ರಶ್ಮಿಕಾರ ಹೊಸ ಪೋಸ್ಟರ್ ಜತೆಗೆ ಮತ್ತೊಂದು ಅಪ್ಡೇಟ್​ ಕೊಟ್ಟ Pushpa ಚಿತ್ರತಂಡ

ಇತ್ತೀಚೆಗಷ್ಟೆ ಅವರ ಪಾತ್ರದ ಫಸ್ಟ್​ಲುಕ್​ ಪೋಸ್ಟರ್ ರಿಲೀಸ್​ ಆಗಿತ್ತು. ಈಗ ಚಿತ್ರತಂಡ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಪೋಸ್ಟರ್​ ಹಂಚಿಕೊಂಡಿದೆ. ಜೊತೆಗೆ ಸಿನಿಮಾ ಕುರಿತಾದ ಒಂದು ಅಪ್ಡೇಟ್​ ಕೊಟ್ಟಿದೆ.

ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ

ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ

  • Share this:
ಟಾಲಿವುಡ್​ನ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ (Stylish Star Allu Arjun)​ ಹಾಗೂ ಸ್ಯಾಂಡಲ್​ವುಡ್ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪ (Pushpa Movie). ಈ ಪ್ಯಾನ್​ ಇಂಡಿಯಾ ಸಿನಿಮಾ (Pan India Movie) ಕ್ರಿಸ್ಮಸ್​ ಪ್ರಯುಕ್ತ ಡಿಸೆಂಬರ್ 17ರಂದು ತೆರೆ ಕಾಣಲಿದೆ. ಈಗಾಗಲೇ ಪುಷ್ಪ ಚಿತ್ರತಂಡ ಸಿನಿಮಾ ಪೋಸ್ಟರ್​, ಹಾಡು ಹಾಗೂ ಟೀಸರ್​ ಅನ್ನು ರಿಲೀಸ್ ಮಾಡಿದ್ದು, ಅವು ಚಿತ್ರದ ಬಗ್ಗೆ ಇದ್ದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಇತ್ತೀಚೆಗಷ್ಟೆ ನಾಯಕಿ ರಶ್ಮಿಕಾ ಅವರ ಪಾತ್ರದ ಫಸ್ಟ್​ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಿತ್ತು. ಈಗ ಪುಷ್ಪ ಚಿತ್ರತಂಡ ಸಿನಿಮಾ ಕುರಿತಾದ ಮತ್ತೊಂದು ಹೊಸ ಅಪ್ಡೇಟ್ ಕೊಟ್ಟಿದೆ. 

ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಶ್ರೀವಲ್ಲಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇತ್ತೀಚೆಗಷ್ಟೆ ಅವರ ಪಾತ್ರದ ಫಸ್ಟ್​ಲುಕ್​ ಪೋಸ್ಟರ್ ರಿಲೀಸ್​ ಆಗಿತ್ತು. ಈಗ ಚಿತ್ರತಂಡ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಪೋಸ್ಟರ್​ ಹಂಚಿಕೊಂಡಿದೆ. ಜೊತೆಗೆ ಸಿನಿಮಾ ಕುರಿತಾದ ಒಂದು ಅಪ್ಡೇಟ್​ ಕೊಟ್ಟಿದೆ.

ಸಿನಿಮಾ ಎರಡನೇ ಹಾಡು ರಿಲೀಸ್ ಆಗಲಿದ್ದು, ಅದಕ್ಕೆ ದಿನಾಂಕ ನಿಗದಿಯಾಗಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಿರುವ ಹಾಡು ಅಕ್ಟೋಬರ್ 13ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್​ ಆಗಲಿದೆ.

ಇದನ್ನೂ ಓದಿ: Pushpa Release Date: ಅಲ್ಲು ಅರ್ಜುನ್​-ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟ..!

ಅಲಾ ವೈಕುಂಠಪುರಂಲೋ (2020)ರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಐಕಾನ್ ಸ್ಟಾರ್ ಈ ವರ್ಷ ಉದ್ಯಮವನ್ನು ಅಲುಗಾಡಿಸಲು ಸಜ್ಜಾಗಿದ್ದು, ಒರಟಾದ ಬೃಹತ್ ಅವತಾರದಲ್ಲಿ ಕಮಾಲ್ ಮಾಡಲು ಸಿದ್ಧರಾಗಿದ್ದಾರೆ. ಪುಷ್ಪ ಚಿತ್ರ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ  ಮೂರನೇ ಸಿನಿಮಾ ಆಗಿದೆ. ಈ ಹಿಂದೆ ಬ್ಲಾಕ್ ಬಸ್ಟರ್ ಚಲನಚಿತ್ರಗಳಾದ ಆರ್ಯ (2004) ಮತ್ತು ಆರ್ಯ 2 (2009) ಈ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾಗಳು ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸಿದ್ದವು.

ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ವೆನ್ನೆಲಾ ಕಿಶೋರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫಹದ್ ಫಾಸಿಲ್ ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. ದೇವಿ ಶ್ರೀ ಪ್ರಸಾದ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ಮದು, ಮೊದಲ ಹಾಡು ಆಗಸ್ಟ್ 13 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾದ ಛಾಯಾಗ್ರಹಣದ ಹೊಣೆಯನ್ನು ಮಿರೋಸ್ಲಾ ಕುಬಾ ಬ್ರೋಜಕ್ ಹೊತ್ತಿದ್ದು, ಕಾರ್ತಿಕಾ ಶ್ರೀನಿವಾಸ್ ಚಿತ್ರದ ಸಂಕಲನದ ರೂವಾರಿಯಾಗಿ ಚಿತ್ರವನ್ನು ಚಂದಗಾಣಿಸಿದ್ದಾರೆ.

ಇದನ್ನೂ ಓದಿ: Pushpa ಸಿನಿಮಾದಲ್ಲಿ ಶ್ರೀವಲ್ಲಿಯಾಗಿ ಅಲ್ಲು ಅರ್ಜುನ್​ಗೆ ಜೊತೆಯಾದ Rashmika Mandanna

ಚಿತ್ರದ ಕಥಾವಸ್ತುವು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಶೇಷಚಲಂ ಬೆಟ್ಟಗಳಲ್ಲಿ ಮರಳು ಕಳ್ಳಸಾಗಣೆಯ ಕಥೆಯನ್ನು ಆಧರಿಸಿದೆ. ಈ ಚಿತ್ರವು ಆಗಸ್ಟ್ 13 ರಂದು ಬಿಡುಗಡೆಯಾಗಬಹುದು ಎಂದು ಮೊದಲು ವರದಿಯಾಗಿತ್ತು. ಆದರೆ ಕೋವಿಡ್ ಹಿನ್ನೆಲೆ ಸಿನಿಮಾವನ್ನು ಡಿಸೆಂಬರ್‌ಗೆ ಮುಂದೂಡಿದ್ದಾರೆ. ರಶ್ಮಿಕಾ ಅವರು ಬಾಲಿವುಡ್​ನಲ್ಲಿ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಮತ್ತೊಂದು ಹಿಂದಿ ಸಿನಿಮಾ ಸಹ ಅವರ ಕೈ ಸೇರಿದೆ. ಇವುಗಳ ಜೊತೆಗೆ ಜಾಹೀರಾತುಗಳು. ಒಟ್ಟಾರೆ ರಶ್ಮಿಕಾರ ಮುಂದಿನ ವರ್ಷ ಸಖತ್ ಬ್ಯುಸಿಯಾಗಿರಲಿದೆ ಎಂದರೆ ತಪ್ಪಾಗದು.
Published by:Anitha E
First published: