Mahesh Babu: ತಂದೆಯ ಹುಟ್ಟುಹಬ್ಬಕ್ಕೆ ನಟ ಮಹೇಶ್ ಬಾಬು ವಿಶ್ ಮಾಡಿದ್ದು ಹೇಗೆ ನೋಡಿ

ಮಹೇಶ್ ಬಾಬು ಮತ್ತು ಅವರ ತಂದೆ ಕೃಷ್ಣ

ಮಹೇಶ್ ಬಾಬು ಮತ್ತು ಅವರ ತಂದೆ ಕೃಷ್ಣ

ಮಹೇಶ್ ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಪುಟದಲ್ಲಿ ಅವರ ಮಗನಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಬರೆದ ಪೋಸ್ಟ್ ವೊಂದನ್ನು ನಾವು ನೋಡಿದ್ದೆವು. ಈಗ ಮಹೇಶ್ ಬಾಬು ಅವರು ಮತ್ತೊಮ್ಮೆ ಸುದ್ದಿಯಲ್ಲಿರುವುದು ಅವರು ತಮ್ಮ ತಂದೆ ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಬರೆದ ಒಂದು ಹೃದಯಸ್ಪರ್ಶಿ ಪೋಸ್ಟ್ ನಿಂದಾಗಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮುಂದೆ ಓದಿ ...
  • Share this:

ಮೊನ್ನೆ ತಾನೇ ನಾವು ಈ ತೆಲುಗು (Telugu) ಚಲನ ಚಿತ್ರೋದ್ಯಮದ ಜನಪ್ರಿಯ ನಟರಾದ ಮಹೇಶ್ ಬಾಬು (Mahesh Babu) ಅವರ ಮಗ ಹತ್ತನೇ ತರಗತಿಯಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ಉತ್ತೀರ್ಣನಾಗಿದ್ದಕ್ಕೆ, ಮಹೇಶ್ ಅವರ ಪತ್ನಿ ನಮ್ರತಾ ಶಿರೋಡ್ಕರ್ (Namrata Shirodkar) ಅವರು ತಮ್ಮ ಸಾಮಾಜಿಕ ಮಾಧ್ಯಮ (Social Media) ಖಾತೆಯ ಪುಟದಲ್ಲಿ ಅವರ ಮಗನಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಬರೆದ ಪೋಸ್ಟ್ ವೊಂದನ್ನು ನಾವು ನೋಡಿದ್ದೆವು. ಈಗ ಮಹೇಶ್ ಬಾಬು ಅವರು ಮತ್ತೊಮ್ಮೆ ಸುದ್ದಿಯಲ್ಲಿರುವುದು ಅವರು ತಮ್ಮ ತಂದೆ ಕೃಷ್ಣ (Krishna) ಅವರ ಹುಟ್ಟುಹಬ್ಬಕ್ಕೆ (Birthday) ಬರೆದ ಒಂದು ಹೃದಯಸ್ಪರ್ಶಿ ಪೋಸ್ಟ್ ನಿಂದಾಗಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ತಂದೆಗೆ ಹುಟ್ಟುಹಬ್ಬದ ಶುಭಾಶಯ ಹೀಗಿತ್ತು
ಹೌದು.. ನಟ ಮಹೇಶ್ ಬಾಬು ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ತಮ್ಮ ತಂದೆ ಮತ್ತು ಹಿರಿಯ ನಟ ಕೃಷ್ಣ ಅವರ ಒಂದು ಫೋಟೋವನ್ನು ಹಂಚಿಕೊಂಡು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಹೃತ್ಪೂರ್ವಕ ಟಿಪ್ಪಣಿಯೊಂದನ್ನು ಬರೆದಿದ್ದಾರೆ.



ನಟ ಮಹೇಶ್ ಬಾಬು ಅವರು "ಹ್ಯಾಪಿ ಬರ್ತ್ ಡೇ ಅಪ್ಪಾ! ನಿಮ್ಮಂತಹ ಅಪ್ಪ ನಿಜವಾಗಿಯೂ ಯಾರೂ ಇಲ್ಲ. ಮುಂದಿನ ಅನೇಕ ವರ್ಷಗಳವರೆಗೆ ನಿಮ್ಮ ಸಂತೋಷ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಹಾರೈಸುತ್ತೇನೆ. ಯಾವಾಗಲೂ ನನ್ನ ಮೇಲೆ ನಿಮ್ಮ ಆಶೀರ್ವಾದ ಇರಲಿ. ಪ್ರೀತಿಯಿಂದ" ಎಂದು ಆ ಟಿಪ್ಪಣಿಯಲ್ಲಿ ಬರೆದಿದ್ದಾರೆ.


ಒಳ್ಳೆಯ ನಟನಾಗಲು ತಂದೆಯೇ ಕಾರಣ
ನಟ ಮಹೇಶ್ ಬಾಬು ತಮ್ಮ ತಂದೆ ಕೃಷ್ಣ ಅವರೊಂದಿಗೆ ಬಹಳ ನಿಕಟ ಸಂಬಂಧವನ್ನು ಹಂಚಿಕೊಂಡಿದ್ದಾರೆ, ಏಕೆಂದರೆ ಮಹೇಶ್ ಬಾಬು ಒಬ್ಬ ಒಳ್ಳೆಯ ನಟನಾಗುವುದಕ್ಕೆ ಅವರ ತಂದೆ ಮತ್ತು ಹಿರಿಯ ನಟರಾದ ಕೃಷ್ಣ ಅವರೇ ಅತಿ ದೊಡ್ಡ ಸ್ಫೂರ್ತಿಯಾಗಿದ್ದರು. ಮಹೇಶ್ ಬಾಬು ಅವರು ಚಿಕ್ಕವರಾಗಿದ್ದಾಗ ಅವರ ತಂದೆಯ ಜೊತೆ ಸುಮಾರು 25 ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದಾರೆ. ಮಹೇಶ್ ಬಾಬು ಅವರು ನೀದಾ, ಅನ್ನಾ ತಮ್ಮುಡು, ಗುಡಚಾರಿ 117 ಮತ್ತು ಪೊರಾಟಂನಂತಹ ಅನೇಕ ಚಿತ್ರಗಳಲ್ಲಿ ತಮ್ಮ ತಂದೆಯ ಜೊತೆಗೆ ನಟಿಸಿದ್ದಾರೆ.


ಮಾವನಿಗೆ ಶುಭ ಹಾರೈಸಿದ ಮಹೇಶ್ ಅವರ ಪತ್ನಿ ನಮ್ರತಾ ಶಿರೋಡ್ಕರ್
ಮಹೇಶ್ ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರು ಸಹ ತಮ್ಮ ಮಕ್ಕಳಾದ ಸಿತಾರಾ ಮತ್ತು ಗೌತಮ್ ಅವರೊಂದಿಗೆ ಅವರ ತಾತ ಕೃಷ್ಣ ಅವರ ಮುದ್ದಾದ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮಾವನಿಗೆ ಶುಭ ಹಾರೈಸಿದರು.


ಇದನ್ನೂ ಓದಿ:  ಬೆಂಗಳೂರಿನಲ್ಲೇ ನಡೆದಿತ್ತಂತೆ 3 Idiots ಶೂಟಿಂಗ್, ಇಲ್ಲಿದೆ ನೋಡಿ ವೈರಲ್ ಫೋಟೋಸ್


"ಕಳೆದ ಅನೇಕ ವರ್ಷಗಳಿಂದ ನನ್ನ ನೆಚ್ಚಿನ ಎಲ್ಲಾ ನೆನಪುಗಳು ನಿಮ್ಮನ್ನು ಒಳಗೊಂಡಿವೆ. ನೀವು ನನ್ನ ಜೀವನದಲ್ಲಿ ತುಂಬಾ ಪ್ರೀತಿ, ನಗು, ದಯೆ ಮತ್ತು ಸಂತೋಷವನ್ನು ತಂದಿದ್ದೀರಿ ಮತ್ತು ನಾನು ಅದಕ್ಕೆಲ್ಲಾ ಎಂದೆಂದಿಗೂ ಕೃತಜ್ಞನಾಗಿದ್ದೇನೆ. ನೀವು ನನ್ನ ಗಂಡನಿಗೆ, ನನಗೆ ಮತ್ತು ನಮ್ಮೆಲ್ಲರಿಗೂ ತಂದೆಯಾಗಿದ್ದಕ್ಕಾಗಿ ತುಂಬಾನೇ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು ಮಾಮಯ್ಯ.. ನಾವು ನಿನ್ನನ್ನು ತುಂಬಾನೇ ಪ್ರೀತಿಸುತ್ತೇವೆ" ಎಂದು ಹೇಳಿ ಬರೆದಿದ್ದಾರೆ.


ಜರ್ಮನಿ ಪ್ರವಾಸದಲ್ಲಿರುವ ಕುಟುಂಬ
ಏತನ್ಮಧ್ಯೆ, ‘ಸರ್ಕಾರು ವಾರಿ ಪಾಟಾ’ ಚಿತ್ರದ ಯಶಸ್ಸಿನ ನಂತರ, ನಟ ಮಹೇಶ್ ಬಾಬು ತಮ್ಮ ಕುಟುಂಬದೊಂದಿಗೆ ರಜಾ ದಿನಗಳಿಗಾಗಿ ಜರ್ಮನಿಗೆ ಹೋಗಿದ್ದಾರೆ ಮತ್ತು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಲ್ಲಿ ಪರಿಪೂರ್ಣ ಫೋಟೋಗಳನ್ನು ಹಂಚಿ ಕೊಳ್ಳುತ್ತಿದ್ದಾರೆ.


ಇದನ್ನೂ ಓದಿ:  Rashmika Mandanna: ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ ರಶ್ಮಿಕಾ, ಸಿಂಪಲ್ ಲುಕ್ ನಲ್ಲಿ ಕಂಗೊಳಿಸಿದ ನ್ಯಾಷನಲ್​ ಕ್ರಶ್


ಸುಕುಮಾರ್ ನಿರ್ದೇಶನದ ಎಸ್ಎಸ್ಎಂಬಿ 28 ಎಂಬ ತಾತ್ಕಾಲಿಕ ಶೀರ್ಷಿಕೆಯ ಚಿತ್ರದಲ್ಲಿ ನಟ ಮಹೇಶ್ ಬಾಬು ನಟಿ ಪೂಜಾ ಹೆಗ್ಡೆ ಅವರೊಂದಿಗೆ ತೆರೆ ಹಂಚಿ ಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಎಸ್ ತಮನ್ ಅವರು ಸಂಗೀತವನ್ನು ಸಂಯೋಜಿಸಿದ್ದಾರೆ. ಇದರ ನಂತರ ಅವರು ಆರ್‌ಆರ್‌ಆರ್ ಚಿತ್ರದ ನಿರ್ದೇಶಕರಾದ ಎಸ್.ಎಸ್.ರಾಜಮೌಳಿ ಅವರೊಂದಿಗೆ ಕೈಜೋಡಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವು 2023 ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು