• Home
  • »
  • News
  • »
  • entertainment
  • »
  • Jungle Gym: ಸಿದ್ಧಾರ್ಥ್ ಮಲ್ಹೋತ್ರಾ ಜಂಗಲ್ ಜಿಮ್‌ ವರ್ಕೌಟ್ ವಿಡಿಯೋ ವೈರಲ್

Jungle Gym: ಸಿದ್ಧಾರ್ಥ್ ಮಲ್ಹೋತ್ರಾ ಜಂಗಲ್ ಜಿಮ್‌ ವರ್ಕೌಟ್ ವಿಡಿಯೋ ವೈರಲ್

ಸಿದ್ಧಾರ್ಥ್ ಮಲ್ಹೋತ್ರಾ

ಸಿದ್ಧಾರ್ಥ್ ಮಲ್ಹೋತ್ರಾ

ಶೂಟಿಂಗ್ ಸಮಯದಲ್ಲಿ ಕೂಡ ಸಿದ್ಧಾರ್ಥ್ ಫಿಟ್‌ನೆಸ್ ಕುರಿತು ತೀವ್ರ ಕಾಳಜಿಯನ್ನು ಹೊಂದಿದ್ದು ಜಿಮ್ ಇಲ್ಲದಿದ್ದರೂ ಕಟ್ಟುನಿಟ್ಟಾಗಿ ವ್ಯಾಯಾಮವನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸಿದ್ದಾರೆ. 37 ರ ಹರೆಯದ ನಟ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ವ್ಯಾಯಾಮದ ಝಲಕ್ ಅನ್ನು ಹಂಚಿಕೊಂಡಿದ್ದು ಹೊರಾಂಗಣ ಸೆಟ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಬಾಲಿವುಡ್‌ನ ಬೇಡಿಕೆಯ ನಟ ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ತಮ್ಮ ಇತ್ತೀಚಿನ ಚಿತ್ರ ‘ಥ್ಯಾಂಕ್ ಗಾಡ್’ ಚಿತ್ರದ ಪ್ರಮೋಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ತಮ್ಮ ಮುಂಬರುವ ಚಿತ್ರ ‘ಯೋಧಾ’ ಕ್ಕಾಗಿ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ (Shooting) ಕೂಡ ಪಾಲ್ಗೊಂಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಕೂಡ ಸಿದ್ಧಾರ್ಥ್ ಫಿಟ್‌ನೆಸ್ ಕುರಿತು ತೀವ್ರ ಕಾಳಜಿಯನ್ನು ಹೊಂದಿದ್ದು ಜಿಮ್ (Gym) ಇಲ್ಲದಿದ್ದರೂ ಕಟ್ಟುನಿಟ್ಟಾಗಿ ವ್ಯಾಯಾಮವನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸಿದ್ದಾರೆ. 37 ರ ಹರೆಯದ ನಟ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ತಮ್ಮ ವ್ಯಾಯಾಮದ ಝಲಕ್ ಅನ್ನು ಹಂಚಿಕೊಂಡಿದ್ದು ಹೊರಾಂಗಣ ಸೆಟ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


37 ರ ಹರೆಯದ ನಟ ಫಿಟ್‌ನೆಸ್‌ಗೆ ಹೇಗೆ ಪ್ರಾಮುಖ್ಯತೆ ನೀಡಿದ್ದಾರೆ?
 ಮರದ ಕೊಂಬೆಗೆ ಹಗ್ಗವನ್ನು ಕಟ್ಟಿ ಷೇರ್‌ಶಾ ನಟ ಫಿಟ್‌ನೆಸ್‌ ಅನ್ನು ನಿರ್ವಹಿಸುತ್ತಿದ್ದಾರೆ. ಫೋಟೋಗೆ ಶೀರ್ಷಿಕೆ ನೀಡಿರುವ ಸಿದ್ಧಾರ್ಥ್, ಉಚಿತ ಜಿಮ್ ಮೆಂಬರ್‌ಶಿಪ್, ಪ್ರಕೃತಿ ಪ್ರಾಯೋಜಿತ ಎಂದು ತಿಳಿಸಿದ್ದಾರೆ.


ಸಿದ್‌ಫಿಟ್ ಎಂಬ ಹ್ಯಾಶ್‌ಟ್ಯಾಗ್ ಅನ್ನು ನಟ ಇನ್‌ಸ್ಟಾದಲ್ಲಿ ಬಳಸಿಕೊಂಡಿದ್ದು ಅವರ ಎಲ್ಲಾ ಫಿಟ್‌ನೆಸ್ ಪೋಸ್ಟ್‌ಗಳು ಇಲ್ಲಿ ದೊರೆಯಲಿವೆ. ಸಿದ್ ತಮ್ಮ ಹೆಚ್ಚಿನ ಪೋಸ್ಟ್‌ಗಳಲ್ಲಿ ವ್ಯಾಯಾಮದ ಕುರಿತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು ದೇಹದ ಫಿಟ್‌ನೆಸ್‌ಗೆ ನಟ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ ಎಂಬುದು ತಿಳಿಯುತ್ತದೆ.


ಜಿಮ್ನಾಸ್ಟಿಕ್ ರಿಂಗ್ ಬಳಸಿ ಸಿದ್ ವ್ಯಾಯಾಮ
ಹಗ್ಗ ಹಾಗೂ ಜಿಮ್ನಾಸ್ಟಿಕ್ ರಿಂಗ್‌ಗಳನ್ನು ಬಳಸಿಕೊಂಡು ಸಿದ್ಧಾರ್ಥ್ ವರ್ಕ್‌ಔಟ್ ಮಾಡುತ್ತಿದ್ದು ಕಪ್ಪು ಬನಿಯನ್, ಕಂದು ಬಣ್ಣದ ಪ್ಯಾಂಟ್ ಧರಿಸಿ ಸ್ನೀಕರ್ಸ್ ಧರಿಸಿದ್ದಾರೆ. ತಮ್ಮ ದೇಹದ ಮೇಲ್ಭಾಗಕ್ಕೆ ಹೆಚ್ಚಿನ ಕಸರತ್ತು ನೀಡಿರುವ ಸಿದ್ಧಾರ್ಥ್ ರಿಂಗ್ ಬಳಸಿಕೊಂಡು ಬೇರೆ ಬೇರೆ ವ್ಯಾಯಾಮಗಳನ್ನು ಮಾಡಿದ್ದಾರೆ. ಜಿಮ್ ಇಲ್ಲ, ಸಮಯ ಇಲ್ಲ ಆದರೂ ವ್ಯಾಯಾಮ ಮುಖ್ಯ ಎಂದು ಹೇಳಿರುವ ಸಿದ್ಧಾರ್ಥ್ ಬೇಕಾಗಿರುವುದು ಒಂದು ಮರ ಮಾತ್ರ ಎಂದು ಬರೆದುಕೊಂಡಿದ್ದಾರೆ.


ವ್ಯಾಯಾಮದ ವಿಷಯದಲ್ಲಿ ಎಕ್ಸ್‌ಕ್ಯೂಸ್ ಬೇಡ
ವ್ಯಾಯಾಮದ ವಿಷಯದಲ್ಲಿ ಯಾವುದೇ ಎಕ್ಸ್‌ಕ್ಯೂಸ್‌ಗಳನ್ನು ನೀಡಬೇಡಿ ಎಂದು ಹೇಳುವ ಸಿದ್ಧಾರ್ಥ್, ಮನಸ್ಸಿದ್ದರೆ ಮಾರ್ಗ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂದು ಯುವಜನತೆಗೆ ಕಿವಿಮಾತು ಹೇಳಿದ್ದಾರೆ.ರಿಂಗ್ ಬಳಸಿಕೊಂಡು ಸಿದ್ಧಾರ್ಥ್ ತಮ್ಮನ್ನು ತಾವು ಎಳೆಯುತ್ತಾ ಮೊಣಕಾಲುಗಳನ್ನು ಮಡಚಿಕೊಂಡು ಹಿಂದಕ್ಕೆ ಸ್ಪಿನ್ ಮಾಡಿದ್ದಾರೆ, ಅವರ ಬೆನ್ನು ಹಾಗೂ ಮೊಣಕೈ ಹಿಂದಕ್ಕೆ ಮಡಚಿಕೊಂಡಿವೆ ಅದೇ ರೀತಿ ಮುಂದಕ್ಕೆ ತಮ್ಮನ್ನು ಸಿದ್ ಎಳೆದುಕೊಳ್ಳುತ್ತಾರೆ. ಮರದ ಕೊಂಬೆಯಲ್ಲಿ ನೇತಾಡಿದಂತೆ ಇದು ಕಾಣುತ್ತದೆ.


ಪರಿಣಿತರ ಸಹಾಯದಿಂದ ರಿಂಗ್‌ನಲ್ಲಿ ಕಸರತ್ತು ನಡೆಸಿ
ಹಲವಾರು ಬಾರಿ ಇದನ್ನೇ ನಟ ಪುನರಾವರ್ತಿಸುತ್ತಾರೆ. ದೇಹದ ಸಂಪೂರ್ಣ ದಾರ್ಢ್ಯತೆಗೆ ಈ ವ್ಯಾಯಾಮ ಸಹಕಾರಿಯಾಗಿದೆ ಎಂಬುದು ನಟನ ಹೇಳಿಕೆಯಾಗಿದೆ. ಜಿಮ್ನಾಸ್ಟಿಕ್ ರಿಂಗ್‌ನಲ್ಲಿ ಕಸರತ್ತು ನಡೆಸುವಲ್ಲಿ ಅಷ್ಟೊಂದು ಅನುಭವ ಇಲ್ಲದಿದ್ದರೆ ಪರಿಣಿತರ ನಿರ್ದೇಶನದಲ್ಲಿ ಮಾಡಬೇಕು. ಜಿಮ್ನಾಸ್ಟಿಕ್ ರಿಂಗ್‌ಗಳು ದೇಹದ ಮೇಲ್ಭಾಗದ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸ್ನಾಯು ಅಭಿವೃದ್ಧಿಯನ್ನು ಮಾಡುತ್ತದೆ.


ಸಸ್ಪೆನ್ಶನ್ ಸ್ಟ್ರಾಪ್‌ಗಳು ಅಥವಾ ರೋಪ್‌ಗಳು ರಿಂಗ್‌ಗಳ ಎತ್ತರವನ್ನು ಹೆಚ್ಚು ಕಮ್ಮಿ ಮಾಡಲು ಅನುಮತಿಸುತ್ತದೆ. ನಿಮಗೆ ಯಾವ ದಿನಚರಿ ಬೇಕೋ ಅದನ್ನು ಆರಿಸುವ ಅಂಶ ಈ ರಿಂಗ್‌ನಲ್ಲಿದೆ.


ಪ್ರಕೃತಿಯ ನಡುವೆ ಸೈಕ್ಲಿಂಗ್
ಇದಿಷ್ಟೇ ಅಲ್ಲದೆ ಸಿದ್ಧಾರ್ಥ್ ಬಿಡುವಿನ ವೇಳೆಯಲ್ಲಿ ಇಲ್ಲವೇ ಶೂಟಿಂಗ್‌ನ ನಡುವೆ ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದಾಗ ಸೈಕ್ಲಿಂಗ್ ಕೂಡ ಮಾಡುತ್ತಾರೆ.ಪರಿಸರದ ನಡುವೆ ಸೈಕ್ಲಿಂಗ್ ಮಾಡುವುದು ಖುಷಿ ನೀಡುತ್ತದೆ ಎಂದು ಸಿದ್ಧಾರ್ಥ್ ಹೇಳಿದ್ದು, ನಿಮ್ಮ ದೈನಂದಿನ ವರ್ಕ್ಔಟ್ ಅನ್ನು ಎಂದಿಗೂ ಮರೆಯದಿರಿ ಎಂದು ಕಿವಿಮಾತು ನೀಡಿದ್ದಾರೆ.

Published by:Ashwini Prabhu
First published: