Vicky Kaushal: ಚಾಕಲೇಟ್ ಬ್ರೌನಿ ಡಬ್ಬದೊಳಗೆ ಉಂಗುರವಿಟ್ಟು, ಕತ್ರೀನಾಳಿಗೆ ಮದುವೆ ಪ್ರಸ್ತಾಪ ಮಾಡಿದ ನಟ ವಿಕ್ಕಿ ಕೌಶಲ್!

Katrina Kaif: ನಟ ವಿಕ್ಕಿ ಕೌಶಲ ಮತ್ತು ನಟಿ ಕತ್ರೀನಾ ಕೈಫ್ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಸುದ್ದಿ ನಿಜವೋ ಸುಳ್ಳೋ ಎಂದು ತಿಳಿಯಲು ಇಬ್ಬರ ಅಭಿಮಾನಿಗಳು ಕಾತರರಾಗಿದ್ದಾರೆ.

ವಿಕ್ಕಿ ಕೌಶಲ್ -ಕತ್ರೀನಾ ಕೈಫ್

ವಿಕ್ಕಿ ಕೌಶಲ್ -ಕತ್ರೀನಾ ಕೈಫ್

  • Share this:
    ಕತ್ರೀನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal), ಮದುವೆಯಾಗುತ್ತಿದ್ದಾರೆ ಎಂಬ ವದಂತಿಯ ಮೂಲಕ ಸುದ್ದಿಯಲ್ಲಿದ್ದಾರೆ. ಅವರಿಬ್ಬರ ಮದುವೆಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಇಲ್ಲವಾದರೂ, ಡಿಸೆಂಬರ್​ನಲ್ಲಿ ಈ ಮದುವೆ ನಡೆಯಲಿದೆ ಎಂಬ ವರದಿಗಳ ಬಗ್ಗೆ ಅಭಿಮಾನಿಗಳಲ್ಲಿ ತೀವ್ರವಾದ ಕೂತೂಹಲ ಮನೆ ಮಾಡಿದೆ. ಮದುವೆ ನಡೆಯುವ ಸ್ಥಳದಿಂದ ಹಿಡಿದು ವಧುವಿನ ವೇಷ ಭೂಷಣದ ವರೆಗೆ ಎಲ್ಲಾ ಮಾಹಿತಿಗಳ ಕುರಿತು ವರದಿಗಳು ಆರಂಭವಾಗಿವೆ.

    ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಅವರ ಮದುವೆಯು , ಡಿಸೆಂಬರ್ 7 ರಿಂದ ಡಿಸೆಂಬರ್ 9 ರ ವರೆಗೆ, ರಾಜಸ್ಥಾನದ ರಣಥಂಭೋರ್ ರಾಷ್ಟ್ರೀಯ ಉದ್ಯಾನವನದಿಂದ , ಕೇವಲ 30 ನಿಮಿಷ ದೂರದಲ್ಲಿರುವ ಸವಾಯಿ ಮಾಧೋಪುರ್‌ನ ಸಿಕ್ಸ್ತ್ ಸೆನ್ಸ್ ಫೋರ್ಟ್ ಬರ್‍ವಾರ ರೆಸಾರ್ಟ್ ಎಂಬ ರೆಸಾರ್ಟ್‍ನಲ್ಲಿ ನಡೆಯಲಿದೆ. ವರ ಮತ್ತು ವಧು ಇಬ್ಬರೂ ಮದುವೆಯಲ್ಲಿ ಸಬ್ಯಸಾಚಿ ವಿನ್ಯಾಸದ ವಸ್ತ್ರಗಳನ್ನು ಧರಿಸಲಿದ್ದಾರೆ ಎಂಬ ವದಂತಿಗಳಿವೆ.

    Read Also: Akshay Kumar And Katrina Kaif ; ಅಕ್ಷಯ್ ಕುಮಾರ್ ಕೆನ್ನೆಗೆ ಹೊಡೆದ ವಿಷಯ ಬಿಚ್ಚಿಟ್ಟ ಕತ್ರಿನಾ ಕೈಫ್

    ಇದೀಗ ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ವರದಿಯು, ವಿಕ್ಕಿ ಕೌಶಲ್ ಅವರು ಕತ್ರೀನಾ ಕೈಫ್ ಮುಂದೆ ಹೇಗೆ ಮದುವೆಯ ಪ್ರಸ್ತಾಪವನ್ನಿಟ್ಟರು ಎಂಬುದನ್ನು ಬಿಚ್ಚಿಟ್ಟಿದೆ. ಅದರ ಪ್ರಕಾರ, ಸರ್ದಾರ್ ಉಧಮ್ ನಟ ವಿಕ್ಕಿ ಕೌಶಲ್, ಕತ್ರೀನಾಗಾಗಿ ಡಾರ್ಕ್ ಚಾಕೊಲೇಟ್ ಬ್ರೌನಿಗಳನ್ನು ಆರ್ಡರ್ ಮಾಡಿದರು. ಬಳಿಕ ಥೇಟ್ ಸಿನಿಮೀಯ ಶೈಲಿಯಲ್ಲಿ, ಕತ್ರೀನಾರನ್ನು ಭೇಟಿಯಾದ ಅವರು, ಡಾರ್ಕ್ ಚಾಕಲೇಟ್ ಬ್ರೌನಿಗಳುಳ್ಳ ಬಾಕ್ಸನ್ನು ಕತ್ರೀನಾ ಅವರ ಕೈಗಿಟ್ಟರು. ಕತ್ರೀನಾ ಕೈಫ್‍ಗೆ ಆ ಬಾಕ್ಸ್‌ ಒಳಗಡೆ ಏನಿದೆ ಎಂದು ತಿಳಿದಿರಲಿಲ್ಲ. ಬಾಕ್ಸ್ ತೆಗೆದು ನೋಡಿದಾಗ, ಅದರೊಳಗೆ “ ನೀನು ನನ್ನನ್ನು ಮದುವೆ ಆಗುತ್ತೀಯಾ” ಎಂಬ ಒಂದು ಚೀಟಿ ಮತ್ತು ಒಂದು ಉಂಗುರವನ್ನು ಕಂಡು ಕತ್ರೀನಾ ಕೈಫ್ ದಂಗಾಗಿ ಹೋದರು. ಕತ್ರೀನಾರ ಆಪ್ತ ಸ್ನೇಹಿತರೊಬ್ಬರು, ಗುರುತು ಬಹಿರಂಗ ಪಡಿಸಬಾರದು ಎಂಬ ಷರತ್ತಿನೊಂದಿಗೆ ಈ ವಿವಾಹ ಪ್ರಸ್ತಾಪದ ಕುರಿತ ಮಾಹಿತಿಯನ್ನು ನೀಡಿದ್ದಾರೆ. “ವಿಕ್ಕಿ ಹೃದಯದಲ್ಲಿ ನಿಜಕ್ಕೂ ರೋಮ್ಯಾಂಟಿಕ್ ಮತ್ತು ಸಂಪೂರ್ಣವಾಗಿ ಕತ್ರೀನಾಗೆ ಮಾರುಹೋಗಿದ್ದಾರೆ. ಅವರಿಬ್ಬರು ಪರಸ್ಪರ ಆ ಮಟ್ಟಿಗೆ ಹೇಗೆ ಹಚ್ಚಿಕೊಂಡರು ಎಂಬುದರ ಕುರಿತು ಅವರಿಬ್ಬರ ಸಾಮಾನ್ಯ ಸ್ನೇಹಿತರಿಗೂ ಶಾಕ್ ಆಗಿದೆ. ವಾಸ್ತವದಲ್ಲಿ, ಸಾಂಕ್ರಾಮಿಕ ಮತ್ತು ಲಾಕ್‍ಡೌನ್ ಅವರಿಬ್ಬರನ್ನು ಹತ್ತಿರವಾಗಿಸಿತು ಮತ್ತು ಅವರಿಬ್ಬರ ಬಾಂಧವ್ಯವನ್ನು ಗಟ್ಟಿಗೊಳಿಸಿತು. ಆದ್ದರಿಂದ ದೊಡ್ಡ ವಿವಾಹದ ಪ್ರಶ್ನೆ ಬಂದಾಗ, ವಿಕ್ಕಿ ಸಂಪೂರ್ಣ ಸಿನಿಮೀಯ ಶೈಲಿಯಲ್ಲಿ ಅದನ್ನು ಮುಂದಿಟ್ಟರು” ಎಂದು ಅವರು ಹೇಳಿದ್ದಾರೆ.



    Read Also: Yami Gautam: ಅಷ್ಟು ಮುದ್ದು ಮುಖದ ಈ ಚೆಲುವೆಗೆ ಗುಣವೇ ಆಗದ ಖಾಯಿಲೆ! ಛೆ, ಅನ್ಯಾಯ

    ತನ್ನ ಮದುವೆಯ ಸಿದ್ಧತೆಗಾಗಿ ಕತ್ರೀನಾ ಕೈಫ್ ದೀರ್ಘ ವಿರಾಮ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಅವರು , ಅಕ್ಷಯ್ ಕುಮಾರ್ ಮತ್ತು ರೋಹಿತ್ ಶೆಟ್ಟಿ ಅವರೊಂದಿಗೆ, ತಮ್ಮ ಹೊಸ ಚಿತ್ರ ಸೂರ್ಯವಂಶಿಯ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ಆ ಚಿತ್ರ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಪ್ರಚಾರ ಕಾರ್ಯಗಳು ನಿಲ್ಲುತ್ತವೆ, ಆಗ ಕತ್ರೀನಾ ಕೈಫ್‍ಗೆ ಮದುವೆ ಸಿದ್ಧತೆ ಮಾಡಿಕೊಳ್ಳಲು ಬಿಡುವು ಸಿಗುತ್ತದೆ ಎನ್ನುತ್ತಿವೆ ವದಂತಿಗಳು. ಈ ಮದುವೆಯ ಸುದ್ದಿ ನಿಜವೋ ಸುಳ್ಳೋ ಎಂಬುದನ್ನು ತಿಳಿಯಲು ಕತ್ರೀನಾ ಮತ್ತು ವಿಕ್ಕೀ ಕೌಶಲ್ ಇಬ್ಬರ ಅಭಿಮಾನಿಗಳೂ ಕಾತರರಾಗಿದ್ದಾರೆ.
    First published: