Sarpatta Parambarai Review: ಈ ಚಿತ್ರದ ಮೂಲಕ ಪಾ ರಂಜಿತ್ ಹೇಳೋಕೆ ಹೊರಟಿದ್ದೇನು ? ಪ್ರತಿರೋಧದ ಪ್ರಕ್ರಿಯೆಯ ಪರಾಮರ್ಶೆ

Sarpatta Parambarai Review: ಇತ್ತೀಚೆಗೆ ಇಂಥಾ Stereotypeಗಳನ್ನು ಮುರಿಯುವ ಪ್ರಯತ್ನಗಳಾಗುತ್ತಿವೆ. ಆ ಪೈಕಿ ಪ್ರಸಕ್ತ ಮುಂಚೂಣಿಯಲ್ಲಿರುವ ಕೆಲವರು ಎಂದರೆ ವೆಟ್ರಿ ಮಾರನ್, ಪಾ ರಂಜಿತ್, ಮರಿ‌‌ ಸೆಲ್ವರಾಜ್. ಇವರೆಲ್ಲರೂ ಒಂದೇ ದೋಣಿಯ ಯಾತ್ತಿಕರಂತೆ ಸಾಗುತ್ತಿದ್ದಾರೆ. Film Makers ಗಳ ಅಂತಿಮ ಜವಾಬ್ದಾರಿ Socio Concern ಮಾತ್ರ ಎಂಬ ಪರಿಭಾಷೆಯನ್ನು ಹೊಡೆದುರಿಳಿಸುತ್ತಿರುವ ಇವರು ವೈದಿಕತೆಯ ಈಗೋ ಕೆಣಕುತ್ತಿದ್ದಾರೆ. ಬಹುಷಃ ಇದೊಂದು ಪ್ರತಿರೋಧದ ಪ್ರಕ್ರಿಯೆ.

ಚಿತ್ರೀಕರಣದಲ್ಲಿ ಪಾ ರಂಜಿತ್

ಚಿತ್ರೀಕರಣದಲ್ಲಿ ಪಾ ರಂಜಿತ್

  • Share this:
Sarpatta Parambarai: 1996ರಲ್ಲಿ ಪರಂಬರೈ ಎನ್ನುವ ಚಿತ್ರವೊಂದು ತೆರೆ ಕಂಡಿತ್ತು. ಪ್ರಭು ನಾಯಕನಟನಾಗಿ ರೋಜಾ ನಾಯಕಿಯಾಗಿ ಬಂದ ಸಿನಿಮಾ ಅದು‌. ನಾಯಕನ ತಾಯಿ ಹಠಾತ್ತನೆ ಅನಾರೋಗ್ಯದಿಂದ ಸಾವು ಕಂಡಾಗ ತಂದೆ ಬೇರೊಂದು ಮದುವೆಯಾಗುತ್ತಾನೆ‌. ಅದನ್ನ ಸಹಿಸಲಾಗದ ನಾಯಕ ಮನೆಬಿಟ್ಟು ಅಜ್ಜಿಯ ಮನೆಗೆ ಬಂದು ಕೂಡುತ್ತಾನೆ. ಅದಾಗಿ ಬಹಳ ವರ್ಷಗಳ ಬಳಿಕ ಮತ್ತೆ ನಾಯಕ ನಟ ಮನೆಗೆ ಮರಳಿ ಬಂದಾಗ ಅತ್ತೆ ಮಗಳು (ರೋಜಾ) ನೋಡಿ ಪ್ರೇಮಿಯಾಗುತ್ತಾನೆ. ಒಟ್ಟಾರೆ ಪರಂಬರೈ (ವಂಶಪಾರಂಪರ್ಯ) ಎಂಬ ಒಕ್ಕಣೆಯಲ್ಲಿ ಮೂಡಿದ ಈ ಸಿನಿಮಾ ಪ್ರೀತಿ, ಹಣ, ಮನೆತನದ ಹೆಸರು ಉಳಿಸಿಕೊಳ್ಳುವಲ್ಲಿಗೆ ಮಾತ್ರ ಸೀಮಿತವಾಗುತ್ತದೆ. ಅದರಾಚೆಗೆ ಈ ಸಿನಿಮಾ‌ Subaltern & Post colonialism ಬಗ್ಗೆಯಾಗಲಿ ಮಾತನಾಡುವುದಿಲ್ಲ. ವಂಶಪಾರಂಪರ್ಯ ಎಂದರೆ ಅದು ಕೇವಲ ತಂದೆ, ತಾತ, ಮುತ್ತಾತ ಕೂಡಿಟ್ಟ ಹಣ, ಆಸ್ತಿ, ಅಂತಸ್ತು ಎಂಬ ಪರಿಕಲ್ಪನೆಯನ್ನು ಮಾತ್ರ ಬೋಧಿಸುತ್ತವೆ. ಹೀಗೆ ಭಾರತೀಯ ಎಲ್ಲಾ ಸಿನಿಮಾ ಕ್ಷೇತ್ರಗಳೂ ಇದನ್ನೇ ನಿಜ ಎಂದು ನಂಬಿಕೊಂಡು ಬಂದಿವೆ. 

ಆದರೆ ಇತ್ತೀಚೆಗೆ ಇಂಥಾ Stereotypeಗಳನ್ನು ಮುರಿಯುವ ಪ್ರಯತ್ನಗಳಾಗುತ್ತಿವೆ. ಆ ಪೈಕಿ ಪ್ರಸಕ್ತ ಮುಂಚೂಣಿಯಲ್ಲಿರುವ ಕೆಲವರು ಎಂದರೆ ವೆಟ್ರಿ ಮಾರನ್, ಪಾ ರಂಜಿತ್, ಮರಿ‌‌ ಸೆಲ್ವರಾಜ್. ಇವರೆಲ್ಲರೂ ಒಂದೇ ದೋಣಿಯ ಯಾತ್ತಿಕರಂತೆ ಸಾಗುತ್ತಿದ್ದಾರೆ. Film Makers ಗಳ ಅಂತಿಮ ಜವಾಬ್ದಾರಿ Socio Concern ಮಾತ್ರ ಎಂಬ ಪರಿಭಾಷೆಯನ್ನು ಹೊಡೆದುರಿಳಿಸುತ್ತಿರುವ ಇವರು ವೈದಿಕತೆಯ ಈಗೋ ಕೆಣಕುತ್ತಿದ್ದಾರೆ. ಬಹುಷಃ ಇದೊಂದು ಪ್ರತಿರೋಧದ ಪ್ರಕ್ರಿಯೆ. ಇದು ಒಂದೆರಡು‌ ದಿನಗಳಲ್ಲಿ ಆಗಿ ಮುಗಿಯುವ ಪ್ರಕ್ರಿಯೆ ಅಲ್ಲ. ಈಗ ಶುರುವಾಗಿದೆ. ಇದು ಹೀಗೆ ಸಾಗಲಿದೆ.‌ Literally These Fellows are Unstoppable.

ಇದನ್ನೂ ಓದಿ: Etharkkum Thunindhavan: ಸೂರ್ಯ ಹೊಸಾ ಸಿನಿಮಾ ಫಸ್ಟ್ ಲುಕ್ ನೋಡಿದ್ರಾ? ರಗಡ್ ಲುಕ್ ಹೇಗನ್ನಿಸ್ತು?

ಈಗ ಪಾ ರಂಜಿತ್ ನಿರ್ದೇಶನದ ಸಾರ್ಪಟ್ಟ ಪರಂಬರೈ ಎಂಬ ಸಿನಿಮಾ ಕೂಡ ಅದೇ Subaltern ಚಿಂತನೆ ಮುಂದಿಡುವ ಚಿತ್ರ. ತುರ್ತು ಸಂದರ್ಭದಲ್ಲಿ ನಡೆಯುವ ಈ ಚಿತ್ರ, ಸಾರ್ಪಟ್ಟ ಪರಂಬರೈ ಹಾಗೂ ಇಡಿಯಪ್ಪ ಪರಂಬರೈ ಎಂಬ ಎರಡು ಮನೆತನದ ನಡುವಣ Ego ಗುದ್ದಾಟವನ್ನು ಹೇಳುತ್ತದೆ. ಬಾಕ್ಸಿಂಗ್ ಮೈನ್ ಥೀಮ್ ಹೊಂದಿರುವ ಈ ಸಾರ್ಪಟ್ಟ ಪರಂಬರೈ ನಟ ಆರ್ಯ ಅವರ ವೃತ್ತಿ ಬದುಕಿನ ಮೈಲಿಗಲ್ಲು. Not Yet Before ಎಂಬಂತೆ ಕಾಣಿಸಿಕೊಂಡಿರುವ ಆರ್ಯ ತನ್ನ ನಟನೆಯ ಮಿತಿಯಲ್ಲಿ ನಿಂತುಕೊಂಡೇ ಅಭಿನಯಿಸಿದ್ದಾರೆ. ಅದರಾಚೆಗೆ ಪಾ ರಂಜಿತ್ ಒಳನೋಟಕ್ಕೆ ಬಲ‌ ತುಂಬಿದ್ದು ಇತರೆ ನಾಲ್ಕೈದು ಪಾತ್ರಗಳು. ಬೀಡಿ ರಾಯಪ್ಪನ್, ರಂಗ ವಾದ್ಯಾರ್, ಡ್ಯಾನ್ಸಿಂಗ್ ರೋಸ್, ಡ್ಯಾಡಿ ಹಾಗೂ ಕಬಿಲನ್ ಹೆಂಡತಿ. ಇವರ ಅತ್ಯಮೋಘ ನಟನೆ ಸಿನಿಮಾದ ಒಟ್ಟು ಬಲ.‌

ಸಾರ್ಪಟ್ಟ ಪರಂಬರೈಯ ಮಾನ ಉಳಿಸಲು ಹೆಣಗಾಡುವ ರಂಗ ವಾದ್ಯಾರ್ ಮೊದಲು ಎಷ್ಟು ಪೂರ್ವಾಗ್ರದ ಮನುಷ್ಯ ಎಂದರೆ ಕೆಳವರ್ಗದಿಂದ ಬಂದ ಕಬಿಲನ್ (ಆರ್ಯ) ಎನ್ನುವ ಯುವಕನ ಕಿಮ್ಮತ್ತನ್ನು ಒಂದೇ ನೋಟದಲ್ಲಿ ಅಳೆದು ತೂಗಿ ಇಡುತ್ತಾನೆ. ಆದರೆ ಆ ಶೋಷಿತ ಹೃದಯದೊಳಗಿರುವ ವೇದನೆ & ಪ್ರತಿರೋಧ ಕಬಿಲನ್ ನನ್ನು ಸಾರ್ಪಟ್ಟ ಪರಂಬರೈ ಮಾನ ಉಳಿಸಲು ಬಾಕ್ಸಿಂಗ್ ರಿಂಗ್ ಒಳಗಡೆ ತಂದು ನಿಲ್ಲಿಸಿ ಬಿಡುತ್ತದೆ. ಈ ಪ್ರಸಂಗ ವೈದಿಕ ಮನಸ್ಥಿತಿಯನ್ನು ಕೆಣಕಿ ಬಿಡುತ್ತದೆ. ಅದೇ ಎಂದಿನಂತೆ ಕೈಲಾಗದವರು ಮೈ ಪರಚಿಕೊಳ್ಳುತ್ತಾರೆ ಎಂಬ ವೈದಿಕರ ಸ್ಥಿತ ಮನೋಭಾವವನ್ನು ಪಾ ರಂಜಿತ್ ಸುಂದರವಾಗಿ ಕಟ್ಟಿದ್ದಾರೆ.

ಇದನ್ನೂ ಓದಿ: Sarpatta Parambarai Movie Review: ಸಖತ್ ಸೌಂಡ್ ಮಾಡ್ತಿದೆ ಬಾಕ್ಸಿಂಗ್ ಮೇಲಿನ ಪಾ ರಂಜಿತ್ ಚಿತ್ರ ‘ಸರ್ಪಟ್ಟ ಪರಂಬರೈ’

ಆಗಾಗ್ಗೆ ಸಿನಿಮಾದಲ್ಲಿ ಮಿಂಚಿನಂತೆ ಅಂಬೇಡ್ಕರ್, ಬುದ್ಧ ಬಂದು ಹೋಗುತ್ತಾರೆ. ಇದಕ್ಕೆ ತಕ್ಕಂತೆ ಸಂಭಾಷಣೆಗಳು ಕೂಡ ಪ್ರತಿರೋಧದ ಹೇಳಿಕೆಯಂತೆ ಬಂದು ದಾಖಲಾಗುತ್ತದೆ. ಹೀಗೆ ಧೈರ್ಯದಿಂದ ತಮ್ಮ ಪ್ರತಿರೋಧವನ್ನು ದಾಖಲಿಸುವ ತಾಕತ್ತು ಬಂದಿರುವುದು ತಮ್ಮ ನಿಲುವು ಸ್ಪಷ್ಟವಾಗಿರುವ ಕಾರಣಕ್ಕೆ. ಸಿನಿಮಾ‌ ಯಾಕೆ ಮಾಡಬೇಕು ಎಂಬ ಸ್ಪಷ್ಟತೆ ಇರುವ ಕಾರಣಕ್ಕೆ. Socio Concern ಆಚೆಗಿನ ಬಯಲೊಂದನ್ನು ಹುಡುಕಿಕೊಂಡಿರುವ ಪಾ ರಂಜಿತ್ ಎಲ್ಲವನ್ನೂ,‌ ಎಲ್ಲರನ್ನೂ ಒಳಗೊಂಡ Socio Concern ಅಲ್ಲವೇ ಅಲ್ಲ ತನ್ನ ಗುರಿ. ಬದಲಿಗೆ, ಈ ಸಾಮಾಜದಲ್ಲಿ ಬದಿಗೊತ್ತಲ್ಪಟ್ಟ ದನಿಯನ್ನು ಮೇಲಕ್ಕೆ‌ ಎತ್ತುವುದು ಎಂಬುವುದನ್ನು ಸಾರಿ ಮತ್ತೆ ಈ ಸಿನಿಮಾ ಮೂಲಕ ಹೇಳಿದ್ದಾರೆ.

ಜನರಲೈಸ್ ಆಗಿರುವ ಸಾಮಾಜಿಕ ಜವಾಬ್ದಾರಿ ಎಂಬ ಹೊಣೆ ಸದಾ ಮೇಲ್ವರ್ಗದ ಜನರ ಪರವಾಗಿಯೇ ಇರುತ್ತದೆ. ಶಿಕ್ಷಣ, ಬಡತನ ಹೀಗೆ ಸಾಮಾಜಿಕ ಜವಾಬ್ದಾರಿ ಎಂದರೆ ಇವಷ್ಟೇ ಎಂಬ ಕಲ್ಪನೆ‌ ಇಲ್ಲಿಯದ್ದು. ಆದರೆ, ಹೇಲು‌ ಎತ್ತುವ, ನೆಟ್ಟಗಿನ ಬಟ್ಟೆ ಹಾಕಿಕೊಳ್ಳಲಾಗದ, ಅಸ್ಪೃಶ್ಯತೆ ಅನುಭವಿಸುವ ಮಂದಿಯ ನೋವು ಈ So Called Socio Concern ಒಳಗಡೆ ಮರೆಯಾಗಿದೆ. ಈ ಸೂಕ್ಷ್ಮತೆ ಪಾ ರಂಜಿತ್ ಗಿದೆ. ಅವರ ಎಲ್ಲಾ ಸಿನಿಮಾವೂ ಸಾಮಾಜಿಕ ಹೊಣೆಗಾರಿಕೆ ಎಂಬುವುದನ್ನು ಮೀರಿ, ಅದರಲ್ಲಿನ ಸೂಕ್ಷ್ಮ ಸಂಗತಿಗಳ ಮೇಲೆ ಆಧಾರಿತವಾಗಿರುತ್ತದೆ. ಮತ್ತು ಅವೆಲ್ಲವೂ Suppressed Class ನ ದನಿಯಾಗಿಯೂ ಇರುತ್ತದೆ.

ಇದನ್ನೂ ಓದಿ: Viral News: ಮದುವೆ ಮೆರವಣಿಗೆಯಲ್ಲಿ ಕುದುರೆ ಮೇಲೆ ಕುಳಿತ ವರ ಓಟ, ಸ್ವಾಗತಕ್ಕೆ ಬಂದ ದಿಬ್ಬಣ ಗಾಬರಿ !

ಸಾರ್ಪಟ್ಟ ಪರಂಬರೈ ಸಿನಿಮಾ‌ ನೋಡಿದವರು ಗಮನಿಸಿರಬಹುದು. ಬಾಕ್ಸಿಂಗ್ ಬಿಟ್ಟು ಕುಡಿದು 'ದಾರಿ ತಪ್ಪುವ' ಕಬಿಲನ್ ಮತ್ತೆ ರಿಂಗ್ ಗೆ ಮರು ಪ್ರವೇಶ ಮಾಡುವ ತಯಾರಿಗಳನ್ನು. ಇಲ್ಲಿ ಒಂದು ರೂಪಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪಾ ರಂಜಿತ್. ಎದುರಾಳಿ ಇಡಿಯಪ್ಪ ಪರಂಬರೈ ಬಾಕ್ಸರ್ ಕೊನೆಯ ಕಾದಾಟಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಕಲ್ಲು, ಬಂಡೆಗಳ ಹಿನ್ನೆಲೆಯಲ್ಲಿ. ಅದೇ ಸಾರ್ಪಟ್ಟ ಪರಂಬರೈ ಬಾಕ್ಸರ್ ಕಬಿಲನ್ ವಿಶಾಲವಾದ ಸಮುದ್ರದ ಹಿನ್ನೆಲೆಯಲ್ಲಿ. ಈ ಎರಡೂ ದೃಶ್ಯಗಳು ಆ ವರ್ಗದ ಜನರ ಮನಸ್ಥಿತಿಗೆ ಹಿಡಿದಿರುವ ಕೈಗನ್ನಡಿ.‌ ಕಬಿಲನ್ ಬಂದಂಥಾ ಸಮುದಾಯವನ್ನು ಸಮುದ್ರದಂತೆ ವಿಶಾಲತೆಗೆ ಹೋಲಿಸಿ, ಇಡಿಯಪ್ಪ ಪರಂಬರೈಯ ಮನಸ್ಥಿತಿಯನ್ನು ಕಲ್ಲು ಬಂಡೆಗೆ‌ ಹೋಲಿಸಿದಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಸೂಕ್ಷ್ಮವಾಗಿ ಈ ಸಿನಿಮಾವನ್ನು ಪಾ ರಂಜಿತ್ ಕಟ್ಟಿದ್ದಾರೆ.

ಪಾ ರಂಜಿತ್ ಸಿನಿಮಾ ಬಿಡುಗಡೆಗೊಳ್ಳುವಾಗ ಆ ಸಿನಿಮಾ ಚರ್ಚೆಯಾಗಿದ್ದಕ್ಕಿಂತ ಅದರ ಒಳಾರ್ಥಗಳೇ ಹೆಚ್ಚು ಚರ್ಚಾವಸ್ತು. ಅದೇ ಒಬ್ಬ‌ Sensible ಸಿನಿಮಾ ಕಟ್ಟುವವನ ಯಶಸ್ಸು ಕೂಡ. ಇದು ಒಂದು ಸಾರ್ಪಟ್ಟ ಪರಂಬರೈ ಕತೆಯಲ್ಲ. ಈವರೆಗಿನ ಪಾ ರಂಜಿತ್ ಹಾಗೂ ಮುಂಬರುವ ಪಾ ರಂಜಿತ್ ನ ಭರವಸೆಯ ಮಾತು ಕೂಡ.‌ ಇಷ್ಟೆಲ್ಲಾ ಹೇಳಿದ ಮೇಲೂ ಸಾರ್ಪಟ್ಟ ಪರಂಬರೈ ಪಕ್ಕಾ ಕಮರ್ಷಿಯಲ್ ಕಿಕ್ ಕೊಡುವ ಸಿನಿಮಾ. ಮತ್ತೆ ಪ್ರತಿರೋಧವನ್ನು Commercialise ಮಾಡದ ಹೊರತು ತನ್ನ ತತ್ವ ಸಿದ್ಧಾಂತಕ್ಕೂ, ತನಗೂ ಉಳಿಗಾಲವಿಲ್ಲ ಎಂಬ ಪ್ರಜ್ಞೆಯೂ ಇವರಿಗಿದೆ. ಇದೇ ಕಾರಣಕ್ಕೆ ನೊಂದವರ ದನಿ ಬೆಳ್ಳಿ‌ ಪರದೆಯ ಮೇಲೆ ನಳನಳಿಸುತ್ತಿದೆ. ಈ ಸಾರ್ಪಟ್ಟ ಪರಂಬರೈ ನೋಡದೆ ಹೋದರೆ ಸಿನಿ ರಸಿಕರಿಗೆ ನಷ್ಟ ಎಂಬುಂದಂತೂ ಒತ್ತಿ ಹೇಳಬಹುದು.‌
Published by:Soumya KN
First published: