Black Widow: ಮಾರ್ವೆಲ್​ನ 'ಬ್ಲ್ಯಾಕ್​ ವಿಡೊ' ಚಿತ್ರದ ನಾಯಕಿ ನತಾಶಾರ ಹೊಸ ಲುಕ್..!: ಇಲ್ಲಿದೆ ಈ ಸಿನಿಮಾದ ಕನ್ನಡ ಟೀಸರ್​ ..!

Black Widow: ನತಾಶಾ ಪಾತ್ರವನ್ನೇ ಪ್ರಮುಖವಾಗಿಟ್ಟುಕೊಂಡು ಮಾರ್ವೆಲ್​ ಸ್ಟುಡಿಯೋಸ್​ 'ಬ್ಲ್ಯಾಕ್​ ವಿಡೊ' ಸಿನಿಮಾ ಮಾಡುತ್ತಿರುವ ವಿಷಯ ಹಳೆಯದು. ಈ ಚಿತ್ರದಲ್ಲಿ ನತಾಶಾರ ಪಾತ್ರದ ಬಗ್ಗೆ ಈಗಾಗಲೇ ಬಿಡುಗಡೆಯಾಗಿರುವ ಟೀಸರ್​ನಿಂದಲೇ ತಿಳಿಯುತ್ತದೆ. ಆದರೆ ಈಗ ನಾಯಕಿಯ ಹೊಸ ಲುಕ್ ಔಟ್​ ಆಗಿದೆ. 

'ಬ್ಲ್ಯಾಕ್​ ವಿಡೊ' ಚಿತ್ರದಲ್ಲಿ ಸ್ಕಾರ್ಲೆಟ್​ ಜೋಹಾನ್ಸನ್

'ಬ್ಲ್ಯಾಕ್​ ವಿಡೊ' ಚಿತ್ರದಲ್ಲಿ ಸ್ಕಾರ್ಲೆಟ್​ ಜೋಹಾನ್ಸನ್

  • Share this:
ಸ್ಕಾರ್ಲೆಟ್​ ಜೋಹಾನ್ಸನ್​ ಎಂದ ಕೂಡಲೇ ಯಾರೆಂದು ನೆನಪಾಗದಿದ್ದರೂ, ಮಾರ್ವೆಲ್​ನ 'ಅವೆಂಜರ್ಸ್​' ಸರಣಿಯ ನತಾಶಾ ಎಂದರೆ ಸಾಕು ಕಣ್ಣುಗಳು ಅರಳುತ್ತವೆ. ಹೌದು, ನತಾಶಾ ಪಾತ್ರದಲ್ಲಿ ನಟಿಸಿದ್ದ ಸ್ಕಾರ್ಲೆಟ್ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸಿದ್ದ ನಟಿ. 

ನತಾಶಾ ಪಾತ್ರವನ್ನೇ ಪ್ರಮುಖವಾಗಿಟ್ಟುಕೊಂಡು ಮಾರ್ವೆಲ್​ ಸ್ಟುಡಿಯೋಸ್​ 'ಬ್ಲ್ಯಾಕ್​ ವಿಡೊ' ಸಿನಿಮಾ ಮಾಡುತ್ತಿರುವ ವಿಷಯ ಹಳೆಯದು. ಈ ಚಿತ್ರದಲ್ಲಿ ನತಾಶಾರ ಪಾತ್ರದ ಬಗ್ಗೆ ಈಗಾಗಲೇ ಬಿಡುಗಡೆಯಾಗಿರುವ ಟೀಸರ್​ನಿಂದಲೇ ತಿಳಿಯುತ್ತದೆ. ಆದರೆ ಈಗ ನಾಯಕಿಯ ಹೊಸ ಲುಕ್ ಔಟ್​ ಆಗಿದೆ.

Scarlett Johanssons Black Widow Movie Kannada Trailer is Out now
'ಬ್ಲ್ಯಾಕ್​ ವಿಡೊ' ಚಿತ್ರದಲ್ಲಿ ಸ್ಕಾರ್ಲೆಟ್​ ಜೋಹಾನ್ಸನ್


ಕಪ್ಪು ಹಾಗೂ ಚಿನ್ನದ ಬಣ್ಣ ಮಿಶ್ರಿತ ಸೂಟ್​ನಲ್ಲಿ ನಾತಾಶಾ ಮಿಂಚಿದ್ದಾರೆ. ಮಾರ್ವೆಲ್​ ಪ್ರತಿ ಸಿನಿಮಾದಲ್ಲೂ ಸೂಪರ್​ ಹೀರೋ ಪಾತ್ರಗಳಿಗೆ ಒಂದೊಂದು ವಿಶಿಷ್ಟವಾದ ಗುರುತಿರುವ ಡಿಸೈನರ್​ ಸೂಟ್​ಗಳನ್ನು ಕೊಡುತ್ತದೆ. ಈಗ ಬ್ಲ್ಯಾಕ್​ ವಿಡೊ ಸೂಟ್​ ಲುಕ್ ಬಿಡುಗಡೆಯಾಗಿದೆ.

ಇದನ್ನೂ ಓದಿ: DBoss Darshan: ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ದರ್ಶನ್​..!

ಇನ್ನು ಈ ಸಿನಿಮಾ ಭಾರತದಲ್ಲಿ ತೆರೆ ಕಾಣಲಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಕನ್ನಡದಲ್ಲೂ ರಿಲೀಸ್​ ಆಗಲಿದೆ. ಈ ಹಿಂದೆ ಚಿತ್ರತಂಡ ಕನ್ನಡದ ಟೀಸರ್​ ಅನ್ನೂ ಬಿಡುಗಡೆ ಮಾಡಿತ್ತು.Rashmika Mandanna: ಆ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ತೆಗೆದುಕೊಂಡಿರುವ ನಿರ್ಧಾರಕ್ಕೆ ಶಾಕ್​ ಆದ ಅಭಿಮಾನಿಗಳು..!
First published: