• Home
  • »
  • News
  • »
  • entertainment
  • »
  • Alia Bhatt: `ಗಂಗೂಬಾಯಿ ಕಾಥಿಯಾವಾಡಿ’ಗೆ ಬಿಗ್​ ರಿಲೀಫ್​, ಸಿನಿಮಾ ರಿಲೀಸ್ ಮಾಡಿ ಎಂದ ಸುಪ್ರೀಂ ಕೋರ್ಟ್!

Alia Bhatt: `ಗಂಗೂಬಾಯಿ ಕಾಥಿಯಾವಾಡಿ’ಗೆ ಬಿಗ್​ ರಿಲೀಫ್​, ಸಿನಿಮಾ ರಿಲೀಸ್ ಮಾಡಿ ಎಂದ ಸುಪ್ರೀಂ ಕೋರ್ಟ್!

ನಟಿ ಆಲಿಯಾ ಭಟ್​

ನಟಿ ಆಲಿಯಾ ಭಟ್​

ಸುಪ್ರೀಂ ಕೋರ್ಟ್(Supreme Court)  ಸಿನಿಮಾ ರಿಲೀಸ್ ಮಾಡುವಂತೆ ಚಿತ್ರತಂಡಕ್ಕೆ ಸೂಚನೆ ನೀಡಿದೆ. ಇದರಿಂದ ಗಂಗೂಬಾಯಿಗೆ ಬಿಗ್​ ರಿಲಿಫ್(Big Relief)​ ಸಿಕ್ಕಂತಾಗಿದೆ.

  • Share this:

ಗಂಗೂಬಾಯಿ ಕಥಿಯಾವಾಡಿ' (Gangubai Kathiawadi)ಚಿತ್ರದ ವಿರುದ್ಧದ ಎರಡು ಅರ್ಜಿಗಳನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ (Bombay HC), ಚಿತ್ರದ ವಿರುದ್ಧದ ಮತ್ತೊಂದು ಅರ್ಜಿಯನ್ನು ವಜಾಗೊಳಿಸಿತ್ತು.  55 ಇತರ ಕಾಮಾಟಿಪುರ (Kamatipura) ನಿವಾಸಿಗಳ ಪರವಾಗಿ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಚಲನಚಿತ್ರದಿಂದಾಗಿ, ಆ ಪ್ರದೇಶದಲ್ಲಿ ವಾಸಿಸುವ ಮಹಿಳೆಯರನ್ನು ‘ವೇಶ್ಯೆ(Prostitute) ಎಂದು ಕರೆಯಲಾಗುವುದು ಮತ್ತು ಕುಟುಂಬಗಳು ಕಡಿಮೆ ಘನತೆಯಿಂದ ಬದುಕಬೇಕಾಗುತ್ತದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ (Amin Patel) ಕೂಡ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (PIL) ಸಲ್ಲಿಸಿದ್ದರು. ಬಾಂಬೆ ಹೈ ಕೋರ್ಟ್ ಈ ಅರ್ಜಿಯನ್ನು ವಜಾಗಳಿಸಿದ್ದಕ್ಕೆ, ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್(Supreme Court)  ಸಿನಿಮಾ ರಿಲೀಸ್ ಮಾಡುವಂತೆ ಚಿತ್ರತಂಡಕ್ಕೆ ಸೂಚನೆ ನೀಡಿದೆ. ಇದರಿಂದ ಗಂಗೂಬಾಯಿಗೆ ಬಿಗ್​ ರಿಲಿಫ್(Big Relief)​ ಸಿಕ್ಕಂತಾಗಿದೆ.


ಸಿನಿಮಾ ರಿಲೀಸ್ ಮಾಡಿ ಎಂದ ಸುಪ್ರೀಂ ಕೋರ್ಟ್!


ಹೌದು, ಬಾಂಬೆ ಕೋರ್ಟ್​ನಲ್ಲಿ ಅರ್ಜಿ ವಜಾ ಆಗುತ್ತಿದ್ದಂತೆ, ಸುಪ್ರೀಂ ಕೋರ್ಟ್​ನಲ್ಲಿ ಸಿನಿಮಾ ತಡೆ ಕೋರಿ ಅರ್ಜಿ ಹಾಕಲಾಗಿತ್ತು. ಮೊದಲು ಸಿನಿಮಾದ ಹೆಸರನ್ನು ಬದಲಾಯಿಸುವಂತೆ ಸುಪ್ರೀಂ ಕೋರ್ಟ್​ ಸೂಚಿಸಿತ್ತು. ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್​ ಮಾಡದಂತೆ ಮನವಿ ಕೂಡ ಮಾಡಲಾಗಿತ್ತು. ಎರಡು ಕಡೆಯ ವಾದಗಳನ್ನು ಕೇಳಿದ್ದ ಸಿಜೆ ಈ ಅರ್ಜಿಯನ್ನು ವಜಾ ಮಾಡಿದೆ. ಸಿನಿಮಾ ರಿಲೀಸ್​ಗೆ ಯಾವುದೇ ತೊಂದರೆ ಇಲ್ಲ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ. ಇದರಿಂದ ಗಂಗೂಬಾಯಿ ಸಿನಿಮಾಗೆ ಇದ್ದ ಟೆನ್ಶನ್ ಇದೀಗ ಕಡಿಮೆಯಾಗಿದೆ.


ಇದನ್ನೂ ಓದಿ: ‘ಗಂಗೂಬಾಯಿ‘ಗೆ ಕೊನೆಗೂ ರಿಲೀಫ್, ಬಾಂಬೆ ಹೈಕೋರ್ಟ್​ನಿಂದ ಅರ್ಜಿ ವಜಾ ಫೆ.25ಕ್ಕೆ ಸಿನಿಮಾ ರಿಲೀಸ್ ಪಕ್ಕಾ


ಕೋರ್ಟ್​ನಲ್ಲಿ ಅರ್ಜಿ ಹಾಕಿದ್ದ ಶಾಸಕ ಅಮಿನ್ !


ಹೌದು, ಗಂಗೂಬಾಯಿ ಕಾಥಿಯಾವಾಡಿ ಸಿನಿಮಾಗೆ ತಡೆ ಕೋರಿ, ಶಾಸಕ ಅಮಿನ್ ಪಟೇಲ್ ಹಾಗೂ ಕಾಮಾಟಿಪುರದ ನಿವಾಸಿಗಳು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ರು. ಕಾಮಾಟಿಪುರದಲ್ಲಿ ಈ ಹಿಂದೆ ಹಲವು ವೇಶ್ಯಾಗೃಹಗಳಿದ್ದವು. ಆದರೆ ಕಾಲಾಂತರದಲ್ಲಿ ಎಲ್ಲವೂ ನಿಷ್ಕಿಯವಾದವು. ಹಿಂದೆ ಕಾಮಾಟಿಪುರದ ರಾಣಿಯಂತಿದ್ದ ಗಂಗೂಬಾಯಿಯ ನಿಜ ಜೀವನದ ಕತೆಯನ್ನೇ ಆಧರಿಸಿ 'ಗಂಗೂಬಾಯಿ ಕಾಥಿಯಾವಾಡಿ' ಸಿನಿಮಾ ಮಾಡಲಾಗಿದೆ.


ಸಿನಿಮಾ ಕನಸು ಹೊತ್ತು ಬಂದ ಯುವತಿಯ ಕಥೆ!


ಸಿನಿಮಾದಲ್ಲಿ ನಟಿಸುವ ಕನಸು ಹೊತ್ತು ಮುಂಬೈಗೆ ಬಂದಿದ್ದ ಯುವತಿ ಮೋಸಕ್ಕೆ ಬಿದ್ದು ಮುಂಬೈನ ರೆಡ್ ಲೈಟ್ ಏರಿಯಾ ಸೇರುವ ಕಥೆ. ಮುಂದೊಂದು ದಿನ ಅದೇ ಕಾಮಾಟಿಪುರದ ಅಧಿ ನಾಯಕಿಯಾಗಿ ಬೆಳೆಯುವ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. 'ಗಂಗೂಬಾಯಿ ಕಾಠಿಯಾವಾಡಿ' ಹುಸೈನ್ ಜೈದಿ ಬರೆದ ಪುಸ್ತಕವನ್ನು ಆಧರಿಸಿದ ಬಯೋಗ್ರಾಫಿಕಲ್ ಕೈಂ ಡ್ರಾಮಾ. ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸೆಕ್ಸ್ ವರ್ಕರ್ ಆಗಿದ್ದ ಮಾಫಿಯಾ ಕ್ವೀನ್ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ.


ಇದನ್ನೂ ಓದಿ: ಮುಗಿಯದ `ಗಂಗೂಬಾಯಿ’ ಸಂಕಷ್ಟ! ಕೋರ್ಟ್ ಮೆಟ್ಟಿಲೇರಿದ ಕಾಮಾಟಿಪುರದ ಶಾಸಕ


ಮುಂಗಡ ಟಿಕೆಟ್​ ಬುಕ್ಕಿಂಗ್​ ಸೋಲ್ಡ್​ ಔಟ್​!


ಬಾಲಿವುಡ್(Bollywood)​ನಲ್ಲಿ ಈಗ ‘ಗಂಗೂಬಾಯಿ ಕಾಥಿಯಾವಾಡಿ’(Gangubai Kathiawadi) ಸಿನಿಮಾದೇ ಹವಾ. ಫೆಬ್ರವರಿ25ರಂದು ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್(Release)​ ಆಗುತ್ತಿದೆ. ಇನ್ನೂ ಕೇವಲ 1 ದಿನಗಳಷ್ಟೇ ಬಾಕಿ ಇದೆ.ನಾಳೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಈಗಾಗಲೇ ಮುಂಗಡ ಟಿಕೆಟ್​ ಬುಕ್ಕಿಂಗ್​ ಎಲ್ಲ ಕಡೆ ಸೋಲ್ಡ್​ ಔಟ್​ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

Published by:Vasudeva M
First published: