ಸೈಕಲ್​ನಲ್ಲಿ ಸುತ್ತಾಡಿದ ಸತೀಶ್​ ನೀನಾಸಂ: ಮನೆಯಿಂದ ಹೊರ ಬಾರದಂತೆ ಮನವಿ ಮಾಡಿದ ನಟ..!

Sathish Ninasam Cycling video: ದಿನ ಬಳಕೆಯ ಅವಶ್ಯಕತೆಗೆ ಮಾತ್ರ ರಸ್ತೆಗೆ ಬರಲು ಸರ್ಕಾರ ಅನುಮತಿ ನೀಡಿದ್ದು, ಜನರು ದಿನಸಿ, ಔಷಧಿ ಹಾಗೂ ತರಕಾರಿ ತರಲು ಮನೆಯಿಂದ ಹೊರಗೆ ಬರಬಹುದಾಗಿದೆ. ಆದರೆ ಇಂದು ನಟ ಸತೀಶ್​ ನೀನಾಸಂ ಬೆಳಿಗ್ಗೆಯೇ ಮಾಸ್ಕ್​ ತೊಟ್ಟು ಸೈಕಲ್​ ಹತ್ತಿ ರಾಜರಾಜೇಶ್ವರಿ ನಗರದಲ್ಲಿ ಸುತ್ತಾಡಿದ್ದಾರೆ. 

ಸತೀಶ್​ ನೀನಾಸಂ

ಸತೀಶ್​ ನೀನಾಸಂ

  • Share this:
ಕೊರೋನಾ ಎಫೆಕ್ಟ್​ನಿಂದಾಗಿ ಜನರು ಮನೆ ಬಿಟ್ಟು ಹೊರಬಾರದಂತೆ ಸರ್ಕಾರ ಲಾಕ್​ಡೌನ್​ ಆದೇಶ ಹೊಡಿಸಿ ಕೇವಲ ಒಂದು ದಿನ ಕಳೆದಿದೆ. ಅನಶ್ಯಕತೆ ಇದ್ದರೆ ಮಾತ್ರ ರಸ್ತೆಗೆ ಬರುವಂತೆ ಎಲ್ಲರೂ ಮನವಿ ಮಾಡುತ್ತಿದ್ದಾರೆ. 

ದಿನ ಬಳಕೆಯ ಅವಶ್ಯಕತೆಗೆ ಮಾತ್ರ ರಸ್ತೆಗೆ ಬರಲು ಸರ್ಕಾರ ಅನುಮತಿ ನೀಡಿದ್ದು, ಜನರು ದಿನಸಿ, ಔಷಧಿ ಹಾಗೂ ತರಕಾರಿ ತರಲು ಮನೆಯಿಂದ ಹೊರಗೆ ಬರಬಹುದಾಗಿದೆ. ಆದರೆ ಇಂದು ನಟ ಸತೀಶ್​ ನೀನಾಸಂ ಬೆಳಿಗ್ಗೆಯೇ ಮಾಸ್ಕ್​ ತೊಟ್ಟು ಸೈಕಲ್ ​ ಹತ್ತಿ ರಾಜರಾಜೇಶ್ವರಿ ನಗರದಲ್ಲಿ ಸುತ್ತಾಡಿದ್ದಾರೆ.

ನಟರಾದ ಧನುಷ್​ ಮತ್ತು ನೀನಾಸಂ ಸತೀಶ್​ (File Photo)


ಹೌದು, ಮನೆಯಲ್ಲಿ ತರಕಾರಿ ಖಾಲಿ ಆದ ಕಾರಣ ಸತೀಶ್​ ತರಕಾರಿ ತರಲು ಹೊರಗೆ ಬಂದಿದ್ದರು. ಈ ವೇಳೆ ಈ ವಿಡಿಯೋ ಮಾಡಿದ್ದು, ಅನಾವಶ್ಯಕವಾಗಿ ಮನೆಯಿಂದ ಯಾರೂ ಹೊರ ಬಾರದಂತೆ ಮನವಿ ಸಹ ಮಾಡಿದ್ದಾರೆ.ಕೇವಲ ನಟ ಸತೀಶ್​ ಮಾತ್ರವಲ್ಲದೆ ಸ್ಯಾಂಡಲ್​ವುಡ್​ನ ಸ್ಟಾರ್ ನಟ-ನಟಿಯರು, ಬಾಲಿವುಡ್​ ಮಂದಿ, ಟಾಲಿವುಡ್​ ಮಂದಿ ಹಾಗೂ ಇತರೆ ಸಿನಿ ಸೆಲೆಬ್ರಿಟಿಗಳು ದಿನಕ್ಕೊಂದು ಮನವಿ ಮಾಡುವ ವಿಡಿಯೋ ಪೋಸ್ಟ್​ ಮಾಡುತ್ತಿದ್ದಾರೆ.

 

ಇದನ್ನೂ ಓದಿ: Roberrt Movie Release Date Postponed: ರಾಬರ್ಟ್​ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ದರ್ಶನ್​ ಅಭಿಮಾನಿಗಳು..!

Nikhil-Revathi: ಬೇವು ಬೆಲ್ಲ ಹಂಚಿಕೊಂಡು ಸುಖ-ದುಖಃದಲ್ಲಿ ಸಮಪಾಲು ಸ್ವೀಕರಿಸುವುದಾಗಿ ಸಾರಿದ ನಿಖಿಲ್​-ರೇವತಿ..!

First published: