Oscar Award 2023: ಈ ವರ್ಷ ಆಸ್ಕರ್ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

ಆಸ್ಕರ್​ ಪ್ರಶಸ್ತಿ ಪಡೆದವರ ಲಿಸ್ಟ್​

ಆಸ್ಕರ್​ ಪ್ರಶಸ್ತಿ ಪಡೆದವರ ಲಿಸ್ಟ್​

ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡು ಹಾಗೂ ‘ದಿ ಎಲಿಫಂಟ್ ವಿಸ್ಪರರ್ಸ್​’ಗೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಆಸ್ಕರ್​ ಪ್ರಶಸ್ತಿ ಪಡೆದಿದೆ. ಈ ಮೂಲಕ ನಮ್ಮ ದೇಶಕ್ಕೆ ಈ ಬಾರಿ ಎರಡು ಆಸ್ಕರ್ ಅವಾರ್ಡ್​ ಸಿಕ್ಕಿದೆ.

  • Share this:

ಅಮೆರಿಕದಲ್ಲಿ ನಡೆದ 95ನೇ ಸಾಲಿನ ಆಸ್ಕರ್​ ಅವಾರ್ಡ್ಸ್ (Oscar Award 2023) ಕಾರ್ಯಕ್ರಮದಲ್ಲಿ ನಾಟು ನಾಟು ಹಾಡು (Naatu Naatu Song) 'ಬೆಸ್ಟ್​ ಒರಿಜಿನಲ್​ ಸಾಂಗ್'ವಿಭಾಗದಲ್ಲಿ ಆಸ್ಕರ್ ಅವಾರ್ಡ್​ ಸಿಕ್ಕಿದೆ. ಈ ಹಾಡಿಗೆ ಆಸ್ಕರ್‌ ಒಲಿದು ಬಂದಿದೆ ಎಂದು ಘೋಷಣೆ ಆಗುತ್ತಿದ್ದಂತೆ ಭಾರತೀಯ ಸಿನಿ ಪ್ರೇಮಿಗಳು ಸಂಭ್ರಮಿಸಿದ್ದಾರೆ.  ಭಾರತೀಯ ಚಿತ್ರರಂಗದ ಪಾಲಿಗೆ ಮತ್ತೊಂದು ಸುವರ್ಣ ದಿನ ಎದುರಾಗಿದೆ. ಎಂ. ಕೀರವಾಣಿ ಸಂಗೀತ ನಿರ್ದೇಶನದ 'ಆರ್‌ಆರ್‌ಆರ್‌' ಚಿತ್ರದ ನಾಟು ನಾಟು ಹಾಡು ಆಸ್ಕರ್‌ ಬಾಚಿಕೊಂಡು ಇತಿಹಾಸ ಸೃಷ್ಟಿಸಿದೆ.  RRR ನ ನಾಟು-ನಾಟು ಹಾಡು ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದೆ. ಈ ವೇಳೆ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ (M.M Keeravani) ಅದ್ಭುತ ಭಾಷಣ ಮಾಡಿ ಎಲ್ಲರ ಮನಗೆದ್ದರು.


ಭಾರತಕ್ಕೆ 2 ಆಸ್ಕರ್​ ಪ್ರಶಸ್ತಿ


ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್ 2008 ರ 'ಸ್ಲಮ್‌ಡಾಗ್ ಮಿಲಿಯನೇರ್' ನಂತರ ಹೆಚ್ಚು ಪ್ರಶಸ್ತಿ ಪಡೆದ ಅತ್ಯುತ್ತಮ ಚಲನಚಿತ್ರವಾಗಿದೆ. ಸ್ಲಮ್‌ಡಾಗ್ ಮಿಲಿಯನೇರ್ ಎಂಟು ಪ್ರಶಸ್ತಿಗಳನ್ನು ಗೆದ್ದರೆ, ಎವೆರಿಥಿಂಗ್ ಎವೆರಿವೇರ್ 7 ಪ್ರಶಸ್ತಿಗಳನ್ನು ಗೆದ್ದಿದೆ.  ‘ದಿ ಎಲಿಫಂಟ್ ವಿಸ್ಪರರ್ಸ್​’ಗೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಆಸ್ಕರ್​ ಪ್ರಶಸ್ತಿ ಪಡೆದಿದೆ. ಈ ಮೂಲಕ ನಮ್ಮ ದೇಶಕ್ಕೆ ಈ ಬಾರಿ ಎರಡು ಆಸ್ಕರ್ ಅವಾರ್ಡ್​ ಸಿಕ್ಕಿದೆ.
ಅತ್ಯುತ್ತಮ ಸಿನಿಮಾ


ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್​ ನಿರ್ದೇಶನದ ‘ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​’


ಅತ್ಯುತ್ತಮ ನಿರ್ದೇಶನ


ವಿನ್ನರ್: ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್​ – ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​


ಅತ್ಯುತ್ತಮ ನಟ


ವಿನ್ನರ್: ಬ್ರೆಂಡನ್ ಫ್ರೆಸರ್- ದಿ ವೇಲ್​


ಅತ್ಯುತ್ತಮ ನಟಿ


ವಿನ್ನರ್: ಮಿಶೆಲ್ ಯೋ- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​ ಸಿನಿಮಾ


ಅತ್ಯುತ್ತಮ ಪೋಷಕ ನಟ


ವಿನ್ನರ್: ಕಿ ಹು ಕ್ವಾನ್- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​


ಅತ್ಯುತ್ತಮ ಪೋಷಕ ನಟಿ


ವಿನ್ನರ್: ಜೇಮಿ ಲೀ ಕರ್ಟಿಸ್- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​


ಅತ್ಯುತ್ತಮ ಛಾಯಾಗ್ರಹಣ


ವಿನ್ನರ್: ಜೇಮ್ಸ್ ಫ್ರೆಂಡ್- ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್ ಫ್ರಂಟ್​ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ


ವಿನ್ನರ್: ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್ ಫ್ರಂಟ್


ಬೆಸ್ಟ್ ಡಾಕ್ಯುಮೆಂಟರಿ ಫೀಚರ್


ವಿನ್ನರ್: ನವಾಲ್ನಿ


ಅತ್ಯುತ್ತಮ ಸಂಕಲನ


ವಿನ್ನರ್: ಪೌಲ್ ರೋಜರ್ಸ್​- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್


ವಿನ್ನರ್: ಬೆಸ್ಟ್ ವಿಶ್ಯುವಲ್ ಎಫೆಕ್ಟ್ಸ್


ಅವತಾರ್: ದಿ ವೇ ಆಫ್ ವಾಟರ್


ಅತ್ಯುತ್ತಮ ವಸ್ತ್ರವಿನ್ಯಾಸ


ವಿನ್ನರ್: ರುತ್ ಕಾರ್ಟರ್​- ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್


ಅತ್ಯುತ್ತಮ ನಿರ್ಮಾಣ ವಿನ್ಯಾಸ 


ವಿನ್ನರ್: ಕ್ರಿಶ್ಚಿಯನ್ ಎಂ. ಗೋಲ್ಡ್‌ಬೆಕ್ ಮತ್ತು ಅರ್ನೆಸ್ಟಿನ್ ಹಿಪ್ಪರ್, ವೆಸ್ಟರ್ನ್ ಫ್ರಂಟ್


ಅತ್ಯುತ್ತಮ ಸಂಗೀತ (ಮೂಲ ಸ್ಕೋರ್)


ವಿನ್ನರ್:  ವೋಲ್ಕರ್ ಬರ್ಟೆಲ್ಮನ್, ವೆಸ್ಟರ್ನ್ ಫ್ರಂಟ್


ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ


ವಿನ್ನರ್: ಐರಿಶ್ ಗುಡ್‌ಬೈಆಸ್ಕರ್ 2023: RRR ತಂಡ ಟ್ವೀಟ್ ಮಾಡಿದೆ


ಸಂಗೀತ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್ ಅವರು ನಾಟು ನಾಟು ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ತಕ್ಷಣ, ಆರ್‌ಆರ್‌ಆರ್ ತಂಡ ಟ್ವೀಟ್ ಮಾಡಿದೆ- '#RRRMovie ಭಾರತದ ಅತ್ಯುತ್ತಮ ಗೀತೆ ಪ್ರಶಸ್ತಿಯನ್ನು ಗೆದ್ದ ಭಾರತದ ಮೊದಲ ಚಲನಚಿತ್ರವಾಗಿದ್ದು ಎಂದು ನಮಗೆ ತುಂಬಾ ಸಂತೋಷ ಹಂಚಿಕೊಂಡಿದ್ದಾರೆ.

Published by:ಪಾವನ ಎಚ್ ಎಸ್
First published: