Satyaprem Ki Katha: ಕಾರ್ತಿಕ್ ಆರ್ಯನ್- ಕಿಯಾರಾ ಹೊಸ ಲವ್ ಸ್ಟೋರಿ! ಬಾಲಿವುಡ್​ಗೆ ಅಮಲೇರಿಸೋಕೆ ರೆಡಿ

ಸದ್ಯ ಅತಿ ಗಮನ ಸೆಳೆಯುತ್ತಿರೋ ನಟ ಕಾರ್ತಿಕ್ ಆರ್ಯನ್ ಹಾಗೂ ಚಾರ್ಮಿಂಗ್ ನಾಯಕ ನಟಿ  ಕಿಯಾರಾ ಅದ್ವಾನಿ ಈ ಚಿತ್ರದ ಮೇನ್ ಲೀಡ್​ನಲ್ಲಿದ್ದಾರೆ.

ಕಾರ್ತಿಕ್ ಆರ್ಯನ್ ಕಿಯಾರಾ ಹೊಸ ಲವ್ ಸ್ಟೋರಿ

ಕಾರ್ತಿಕ್ ಆರ್ಯನ್ ಕಿಯಾರಾ ಹೊಸ ಲವ್ ಸ್ಟೋರಿ

 • Share this:
  ಬಾಲಿವುಡ್​ ನಲ್ಲಿ (Bollywood) ಈಗ ಮೊದಲ ರೀತಿ ಒಳ್ಳೆ ಕಂಟೆಂಟ್ ಸಿನಿಮಾ ಬರ್ತಾಯಿಲ್ಲ. ಬಂದ್ರೂ ಅವು ದಕ್ಷಿಣದ ಕಥೆಗಳ ರಿಮೇಕ್ (Remake) ಆಗಿರುತ್ತವೆ. ಇಂತಹ ಸ್ಥಿತಿಯಲ್ಲಿರೋ ಬಾಲಿವುಡ್​ ನಲ್ಲಿ ಕಥೆಗಳ ಕೊರತೆ ಎದ್ದು ಕಾಣುತ್ತಿದೆ. ಅದಕ್ಕೆ ಸಿನಿಮಾದ ಸಾಲು ಸಾಲು ಸೋಲುಗಳೇ ಸಾಕ್ಷಿ. ಇಂತಹ ಟೈಮ್​ ನಲ್ಲಿ  ಬಾಲಿವುಡ್​ನಲ್ಲಿ  ಮ್ಯೂಸಿಕಲ್ (Musical Film) ರೋಮ್ಯಾಂಟಿಕ್ (Romantic Story) ಕಥೆಯೊಂದರ ಚಿತ್ರೀಕರಣ ಶುರು ಆಗಿದೆ. ಸದ್ಯ ಅತಿ ಗಮನ ಸೆಳೆಯುತ್ತಿರೋ ನಟ ಕಾರ್ತಿಕ್ ಆರ್ಯನ್ (Kartik Aaryan) ಹಾಗೂ ಚಾರ್ಮಿಂಗ್ ನಾಯಕ ನಟಿ  ಕಿಯಾರಾ ಅದ್ವಾನಿ ( Kiara Advani) ಈ ಚಿತ್ರದ ಮೇನ್ ಲೀಡ್​ನಲ್ಲಿದ್ದಾರೆ.  ಚಿತ್ರದೆ ಹೆಸರೇ ಸತ್ಯಪ್ರೇಮ ಕಿ ಕಥಾ (Satyaprem Ki Katha) ಇವರ ಚಿತ್ರದ ಇನ್ನೊಂದಿಷ್ಟು ಮಾಹಿತಿ ಇಲ್ಲಿದೆ.

  ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್ ಸದಾ ತರುಣ ಬಿಡಿ! ರಣವೀರ್ ಕಪೂರ್ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಗೆಲುವು ದೂರು ಆಗುತ್ತಿದೆ. ರಣವೀರ್ ಸಿಂಗ್ ಬೆತ್ತಲಾಗಿ ಏನೇನೋ ಆಗಿ ಬಿಟ್ಟಿದ್ದಾರೆ. ಇವರ ನಡುವೆ ವಿಕ್ಕಿ ಕೌಶಲ್ ತಮ್ಮದೇ ಟ್ರ್ಯಾಕ್ ಅಲ್ಲಿ ಹೊಳೆಯುತ್ತಿದ್ದಾರೆ. ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅದ್ವಾನಿ ಹೊಸ ಪ್ರೇಮ ಕಥೆ ಶುರು ಆಗಿದೆ.

  ಇದೇ ಜೋಡಿ ಹೃದಯಕ್ಕೆ ಲಗ್ಗೆಯಿಡೋ ಚಾನ್ಸ್ ಇದೆ


  ಬಾಲಿವುಡ್​ನ ಸತ್ಯಪ್ರೇಮ ಕಿ ಕಥಾ ಚಿತ್ರದಲ್ಲಿ ಏನೆಲ್ಲ ಇದೆ ?
  ಈ ಚಿತ್ರದ ಹೆಸರು ಸತ್ಯಪ್ರೇಮ ಕಿ ಕಥಾ ಅಂತಲೇ ಇಡಲಾಗಿದೆ. ಇಲ್ಲಿ ಟೈಟಲ್ ಗೆ (Title) ಸೂಕ್ತ ಅನ್ನೋ ಕಥೆಯನ್ನೆ ಪ್ಲಾನ್ ಮಾಡಲಾಗಿದ್ದು, ಲವ್ಲಿ ಪ್ರೇಮ ಕಥೆಗೆ ಮ್ಯೂಸಿಕಲ್ ಟಚ್ ಕೊಡಲಾಗಿದೆ. ಇಂತಹ ಕಥೆಯಲ್ಲಿ ಕಿಯಾರಾ ಒಂದು ರೀತಿ ಸೆಳೆದರೆ, ನಾಯಕ ನಟ ಕಾರ್ತಿಕ್ ಆರ್ಯನ್ ಇನ್ನೊಂದು ರೀತಿ ದಿಲ್ ಕದಿಯುತ್ತಾರೆ.

  ಸತ್ಯಪ್ರೇಮ ಕಿ ಕಥಾ ಚಿತ್ರ ಈಗಾಗಲೇ ಹೇಳಿದಂತೆ ಇದೊಂದು ರೊಮ್ಯಾಂಟಿಕ್ ಮ್ಯೂಸಿಕಲ್ ಲವ್ ಇರೋ ಸಿನಿಮಾ. ಈ ಚಿತ್ರವನ್ನ ಸಮೀರ್ ವಿದ್ವಾನ್ಸ್ ಡೈರೆಕ್ಷನ್ ಮಾಡಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ಈ ಸಿನಿಮಾಕೆ ಬಂಡವಾಳ ಹೂಡಿದ್ದಾರೆ.

  ನಾಯಕ ಕಾರ್ತಿಕ್-ನಾಯಕಿ ಕಿಯಾರಾ ಪಾತ್ರಗಳ ಹೆಸರೇನು ಗೊತ್ತೆ ?
  ಸತ್ಯಪ್ರೇಮ ಕಿ ಕಥಾ ಚಿತ್ರದ ಟೈಟಲ್ ಗೂ ಸಿನಿಮಾ ತಾರೆಯರ ಪಾತ್ರದ ಹೆಸರಿಗೂ ಒಂದು ಲಿಂಕ್ ಇದೆ. ಹೌದು. ಇಲ್ಲಿ ನಟ ಕಾರ್ತಿಕ್ ಆರ್ಯನ್ (Karthik Aryan) ಹೆಸರು ಸತ್ಯಪ್ರೇಮ ಅಂತಲೇ ಇದೆ. ಕಿಯಾರಾಳ  (Kiara) ಪಾತ್ರದ ಹೆಸರು ಕಥಾ ಅಂತಲೇ ಇರೋದು ವಿಶೇಷ ಅನಿಸುತ್ತದೆ.

  ಸತ್ಯಪ್ರೇಮ ಕಿ ಕಥಾ ಸಿನಿಮಾದ ಈಗಾಗಲೇ ಶೂಟಿಂಗ್ ಶುರು
  ಸತ್ಯಪ್ರೇಮ ಕಿ ಕಥಾ ಚಿತ್ರದ ಚಿತ್ರೀಕರಣ ಈಗ ಶುರು ಆಗಿದ್ದು, ಸಿನಿಮಾ ತಂಡ ಪಕ್ಕಾ ಪ್ಲಾನ್ ಮಾಡಿಕೊಂಡೇ ಸೆಟ್​ಗೆ ಕಾಲಿಟ್ಟಿದ್ದು, ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿಕೊಂಡಿದೆ.

  ಚಿತ್ರೀಕರಣದ ಟೈಮ್ ಅಲ್ಲಿಯೇ ಸಿನಿಮಾ ರಿಲೀಸ್ ಫಿಕ್ಸ್
  ಹಾಲಿವುಡ್ ನಲ್ಲೂ ಈ ಸಂಸ್ಕೃತಿ ಇದೆ. ಬಾಲಿವುಡ್ ನಲ್ಲೂ ಇದು ಮುಂದುವರೆದಿದೆ. ಕನ್ನಡದಲ್ಲೂ ಇದನ್ನ ಈಗ ಫಾಲೋ ಮಾಡೋ ಪ್ರಯತ್ನ ನಡೀತಾ ಇದೆ. ನಿಜ, ಸತ್ಯಪ್ರೇಮ ಕಿ ಕಥಾ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಮುಂದಿನ ವರ್ಷ ಜೂನ್-29 ರಂದು ಚಿತ್ರ ತೆರೆಗೆ ಬರುತ್ತಿದೆ. ಈ ಒಂದು ಟಾರ್ಗೆಟ್ ಇಟ್ಟುಕೊಂಡೇ ಸತ್ಯಪ್ರೇಮ ಕಿ ಕಥಾ ಚಿತ್ರೀಕರಣವನ್ನ ತಂಡ ಈಗ ಶುರು ಮಾಡಿದೆ.
  First published: