K.L Rahul-Athiya Shetty: ಕೆ ಎಲ್ ರಾಹುಲ್ ಜೊತೆ ಮದುವೆ; ಆತಿಯಾ ಶೆಟ್ಟಿ ಬೊಂಬಾಟ್ ಪ್ರತಿಕ್ರಿಯೆ!

ಮದುವೆಯ ಸಮಾರಂಭದ ಎಲ್ಲಾ ಸಿದ್ದತೆಗಳನ್ನು ಸ್ವತಃ ಅತಿಯಾ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ಸಹ ಸುದ್ದಿಗಳು ಹರಿದಾಡುತ್ತಿವೆ.

ಕೆ.ಎಲ್. ರಾಹುಲ್ ಮತ್ತು ಆಥಿಯಾ ಶೆಟ್ಟಿ

ಕೆ.ಎಲ್. ರಾಹುಲ್ ಮತ್ತು ಆಥಿಯಾ ಶೆಟ್ಟಿ

  • Share this:
ತುಂಬಾ ಹಿಂದಿನಿಂದಲೂ ನಮ್ಮ ಕ್ರಿಕೆಟಿಗರು ಬಾಲಿವುಡ್ ಸಿನೆಮಾ (Bollywood Movies) ನಟಿಯರೊಂದಿಗೆ ಮದುವೆಯಾಗುವುದನ್ನು ನಾವು ನೋಡಿದ್ದೇವೆ. ಅದೇನೋ ನಂಟು ಗೊತ್ತಿಲ್ಲ, ಸದಾ ಒಂದಲ್ಲ ಒಂದು ಪಾರ್ಟಿಯಲ್ಲಿ ಈ ಕ್ರಿಕೆಟ್ ಆಟಗಾರರು (Cricket Players) ಮತ್ತು ಬಾಲಿವುಡ್ ತಾರೆಯರು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಹಿಂದೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿದ್ದರು (Marriage). ಈಗ ಮತ್ತೊಬ್ಬ ಭಾರತೀಯ ಕ್ರಿಕೆಟಿಗ ಮತ್ತೆ ಮದುವೆಗೆ ಅಂತ ಬಾಲಿವುಡ್ ನಟಿಯನ್ನೇ (Actress) ಹುಡುಕಿಕೊಂಡಿದ್ದು, ಇಬ್ಬರು ಶೀಘ್ರದಲ್ಲಿಯೇ ವಿವಾಹವಾಗಲಿದ್ದಾರೆ ಎಂಬ ಅನೇಕ ಸುದ್ದಿಗಳು ಸಹ ಹರಿದಾಡುತ್ತಿವೆ.

ಆ ಜೋಡಿ ಯಾರು ಅಂತ ನಿಮಗೆ ಹೇಳುವುದೇ ಬೇಕಿಲ್ಲ ಬಿಡಿ, ಏಕೆಂದರೆ ಈಗ ಸದ್ಯಕ್ಕೆ ಕ್ರಿಕೆಟಿಗನೊಬ್ಬ ಬಾಲಿವುಡ್ ನಟಿಯೊಂದಿಗೆ ಸುತ್ತಾಡುತ್ತಿರುವ ಸುದ್ದಿಗಳನ್ನು ನೀವು ಅನೇಕ ಬಾರಿ ಈ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುತ್ತಿರಿ. ಹೌದು..ಆ ಜೋಡಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ನಟಿ ಅತಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರದ್ದು ಅಂತ ಈಗಾಗಲೇ ತುಂಬಾ ಜನರು ಸರಿಯಾಗಿ ಊಹಿಸಿರುತ್ತೀರಿ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಜೋಡಿಯ ಮದುವೆ ವಿಚಾರ
ಬಹುಶಃ ಈಗನಟಿ ಅತಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್  ಅವರ ಜೋಡಿ ತುಂಬಾನೇ ಸುದ್ದಿ ಮಾಡಿರುವಂತಹ ಜೋಡಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವರಿಬ್ಬರು ಕೆಲವು ಸಮಯದಿಂದ ಸಂಬಂಧದಲ್ಲಿದ್ದಾರೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ. ಈ ಪ್ರೇಮಿಗಳು ಕಳೆದ ವರ್ಷ ತಮ್ಮ ಸಂಬಂಧವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಅಧಿಕೃತಗೊಳಿಸಿದ್ದರು. ರಾಹುಲ್ ಸಹ ಈ ಹಿಂದೆ ತಮ್ಮ ಲೇಡಿ ಲವ್ ಗೆ ಹುಟ್ಟುಹಬ್ಬದ ಶುಭಾಶಯವನ್ನು ಸಹ ತಿಳಿಸಿದ್ದರು.

ಇದನ್ನೂ ಓದಿ: Cricketers: ಸೋದರ ಸಂಬಂಧಿಯನ್ನು ಮದುವೆಯಾದ ಕ್ರಿಕೆಟಿಗರಿವರು! ಭಾರತೀಯರು ಇದ್ದಾರೆ ಕಣ್ರಿ

ಈಗ ಈ ಜೋಡಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಎಂದರೆ ಇವರಿಬ್ಬರ ಮದುವೆಯ ವರದಿಗಳು. ಆದರೂ ಅವರ ಮದುವೆಯ ಬಗ್ಗೆ ವದಂತಿಗಳು ಅಂತರ್ಜಾಲದಲ್ಲಿ ಹೊರ ಬರುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಅಥಿಯಾ ಮತ್ತು ಕೆ. ಎಲ್. ರಾಹುಲ್ ಮುಂದಿನ ಮೂರು ತಿಂಗಳಲ್ಲಿ ಮುಂಬೈನಲ್ಲಿ ಮದುವೆಯಾಗುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿದ್ದವು.

ಮದುವೆ ಬಗ್ಗೆ ಆಥಿಯಾ ಪ್ರತಿಕ್ರಿಯಿಸಿದ್ದು ಹೀಗೆ 
ಇದು ರಾಹುಲ್ ಮತ್ತು ಅತಿಯಾ ಅವರ ಎರಡೂ ಕುಟುಂಬಗಳಲ್ಲಿ ನಡೆಯುವಂತಹ ದೊಡ್ಡ ಸಮಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.  ಅವರ ಮದುವೆಯ ಸಮಾರಂಭದ ಎಲ್ಲಾ ಸಿದ್ದತೆಗಳನ್ನು ಸ್ವತಃ ಅತಿಯಾ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ಸಹ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ:  Mithali Raj: ಸಿನಿಮಾ ಪ್ರಚಾರದಲ್ಲಿ ಮಿಥಾಲಿ, ಲೇಡಿ ಕ್ರಿಕೆಟರ್ ಫೋಟೋ ವೈರಲ್

ಈಗ ಮೋತಿಚೂರ್ ಚಕ್ನಾಚೂರ್ ಚಿತ್ರದ ನಟಿ ಅಂತಿಮವಾಗಿ ತನ್ನ ಗೆಳೆಯ ರಾಹುಲ್ ಅವರೊಂದಿಗಿನ ತನ್ನ ಮದುವೆಯ ವರದಿಗಳ ಬಗ್ಗೆ ತನ್ನ ಮೌನ ಮುರಿದಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಅತಿಯಾ "ಮೂರು ತಿಂಗಳಲ್ಲಿ ನಡೆಯಲಿರುವ ಮದುವೆಗೆ ನನ್ನನ್ನು ಆಹ್ವಾನಿಸಲಾಗಿದೆ ಎಂದು ನಾನು ಭಾವಿಸುತ್ತೇನೆ" ಅಂತ ಹೇಳಿ “ಲೋಲ್” ಅಂತ ಹಾಕಿ ಎಮೋಜಿಯನ್ನು ಸಹ ಹಾಕಿಕೊಂಡು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಮೊದಲ ಬಾರಿಗೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದು ಎಲ್ಲಿ
ಅತಿಯಾ ಮತ್ತು ರಾಹುಲ್ ಇತ್ತೀಚೆಗೆ ಮ್ಯೂನಿಚ್ ಗೆ ಶಸ್ತ್ರಚಿಕಿತ್ಸೆಗಾಗಿ ಒಟ್ಟಿಗೆ ಪ್ರಯಾಣಿಸಿದ್ದರು. ಈ ಜೋಡಿ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಮುದ್ದಾದ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಅವರ ಪ್ರೀತಿ ತುಂಬಿದ ಹುಟ್ಟುಹಬ್ಬದ ಪೋಸ್ಟ್ ಗಳು ಸಹ ಆಗಾಗ್ಗೆ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಆರಂಭದಲ್ಲಿ, ರಾಹುಲ್ ಮತ್ತು ಅಥಿಯಾ ಇಬ್ಬರೂ ತಮ್ಮ ಸಂಬಂಧವನ್ನು ದೃಢೀಕರಿಸಲು ನಿರಾಕರಿಸಿದರು. ಕಳೆದ ವರ್ಷ, ಈ ಜೋಡಿ ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ‘ತಡಪ್’ ನ ಪ್ರಥಮ ಪ್ರದರ್ಶನದಲ್ಲಿ ಒಟ್ಟಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು.
Published by:Ashwini Prabhu
First published: