ಹಳ್ಳಿ ಪ್ರತಿಭೆ ಸತೀಶ್ ನೀನಾಸಂ ( Sathish Ninasam) ಹಾಗೂ ಹರಿಪ್ರಿಯಾ (Hariprriya) ನಟಿಸಿರುವ ಸಿನಿಮಾ ಪೆಟ್ರೋಮ್ಯಾಕ್ಸ್ (Petromax) ಸಿನಿಮಾ ಅನೌನ್ಸ್ ಆದಾಗಿನಿಂದ ಸಖತ್ ಸದ್ದು ಮಾಡುತ್ತಿದೆ. ಸಿನಿಮಾದ ಟೈಟಲ್ನಿಂದಲೇ ತುಂಬಾ ಸುದ್ದಿಯಲ್ಲಿದ್ದ ಈ ಸಿನಿಮಾದ ಟ್ರೇಲರ್ (Trailer)ಈಗ ರಿಲೀಸ್ ಆಗಿದೆ. ಇದೇ ಮೊದಲ ಸಲ ಸತೀಶ್ ನೀನಾಸಂ ಹಾಗೂ ಹರಿಪ್ರಿಯಾ ತೆರೆ ಹಂಚಿಕೊಂಡಿದ್ದಾರೆ. ಈ ಹಿಂದೆಯೇ ಹೇಳಿದಂತೆ ಈ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಗಂಭೀರವಾದ ವಿಷಯವೂ ಇದೆ. ಈ ಹಿಂದೆಯೇ ರಿಲೀಸ್ ಆಗಬೇಕಿದ್ದ ಈ ಸಿನಿಮಾದ ಡ್ರೇಲರ್ ಈಗ ಬಿಡುಗಡೆಯಾಗಿದೆ. 2016ರಲ್ಲಿ ನೀರ್ ದೋಸೆ ಸಿನಿಮಾ ನಿರ್ದೇಶಕ ವಿಜಯ್ ಪ್ರಸಾದ್ ಅವರ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಪೆಟ್ರೋಮ್ಯಾಕ್ಸ್.
ಪೆಟ್ರೋಮ್ಯಾಕ್ಸ್ ಟ್ರೇಲರ್ ರಿಲೀಸ್ ಆಗಿದ್ದು, ವೀಕ್ಷಕರಿಂದ ಮಿಶ್ರಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ಈ ಟ್ರೇಲರ್ ನೋಡಿದರೆ ಸಿನಿಮಾದಲ್ಲಿ ಡಬಲ್ ಮೀನಿಂಗ್ ಜೋಕ್ಸ್ ಜೊತೆಗೆ ಒಂದು ಗಂಭೀರ ವಿಷಯ ಇದೆ ಅನ್ನೋ ಸುಳಿವು ಸಿಗುತ್ತದೆ. ಆದರೆ ಡಬಲ್ ಮೀನಿಂಗ್ ಜೋಕ್ಸ್ ಕೆಲವರಿಗೆ ನಗು ತರಿಸಿದರೆ, ಟ್ರೇಲರ್ ಅನ್ನು ಕುಟುಂಬದ ಜೊತೆ ನೋಡಲು ಸಾಧ್ಯವಾಗದ ರೀತಿಯಲ್ಲಿ ಇದೆ ಎಂದೂ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ನಗು ತರಿಸಲು ಇಂತಹ ಜೋಕ್ಸ್ ಮಾಡುವ ಅಗತ್ಯ ಇಲ್ಲ ಎಂದೂ ಕಮೆಂಟ್ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ಚೇಷ್ಠೆಯೇ ಮುಖ್ಯ ಕಥಾಹಂದರ. ಆ ಹಿನ್ನೆಲೆಯನ್ನಿಟ್ಟುಕೊಂಡೆ ಸಿನಿಮಾ ನೋಡಿಸಿಕೊಂಡು ಹೋಗುತ್ತಂತೆ. ಇಲ್ಲಿ ಸಾಮಾನ್ಯರ ಬದುಕಿನಲ್ಲಿ ನಡೆಯುವ ಕಥೆಯನ್ನು ತೋರಿಸಲಿದ್ದೇವೆ. ಇದು ಚಿತ್ರದ ಮಹತ್ವದ ಘಟ್ಟ ಎನ್ನುವ
ನಟ ಸತೀಶ್ ನೀನಾಸಂ, ಕಳೆದ ಮೂರು ವರ್ಷದ ಹಿಂದೆಯೇ ಈ ಸಿನಿಮಾ ಶುರುವಾಗಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ. ಆ ಬಗ್ಗೆ ನಿರ್ದೇಶಕರಿಗೆ ನಾನು ಕೇಳುತ್ತಲೇ ಬಂದೆ. ಕೊರೋನಾ ಸಮಯದಲ್ಲಿ ಚಿತ್ರ ಮಾಡುವ ಮನಸ್ಸಾಯ್ತು ಎಂದು ಸತೀಶ್ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ತುಂಡುಡುಗೆ ತೊಟ್ಟು ಗೋವಾದ ಬೀಚ್ನಲ್ಲಿ ವೀಕೆಂಡ್ ಎಂಜಾಯ್ ಮಾಡಿದ ನಟಿ Sameera Reddy
ಸತೀಶ್ ನೀನಾಸಂಗೆ, ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಹಾಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾರುಣ್ಯ ರಾಮ್ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯಲಕ್ಷ್ಮೀ ಸಿಂಗ್ ನಟಿಸಿದ್ದಾರೆ. ಅಂದಹಾಗೆಯೇ, ಒಟ್ಟು 36 ದಿನಗಳ ಕಾಲ ಚಿತ್ರೀಕರಣ ಮಾಡಿಕೊಂಡಿರುವ ಪೆಟ್ರೋಮ್ಯಾಕ್ಸ್ ಚಿತ್ರ ತಂಡ, ಮೈಸೂರಿನಲ್ಲಿಯೇ ಶೂಟಿಂಗ್ ಶುರುಮಾಡಿ, ಅಲ್ಲಿಯೇ ಮುಗಿಸಿಕೊಂಡಿತು.
ವಿಶೇಷ ಏನೆಂದರೆ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತಗೆ ಸತೀಶ್ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಸತೀಶ್ ಪಿಕ್ಚರ್ ಹೌಸ್ ಅಡಿ ಬಂಡವಾಳ ಹೂಡಿದ್ದಾರೆ ಸತೀಶ್ ನೀನಾಸಂ. ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣದಲ್ಲಿ ಜೊತೆಯಾಗಿದೆ. ಕತೆ, ಚಿತ್ರಕತೆ, ಸಂಗೀತ ನಿರ್ದೇಶನ ಅನೂಪ್ ಸೀಳಿನ್, ಕ್ಯಾಮರಾ ನಿರಂಜನ್ಬಾಬು, ಸಂಕಲನ ಸುರೇಶ್ ಅರಸ್, ಹೊಸ್ಮನೆ ಮೂರ್ತಿ ಕಲೆ, ವಿನಯ್ ಸಹ ನಿರ್ದೇಶನ ಚಿತ್ರಕ್ಕಿದೆ.
ಇದನ್ನೂ ಓದಿ: Weight Loss: ತೂಕ ಇಳಿಸಿಕೊಂಡ ನಂತರ ವಿವಾಹವಾದ ಹಾಸ್ಯ ನಟಿ Vidyullekha Raman
ನಟ ಸತೀಶ್ ನೀನಾಸಂ ಅವರು ಮೊದಲ ಬಾರಿಗೆ ತಮಿಳಿನ "ಪಗೈವುನುಕು ಅರುಳ್ವಾಯ್" ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಅವರ ಪಾತ್ರದ ಪೋಸ್ಟರ್ ಅನ್ನು ನಟಿ ರಮ್ಯಾ ಅವರು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದು, ನಟ ಸತೀಶ್ ನೀನಾಸಂ ಅವರಿಗೆ ಹಾಗೂ ಚಿತ್ರಕ್ಕೆ ಶುಭ ಹಾರೈಸಿದ್ದರು. ತಮಿಳಿನ ಪ್ರಖ್ಯಾತ ನಟ ಹಾಗೂ ನಿರ್ದೇಶಕ ಸಮುದ್ರಖಣಿ ಅವರು ಸಹ ಪೋಸ್ಟರ್ ಬಿಡುಗಡೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ