ಕೊರೋನಾ ಸಮಯದಲ್ಲಿ ನಾವು ಮರೆತಿರುವ ಡಾಕ್ಟರ್​ರೊಬ್ಬರ ಕಥೆ ಹೇಳಿದ್ದಾರೆ ಸತೀಶ್ ನೀನಾಸಂ..!

Sathish Ninasam: ಕೊರೋನಾ ಬಂದಿರುವಂತಹ ಕಾಲದಲ್ಲಿ ಜನರಿಗೆ ಸ್ಪೂರ್ತಿಯಾಗಲಿ ಮತ್ತು ಖಿನ್ನತೆ ದೂರವಾಗಲಿ ಎಂಬ ಕಾರಣದಿಂದ ಇಂತಹದೊಂದು ಪ್ರಯೋಗಕ್ಕೆ ಕೈ ಹಾಕಿದ್ದೇನೆ.

sathish ninasam

sathish ninasam

  • Share this:
ಸ್ಯಾಂಡಲ್​ವುಡ್ ಅಭಿನಯ ಚತುರ ನೀನಾಸಂ ಸತೀಶ್ ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದು ಗೊತ್ತೇ ಇದೆ. ಸತೀಶ್ ಆಡಿಯೋ ಹೌಸ್ ಯೂಟ್ಯೂಬ್​ ಚಾನೆಲ್​ ಮೂಲಕ ಸ್ಪೂರ್ತಿದಾಯಕ ಕಥೆಗಳನ್ನು ಹೇಳುವ ಕಾಯಕಕ್ಕೆ ಕಳೆದ ವಾರ ಕೈ ಹಾಕಿದ್ದರು.

ಒಂದು ಕಥೆ ಹೇಳ್ತಿನಿ ಕೇಳ್ತೀರಾ? ಎಂಬ ಎಪಿಸೋಡ್ ಪ್ರಾರಂಭಿಸಿದ್ಧ ಅಭಿನಯ ಚತುರ ರಸವತ್ತಾಗಿ ಸಿಹಿ ತಿಂಡಿ ಅಜ್ಜಿಯೊಬ್ಬರ ನೈಜಕಥೆಯನ್ನು ತಿಳಿಸಿ ಒಂದಷ್ಟು ಮಂದಿಗೆ ಸ್ಪೂರ್ತಿ ತುಂಬಿದ್ದರು. ಅಲ್ಲದೆ ಸಮಯ ಸಿಕ್ಕರೆ ಇಂತಹ ಕಥೆಗಳನ್ನು ಪ್ರತಿವಾರ ಹೇಳುವ ಪ್ರಯತ್ನ ಮಾಡುವೆ ಅಂದಿದ್ದರು.

ಅದರಂತೆ ಈ ವಾರ ಕೂಡ ಸತೀಶ್ ಬಂದಿದ್ದಾರೆ. ಆದರೆ ಈ ಬಾರಿ ಹೇಳಿರುವುದು ಪಕ್ಕಾ ನಮ್ಮ ಮಣ್ಣಿನ ಕಥೆ. ಅಂದ್ರೆ ಮಂಡ್ಯ ಮಣ್ಣಿನ ಡಾಕ್ಟರ್​ನ ಜೀವನಗಾಥೆ. ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು ಬಿಚ್ಚಿಡುತ್ತಾ ಪಕ್ಕಾ ಮಂಡ್ಯ ಹೈದನ ನಾಟಿ ಸ್ಟೈಲ್​ನಲ್ಲೇ ಚುಟುಪುಟು ಅಂತ ಕಥೆ ಹೇಳಿದ್ದಾರೆ ಅಭಿನಯ ಚತುರ. ಹೀಗೆ ಕೊರೋನಾ ಕಾಲದಲ್ಲಿ ನಾವು ಮರೆತಿರುವ ಐದು ರೂಪಾಯಿ ಡಾಕ್ಟರ್ ಶಂಕರೇಗೌಡರನ್ನು ನೆನಪಿಸುವಂತಹ ಕೆಲಸ ಮಾಡಿದ್ದಾರೆ ನೀನಾಸಂ ಸತೀಶ್.


ಕಳೆದ ವಾರ ಹೇಳಿದ ಸಿಹಿ ತಿಂಡಿ ಮಾರಿದ ಅಜ್ಜಿಯೊಬ್ಬರ ನೈಜ ಕಥೆ ಇಲ್ಲಿದೆ.ಕೊರೋನಾ ಬಂದಿರುವಂತಹ ಕಾಲದಲ್ಲಿ ಜನರಿಗೆ ಸ್ಪೂರ್ತಿಯಾಗಲಿ ಮತ್ತು ಖಿನ್ನತೆ ದೂರವಾಗಲಿ ಎಂಬ ಕಾರಣದಿಂದ ಇಂತಹದೊಂದು ಪ್ರಯೋಗಕ್ಕೆ ಕೈ ಹಾಕಿದ್ದೇನೆ. ಸಮಾಜಕ್ಕೆ ಮತ್ತು ಜನರಿಗೆ ಉಪಯುಕ್ತವಾಗುವಂತಹ ಇಂಟ್ರೆಸ್ಟಿಂಗ್ ಸ್ಟೋರಿಗಳು, ಸ್ಪೂರ್ತಿದಾಯಕ ಕಥೆಗಳನ್ನು ಹೇಳುವ ಮೂಲಕ ಅವರ ನೋವನ್ನು ಮರೆಯುವ ಪ್ರಯತ್ನ ಮಾಡಿದ್ದಾರೆ ಸತೀಶ್ ನೀನಾಸಂ.
Published by:zahir
First published: