Sathish Ninasam: ತಮ್ಮ ನೈಟ್ ಡ್ಯೂಟಿ ಬಗ್ಗೆ ಅಪ್ಡೇಟ್​ ಕೊಟ್ಟ ನಟ ಸತೀಶ್​ ನೀನಾಸಂ

ಸತೀಶ್​ ಅವರು ತಮ್ಮ ಫಿಟ್ನೆಸ್​ ಹಾಗೂ ಸಿನಿಮಾಗಳ ಕುರಿತಾಗಿ ನಿತ್ಯ ಅಪ್ಡೇಟ್​ ಕೊಡುತ್ತಿದ್ದವರು ಈಗ, ನೈಟ್​ ಡ್ಯೂಟಿ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ಸತೀಶ್​ ದಿನ ರಾತ್ರಿ ತಮ್ಮ ಮನೆ ಬಳಿ ಇರುವ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಇದು ಅವರ ನಿತ್ಯದ ರಾತ್ರಿಯ ಕಾಯಕವಂತೆ.

ಸತೀಶ್ ನೀನಾಸಂ

ಸತೀಶ್ ನೀನಾಸಂ

  • Share this:
ನೀನಾಸಂ ಸತೀಶ್​ ಅಪ್ಪಟ ಹಳ್ಳಿ ಪ್ರತಿಭೆ. ಪೋಷಕ ಪಾತ್ರಗಳ ಮೂಲಕ ನಾಯಕನಾಗಿ ಬಡ್ತಿ ಪಡೆದ ಪ್ರತಿಭಾವಂತ ಕಲಾವಿದ. ನೀನಾಸಂ ಸತೀಶ್​ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್​ಡೌನ್​ನಲ್ಲಿ ತಮ್ಮ ಸಿನಿಮಾಗಾಗಿಯೇ ಸಖತ್ ವರ್ಕೌಟ್​ ಮಾಡುತ್ತಾ ಸಖತ್ ಬಾಡಿ ಬಿಲ್ಡ್​ ಮಾಡಿದ್ದಾರೆ. ಇದರ ಜೊತೆಗೆ ವಿಭಿನ್ನ ಪ್ರಯತ್ನ ಎಂಬಂತೆ ಲಾಕ್​ಡೌನ್​ನಲ್ಲಿ ಒಂದು ಕಾರ್ಯಕ್ರಮವನ್ನೂ ಆರಂಭಿಸಿದರು. ಅದು ಸತೀಶ್ ಆಡಿಯೋ ಹೌಸ್ ಯೂಟ್ಯೂಬ್​ ಚಾನೆಲ್​ ಮೂಲಕ ಸ್ಪೂರ್ತಿದಾಯಕ ಕಥೆಗಳನ್ನು ಹೇಳುಲು ಆರಂಭಿಸಿದ್ದರು ಸತೀಶ್​. ಈ ಕಾರ್ಯಕ್ರಮದಲ್ಲಿ ಎರಡು ಸಂಚಿಕೆಗಳಲ್ಲಿ ಎರಡು ಕತೆಗಳನ್ನು ಹೇಳುವ ಮೂಲಕ ಸಾಕಷ್ಟು ಮಂದಿಯನ್ನು ರಂಜಿಸಿದ್ದರು. ಅವರ ಕತೆ ಹೇಳುವ ಸ್ಟೈಲ್​ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಇನ್ನು ಸತೀಶ್​ ಈಗ ತಮ್ಮ ನೈಟ್ ಡ್ಯೂಟಿ ಬಗ್ಗೆ ಸ್ವಲ್ಪ ಅಪ್ಡೇಟ್​ ನೀಡಿದ್ದಾರೆ. 

ಸತೀಶ್​ ಅವರು ತಮ್ಮ ಫಿಟ್ನೆಸ್​ ಹಾಗೂ ಸಿನಿಮಾಗಳ ಕುರಿತಾಗಿ ನಿತ್ಯ ಅಪ್ಡೇಟ್​ ಕೊಡುತ್ತಿದ್ದವರು ಈಗ, ನೈಟ್​ ಡ್ಯೂಟಿ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ಸತೀಶ್​ ದಿನ ರಾತ್ರಿ ತಮ್ಮ ಮನೆ ಬಳಿ ಇರುವ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಇದು ಅವರ ನಿತ್ಯದ ರಾತ್ರಿಯ ಕಾಯಕವಂತೆ.
View this post on Instagram

ನೈಟ್ ಡ್ಯೂಟಿ... #nightduty #sathishninasam


A post shared by Sathish Ninasam (@sathish_ninasam_official) on


ಸತೀಶ್​ ಅವರು ಮಾಡುತ್ತಿರುವ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಾಯಿಗಳಿಗೆ ಬಿಸ್ಕೆಟ್​ ಹಾಕುತ್ತಿರುವ ಸತೀಶ್ ಅವರಿಗೆ ಒಂದೊತ್ತು ಊಟ ಹಾಕಿ ಅಂತಲೂ ಸಲಹೆ ನೀಡಿದ್ದಾರೆ.


View this post on Instagram

ಅಮೋಘ ತಪ್ಪದೇ 20ನೇ ದಿನ 😍 #sk27gym #workout #sathishninasam


A post shared by Sathish Ninasam (@sathish_ninasam_official) on


ಇನ್ನು ಸತೀಶ್ ನೀನಾಸಂ ಅವರ ಸಿನಿಮಾಗಳ ವಿಷಯಕ್ಕೆ ಬಂದರೆ, ಅಯೋಗ್ಯ, ಚಂಬಲ್, ಬ್ರಹ್ಮಚಾರಿ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಕೊಟ್ಟ ನಂತರ ಸಾಕಷ್ಟು ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಆರಕ್ಕೂ ಹೆಚ್ಚು ‌ಸಿನಿಮಾಗಳಿವೆ. ಅದರಲ್ಲಿ ಗೋದ್ರಾ ರಿಲೀಸ್​ಗೆ ರೆಡಿಯಾಗಿದೆ.

ಇದನ್ನೂ ಓದಿ: 'ರೈತರ ಬಗ್ಗೆ ಅಗೌರವ ಬೇಡ' - ಅನ್ನದಾತನ ಪರ ನಿಂತ ಸ್ಯಾಂಡಲ್​ವುಡ್​ ರೋರಿಂಗ್ ಸ್ಟಾರ್ ಶ್ರೀಮುರಳಿ

ನಂದೀಶ್ ನಿರ್ದೇಶನದಲ್ಲಿ ಗೋದ್ರಾ ದೃಶ್ಯರೂಪ‌ ಪಡೆದುಕೊಂಡಿದ್ದು, ಸತೀಶ್ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.‌ ಇದು ಅವರ ಕೆರಿಯರ್​ನ ವಿಶೇಷ ಸಿನಿಮಾಗಲಿದೆ ಎಂಬ ಭರವಸೆ ಅವರದ್ದು. ಈಗಾಗಲೇ ಗೋದ್ರಾ ಟೀಸರ್ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಟೀಸರ್ ನೋಡಿದ್ರೆ ಇಲ್ಲಿ ನಕ್ಸಲಿಸಂ ಹಿನ್ನೆಲೆ ಇರೋದು ಗೊತ್ತಾಗುತ್ತದೆ. ಸತೀಶ್ ನೀನಾಸಂ ಗೆ ಶ್ರದ್ಧಾ ಶ್ರೀನಾಥ್ ಜೋಡಿಯಾಗಿ‌ ಅಭಿನಯಿಸಿದ್ದಾರೆ.
Published by:Anitha E
First published: