ಮನರಂಜನೆ ಮಾಧ್ಯಮವೊಂದರಲ್ಲಿ (Entertainment Channel) ಕೆಲವು ತಿಂಗಳುಗಳ ಹಿಂದೆಯಷ್ಟೇ ಶುರುವಾಗಿದ್ದ ‘ಅಲಿ ಬಾಬಾ: ದಸ್ತಾನ್-ಎ-ಕಾಬೂಲ್' (Ali Baba: Dastaan-E-Kabul) ಧಾರವಾಹಿಯಲ್ಲಿ ನಟಿಸಿದ್ದ ತುನಿಶಾ ಶರ್ಮಾ (Tunisha Sharma) ಅವರು ಸಾವನ್ನಪ್ಪಿರುವ ಸುದ್ದಿ ಹಿಂದಿ ಸೀರಿಯಲ್ (Hindi Serial) ಜಗತ್ತಿನಲ್ಲಿ ದೊಡ್ಡ ಆಘಾತವನ್ನೇ ಸೃಷ್ಟಿಸಿದೆ ಅಂತ ಹೇಳಬಹುದು. ಹೌದು, ಧಾರಾವಾಹಿ ನಟಿ ತುನಿಶಾ ಅವರ ನಿಗೂಢ ಸಾವು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.
ಟಿವಿ ನಟಿ ಶನಿವಾರ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ಧಾರಾವಾಹಿಯೊಂದರ ಸೆಟ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಟಿ ತುನಿಶಾ ಗರ್ಭಿಣಿಯಾಗಿದ್ದಾರೆ ಎಂಬ ಊಹಾಪೋಹವಿತ್ತು. ಆದಾಗ್ಯೂ, ಮರಣೋತ್ತರ ಪರೀಕ್ಷೆಯ ವರದಿಗಳು ಈಗ ಹೊರ ಬಂದಿದ್ದು, ನಟಿ ನೇಣು ಬಿಗಿದುಕೊಂಡ ನಂತರ ಉಸಿರುಗಟ್ಟಿದ ಕಾರಣ ಸಾವನ್ನಪ್ಪಿದ್ದಾಳೆ ಎಂದು ಸ್ಪಷ್ಟಪಡಿಸಿದೆ.
ತುನಿಶಾ ಸಾವಿನ ಬಗ್ಗೆ ಏನ್ ಹೇಳ್ತಾ ಇದೆ ಮರಣೋತ್ತರ ಪರೀಕ್ಷೆಯ ವರದಿ
ತುನಿಶಾ ಅವರ ಪಾರ್ಥಿವ ಶರೀರವನ್ನು ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿತ್ತು, ವರದಿಗಳ ಪ್ರಕಾರ ತುನಿಶಾ ಅವರ ಸಾವು ನೇಣು ಬಿಗಿದುಕೊಂಡು ಉಸಿರುಗಟ್ಟಿದ ಕಾರಣ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ. ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ ಎಂದು ಸಹ ವರದಿಯು ತಿಳಿಸಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ತುನಿಶಾ ಶರ್ಮಾ ಶನಿವಾರ ತಮ್ಮ ಧಾರಾವಾಹಿಯೊಂದರ ಸೆಟ್ ನಲ್ಲಿರುವ ವಾಶ್ ರೂಂ ಗೆ ಹೋದರು ಮತ್ತು ತುಂಬಾ ಸಮಯವಾದರೂ ಸಹ ಅಲ್ಲಿಂದ ಅವರು ಹೊರಗೆ ಬರಲಿಲ್ವಂತೆ.
ತುಂಬಾ ಹೊತ್ತಾದರೂ ಸಹ ಹೊರಗೆ ಬರದೇ ಇರುವುದನ್ನು ನೋಡಿದ ಧಾರಾವಾಹಿ ಸೆಟ್ ನಲ್ಲಿ ಕೆಲಸ ಮಾಡುವವರು ವಾಶ್ ರೂಂ ನ ಬಾಗಿಲು ಮುರಿದಾಗ, ಅಲ್ಲಿ ನಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರು.
ಇದನ್ನೂ ಓದಿ: Celebrity Couple: ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾದ ಸ್ಟಾರ್ ನಟಿಯರು!
ಸಹ ನಟ ಶೀನಾಜ್ ನನ್ನು ಬಂಧಿಸಿದ ಪೊಲೀಸರು
ತುನಿಶಾ ಅವರ ಸಹ ನಟ ಶೀನಾಜ್ ಖಾನ್ ಅವರನ್ನು ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದರು ಮತ್ತು ನಂತರ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾದ ನಂತರ ಅವರನ್ನು ಬಂಧಿಸಲಾಯಿತು.
ಅವರು ಈಗ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ತುನಿಶಾ ಅವರ ತಾಯಿ ಈಗ ಔಪಚಾರಿಕ ದೂರು ನೀಡಿದ್ದು ತುನಿಶಾ ಅವರ ಮಾನಸಿಕ ಒತ್ತಡಕ್ಕೆ ಶೀನಾಜ್ ಅವರನ್ನು ದೂಷಿಸಿದ್ದಾರೆ. 'ಅಲಿ ಬಾಬಾ: ದಸ್ತಾನ್-ಎ-ಕಾಬೂಲ್' ಧಾರವಾಹಿಯಲ್ಲಿ ತುನಿಶಾ ಮತ್ತು ಶೀಜಾನ್ ಇಬ್ಬರು ಒಟ್ಟಿಗೆ ನಟಿಸಿದ್ದಾರೆ.
ತುನಿಶಾ-ಶೀಜಾನ್ ಸಂಬಂಧದ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ತುನಿಶಾ ಚಿಕ್ಕಪ್ಪ
ಏತನ್ಮಧ್ಯೆ, ತುನಿಶಾ ಅವರ ಚಿಕ್ಕಪ್ಪ ಪವನ್ ಶರ್ಮಾ ದಿವಂಗತ ನಟಿ ಮತ್ತು ಶೀನಾಜ್ ಖಾನ್ ಅವರೊಂದಿಗಿನ ಸಂಬಂಧದ ಬಗ್ಗೆ ಕೆಲವು ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ತುನಿಶಾ ಜೊತೆ ಡೇಟಿಂಗ್ ಮಾಡುತ್ತಿದ್ದ ಶೀನಾಜ್ ಖಾನ್ ತುನಿಶಾ ಜೊತೆಗೆ ಪ್ರಮಾಣಿಕನಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ನಟಿ ತುನಿಶಾ ತುಂಬಾನೇ ಖಿನ್ನತೆಯಲ್ಲಿದ್ದಳು ಮತ್ತು ಅವನಿಂದಾಗಿ ತುಂಬಾನೇ ಒತ್ತಡಕ್ಕೊಳಗಾಗಿದ್ದಳು ಎಂದು ಅವರು ಹೇಳಿದರು.
ಇದನ್ನೂ ಓದಿ: Tunisha Sharma: ಮೇಕಪ್ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕಿರುತೆರೆ ನಟಿ!
"ಶೀನಾಜ್ ಖಾನ್ ತುನಿಶಾ ಅವರೊಂದಿಗೆ ಸಂಬಂಧ ಹೊಂದಿದ್ದ ನಂತರವೂ ಬದ್ಧತೆ ತೋರಲಿಲ್ಲ. ಶೀನಾಜ್ ಖಾನ್ ಏಕಕಾಲದಲ್ಲಿ ಅನೇಕ ಹುಡುಗಿಯರೊಂದಿಗೆ ಮಾತನಾಡುತ್ತಿದ್ದರು ಮತ್ತು ಸಂಪರ್ಕದಲ್ಲಿದ್ದರು, ಇದರಿಂದಾಗಿ ತುನಿಶಾ ಖಿನ್ನತೆ ಮತ್ತು ಒತ್ತಡದಲ್ಲಿದ್ದರು. ಡಿಸೆಂಬರ್ 16 ರಂದು ಕೂಡ ತುನಿಶಾಗೆ ಶೀನಾಜ್ ಖಾನ್ ನ ಮೋಸದ ಬಗ್ಗೆ ತಿಳಿಯಿತು, ಇದರಿಂದಾಗಿ ಅವಳು ತುಂಬಾನೇ ಆತಂಕಕ್ಕೊಳಗಾಗಿದ್ದಳು" ಎಂದು ಪವನ್ ಹೇಳಿದ್ದಾರೆ.
ಫಿತೂರ್, ಬಾರ್ ಬಾರ್ ದೇಖೋ, ಕಹಾನಿ 2: ದುರ್ಗಾ ರಾಣಿ ಸಿಂಗ್ ಮತ್ತು ದಬಾಂಗ್ 3 ರಂತಹ ಚಲನಚಿತ್ರಗಳಲ್ಲಿ ತುನಿಶಾ ನಟಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ