ಕಾಲಿವುಡ್​ಗೆ ಕಾಲಿಟ್ಟ ನೀನಾಸಂ ಸತೀಶ್; ನಾಳೆ ಸ್ವಿಟ್ಜರ್​ಲೆಂಡ್​ನಲ್ಲಿ ಸಿನಿಮಾದ ಫಸ್ಟ್ ಲುಕ್ ಲಾಂಚ್

ತಿರುಮನಂ ಎನ್ನುಂ ನಿಖ್ಖಾ ಖ್ಯಾತಿಯ ನಿರ್ದೇಶಕ ಅನೀಸ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ‘ಪಗೈವನುಕ್ಕು ಅರುಲ್ವೈ’ ಎನ್ನುವ ಶೀರ್ಷಿಕೆ ಫೈನಲ್​ ಆಗಿದೆ.

Rajesh Duggumane | news18
Updated:December 7, 2018, 4:02 PM IST
ಕಾಲಿವುಡ್​ಗೆ ಕಾಲಿಟ್ಟ ನೀನಾಸಂ ಸತೀಶ್; ನಾಳೆ ಸ್ವಿಟ್ಜರ್​ಲೆಂಡ್​ನಲ್ಲಿ ಸಿನಿಮಾದ ಫಸ್ಟ್ ಲುಕ್ ಲಾಂಚ್
ನಟ ನಿನಾಸಂ ಸತೀಶ್​ ಅವರೊಂದಿಗೆ 96 ಚಿತ್ರದ ಛಾಯಾಗ್ರಾಹಕ ಷಣ್ಮುಗಂ ಮತ್ತು ನಿರ್ದೇಶಕ ಅನೀಸ್
Rajesh Duggumane | news18
Updated: December 7, 2018, 4:02 PM IST
ನಟ ಸತೀಶ್​ ನೀನಾಸಂ ‘ಅಯೋಗ್ಯ’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಮಧ್ಯೆ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ ಸತೀಶ್​ ಈಗ ಕಾಲಿವುಡ್​ಗೆ ಕಾಲಿಟ್ಟಿದ್ದಾರೆ. ನಾಳೆ ಅವರ ಚಿತ್ರದ ಫಸ್ಟ್​ಲುಕ್​​ ಸ್ವಿಟ್ಜರ್​​ಲೆಂಡ್​ನಲ್ಲಿ ಲಾಂಚ್​ ಆಗಲಿದೆಯಂತೆ.

'ತಿರುಮನಂ ಎನ್ನುಂ ನಿಖ್ಖಾ' ಖ್ಯಾತಿಯ ನಿರ್ದೇಶಕ ಅನೀಸ್​​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ‘ಪಗೈವನುಕ್ಕು ಅರುಲ್ವೈ’ ಎನ್ನುವ ಶೀರ್ಷಿಕೆ ಫೈನಲ್​ ಆಗಿದೆ. ಡಿ.8ರಂದು ಅಂದರೆ ನಾಳೆ ಸ್ವಿಟ್ಜರ್​ಲೆಂಡ್​ನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಸುಮಾರು 10 ಸಾವಿರ ಜನರ ಎದುರು ಚಿತ್ರದ ಪೋಸ್ಟರ್​ ಲಾಂಚ್​ ಆಗಲಿದೆ.

ಶೇಕ್ಸ್​ಪಿಯರ್​ ಬರೆದ ಮ್ಯಾಕ್​ಬೆತ್​ ನಾಟಕಕ್ಕೂ ಈ ಚಿತ್ರಕ್ಕೂ ಸಂಬಂಧ ಇದೆಯಂತೆ. ಈ ಬಗ್ಗೆ ಹೇಳಿಕೊಳ್ಳುವ ಸತೀಶ್​, "ಶೇಕ್ಸ್​​ ಪಿಯರ್​ ಅವರು ಬರೆದ ಮ್ಯಾಕ್​ಬೆತ್​ನಿಂದ ಸ್ಫೂರ್ತಿ ಪಡೆದು ಈ ಚಿತ್ರ ಸಿದ್ಧಪಡಿಸಿದ್ದೇವೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಕಥೆ ಮಾಡಿದ್ದೇವೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್​ಗಳಿವೆ," ಎನ್ನುತ್ತಾರೆ.

ಇದನ್ನೂ ಓದಿ: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಸೆಲೆಬ್ರಿಟಿಗಳು..!

ಸತೀಶ್​ ಹೊಸ ಚಿತ್ರದಲ್ಲಿ ಉತ್ತಮ ತಂತ್ರಜ್ಞರ ಬಳಗವೇ ಇದೆ. ‘96’ ಚಿತ್ರದಲ್ಲಿ ಕ್ಯಾಮೆರಾ ಕೈಚಳಕ ತೋರಿಸಿದ್ದ ಷಣ್ಮುಗಂ ಸುಂದರಂ ‘ಪಗೈವನುಕ್ಕು..’ಗೂ ಛಾಯಾಗ್ರಾಹಕ. ‘ವಿಶ್ವರೂಪಂ 2’ ಖ್ಯಾತಿಯ ಸಂಗೀತ ನಿರ್ದೇಶಕ ಎಂ.ಗಿಬ್ರಾನ್​ ‘ಪಗೈವನುಕ್ಕು..’ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಕಾಲಿವುಡ್​ಗೆ ಕಾಲಿಡುತ್ತಿರುವುದಕ್ಕೆ ಸತೀಶ್​ ಸಖತ್​ ಖುಷಿಯಲ್ಲಿದ್ದಾರೆ. "ಸ್ಯಾಂಡಲ್​ವುಡ್​ ನಟರು ಪರಭಾಷೆಗಳಲ್ಲಿ ಗುರುತಿಸಿಕೊಳ್ಳುವುದು ನಿಜಕ್ಕೂ ಖುಷಿಯ ವಿಚಾರ. ಇದರಿಂದ ಕನ್ನಡದ ಮಾರುಕಟ್ಟೆ ಹಿರಿದಾಗುತ್ತದೆ. ನಾವು ಬೇರೆ ಭಾಷೆಯಲ್ಲಿ ಬಣ್ಣ ಹಚ್ಚುವುದರಿಂದ ಕನ್ನಡ ಚಿತ್ರಗಳನ್ನು ಪರಭಾಷೆಯಲ್ಲಿ ಬಿಡುಗಡೆ ಮಾಡಲು ಸಹಕಾರಿಯಾಗುತ್ತದೆ," ಎನ್ನುತ್ತಾರೆ ಅವರು. ಸದ್ಯ, ಸತೀಶ್​ ‘ಚಂಬಲ್​’ ಹಾಗೂ ‘ಗೋದ್ರಾ’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ‘ನಟಸಾರ್ವಭೌಮ’ vs ‘ಸೀತಾರಾಮ ಕಲ್ಯಾಣ’?; ಚಂದನವನದಲ್ಲಿ ಬಿಗ್​ ಫೈಟ್​
Loading...

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ