Beast: ಯೂಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿದೆ `ಜಾಲಿ ಓ ಜಿಮ್ಖಾನಾ’ ಸಾಂಗ್​! ಬೀಸ್ಟ್​​​ ಪೆಪ್ಪಿ ಟ್ರ್ಯಾಕ್​ಗೆ ದಳಪತಿ ಫ್ಯಾನ್ಸ್​ ಖುಷ್​​

ಕಾಲಿವುಡ್(Kollywood)​ನ  ಸ್ಟಾರ್ ನಟ ದಳಪತಿ ವಿಜಯ್ ಅವರ ನಟನೆಯ ‘ಬೀಸ್ಟ್’​​ ಸಿನಿಮಾ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆಯಿದೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ತಯಾರಕರು ಉತ್ಸಾಹಭರಿತ ಎರಡನೇ ಸಿಂಗಲ್ ‘ಜಾಲಿ ಓ ಜಿಮ್ಖಾನಾ…’ ಲಿರಿಕಲ್ ವೀಡಿಯೊವನ್ನು ರಿಲೀಸ್ ಮಾಡಿ ಅಭಿಮಾನಿಗಳ ಕಾತರತೆ ಹೆಚ್ಚಿಸಿದ್ದಾರೆ.

ವಿಜಯ್​, ಪೂಜಾ ಹೆಗ್ಡೆ

ವಿಜಯ್​, ಪೂಜಾ ಹೆಗ್ಡೆ

  • Share this:
ತಮಿಳು ನಟ ವಿಜಯ್(Vijay)​ ಅವರ ‘ಬೀಸ್ಟ್’(Beast)​ ಸಿನಿಮಾ ಏಪ್ರಿಲ್​ 13ರಂದು ತೆರೆಗೆ ಬರುತ್ತಿದೆ. ರಾಕಿ ಭಾಯ್(Raki Bhai)​ ಎದುರು ತೊಡೆ ತಟ್ಟಿದ್ದಾರೆ ಇಳಯದಳಪತಿ. ಈ ಬಗ್ಗೆ ಸಾಮಾಜಿಕ ಜಾಲತಾಣ(Social Media)ದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಜೊತೆಗೆ ಬೀಸ್ಟ್(Beast)​​ ಚಿತ್ರದ ಪೆಪ್ಪಿ ಟ್ರ್ಯಾಕ್(Peppi Track) ‘ಜಾಲಿ ಓ ಜಿಮ್ಖಾನಾ’(Jolly O Gymkhana) ಬಿಡುಗಡೆಯಾಗಿದೆ. ಕಾಲಿವುಡ್(Kollywood)​ನ  ಸ್ಟಾರ್ ನಟ ದಳಪತಿ ವಿಜಯ್ ಅವರ ನಟನೆಯ ‘ಬೀಸ್ಟ್’​​ ಸಿನಿಮಾ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆಯಿದೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ತಯಾರಕರು ಉತ್ಸಾಹಭರಿತ ಎರಡನೇ ಸಿಂಗಲ್ ‘ಜಾಲಿ ಓ ಜಿಮ್ಖಾನಾ…’ ಲಿರಿಕಲ್ ವೀಡಿಯೊವನ್ನು ರಿಲೀಸ್ ಮಾಡಿ ಅಭಿಮಾನಿಗಳ ಕಾತರತೆ ಹೆಚ್ಚಿಸಿದ್ದಾರೆ. ಪೂಜಾ ಹೆಗ್ಡೆ(Pooja Hegde) ಮತ್ತು ವಿಜಯ್(Vijay) ಹಾಡಿನಲ್ಲಿ  ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡು ರಿಲೀಸ್ ಆದ ಕೇವಲ 15 ನಿಮಿಷಗಳಲ್ಲಿ 1M+ ರಿಯಲ್ ಟೈಮ್ಸ್ ವೀವ್ಸ್ ಗಳಿಸಿರುವುದು ವಿಶೇಷ.

ಗ್ಲಿಂಪ್ಸ್​ ಡ್ಯಾನ್ಸ್​ ನೋಡಿ ಫಿದಾ ಆದ ಫ್ಯಾನ್ಸ್​!

ಲಿರಿಕಲ್ ವೀಡಿಯೋ ಹಾಡಿನಲ್ಲಿ ವಿಜಯ್ ಮತ್ತು ನಟಿ ಪೂಜಾ ಹೆಗ್ಡೆ ಅವರ ಕೆಲವು ಬಿಹೈಂಡ್ ಸೀನ್ಸ್ ಗಳ ಗ್ಲಿಂಪ್ಸ್ ನೃತ್ಯ ಮಾಡುವುದನ್ನು ತೋರಿಸಲಾಗಿದೆ. ಈ ಹಾಡಿನ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ವಿಜಯ್ ಅವರೇ ಅನಿರುದ್ಧ್ ರವಿಚಂದರ್ ಅವರ ಸಂಯೋಜನೆಯ ಈ ಹಾಡನ್ನ ರಚಿಸಿದ್ದಾರೆ. ಜೊತೆಗೆ ಸ್ವತಃ ವಿಜಯ್​ ಹಾಡಿದ್ದಾರೆ. ಇನ್ನು ಈ ಹಾಡು ಕೂಡ ಸಖತ್​ ವೈರಲ್ ಆಗಿದ್ದು ಪ್ರತಿಯೊಬ್ಬರು ಈ ಹಾಡಿಗೆ ರೀಲ್ಸ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ.

ಏಪ್ರಿಲ್ 13ಕ್ಕೆ ಬರ್ತಿದ್ದಾರೆ ಬೀಸ್ಟ್​!

ಬೀಸ್ಟ್ ಸಿನಿಮಾವನ್ನು ನೆಲ್ಸನ್ ನಿರ್ದೇಶಿಸುತ್ತಿದ್ದಾರೆ. ಪೂಜಾ ಹೆಗ್ಡೆ ಮತ್ತು ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸೆಲ್ವರಾಘವನ್, ಯೋಗಿ ಬಾಬು, ಶೈನ್ ಟಾಮ್ ಚಾಕೊ, ಜಾನ್ ವಿಜಯ್, ಶಾಜಿ ಚೆನ್, ವಿಟಿವಿ ಗಣೇಶ್, ಅಪರ್ಣಾ ದಾಸ್, ಲಿಲ್ಲಿಪುಟ್ ಫರುಕಿ, ಅಂಕುರ್ ಅಜಿತ್ ವಿಕಲ್, ಸತೀಶ್ ಕೃಷ್ಣನ್, ರೆಡಿನ್ ಕಿಂಗ್ಸ್ಲಿ, ಜೋರ್ನ್ ಸುರ್ರಾವ್, ಸುನೀಲ್ ರೆಡ್ಡಿ, ಶಿವ ಅರವಿಂದ್ ಮುಂತಾದವರ ತಾರಾಗಣವಿದೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿತಿ ಮಾರನ್ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ಬ್ಯಾಡ ಬ್ಯಾಡ ಅಂದ್ರೂ ಮಾತು ಕೇಳದ ವಿಜಯ್​.. ರಾಕಿಭಾಯ್​ಗೆ ಸವಾಲ್​ ಹಾಕಿಯೇ ಬಿಟ್ಟ `ಬೀಸ್ಟ್’​!

ಸಖತ್ ವೈರಲ್​ ಆಗಿದ್ದ ಅರೇಬಿಕ್​ ಕುತ್ತು ಸಾಂಗ್!

ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ ಇದೇ ಸಿನಿಮಾದ ಅರೇಬಿಕ್​ ಕುತ್ತು ಹಾಡು ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸಿದೆ..  ಸೋಷಿಯಲ್ ಮೀಡಿಯಾ , ರೀಲ್ ಗಳಲ್ಲಿ ಆಲಮಟಿ ಹಬೀಬೋದೆ ಹವಾ ಇದ್ದು , ಈಗ ಮತ್ತೊಂದು ಹಾಡು ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗ್ತಿದೆ.

ರಾಕಿಭಾಯ್​ ಎದುರು ತೊಡೆ ತಟ್ಬೇಡಿ ಎಂದ ಫ್ಯಾನ್ಸ್​!

‘ಕೆಜಿಎಫ್​ 2’ ತಮಿಳಿಗೂ ಡಬ್​ ಆಗಿ ತೆರೆಕಾಣುತ್ತಿದೆ. ಒಂದೊಮ್ಮೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್​ ಆಗದೇ ಇದ್ದರೆ ಈ ಚಿತ್ರದ ಕಮಾಯಿ ಹೆಚ್ಚಲಿದೆ. ಇದಕ್ಕೆ ತಡೆ ನೀಡಬೇಕು ಎಂದು ಪರಭಾಷಿಗರು ಪ್ಲ್ಯಾನ್​ ರೂಪಿಸಿದಂತಿದೆ. ಈ ಕಾರಣಕ್ಕೆ ಕಾಲಿವುಡ್​ನಿಂದ ‘ಬೀಸ್ಟ್​’ ಚಿತ್ರವನ್ನು ಸ್ಪರ್ಧೆಗೆ ಇಳಿಸಲು ಪ್ಲ್ಯಾನ್​ ಮಾಡಿದ್ದಾರೆ ಎನ್ನಲಾಗುತ್ತಿದೆ. ‘ಪ್ಲೀಸ್​ ರಾಕಿ ಬಾಯ್​ ಎದುರು ತೊಡೆ ತಟ್ಬೇಡಿ ಎಂದು ನೆಟ್ಟಿಗರು ಬೀಸ್ಟ್​ ಚಿತ್ರತಂಡದವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: ಶಿವಣ್ಣ ಎಂಟ್ರಿಯಾಗುತ್ತಿದ್ದಂತೆ ಎಲ್ಲವೂ ಗಪ್​ಚುಪ್​! ಸುಖಾಂತ್ಯ ಕಂಡ ಜೇಮ್ಸ್​ ಥಿಯೇಟರ್​ ವಿವಾದ

ಕಲೆಕ್ಷನ್​ ಮೇಲೆ ಹೊಡೆತ ಬೀಳೋದು ಖಚಿತ!

‘ಕೆಜಿಎಫ್ 2’ ಚಿತ್ರಕ್ಕೂ ಒಂದು ದಿನ ಮೊದಲು, ಏಪ್ರಿಲ್ 13ಕ್ಕೆ 'ಬೀಸ್ಟ್' ರಿಲೀಸ್ ಆಗುತ್ತಿದೆ. ಹಾಗಾಗಿ ಈ ಎರಡು ಚಿತ್ರಗಳ ರಿಲೀಸ್ ನಡುವೆ ಅಷ್ಟೇನು ಅಂತರ ಇಲ್ಲ. ಆದರೂ ಕೂಡ ಹೀಗೆ ಎರಡು ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದರೆ ಕಲೆಕ್ಷನ್ ಮೇಲೆ ಹೊಡೆತ ಬೀಳುವುದು ಖಚಿತ.
Published by:Vasudeva M
First published: