ಸ್ಟಾರ್ಗಳೆಂದರೆ ಅಭಿಮಾನಿಗಳು ಮುತ್ತಿಕೊಳ್ಳುವುದು ಸಾಮಾನ್ಯ. ಅದರಲ್ಲೂ ತಮ್ಮ ನೆಚ್ಚಿನ ನಟ-ನಟಿ ಸಿಕ್ಕರೆ ಒಂದು ಸೆಲ್ಫಿಗಾಗಿ ಹಾತೊರೆಯುವವರೇ ಹೆಚ್ಚು. ಇನ್ನು ಸಾರ್ವಜನಿಕ ಸ್ಥಳದಲ್ಲಿ ಸಿಕ್ಕರಂತು ಮುಗೀತು ಬಿಡಿ. ಆದರೆ ದಸರಾ ವೇಳೆ ಸಿಕ್ಕರೆ ಏನಾಗಬಹುದು ನೀವೇ ಊಹಿಸಿ. ಆದರೂ ಕನ್ನಡದ ಸ್ಟಾರ್ ನಟರೊಬ್ಬರು ಮಾತ್ರ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಮೈಸೂರು ಜನರ ಮಧ್ಯೆ ಫುಲ್ ಸುತ್ತಾಡಿದ್ದಾರೆ ಎಂದರೆ ನಂಬಲೇಬೇಕು.
ಹೌದು, ಅಭಿನಯ ಚತುರ ನೀನಾಸಂ ಸತೀಶ್ ಸತತವಾಗಿ ಮೂರು ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದು ಗೊತ್ತಿರುವ ವಿಚಾರ. ಇವರು ಅಭಿನಯದ 'ಮ್ಯಾಟ್ನಿ' ಹಾಗೂ 'ದಸರಾ' ಚಿತ್ರಗಳ ಚಿತ್ರೀಣಕರಣ ಬೆಂಗಳೂರಿನಲ್ಲಿ ಜರುಗುತ್ತಿದ್ದರೆ, 'ಪೆಟ್ರೋಮ್ಯಾಕ್ಸ್' ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.
ಹೀಗಾಗಿ ಅಭಿನಯ ಚತುರ ಮೈಸೂರು-ಬೆಂಗಳೂರು ನೆಡುವೆ ಓಡಾಟದಲ್ಲಿದ್ದಾರೆ. ಇದರ ನಡುವೆ ಮೈಸೂರು ದಸರಾ ಲೈಟಿಂಗ್ಸ್ ಸಂಭ್ರಮವನ್ನು ಕಣ್ತುಂಬಿಕೊಂಡಿದ್ದಾರೆ. ಅದು ಕೂಡ ಸಾಮಾನ್ಯ ಜನರೊಂದಿಗೆ ಓಡಾಡಿಕೊಂಡು ಎಂಬುದು ವಿಶೇಷ. ಹೌದು, ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ ಹಾಕಿ ಸತೀಶ್ ಬೀದಿ ಬದಿಗಳಲ್ಲಿ ಓಡಾಡಿದರು. ಅಲ್ಲದೆ ಬೀದಿ ಬದಿಯಲ್ಲಿ ನಿಂತು ಸಾಮಾನ್ಯರಂತೆ ತಿಂಡಿ-ತಿನಿಸುಗಳ ರುಚಿ ಸವಿದರು. ಈ ಸಂತಸದ ಕ್ಷಣಗಳ ವಿಡಿಯೋವನ್ನು ಅಭಿನಯ ಚತುರ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಹಲವರು ನಟನ ಸಿಂಪಲ್ಸಿಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ