Priyanka Chopra: ಲಾಸ್ ಏಂಜಲೀಸ್​ನಲ್ಲಿರೋ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಮನೆ ಹೇಗಿದೆ?

ಲಾಸ್ ಏಂಜಲೀಸ್‌ನಲ್ಲಿ ಪ್ರಿಯಾಂಕಾ ಮನೆಯಲ್ಲಿ ಲಿವಿಂಗ್​ ರೂಮ್ ಬಹಳ ಆಕರ್ಷಕವಾಗಿದೆ. ಸುತ್ತಲು ಬಿಳಿ ಗೋಡೆ ಮಧ್ಯೆ ಬೃಹತ್ ಪೇಂಟಿಂಗ್ ಇಡಲಾಗಿದೆ.  ಫೋಟೋಗಳು ಗಾಜಿನ ಮೇಜಿನ ಟೇಬಲ್​ ಮೇಲೆ ಇರಿಸಲಾಗಿದೆ.  ಪ್ರಿಯಾಂಕಾ ಮತ್ತು ನಿಕ್ ಅವರ ಫೋಟೋ ಫ್ರೇಮ್ ಗಳನ್ನು ಈ ಫೋಟೋಗಳಲ್ಲಿ ಕಾಣಬಹುದಾಗಿದೆ.

ಪ್ರಿಯಾಂಕಾ ಚೋಪ್ರಾ, ಸಾರಾ

ಪ್ರಿಯಾಂಕಾ ಚೋಪ್ರಾ, ಸಾರಾ

  • Share this:
ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ನಿಕ್ ಜೋನಾಸ್ ( Nick Jonas) ಅವರೊಂದಿಗಿನ ವಿವಾಹದ ನಂತರ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನೆಲೆಸಿದ್ದಾರೆ. ನಿಕ್​ ಹಾಗೂ ಪ್ರಿಯಾಂಕಾ ಚೋಪ್ರಾ ಭವ್ಯವಾದ ಮನೆಯನ್ನು ಖರೀದಿಸಿದ್ದಾರೆ. ಇತ್ತೀಚಿಗೆ ಅಮೆರಿಕಾದ ಲಾಸ್ ಏಂಜಲೀಸ್​ಗೆ (Los Angeles) ಕಂಟೆಂಟ್ ಕ್ರಿಯೇಟರ್ ಸಾರಾ ಶರೀಫ್​ ಭೇಟಿ ನೀಡಿದ್ದರು. ಈ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ಜೊತೆ ಅವರ ಮನೆ ಒಳ ಭಾಗದಲ್ಲೇ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಸಾರಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಗೆಟ್‌ಟುಗೆದರ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.


ಪ್ರಿಯಾಂಕಾ ಅವರ ಮನೆಯ ಲಿವಿಂಗ್ ರೂಮ್ ಹೇಗಿದೆ?

ಫೋಟೋಗಳಲ್ಲಿ,  ಪ್ರಿಯಾಂಕ ಅವರು ಆರೆಂಜ್ ಬಣ್ಣದ ಶರ್ಟ್‌ನಲ್ಲಿ ಬಿಳಿ ಕ್ಯಾಮಿಸೋಲ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ ಪ್ರಿಯಾಂಕಾ ಅವರ ನಾಯಿ ಡಯಾನಾವನ್ನು ಸಹ ಕಾಣಬಹುದು.  ಇದೇ ವೇಳೆ ಪ್ರಿಯಾಂಕಾ ಚೋಪ್ರಾ ಅವರ ಮನೆಯ ಲಿವಿಂಗ್ ರೂಮ್ ಹೇಗಿದೆ ಅನ್ನೋದನ್ನು ಸಹ ನೋಡಬಹುದಾಗಿದೆ.

ಸುತ್ತಲು ಬಿಳಿ ಗೋಡೆ ಮಧ್ಯೆ ಬೃಹತ್ ಪೇಂಟಿಂಗ್

ಲಾಸ್ ಏಂಜಲೀಸ್‌ನಲ್ಲಿ ಪ್ರಿಯಾಂಕಾ ಮನೆಯಲ್ಲಿ ಲಿವಿಂಗ್​ ರೂಮ್ ಬಹಳ ಆಕರ್ಷಕವಾಗಿದೆ. ಸುತ್ತಲು ಬಿಳಿ ಗೋಡೆ ಮಧ್ಯೆ ಬೃಹತ್ ಪೇಂಟಿಂಗ್ ಇಡಲಾಗಿದೆ.  ಫೋಟೋಗಳು ಗಾಜಿನ ಮೇಜಿನ ಟೇಬಲ್​ ಮೇಲೆ ಇರಿಸಲಾಗಿದೆ.  ಪ್ರಿಯಾಂಕಾ ಮತ್ತು ನಿಕ್ ಅವರ ಫೋಟೋ ಫ್ರೇಮ್ ಗಳನ್ನು ಈ ಫೋಟೋಗಳಲ್ಲಿ ಕಾಣಬಹುದಾಗಿದೆ.


View this post on Instagram


A post shared by SS (@iamsarahshareef)


ಎಲ್ಲೆಲ್ಲೂ ನೇರಳೆ ಬಣ್ಣ

ಪ್ರಿಯಾಂಕ ಅವರಿಗೆ ನೇರಳೆ ಬಣ್ಣ ಅಂದ್ರೆ ಇಷ್ಟ ಅನಿಸುತ್ತೆ ಹೀಗಾಗಿ ಮನೆಯಲ್ಲಿ ಹೆಚ್ಚಾಗಿ ನೇರಳೆ ಬಣ್ಣದ ವಸ್ತುಗಳನ್ನ ಕಾಣಬಹುದಾಗಿದೆ. ನೆಲದ ಮೇಲೆ ನೇರಳ ಬಣ್ಣ ಹೊದಿಕೆ ಇದೆ. ಫ್ಲವರ್​ ವಾಸ್​ ಕೂಡ ನೇರಳೆ ಬಣ್ಣದಿಂದ ಕೂಡಿದೆ. ಲಿವಿಂಗ್​ ಏರಿಯಾ ಲುಕ್​ ತುಂಬಾ ಅಂದವಾಗಿರೋದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಹಿಂದೆ ಫೋಟೋ ಹಂಚಿಕೊಂಡಿದ್ದ ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾ ತನ್ನ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿಯೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ಉಳಿದುಕೊಂಡಿದ್ದಾಳೆ. ಈ ಹಿಂದೆ ಪ್ರಿಯಾಂಕಾ ಮನೆಯ ಸ್ವಿಮಿಂಗ್ ಏರಿಯಾ ಫೋಟೋಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ರು. ​


View this post on Instagram


A post shared by Priyanka (@priyankachopra)


ಅಭಿಮಾನಿಗಳ ಮನಗೆದ್ದ ನಟಿ

ಬಾಲಿವುಡ್ ನ ಟಾಪ್ ನಟಿಯರಲ್ಲಿ ಪ್ರಿಯಾಂಕಾ ಕೂಡ ಒಬ್ಬರು,  ಹಾಲಿವುಡ್‌ನಲ್ಲೂ ಹೆಸರು ಮಾಡಿರೋ ನಟಿ ಪ್ರಿಯಾಂಕಾ ಭಾರೀ ಅಭಿಮಾನಿ ಬಳಗ ಹೊಂದಿದ್ದಾರೆ.  ದಿ ವೈಟ್ ಟೈಗರ್, ದಿ ಸ್ಕೈ ಈಸ್ ಪಿಂಕ್, ಬೇವಾಚ್, ಮೇರಿ ಕೋಮ್, ಅಗ್ನಿಪಥ್, ಈಸ್ ನಾಟ್ ಇಟ್ ರೊಮ್ಯಾಂಟಿಕ್, ಕಮಿನೇ, ದೋಸ್ತಾನಾ, ಫ್ಯಾಶನ್, ಕ್ರಿಶ್, ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್ ಸೇರಿದಂತೆ ಅನೇಕ ಚಿತ್ರಗಳಲ್ಲಿ  ಪ್ರಿಯಾಂಕಾ ಚೋಪ್ರಾ ಮನಮುಟ್ಟುವ ಅಭಿನಯ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಪ್ರಿಯಾಂಕಾ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ತನ್ನದೇ ಆದ ಹೆಸರು ಮಾಡಿದ್ದು, ಅಪಾರ ಅಭಿಮಾನಿಗಳನ್ನು ಸಹ ಹೊಂದಿದ್ದಾರೆ. ಅವರ ಮುಂದಿನ ಚಿತ್ರ ಸಿಟಾಡೆಲ್, ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ, ಮತ್ತು ಎಂಡಿಂಗ್ ಥಿಂಗ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಪ್ರಿಯಾಂಕಾ ಅವರು ಫ್ರೀ ಸಮಯದಲ್ಲಿ ಮಗಳ ಜೊತೆ ಆಟವಾಡ್ತಾ ಕಾಲಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಮಗಳ ಫೋಟೋ ಅಪ್ಲೋಡ್​ ಮಾಡುತ್ತಿರುತ್ತಾರೆ.
Published by:Pavana HS
First published: