ಬಾಲಿವುಡ್ ನಟ ಜಾನ್ ಅಬ್ರಾಹಂ (John Abraham Viral Video) ಅವರ ಲೆಟೆಸ್ಟ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಅಷ್ಟಕ್ಕೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ ಅನ್ನೋ ಕುತೂಹಲ ಕಾಡೋದು ಸಹಜ. ಆದಷ್ಟು ವಿವಾದಗಳಿಂದ ದೂರ ಇರುವ ನಗು ಮುಖದ ನಟ ಜಾನ್ ಅಬ್ರಾಹಂ ಅವರು ಈಗಲೂ ಸಹ ತಾವು ಮಾಡಿರುವ ತುಂಟತನದಿಂದಾಗಿ ಸುದ್ದಿಯಲ್ಲಿದ್ದಾರೆ. ತನ್ನ ವಿಡಿಯೋ ಮಾಡುತ್ತಿದ್ದ ಯುವಕನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಜಾನ್ ಅಬ್ರಹಾಂ ಅವರು ಏನು ಮಾಡಿದ್ದಾರೆ ಗೊತ್ತಾ..?
ಜಾನ್ ಅಬ್ರಾಹಂ ತಮ್ಮ ಸ್ನೇಹಿತನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುತ್ತಾರೆ. ಅದನ್ನು ಬಹಳ ದೂರದಿಂದಲೇ ಗಮನಿಸಿದ್ದ ಇಬ್ಬರು ತಮ್ಮ ದ್ವಿಚಕ್ರವ ವಾಹನ ನಿಲ್ಲಿಸಿಕೊಂಡು ನಟ ಹತ್ತಿರ ಬರುವುದನ್ನೇ ಕಾಯುತ್ತಿರುತ್ತಾರೆ. ಜಾನ್ ಹತ್ತಿರವಾಗುತ್ತಿದ್ದಂತೆಯೇ ಆ ಯುವಕರಲ್ಲಿ ಒಬ್ಬ ತನ್ನ ಬಳಿ ಇರುವ ಮೊಬೈಲ್ ತೆಗೆದು ಸೆಲ್ಫಿ ಕ್ಯಾಮೆರಾದಲ್ಲಿ ವಿಡಿಯೋ ಮಾಡಲಾರಂಭಿಸುತ್ತಾರೆ.
ವಿಡಿಯೋ ಮಾಡುತ್ತಿದ್ದನ್ನು ಗಮನಿಸಿದ ನಟ ಜಾನ್ ಅಬ್ರಾಹಂ ಅವರು ಆ ಯುವಕನ ಕೈಯಲ್ಲಿದ್ದ ಮೊಬೈಲ್ ಅನ್ನು ಕಿತ್ತುಕೊಂಡು ಕ್ಯಾಮೆರಾ ನೋಡುತ್ತಾ ತಾವು ಮಾತನಾಡಲು ಆರಂಭಿಸುತ್ತಾರೆ. ಇಗೋ ಅಲ್ಲಿ ನನ್ನ ಸ್ನೇಹಿತನಿದ್ದಾನೆ ಎಂದು ಹೇಳುತ್ತಿರುತ್ತಾರೆ. ಆಗಲೇ ದ್ವಿಚಕ್ರವಾಹನದಲ್ಲಿದ್ದ ಯುವಕ ನಟನನ್ನು ಹಿಂಬಾಲಿಸುತ್ತಾ ಬಂದು ಮೊಬೈಲ್ ತೆಗೆದುಕೊಳ್ಳುತ್ತಾರೆ. ಜಾನ್ ಅಬ್ರಾಹಂ ಅವರ ಈ ವಿಡಿಯೋ ವೈರಲ್ ಆಗುತ್ತಿದೆ. ಅದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುವುದರ ಜೊತೆಗೆ ಸಖತ್ತಾಗಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Aamir Khan-Karishma Kapoor: ಒಂದು ಚುಂಬನದ ದೃಶ್ಯಕ್ಕಾಗಿ ಸತತ ಮೂರು ದಿನಗಳ ಕಾಲ ನಡೆದಿತ್ತು ಚಿತ್ರೀಕರಣ
ಜಾನ್ ಅಬ್ರಾಹಂ ಅವರು ತಮ್ಮ ಸಿನಿಮಾ ಸತ್ಯಮೇವ ಜಯತೆ 2 ಸಿನಿಮಾದ ರಿಲೀಸ್ಗಾಗಿ ಕಾಯುತ್ತಿದ್ದಾರೆ. 2018ರಲ್ಲಿ ತೆರೆಕಂಡ ಸತ್ಯಮೇವ ಜಯತೆ ಸಿನಿಮಾದ ಸೀಕ್ವೆಲ್ ಇದಾಗಿದೆ. ಆ್ಯಕ್ಷನ್ ಥ್ರಿಲ್ಲರ್ ಆಗಿರುವ ಈ ಸಿನಿಮಾದಲ್ಲಿ ತಂದೆ ಹಾಗೂ ಅವಳಿ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ಸತ್ಯಮೇವ ಜಯತೆ 2 ಸಿನಿಮಾದಲ್ಲಿ ಜಾನ್ ಅಬ್ರಾಹಂ ಅವರು ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಿಲಾಪ್ ಜವೇರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಪ್ರಾಣಿ ಪ್ರಿಯ ನಟ ಜಾನ್ ಅಬ್ರಾಹಂ
ಜಾನ್ ಅಬ್ರಹಾಂ ಪ್ರಾಣಿ ಪ್ರಿಯ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೀದಿಯಲ್ಲಿರುವ ಪ್ರಾಣಿಗಳಿಗೆ ನಿತ್ಯ ಊಟ ಉಣಿಸುವ ಜಾನ್ ಈಗ ಮುಂಬೈನಲ್ಲಿ ಸಾಕು ಪ್ರಾಣಿಗಳ ಪರ ನಿಂತಿದ್ದಾರೆ. ಜಾನ್ ಅಬ್ರಹಾಂ ಬೀದಿ ನಾಯಿಯನ್ನು ದತ್ತು ತೆಗೆದುಕೊಂಡು ಸಾಕುವುದರೊಂದಿಗೆ ಮುಂಬೈನ ಬೀದಿಗಳಲ್ಲಿ ಪ್ರಾಣಿಗಳಿಗೆ ರಾತ್ರಿ ಊಟ ಹಾಕುತ್ತಾರೆ. ಇಂತಹ ನಟ ಅಗತ್ಯ ಬಿದ್ದಾಗಲೆಲ್ಲ ಸಾಕು ಪ್ರಾಣಿಗಳ ಪರವಾಗಿ ದನಿ ಎತ್ತುತ್ತಿರುತ್ತಾರೆ.
ಈ ಹಿಂದೆ ಕೊರೋನಾ ಸೋಂಕು ಹರಡುವ ಬಗ್ಗೆ ದಾರಿ ತಪ್ಪಿಸುವ ವದಂತಿಗಳನ್ನು ಕೆಲವರು ಹಬ್ಬಿಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಮುಂಬೈನಲ್ಲೂ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಸಹ ಜನರನ್ನು ದಾರಿ ತಪ್ಪಿಸುವ ಸುದ್ದಿಯೊಂದನ್ನು ಹಬ್ಬಿಸಿತ್ತು. ಅದು ಸಾಕು ಪ್ರಾಣಿಗಳಿಂದ ಈ ಸೋಂಕು ಹರಡುತ್ತದೆ ಎಂದು ರಸ್ತೆಗಳಲ್ಲಿ ಫಲಕಗಳನ್ನು ಹಾಕಿಸಲಾಗಿತ್ತು. ಇದರ ಪರಿಣಾಮ ಸಾಕಷ್ಟು ಮಂದಿ ತಮ್ಮ ಸಾಕು ಪ್ರಾಣಿಗಳನ್ನು ಅನಾಥವಾಗಿ ಮಾಡಲು ಮುಂದಾಗಿದ್ದರು.
ಇದನ್ನೂ ಓದಿ: ಮಗಳ ಮೊದಲ ಫೋಟೋಶೂಟ್ನ ಚಿತ್ರಗಳನ್ನು ಶೇರ್ ಮಾಡಿದ ನಟಿ Chaithra Rai
ಈ ವಿಷಯವಾಗಿ ಆಗ ನಟ ಜಾನ್ ಅಬ್ರಹಾಂ ಬಿಎಂಸಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಂತಹ ದಾರಿ ತಪ್ಪಿಸುವ ವದಂತಿಗಳನ್ನು ಹಬ್ಬಿಸಬೇಡಿ ಎಂದು ಟ್ವೀಟ್ ಮಾಡಿದ್ದರು. 'ದಾರಿ ತಪ್ಪಿಸುವ ಮಾಹಿತಿ ನೀಡುವ ಮೂಲಕ ಸಾಕು ಪ್ರಾಣಿಗಳ ಪಾಲಕರಲ್ಲಿ ಆತಂಕ ಮೂಡಿಸಿದ್ದಕ್ಕೆ ಕ್ಷಮೆ ಯಾಚಿಸುತ್ತೇವೆ. ನಮ್ಮ ತಪ್ಪಿನ ಅರಿವಾದ ಕೂಡಲೇ ಎಲ್ಲ ಫಲಕಗಳನ್ನು ತೆರವುಗೊಳಿಸಿದ್ದೇವೆ. ನಾವು ಪ್ರಾಣಿಗಳನ್ನು ಪ್ರೀತಿಸುತ್ತೇವೆ' ಬಿಎಂಸಿ ಟ್ವೀಟ್ ಮಾಡಿತ್ತು. ಸ್ಟಾರ್ಗಳು ತಮಗಿರುವ ತಾರಾ ವರ್ಚಸ್ಸನ್ನು ಹೇಗೆ ಒಳ್ಳೆಯ ಕೆಲಸಗಳಿಗೆ ಬಳಸಬಹುದು ಎಂದು ಜಾನ್ ತೋರಿಸಿಕೊಟ್ಟಿದ್ದರು. ಅವರ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ