Sathish Ninasam: ಟೈಮ್ ಟ್ರಾವೆಲ್ ಮಾಡೋಕೆ ಸತೀಶ್ ನೀನಾಸಮ್ ರೆಡಿ!

ಕನ್ನಡದ ನಾಯಕ ನಟ ಸತೀಶ್ ನೀನಾಸ ಒಂದು ವಿಶೇಷ ಟೈಟಲ್​ನ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ಮೂರು ಕಾಲಘಟ್ಟದಲ್ಲಿಯೇ ಅಭಿನಯಿಸುತ್ತಿದ್ದಾರೆ.

ಸತೀಶ್ ನೀನಾಸಂ

ಸತೀಶ್ ನೀನಾಸಂ

  • Share this:
ಕನ್ನಡದ ನಾಯಕ ನಟ ಸತೀಶ್ ನೀನಾಸಂ (Actor Sathish) ಒಂದು ವಿಶೇಷ ಟೈಟಲ್​ ನ (Special Title) ಸಿನಿಮಾ ಮಾಡ್ತಿದ್ದಾರೆ. ಈ ಒಂದೇ ಒಂದು ಚಿತ್ರದಲ್ಲಿ ಮೂರು ಕಾಲಘಟ್ಟದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂರೂ ಕಾಲಘಟ್ಟದಲ್ಲಿ ಸತೀಶ್ ವಿಭಿನ್ನವಾಗಿಯೇ ಕಾಣಿಸಿಕೊಳ್ಳಬೇಕು, ಅಂತಹ ಚಾಲೆಂಜಿಂಗ್ ರೋಲ್​ ಅನ್ನೇ ಸತೀಶ್ (Sathish Ninasam) ಇಲ್ಲಿ ನಿಭಾಯಿಸಿದ್ದಾರೆ. ವಿಶೇಷವೆಂದ್ರೆ ಈ ಚಿತ್ರದ ಟೈಟಲ್ ಕೇಳಿದ್ರೇನೇ ಸಾಕು. ನಿಮಗೆ ಒಂದ್ ಅರೆಕ್ಷಣ ಮೊಗದಲ್ಲಿ ಮಂದಹಾಸ ಮೂಡಬಹುದು. ಜೊತೆಗೆ ನೀವು ಒಂದೊಮ್ಮೆ ನಿಮ್ಮ ಆ ಹಳೆ ದಿನಗಳಿಗೂ ಜಾರಬಹುದು. ಆ ರೀತಿನೇ ಇದೆ ಈ ಸಿನಿಮಾ ಟೈಟಲ್ ಮತ್ತು ಡಿಟೈಲ್ಸ್.

ನೀನಾಸಂ ಸತೀಶ್ ಅಭಿನಯದ ಚಿತ್ರದ ಹೆಸರು ಅಶೋಕ ಬ್ಲೇಡ್
ಅಶೋಕ ಬ್ಲೇಡ್ ಅನ್ನೋ ಸಿನಿಮಾದಲ್ಲಿ ನಾಯಕ ನಟ ಸತೀಶ್ ನೀನಾಸಂ ಅಭಿನಯಿಸುತ್ತಿದ್ದಾರೆ. ಈ ಚಿತ್ರ ತುಂಬಾ ವಿಶೇಷವಾದ ಚಿತ್ರವೇ ಆಗಿದೆ. ಈ ಚಿತ್ರಕ್ಕಾಗಿಯೇ ಸತೀಶ್ ನೀನಾಸಂ ಸರಿಯಾದ ತಯಾರಿಯನ್ನೇ ಮಾಡಿಕೊಂಡಿದ್ದು ಮೂರು ಕಾಲಘಟ್ಟದಲ್ಲಿಯೇ ಈ ಒಂದು ಸಿನಿಮಾ ಸಾಗುತ್ತದೆ.

70ರ ದಶಕದ ಕಥೆಯಲ್ಲಿ 300 ವರ್ಷದ ಹಿಂದಿನ ಪ್ಲಾಷ್ ಬ್ಯಾಕ್
ಅಶೋಕ ಬ್ಲೇಡ್ ಸಿನಿಮಾದಲ್ಲಿ ಪ್ರೆಸೆಂಟ್ ಡೇ ಕಥೆ ಇರುತ್ತದೆ. ಅದೇ ಕಥೆ ಮುಂದೆ 70ರ ದಶಕಕ್ಕೂ ಹೊರಳುತ್ತದೆ. ಅಲ್ಲಿಂದ ಅದು ಅಲ್ಲಿಯೇ ನಿಲ್ಲೋದಿಲ್ಲ. 300 ವರ್ಷ ಹಿಂದಕ್ಕೆ ಹೋಗುತ್ತದೆ. ಹೀಗೆ ಮೂರು ಹಂತದಲ್ಲಿ ಮೂಡಿ ಬರೋ ಈ ಸಿನಿಮಾದಲ್ಲಿ ಚಿತ್ರೀಕರಣ ನಡೀತಾ ಇದೆ. ಆಯಾ ಸೆಡ್ಯೂಲ್ ಪ್ರಕಾರ ಸಿನಿಮಾ ಟೀಮ್ ಒಂದೊಂದೇ ಕಾಲಘಟ್ಟದ ಕಥೆಯ ಚಿತ್ರೀಕರಣ ಮಾಡುತ್ತಿದ್ದಾರೆ.

Sathish Ninasam News Project
ಸತೀಶ್ ನೀನಾಸಂ ದಸರಾ ಸಿನಿಮಾ ಚಿತ್ರ


ಇದನ್ನೂ ಓದಿ: Mahalakshmi Ravindar: ಮಹಾಲಕ್ಷ್ಮಿ ನನಗೆ ದೇವರು ಕೊಟ್ಟ ಗಿಫ್ಟ್​, ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಹೊಸ​ ಪೋಸ್ಟ್​​

ಅಶೋಕ್ ಬ್ಲೇಡ್ ಚಿತ್ರದ ಹಿಂದೆ ನವ ನಿರ್ದೇಶಕ ವಿನೋದ್ ಕಲ್ಪನೆ
ಈ ಒಂದು ವಿಶೇಷ ಪರಿಕಲ್ಪನೆಯ ಚಿತ್ರವನ್ನ ನವ ನಿರ್ದೇಶಕ ವಿನೋದ್ ಡೈರೆಕ್ಷನ್ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ಏನಾದರೂ ಹೊಸದನ್ನ ಕೊಡಬೇಕು ಅಂತಲೇ ಒಂದೇ ಚಿತ್ರದಲ್ಲಿ ಮೂರು ಕಾಲಘಟ್ಟದ ಕಥೆ ಹೇಳೋಕೆ ಬಂದಿದ್ದಾರೆ. ಸುಮಾರು 20 ವರ್ಷ ಸೀರಿಯಲ್​ನಲ್ಲಿ ಕೆಲಸ ಮಾಡಿರೋ ಅನುಭವ ಕೂಡ ವಿನೋದ್​ಗೆ ಇದ್ದು, ಅದರ ಆಧಾರದ ಮೇಲೆ ಇಲ್ಲಿ ಹೊಸದನ್ನೇ ಹೇಳೋಕೆ ಮುಂದಾಗಿದ್ದಾರೆ.

ಸತೀಶ್ ನೀನಾಸಂ ಒಪ್ಪಿಕೊಂಡ ಸಿನಿಮಾಗಳ್ಯಾವವು ?
ಸತೀಶ್ ನೀನಾಸಂ ಈಗಾಗಲೇ ಒಂದಷ್ಟು ಪ್ರಾಜೆಕ್ಟ್​ಗಳನ್ನ ಒಪ್ಪಿಕೊಂಡಿದ್ದಾರೆ. ಇವುಗಳಲ್ಲಿ ಎಲ್ಲವೂ ವಿಶೇಷ ಟೈಟಲ್​ ಅನ್ನೇ ಹೊಂದಿವೆ. ಅದರಲ್ಲಿ ಒಂದು ಮ್ಯಾಟ್ನಿ ಅನ್ನೋ ಸಿನಿಮಾ. ಈ ಟೈಟಲ್ ಕೇಳಿದ್ರೆ, ಇದು ಸಿನಿಮಾ ರಿಲೇಟೆಡ್ ಚಿತ್ರವೇ ಆಗಿದೆ ಅಂತಲೇ ಗೆಸ್ ಮಾಡಬಹುದು. ದಸರಾ ಅನ್ನೋ ಚಿತ್ರವೂ ಇದೆ. ಇದು ಕೂಡ ವಿಶೇಷ ಟೈಟಲ್ ಹೊಂದಿರೋ ಸಿನಿಮಾ ಅಂತಲೇ ಹೇಳಬಹುದು.

ಇದನ್ನೂ ಓದಿ: Nusrat Jahan: ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ ಬೆಂಗಾಲಿ ಬೆಡಗಿ! ಸಂಸದೆ, ನಟಿ ನುಸ್ರತ್ ಲುಕ್ ಇದು

ಮ್ಯಾಟ್ನಿ ಚಿತ್ರದಲ್ಲಿ ಸಿಜಿ ವರ್ಕ್ ಜಾಸ್ತಿ-ದಸರಾ ಬಹುತೇಕ ಕಂಪ್ಲೀಟ್
ದಸರಾ ಚಿತ್ರದ ಕೆಲಸ ಬಹುತೇಕ ಪೂರ್ಣಗೊಂಡಿದೆ. ಸಣ್ಣ ಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ.ಮ್ಯಾಟ್ನಿ ಚಿತ್ರದಲ್ಲಿ ಸಿಜಿ ವರ್ಕ್ ಹೆಚ್ಚಿದೆ. ಅದಕ್ಕೆ ಇದು ಕೊಂಚ ಡಿಲೇ ಆಗಬಹುದು. ಆದರೆ, ಎರಡೂ ಚಿತ್ರದ ಚಿತ್ರೀಕರಣದ ಕೆಲಸ ಪೂರ್ಣಗೊಂಡಿದ್ದು ಇವರಡರಲ್ಲೂ ದಸರಾ ಸಿನಿಮಾ ಮೊದಲು ರಿಲೀಸ್ ಆಗೋ ಸಾಧ್ಯತೆ ಇದೆ. ಒಟ್ನಲ್ಲಿ ಸತೀಶ್ ನೀನಾಸಂ ಬೇರೆ ಬೇರೆ ಪ್ರೋಜೆಕ್ಟ್ ಗಳಲ್ಲಿ ಸದ್ಯಕ್ಕೆ ಬ್ಯುಸಿ ಇದ್ದು ಅಶೋಕ್  ಬ್ಲೇಡ್ ಚಿತ್ರಕ್ಕಾಗಿಯೇ ಚಾಮರಾಜನಗರದ ಹಳ್ಳಿಯೊಂದರಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದಾರೆ.
First published: