ಸ್ಯಾಂಡಲ್ವುಡ್ (Sandalwood) ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಜೊತೆಗೆ ಯುವರತ್ನ (Yuvarathna) ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಸಯೇಶಾ ತಮ್ಮ ಮಗುವಿನ ಫೋಟೋವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ಕಾಲಿವುಡ್ (Kollywood) ನಟ ಆರ್ಯ (Arya) ಹಾಗೂ ಸಾಯೇಶಾ (Sayyesha) 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2021ರಲ್ಲಿ ಈ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿತು. ಇತ್ತೀಚೆಗಷ್ಟೇ ತಮ್ಮ ಮಗಳಿಗೆ ,(Sayyesha Daughter) ಮುದ್ದಾದ ಹೆಸರಿಟ್ಟಿದ್ದ ಈ ಜೋಡಿ, ಈಗ ತಮ್ಮ ಮಗಳ ಮುಖವನ್ನು ಮೊದಲ ಬಾರಿಗೆ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.
41ನೇ ವಸಂತಕ್ಕೆ ಕಾಲಿಟ್ಟ ನಟ ಆರ್ಯ
ಹೌದು, ಕಾಲಿವುಡ್ ಕ್ಯೂಟ್ ಪೇರ್ಗಳಲ್ಲಿ ನಟ ಆರ್ಯ ಹಾಗೂ ಸಯೇಶಾ ಕೂಡ ಒಬ್ಬರು. ಭಾನುವಾರ ಆರ್ಯ ಅವರು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪತಿಯ ಹುಟ್ಟುಹಬ್ಬ ಪ್ರಯುಕ್ತ ಸಯೇಶಾ ತಮ್ಮ ಮುದ್ದಾದ ಮಗಳ ಫೋಟೋ ರಿವೀಲ್ ಮಾಡಿದ್ದಾರೆ.
ಮಗಳ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಯೇಶಾ ಅವರು ಹಂಚಿಕೊಂಡಿದ್ದು, ಫೋಟೋಗೆ ಅಭಿಮಾನಿಗಳಿಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಗಳು ಹರಿದು ಬರುತ್ತಿದೆ.
ಕೆಲವು ತಿಂಗಳ ಹಿಂದಷ್ಟೇ ಮಗಳಿಗೆ ಅರಿಯನಾ ಹೆಸರಿಟ್ಟ ಸಯೇಶಾ
ಕೆಲವು ತಿಂಗಳ ಹಿಂದೆಯಷ್ಟೇ ಮಗಳಿಗೆ ಈ ಜೋಡಿ ಅರಿಯನಾ ಎಂಬ ಹೆಸರಿಟ್ಟಿದ್ದರು. ಇನ್ನೂ ಈ ವಿಚಾರವನ್ನು ಆರ್ಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ 'ನಾನು ತಂದೆಯಾಗಿ ಎರಡು ತಿಂಗಳಾಯ್ತು. ಮಗಳ ದಿನಾಚರಣೆಯ ಶುಭಾಶಯಗಳು' ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದರು. ಹ್ಯಾಷ್ಟ್ಯಾಗ್ ಅರಿಯಾನಾ ಎಂದು ಬರೆದುಕೊಂಡಿದ್ದರು. ಆ ಮೂಲಕ ತಮ್ಮ ಮುದ್ದಾದ ಮಗಳ ಹೆಸರನ್ನು ಬಹಿರಂಗಪಡಿಸಿದ್ದರು.
2015ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸಾಯೇಶಾ
2015ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸಾಯೇಶಾ, ಆರ್ಯ ಜೊತೆ 'ಟೆಡ್ಡಿ', 'ಗಜನಿಕಾಂತ್', 'ಕಾಪ್ಪಾನ್' ಎಂಬ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾದ ವೇಳೆ ಸ್ನೇಹಿತರಾಗಿದ್ದ ಇವರಿಬ್ಬರ ನಡುವೆ ನಂತರದ ದಿನಗಳಲ್ಲಿ ಪ್ರೀತಿ ಶುರುವಾಗಿತ್ತು. ಬಳಿಕ ಇವರಿಬ್ಬರ ನಡುವೆ ಲವ್ವಿ-ಡವ್ವಿ ಶುರುವಾಗಿದೆ ಎಂದು ಗಾಸಿಪ್ ಹಬ್ಬಿತ್ತು. ಆದರೆ ಈ ಬಗ್ಗೆ ಸಯೇಶಾ ಆಗಲಿ, ಆರ್ಯ ಆಗಲಿ ಎಲ್ಲೂ ಕೂಡ ಬಾಯಿ ಬಿಟ್ಟಿರಲಿಲ್ಲ.
2019ರಲ್ಲಿ ಆರ್ಯ ಕೈ ಹಿಡಿದ ಸಾಯೇಶಾ
ಕೊನೆಗೆ ತಾವಿಬ್ಬರು ಮದುವೆಯಾಗಲು ನಿರ್ಧರಿಸಿರುವುದಾಗಿ ಅನೌನ್ಸ್ ಮಾಡಿ, ಗುರು ಹಿರಿಯರ ಸಮ್ಮುಖದಲ್ಲಿ 2019ರಲ್ಲಿ ಹಸೆಮಣೆ ಏರಿದರು. ಮದುವೆಯ ನಂತರವೂ ಸಾಯೇಶಾ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಇನ್ನು, ಈಚೆಗಷ್ಟೇ ಆರ್ಯ ಅವರ 'ಸರ್ಪಟ್ಟ ಪರಂಬರೈ' ಸಿನಿಮಾ ಓಟಿಟಿಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಅವರ ನಟನೆಯ ಅರಣ್ಮಯಿ 3 ಹಾಗೂ ಎನಿಮಿ ಸಿನಿಮಾಗಳು ಬಿಡುಗಡೆಯಾಗಿ ಯಶಸ್ವಿಯಾಯಿತು.
ಮೂಲತಃ ಮುಂಬೈನವರಾಗಿರುವ ಸಾಯೇಶಾ
ಸಾಯೇಶಾ ಮೂಲತಃ ಮುಂಬೈನವರಾಗಿದ್ದು, 1987ರಿಂದ 1995ರ ಅವಧಿಯಲ್ಲಿ ಬಾಲಿವುಡ್ನಲ್ಲಿ ಆ್ಯಕ್ಟಿವ್ ಆಗಿದ್ದ ನಟ ಹಾಗೂ ನಿರ್ಮಾಪಕ ಸುಮೀತ್ ಸೈಗಲ್ ಪುತ್ರಿಯಾಗಿದ್ದಾರೆ. ತೆಲುಗು ಹಾಗೂ ತಮಿಳಿನ’ಅಖಿಲ್’ ಚಿತ್ರದ ಮೂಲಕ ನಾಯಕಿ ಆಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಸಯೇಶಾ ನಂತರ. ಬಾಲಿವುಡ್ ನಲ್ಲಿ ಅಜಯ್ ದೇವಗನ್ ಜೋಡಿ ಆಗಿ ’ಶಿವಾ’ ಚಿತ್ರದಲ್ಲಿ ಮಿಂಚಿದ್ದರು. ಬಳಿಕ 'ಯುವರತ್ನ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟರು.
ಪುನೀತ್ ಅಗಲಿಕೆಗೆ ಸಂತಾಪ ಸೂಚಿಸಿದ್ದ ಸಾಯೇಶಾ
ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ ಅಭಿನಯಿಸಿದ್ದ ಸಾಯೇಶಾ ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿದ್ದರು.
ಇದನ್ನು ಓದಿ: ಸಾಮಾಜಿಕ ಜಾಲತಾಣದಲ್ಲಿ ಆರ್ಯ-ಸಯೇಷಾ ಹನಿಮೂನ್ ಫೋಟೋ ವೈರಲ್
ಪುನೀತ್ ನನ್ನ ಸ್ನೇಹಿತ, ನನ್ನ ಕುಟುಂಬ, ರತ್ನ. ನಾನು ಅನುಭವಿಸುತ್ತಿರುವ ದುಃಖವನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ. ಇದು ತುಂಬಲಾರದ ನಷ್ಟ. ಅವರ ಪತ್ನಿ ಅಶ್ವಿನಿ ಅಕ್ಕ ಮತ್ತು ಅವರ ಪುತ್ರಿಯರಿಗೆ ನನ್ನ ಸಂತಾಪಗಳು, ಅವರ ಜೀವನವು ಎಂದಿಗೂ ಹಿಂದಿನಂತೆ ಆಗಿರುವುದಿಲ್ಲ ಎಂದು ಪುನೀತ್ ಫೋಟೋ ಹಾಕಿ ಕ್ಯಾಪ್ಸನ್ನಲ್ಲಿ ಬರೆದುಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ