ಟ್ರೆಂಡಿಂಗ್​ನಲ್ಲಿದೆ 'ಸರ್ಕಾರಿ ಪ್ರಾಥಮಿಕ ಪಾಠಶಾಲೆ ಕಾಸರಗೋಡು' ಶಾಲೆಯ ಮತ್ತೊಂದು ಹಾಡು..!

news18
Updated:August 2, 2018, 1:40 PM IST
ಟ್ರೆಂಡಿಂಗ್​ನಲ್ಲಿದೆ 'ಸರ್ಕಾರಿ ಪ್ರಾಥಮಿಕ ಪಾಠಶಾಲೆ ಕಾಸರಗೋಡು' ಶಾಲೆಯ ಮತ್ತೊಂದು ಹಾಡು..!
news18
Updated: August 2, 2018, 1:40 PM IST
ನ್ಯೂಸ್​ 18 ಕನ್ನಡ 

ನಿರ್ದೇಶಕ ರಿಷಭ್ ಶೆಟ್ಟಿ ತಮ್ಮ ಹೊಸ ಸಿನಿಮಾಗೆ ಹೊಸ ಕಿಕ್ ಕೊಟ್ಟಿದ್ದಾರೆ. ಅದು ಬರೀ ಹೇಳಿಕೆಯಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗುತ್ತಿದೆ. ಯಾಕೆ ಅಂತೀರಾ ಈ ಸ್ಟೋರಿ ಓದಿ.

'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು' ಸಿನಿಮಾ ಟೈಟಲ್ ಕೇಳಿದವರಿಗೆ ಇದೆಷ್ಟು ಉದ್ದದ ಟೈಟಲ್, ಇದು ಮಕ್ಕಳ ಸಿನಿಮಾ ಇರಬೇಕೆಂದು ಅನ್ನಿಸಿತ್ತು. ಆದರೆ ಚಿತ್ರದ ಒಂದೊಂದೇ ಹಾಡುಗಳು ಟ್ರೆಂಡ್ ಆಗುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಅವಳ ನಗುವಿನ ಹಾಡು.ಚಿತ್ರದ ಮೊದಲ ಹಾಡು `ದಡ್ಡ ದಡ್ಡ ಪ್ರವೀಣಾ' ಕೂಡ ವೈರಲ್ ಆಗಿತ್ತು. ಈಗ ಮತ್ತೊಂದು ಹಾಡು ಮಜಾ ಕೊಡುತ್ತಿದೆ. ರಾಮಾ ರಾಮಾ ರೇ ಚಿತ್ರಕ್ಕೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಮ್ಯೂಸಿಕ್‍ನಲ್ಲಿ ಹಾಡುಗಳು ಮೋಡಿ ಮಾಡುತ್ತಿವೆ.


'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಅನ್ನೋ ಸಿನಿಮಾ ಹೆಸರು ಹೇಳೋಕೆ ಕಷ್ಟವಾದರೂ ಹಾಡುಗಳು ಕೇಳೋಕೆ ಇಷ್ಟವಾಗುತ್ತಿವೆ. ಸಮಯ ಸಿಕ್ಕತೆ ನೀವೂ ಒಂದು ಸಾರಿ ಹಾಡುಗಳನ್ನು ಕೇಳಿ.
Loading...

 
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ