ಹುಟ್ಟು ದರಿದ್ರ ಆಗಿದ್ರೂ ಸಾವು ಚರಿತ್ರೆ ಆಗ್ಬೇಕು: ಗೋದ್ರಾ ಚಿತ್ರದ ಪವರ್​ಫುಲ್ ಟೀಸರ್ ಔಟ್

ಯುವ ನಿರ್ದೇಶಕ ಕೆ.ಎಸ್.ನಂದೀಶ್ ಈ ಬಹುನಿರೀಕ್ಷಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಚೊಚ್ಚಲ ಪ್ರಯತ್ನದ ಟೀಸರ್​ ಮೂಲಕ ಸಿನಿಪ್ರಿಯರನ್ನು ಸೆಳೆಯಲು ಯಶಸ್ವಿಯಾಗಿದ್ದಾರೆ. ಇನ್ನು ಜೇಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ.

zahir
Updated:January 17, 2020, 6:49 PM IST
ಹುಟ್ಟು ದರಿದ್ರ ಆಗಿದ್ರೂ ಸಾವು ಚರಿತ್ರೆ ಆಗ್ಬೇಕು: ಗೋದ್ರಾ ಚಿತ್ರದ ಪವರ್​ಫುಲ್ ಟೀಸರ್ ಔಟ್
godra
  • Share this:
'ಹುಟ್ಟು ದರಿದ್ರ ಆಗಿದ್ರೂ ಸಾವು ಚರಿತ್ರೆ ಆಗ್ಬೇಕು'...ಈ ಖಡಕ್ ಡೈಲಾಗ್​ನೊಂದಿಗೆ  ನಟ ನೀನಾಸಂ ಸತೀಶ್ ಅಭಿನಯದ 'ಗೋದ್ರಾ' ಟೀಸರ್ ಆರಂಭವಾಗುತ್ತದೆ. ಸದಾ ವಿಭಿನ್ನ ಸಿನಿಮಾಗಳನ್ನು ನೀಡುವ ಅಭಿನಯ ಚತುರ ಈ ಬಾರಿ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ಮೆಟ್ಟಿ ನಿಲ್ಲಲಿದ್ದಾರೆ ಎಂಬುದಕ್ಕೆ ಬಿಡುಗಡೆಯಾದ ಟೀಸರ್​ ಸಾಕ್ಷಿ.

'ಚಂಬಲ್' ಚಿತ್ರದಲ್ಲಿ ಪವರ್ ಫುಲ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದ ಸತೀಶ್  ಗೋದ್ರಾ ದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಬಣ್ಣ ಹಚ್ಚಿದ್ದಾರೆ. ಅಂದರೆ ಈ ಸಿನಿಮಾ ಸಾಮಾನ್ಯ ಪತ್ರಿಕೋದ್ಯಮದ ಸುತ್ತ ಸುತ್ತುವ ಕಥೆ ಹೊಂದಿರಲಿದೆಯೇ ಅಥವಾ ಹತ್ಯಾಕಾಂಡದ ಕಹಾನಿ ತಿಳಿಸಲಿದೆಯೇ ಎಂದು ಕೇಳಿದರೆ ಖಂಡಿತ ಇಲ್ಲ. ಏಕೆಂದರೆ ಇಲ್ಲಿ ಸತೀಶ್ ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದೇಳುವ ಹೋರಾಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಮೋಷನ್ ಪೋಸ್ಟರ್​ನಿಂದಲೇ ನಿರೀಕ್ಷೆ ಹುಟ್ಟುಹಾಕಿದ್ದ ಗೋದ್ರಾ ಚಿತ್ರತಂಡ ಇದೀಗ ಟೀಸರ್​ ಮೂಲಕ ಆ ನಿರೀಕ್ಷೆಯನ್ನು ಡಬಲ್ ಮಾಡಿದೆ. ಈ ಹಿಂದೆ ಮೋಷನ್ ಪೋಸ್ಟರ್​ನಲ್ಲಿ ''ಭಾರತ ಜಾತ್ಯತೀತವಾಗಿಲ್ಲದಿದ್ದರೆ, ಅದು ಭಾರತವಲ್ಲ'' ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನುಡಿಮುತ್ತಿನೊಂದಿಗೆ ವೀಕ್ಷಕರನ್ನು ಸೆಳೆದಿತ್ತು.

ಈ ಬಾರಿ "ಇಲ್ಲಿ ಬಲಾಢ್ಯ ಬದುಕಿ, ಬಡವ ಮಾತ್ರ ನಿತ್ಯ ಸಾಯ್ತನೆ ಅಂದರೆ ವ್ಯವಸ್ಥೆಯಲ್ಲಿ ದೋಷವಿರಬೇಕು". "ಫ್ರೀಡಂ ಯಾವಾಗಲೂ ಫ್ರಿಯಾಗಿ ಸಿಗಲ್ಲ ರಕ್ತ ಹರಿಸಬೇಕು..." ಇಂತಹ  ಖಡಕ್ ಡೈಲಾಗ್​ಗಳ ಮೂಲಕ ಕಿಚ್ಚು ಹಚ್ಚಿರುವ  ಗೋದ್ರಾ ಟೀಸರ್ ಪ್ರೇಕ್ಷಕರ​ ಮನ ಸೆಳೆಯುತ್ತಿದೆ.

ಇನ್ನು ಜೂಧ್ ಸ್ಯಾಂಡಿ ಅವರ​ ಹಿನ್ನೆಲೆ ಸಂಗೀತ ಕೂಡ ಪವರ್​ಫುಲ್ ಆಗಿ ಮೂಡಿಬಂದಿದ್ದು, ಚಿತ್ರದಲ್ಲಿ ಸತೀಶ್ ಕಾಲೇಜು ವಿದ್ಯಾರ್ಥಿಯಾಗಿ, ಹೋರಾಟಗಾರನಾಗಿ ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗೋದ್ರಾದಲ್ಲಿ ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಪತ್ರಿಕೋಧ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ, ಅಚ್ಯುತ್ ಕುಮಾರ್ ರಾಜಕರಣಿಯಾಗಿ, ವಸಿಷ್ಠ ಸಿಂಹ ವಿದ್ಯಾರ್ಥಿ/ಪೈಲೆಟ್ ಆಗಿ ಮಿಂಚಿದ್ದಾರೆ.

ಇದನ್ನೂ ಓದಿ: Bigg Boss Kannada 7: ಹುಡುಗಿಯರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ನೀಡಿದ ಹೇಳಿಕೆ ಕಿಚ್ಚನನ್ನೇ ಬೆಚ್ಚಿ ಬೀಳಿಸಿತು..!ಯುವ ನಿರ್ದೇಶಕ ಕೆ.ಎಸ್.ನಂದೀಶ್ ಈ ಬಹುನಿರೀಕ್ಷಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಚೊಚ್ಚಲ ಪ್ರಯತ್ನದ ಟೀಸರ್​ ಮೂಲಕ ಸಿನಿಪ್ರಿಯರನ್ನು ಸೆಳೆಯಲು ಯಶಸ್ವಿಯಾಗಿದ್ದಾರೆ. ಇನ್ನು ಜೇಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಸದ್ಯ ಗಾಂಧಿನಗರದಲ್ಲಿ ಗೋದ್ರಾ ಸದ್ದು ಮಾಡಲಾರಂಭಿಸಿದ್ದು, ನೀನಾಸಂ ಸತೀಶ್ ಖಾತೆಗೆ ಮತ್ತೊಂದು ಹಿಟ್ ಸೇರ್ಪಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.


First published:January 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ