ಪ್ರಸ್ಥಕ್ಕೆ ಅಣಿಯಾದ ‘ಬ್ರಹ್ಮಚಾರಿ’; ಟೀಸರ್​ಗೆ ಟೀಸರ್ ಬಿಡುವ ವಿನೂತನ ಪ್ರಯತ್ನ!

ಸತೀಶ್​ ಹಾಗೂ ಅದಿತಿ ಕೋಣೆಯೊಂದರಲ್ಲಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಿನಿಮಾದ ಹೆಸರು ‘ಬ್ರಹ್ಮಚಾರಿ’, ಆದರೆ ಚಿತ್ರದ ನಾಯಕ ಪ್ರಸ್ಥದ ಕೊಠಡಿಯಲ್ಲಿರುವುದೇಕೆ ಎಂದು ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

Rajesh Duggumane | news18
Updated:June 6, 2019, 2:17 PM IST
ಪ್ರಸ್ಥಕ್ಕೆ ಅಣಿಯಾದ ‘ಬ್ರಹ್ಮಚಾರಿ’; ಟೀಸರ್​ಗೆ ಟೀಸರ್ ಬಿಡುವ ವಿನೂತನ ಪ್ರಯತ್ನ!
ಸತೀಶ್​-ಅದಿತಿ
  • News18
  • Last Updated: June 6, 2019, 2:17 PM IST
  • Share this:
‘ಅಯೋಗ್ಯ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ನಟ ‘ನೀನಾಸಂ’ ಸತೀಶ್​ ‘ಬ್ರಹ್ಮಚಾರಿ’ ಚಿತ್ರದ ಮೂಲಕ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಈಗ ಈ ಸಿನಿಮಾ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್​ ಸಿಕ್ಕಿದೆ. ಅದೇನೆಂದರೆ ಈ ಚಿತ್ರತಂಡ ಟೀಸರ್​ಗೆ ಟೀಸರ್​ ಬಿಡುವ ಹೊಸ ಆಲೋಚನೆ ಹಾಕಿಕೊಂಡಿದೆ.

ಹೌದು, ಸತೀಶ್​ ಹಾಗೂ ಅದಿತಿ ಪ್ರಭುದೇವ್​ ನಟನೆಯ ‘ಬ್ರಹ್ಮಚಾರಿ’ ಚಿತ್ರ ಶೀರ್ಷಿಕೆಯ ಮೂಲಕ ಗಮನ ಸೆಳೆದಿತ್ತು. ಈಗ ಟೀಸರ್​ಗೆ ಟೀಸರ್​ ಬಿಡುವ ಆಲೋಚನೆಯಲ್ಲಿದೆ. ಜೂನ್​ 10ರಂದು ಸಿನಿಮಾ ಟೀಸರ್ನ್​ನ ಟೀಸರ್​ ರಿಲೀಸ್​ ಆಗಲಿದೆ. ಹಾಗಾದರೆ ಸಿನಿಮಾ ಟೀಸರ್​ ಯಾವಾಗ ಎಂದು ಕೇಳಿದರೆ ಅದು, ಜೂನ್ 20ರಂದು. ಆ ದಿನವೇ ನೀನಾಸಂ ಸತೀಶ್ ಅವರ​ ಜನ್ಮ ದಿನ.  ಜನ್ಮದಿನಕ್ಕೆ ಚಿತ್ರತಂಡ ಟೀಸರ್​ಅನ್ನು ಗಿಫ್ಟ್​ ಆಗಿ ನೀಡುತ್ತಿದೆ. ​ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ.

ಇನ್ನು, ಸತೀಶ್​ ಹಾಗೂ ಅದಿತಿ ಕೋಣೆಯೊಂದರಲ್ಲಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಿನಿಮಾದ ಹೆಸರು ‘ಬ್ರಹ್ಮಚಾರಿ’, ಆದರೆ ಚಿತ್ರದ ನಾಯಕ ಪ್ರಸ್ಥದ ಕೊಠಡಿಯಲ್ಲಿರುವುದೇಕೆ ಎಂದು ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಸತೀಶ್​ ನಟನೆಯ 'ಅಯೋಗ್ಯ' ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಅದಾದ ನಂತರದಲ್ಲಿ ಭಿನ್ನ ಶೀರ್ಷಿಕೆ ಇಟ್ಟುಕೊಂಡು ಸತೀಶ್​ ಬರುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.  ಟೀಸರ್​ನಲ್ಲಿ ಸಿನಿಮಾ ಹೇಗಿರಲಿದೆ ಎನ್ನುವ ಹಿಂಟ್ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ:  ನೀನಾಸಂ ಸತೀಶ್​ ಈಗ 'ಬ್ರಹ್ಮಚಾರಿ'; ನೆರವೇರಿತು ಚಿತ್ರದ ಮುಹೂರ್ತ

First published:June 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ