಾಗಿ ಇರಬೇಕು ಮತ್ತು ಏನು ಸಂತಸವನ್ನು ಉಂಟು ಮಾಡುತ್ತವೆಯೋ ಆ ಕೆಲಸಗಳನ್ನು ಮಾಡಬೇಕು. ನಾನು ಆಯಾವಾಗಲೂ ಸಹ ನನಗೆ ಸರಿಹೊಂದುವ ಹಾಗೂ ಸ್ಟೈಲ್ ಆಗಿ ಕಾಣುವ ಉಡುಪುಗಳನ್ನು ಧರಿಸುವ ಮೂಲಕ ನನ್ನ ಲುಕ್ಸ್ ಗಳಲ್ಲಿ ವಿಶೇಷತೆಯನ್ನು ತರುತ್ತಿರುತ್ತೇನೆ.


ಈ ಸುಂದರವಾದ ಪ್ರಯಾಣದಲ್ಲಿ ನೀವು ಕಾತುರದಿಂದ ಎದುರು ನೋಡುತ್ತಿರುವ ಒಂದು ವಿಷಯ ಯಾವುದು?
ನಾನು ನನಗೆ ಜನಿಸುವ ಮಗುವನ್ನು ನೋಡಲು ನಿಜವಾಗಿಯೂ ಉತ್ಸಾಹದಿಂದ ಕಾಯುತ್ತಿದ್ದೇನೆ.

Published by:Ashwini Prabhu
First published: