ಅತ್ಯಾಚಾರ ಆರೋಪ: ಸದ್ಯಕ್ಕೆ ಬಂಧನದ ಭೀತಿಯಿಂದ ಪಾರಾದ ನಟಿ Chahat Khanna ಪತಿ

ಪತಿಯ ವಿರುದ್ಧ ಅತ್ಯಾಚಾರ ಹಾಗೂ ಅಸಹಜ ಲೈಂಗಿಕತೆ ಆರೋಪ ಮಾಡಿ ನಟಿ ಚಾಹತ್ ಖನ್ನಾ ನ್ಯಾಯಾಲಯದ ಮೆಟ್ಟಿಲೇರಿರುವ ವಿಷಯ ಗೊತ್ತೇ ಇದೆ. ಈ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಾಲಯದ ಆರೋಪ ಎದುರಿಸುತ್ತಿರುವ ಫರ್ಹಾನ್ ಶಾರುಖ್ ಮಿರ್ಜಾ ಅವರಿಗೆ ಸದ್ಯಕ್ಕೆ ಬಂಧನದಿಂದ ರಕ್ಷಣೆ ನೀಡಿದೆ.

ಪತಿ ಫರ್ಹಾನ್ ಶಾರುಖ್ ಮಿರ್ಜಾ ವಿರುದ್ಧ ಅತ್ಯಾಚಾರ, ಅಸಹಜ ಲೈಂಗಿಕತೆ ಆರೋಪ  ನಟಿ ಚಾಹತ್ ಖನ್ನಾ

ಪತಿ ಫರ್ಹಾನ್ ಶಾರುಖ್ ಮಿರ್ಜಾ ವಿರುದ್ಧ ಅತ್ಯಾಚಾರ, ಅಸಹಜ ಲೈಂಗಿಕತೆ ಆರೋಪ ನಟಿ ಚಾಹತ್ ಖನ್ನಾ

  • Share this:
ಹಿಂದಿ ಕಿರುತೆರೆ ನಟಿ ಚಾಹತ್ ಖನ್ನಾ (Chahat Khanna) ಅವರು ಪತಿ ಫರ್ಹಾನ್ ಶಾರುಖ್ ಮಿರ್ಜಾ (Farhan Shahrukh Mirza) ಮೇಲೆ  ಅತ್ಯಾಚಾರ, ಅಸಹಜ ಲೈಂಗಿಕತೆ ಮತ್ತು ಅಂತಹ ಕೃತ್ಯಗಳ ವಿಡಿಯೋಗಳನ್ನು ಮಾಡಿರುವ ಆರೋಪ ಹೊರಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ರ್ಹಾನ್ ಶಾರುಖ್ ಮಿರ್ಜಾ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಬಂಧನದಿಂದ ರಕ್ಷಣೆ ನೀಡಿದೆ. 'ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೆ ಮುಂಬೈ ಜಿಲ್ಲೆ, ಓಶಿವರ ಪೋಲೀಸ್ ಸ್ಟೇಶನ್ ,ಎಫ್‍ಐಆರ್ ನಂಬರ್.431/2018 ರ ಅರ್ಜಿದಾರರ ಬಂಧನಕ್ಕೆ ತಡೆ ಇರುತ್ತದೆ. ಬಾಕಿ ಇರುವ ತನಿಖೆಗೆ ಅರ್ಜಿದಾರರು ಸಹಕರಿಸಬೇಕು' ಎಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಅಭಯ್ ಎಸ್ ಓಕಾ ಅವರ ಪೀಠವು ಆದೇಶ ಹೊರಡಿಸಿದೆ.

ಮಿರ್ಜಾ ಪರ ವಕೀಲರಾದ, ಹಿರಿಯ ವಕೀಲ ಸಿದ್ದಾರ್ಥ್ ಅಗರ್‌ವಾಲ್‌ ಮತ್ತು ವಕೀಲ ಎಜಾಜ್ ಮಕ್ಬೂ ಅವರು ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಉನ್ನತ ನ್ಯಾಯಲಯವು ಈ ಆದೇಶವನ್ನು ಹೊರಡಿಸಿತು. ಮಿರ್ಜಾ, ತಮಗೆ ಬಿಡುಗಡೆ ನೀಡಲು ನಿರಾಕರಿಸಿದ್ದ ಬಾಂಬೆ ಹೈಕೋರ್ಟ್‍ನ ಸೆಪ್ಟೆಂಬರ್ 1ರ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ಪ್ರತಿಯನ್ನು ಮಹಾರಾಷ್ಟ್ರದ ಸ್ಥಾಯಿ ಸಲಹೆಗಾರರಿಗೆ ಹೆಚ್ಚುವರಿಯಾಗಿ ನೀಡಬೇಕು ಎಂದು ಕೂಡ ಉನ್ನತ ನ್ಯಾಯಾಲಯವು ಹೇಳಿದೆ.

Bade Achhe Lagte Hain, Bade Achhe Lagte Hain fame Chahat Khanna, Chahat Khanna husband Farhan Shahrukh Mirza, allegations of rape and unnatural sex against Farhan Shahrukh Mirza, Chahat Khanna, Supreme court, Bade Achhe Lagte Hai, ಚಾಹತ್ ಖನ್ನಾ, ಸುಪ್ರೀಂ ಕೋರ್ಟ್, ಬಡೇ ಅಚ್ಚೆ ಲಗ್‍ತೇ ಹೇ, SC granted protection from arrest to Farhan Shahrukh Mirza
ಪತಿ ಫರ್ಹಾನ್ ಶಾರುಖ್ ಮಿರ್ಜಾ ವಿರುದ್ಧ ಅತ್ಯಾಚಾರ, ಅಸಹಜ ಲೈಂಗಿಕತೆ ಆರೋಪ ನಟಿ ಚಾಹತ್ ಖನ್ನಾ


“ಅತ್ಯಂತ ಕೆಟ್ಟದಾಗಿ ಇದನ್ನು ಪೂರ್ವಾಗ್ರಹವಿಲ್ಲದೆ ಸಲ್ಲಿಸಲಾಗಿದೆ. ಇದು ಎರಡು ಪಕ್ಷಗಳ ನಡುವಿನ ಮದುವೆಯ ಪ್ರಕರಣವಾಗಿದೆ. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಶಸ್ವಿ ವೃತ್ತಿ ಜೀವನ ಹೊಂದಿದ್ದು, ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ” ಎಂದು ಮಿರ್ಜಾ ತಮ್ಮ ಮನವಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Pearl V Puri: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ: ನಟನ ವಿರುದ್ಧ ಆರೋಪ ಮಾಡಿರುವುದು ಬಾಲಕಿಯೇ ಎಂದ ವಕೀಲರು

ದಾಂಪತ್ಯ ಹಕ್ಕುಗಳ ಮರುಪಾವತಿಗಾಗಿ ಮಿರ್ಜಾ ಸಲ್ಲಿಸಿದ್ದ ವೈವಾಹಿಕ ಅರ್ಜಿಗೆ ಪ್ರತಿದಾಳಿಯ ರೂಪದಲ್ಲಿ ಆತನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ. ಮಿರ್ಜಾ ತನಗೆ ಮಾದಕ ದ್ರವ್ಯಗಳ ಪ್ರಭಾವದಿಂದ ಅಸ್ವಾಭಾವಿಕ ಕಿರುಕುಳ ನೀಡಿದ್ದಾರೆ (ಐಪಿಸಿ ಸೆಕ್ಷನ್ 377) ಎಂದು ಚಾಹತ್ ಆರೋಪಿಸಿದ್ದರು.

ತನ್ನಿಂದ ದೂರವಾಗಿರುವ ಪತ್ನಿ ಚಾಹತ್‍ಗೆ ಸುಳ್ಳು ಹೇಳುವ ದುರಭ್ಯಾಸವಿದೆ ಮತ್ತು ಆಕೆ ತನ್ನ ಮಾಜಿ ಪತಿ/ಪಾಲುದಾರರ ವಿರುದ್ಧವೂ ಇದೇ ರೀತಿಯ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರು ಎಂದು ಮಿರ್ಜಾ ಹೇಳಿದ್ದಾರೆ.

ಅರ್ಜಿದಾರ ಮಿರ್ಜಾ ತನ್ನ ಮದುವೆ ಹಾಗೂ ಕುಟುಂಬವನ್ನು (ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಇದ್ದಾರೆ) ಉಳಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕೆ ಪ್ರತಿಕಾರವಾಗಿ, ಸಂಯೋಜಿತ ಮತ್ತು ವಿಚಿತ್ರ ಆರೋಪಗಳನ್ನು ಮಾಡಿ ದೂರು ನೀಡಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Mika Singh Viral Photo: ವೈರಲ್​ ಆಗುತ್ತಿವೆ ಗಾಯಕ ಮಿಕ ಸಿಂಗ್​ ಬೆಡ್​ರೂಮ್​ ಫೋಟೋಗಳು..!

ಅವರು 2013 ಫೆಬ್ರವರಿ 8 ರಂದು ಮಿರ್ಜಾರನ್ನು ಮದುವೆಯಾಗಿದ್ದರು, ಮತ್ತು ಮಿರ್ಜಾ ಆಗ ತಾನು ಗ್ರೀನ್ ವೀಲ್ ಕನ್​ಸ್ಟ್ರಕ್ಷನ್ ಕಂಪೆನಿಯ ಮಾಲೀಕ ಮತ್ತು ಆರ್ಥಿಕವಾಗಿ ಸದೃಢನಾಗಿದ್ದೇನೆ ಎಂದು ಹೇಳಿಕೊಂಡಿದ್ದರು ಎಂಬುದಾಗಿ 'ಬಡೇ ಅಚ್ಚೇ ಲಗ್‍ತೇ ಹೈ' ಖ್ಯಾತಿಯ ಚಾಹತ್ ಖನ್ನಾ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಮಿರ್ಜಾ ಒಬ್ಬ ಮಾದಕ ದೃವ್ಯ ವ್ಯಸನಿ ಹಾಗೂ ಆತನಿಗೆ ಯಾವುದೇ ಉದ್ಯೋಗವಿಲ್ಲ ಮತ್ತು ಆತ ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಸುಳ್ಳು ಚಿತ್ರಣ ನೀಡಿದ್ದ ಎಂಬುವುದು ಮದುವೆಯ ನಂತರ ಬೆಳಕಿಗೆ ಬಂತು ಎಂದು ಚಾಹತ್ ಹೇಳಿದ್ದಾರೆ.
Published by:Anitha E
First published: