Dabangg 3: ಕನ್ನಡದಲ್ಲೂ ದಬಾಂಗ್ 3 ದರ್ಬಾರ್​: ಬಿಡುಗಡೆಯಾಯ್ತು ಎರಡನೇ ಲಿರಿಕಲ್​ ವಿಡಿಯೋ..!

Dabangg 3 Hoo Anuve Song: ಸಲ್ಮಾನ್​ ಅವರ ದಬಾಂಗ್​ 3 ಕೇವಲ ಹಿಂದಿ ಮಾತ್ರವಲ್ಲ ಕನ್ನಡ ಹಾಗೂ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲೂ ಸದ್ದು ಮಾಡ್ತಿದೆ. ಇತ್ತೀಚೆಗಷ್ಟೇ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ವೈರಲ್ ಆಗಿದೆ.

news18india
Updated:December 7, 2019, 12:59 PM IST
Dabangg 3: ಕನ್ನಡದಲ್ಲೂ ದಬಾಂಗ್ 3 ದರ್ಬಾರ್​: ಬಿಡುಗಡೆಯಾಯ್ತು ಎರಡನೇ ಲಿರಿಕಲ್​ ವಿಡಿಯೋ..!
ದಬಾಂಗ್​ 3 ಸಿನಿಮಾದ ಯೂ ಕರ್ಕೆ ಹಾಡಿನಲ್ಲಿ ಸಲ್ಲು ಹಾಗೂ ಸೋನಾಕ್ಷಿ ಸಿನ್ಹಾ
  • Share this:
ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್‍ವುಡ್ ಪೈಲ್ವಾನ್ ಕಿಚ್ಚ ಸುದೀಪ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ 'ದಬಾಂಗ್​ 3'. ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಹಾಡುಗಳಿಂದಾಗಿ ಚಿತ್ರದ ಬಗೆಗಿನ ಕುತೂಹಲ ಹಾಗೂ ನಿರೀಕ್ಷೆ ಹೆಚ್ಚಿದೆ.

ಸಲ್ಮಾನ್​ ಅವರ 'ದಬಾಂಗ್​ 3' ಕೇವಲ ಹಿಂದಿ ಮಾತ್ರವಲ್ಲ ಕನ್ನಡ ಹಾಗೂ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲೂ ಸದ್ದು ಮಾಡ್ತಿದೆ. ಇತ್ತೀಚೆಗಷ್ಟೇ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ವೈರಲ್ ಆಗಿದೆ.ವಿಶೇಷ ಅಂದ್ರೆ 'ಹೂ ಅನುವೆ...' ಎಂದು ಸಾಗುವ ಈ ರೊಮ್ಯಾಂಟಿಕ್ ಹಾಡಿಗೆ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಪ್ರಭುದೇವಾ ನಿರ್ದೇಶನದ 'ದಬಾಂಗ್ 3' ಇದೇ ಡಿಸೆಂಬರ್ 20ರಂದು ಹಿಂದಿ, ಕನ್ನಡ, ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಇದನ್ನೂ ಓದಿ: Mahesh Babu: ಸೇನಾಧಿಕಾರಿಯಾಗಿದ್ದ ಪ್ರಿನ್ಸ್​ ಮಹೇಶ್​ ಬಾಬು ಈಗ ಗ್ಯಾಂಗ್​ಸ್ಟರ್​..!

ಇನ್ನು ಇದರಲ್ಲಿ ಸುದೀಪ್​ ಬಲ್ಲಿ ಸಿಗ್​ ಹೆಸರಿನ ಖಳನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಲನ್​ ಆಗಿ ಸಲ್ಲು ಮುಂದೆ ನಿಂತು ಫೈಟ್​ ಮಾಡಲಿದ್ದಾರೆ ಕಿಚ್ಚ. ಈ ಸಿನಿಮಾದ ಹಿಂದೆ ವರ್ಷನ್​ಗೆ ಕಿಚ್ಚ ತಮ್ಮ ಪಾತ್ರಕ್ಕೆ ತಾವೇ ಡಬ್​ ಮಾಡಿರುವುದು ವಿಶೇಷ.

Rashmika Mandanna: ದಿನ ಕಳೆದಂತೆ ಸಿಕ್ಕಾಪಟ್ಟೆ ಬೋಲ್ಡ್​ ಆಗುತ್ತಿದ್ದಾರೆ ರಶ್ಮಿಕಾ ಮಂದಣ್ಣ..!
First published:December 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ