ಮಾಸ್ಟರ್ ಬ್ಲಾಸ್ಟರ್(Master Blaster) ಸಚಿನ್ ತೆಂಡೂಲ್ಕರ್(Sachin Tendulkar) ಮಗಳು ಯಾವ ಸಿನಿಮಾ ನಟಿಯರಿಗೆ ಕಡಿಮೆ ಇಲ್ಲ.ಸಾರಾ(Sara) ಅವರನ್ನು ಕಂಡ ನೆಟ್ಟಿಗರು ರೂಪಸಿ ಸುಮ್ಮನೇ ಹೇಗಿರಲಿ ನಿನ್ನನ್ನೇ ನೋಡುತ ಕೂತು ಅಂತ ಹೇಳುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ(Celebrity)ಯೂ ಆಗಿದ್ದಾರೆ. ಅವರಿಗೆ ಈಗಾಗಲೇ ಫ್ಯಾನ್ ಫಾಲೋವರ್ಸ್(Followers) ಇದ್ದಾರೆ. ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ನೈಟ್ಡೇಟ್ (Night Date) ಸ್ಟೋರಿ ಮೂಲಕ ಸಂಚಲನ ಮೂಡಿಸಿದ್ದ ಸಾರಾ (Sara Tendulkar), ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ಆಟದಿಂದ ಅಭಿಮಾನಿಗಳನ್ನು ಸಂಪಾದಿಸಿದರೆ, ಸಾರಾ ತಮ್ಮ ಸೌಂದರ್ಯ ಮತ್ತು ಸುಂದರ ಫೋಟೋಗಳಿಂದ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ಇತ್ತೀಚೆಗೆ ಇವರ ಲವ್ ಸ್ಟೋರಿ ಕೂಡ ಸಖತ್ ಸದ್ದು ಮಾಡಿತ್ತು. ಸಾರಾ ತೆಂಡೂಲ್ಕರ್ ಅವರ ಬಗ್ಗೆ ಕೆಲ ಗಾಸಿಪ್(Gossip)ಗಳು ಕೇಳಿಬಂದಿದ್ದವು. ತಾರಾ ಸಿನಿಮಾ ರಂಗಕ್ಕೆ ಕಾಲಿಟ್ಟೆ ಬಿಟ್ಟರು ಎಂಬ ಮಾತುಗಳು ಕೇಳಿ ಬಂದಿತ್ತು. ರಣವೀರ್ ಸಿಂಗ್(Ranveer Singh) ಅವರ ಸಿನಿಮಾದಲ್ಲಿ ಸಾರಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಅಂತ ಸುದ್ದಿಯಾಗಿತ್ತು. ಆದರೆ, ಆ ಸುದ್ದಿಗಳೆಲ್ಲ ಈಗ ಸುಳ್ಳಾಗಿದೆ. ಸಾರಾ ತೆಂಡೂಲ್ಕರ್ ಸಿನಿಮಾ ರಂಗಕ್ಕೆ ಕಾಲಿಟ್ಟಿಲ್ಲವಾದರೂ ಮಾಡೆಲಿಂಗ್(Modeling)ಗೆ ಪದಾರ್ಪಣೆ ಮಾಡಿದ್ದಾರೆ. ಸಾರಾ, ಜನಪ್ರಿಯ ಬಟ್ಟೆಗಳ ಬ್ರ್ಯಾಂಡ್ನ ಜಾಹೀರಾತಿನಲ್ಲಿ ನಟಿಸಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎಜಿಯೋ ಉಡುಪಿನ ಬ್ರ್ಯಾಂಡ್ಗೆ ಸಾರಾ ಮಾಡೆಲ್!
ಪ್ರಖ್ಯಾತ ಉಡುಪು ಬ್ರ್ಯಾಂಡ್ ಎಜಿಯೊನ ಹೊಸ ಉಡುಪು ಶ್ರೇಣಿಯನ್ನು ಹೊರತಂದಿದ್ದು ಅದಕ್ಕಾಗಿ ಸಾರಾ ತೆಂಡೂಲ್ಕರ್ ಮಾಡೆಲಿಂಗ್ ಮಾಡಿದ್ದಾರೆ. ಸಾರಾ ತೆಂಡೂಲ್ಕರ್ ಜೊತೆಗೆ ನಟಿ ಬನಿತಾ ಸಂಧು ಹಾಗೂ ಟಾನಿಯಾ ಶ್ರಾಫ್ ಸಹ ಇದ್ದಾರೆ. ಮೂವರು ಒಟ್ಟಿಗೆ ವಿಡಿಯೋನಲ್ಲಿ ಕಾಣಿಸಿಕೊಂಡಿದ್ದಾರೆ.ಇದು ಸಾರಾ ತೆಂಡೂಲ್ಕರ್ ಅವರ ಮೊದಲ ಜಾಹೀರಾತಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಡೆಲಿಂಗ್, ನಟನೆ ಮಾಡುವ ಸಾಧ್ಯತೆ ಇದೆ. ಬಾಲಿವುಡ್ಗೆ ಬಂದರೂ ಬರಬಹುದು ಸಾರಾ ಎಂಬ ಗುಸುಗುಸು ಕೇಳಿಬಂದಿದೆ.
ಇದನ್ನು ಓದಿ : ಡಿ.9ಕ್ಕೆ ರಾಜ್ಯದ 30 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ RRR ಟ್ರೈಲರ್ ಬಿಡುಗಡೆ: ಥಿಯೇಟರ್ಗಳ ಲಿಸ್ಟ್ ಇಲ್ಲಿದೆ!
ಇನ್ಸ್ಟಾಗ್ರಾಂನಲ್ಲಿ 1.6 ಮಿಲಿಯನ್ ಫಾಲೋವರ್ಸ್!
ಈವರೆಗೂ ಸಾರಾ ಅವರನ್ನು ಸಚಿನ್ ತೆಂಡುಲ್ಕರ್ ಪುತ್ರಿ ಎನ್ನುವ ಕಾರಣಗಳಿಂದಲೇ ಹೆಚ್ಚಾಗಿ ಗುರುತಿಸುತ್ತಿದ್ದರು. ಆದರೆ, ಈ ವಿಡಿಯೋ ನೋಡಿದ ಬಳಿಕ ತನ್ನದೇ ಆದ ವ್ಯಕ್ತಿತ್ವವನ್ನು ಮಾಡಿಕೊಳ್ಳುವ ಹಾದಿಯಲ್ಲಿ ದಿಟ್ಟವಾಗಿ ಮುನ್ನಡೆದಿದ್ದಾರೆ. ಈ ವರ್ಷದ ಆರಂಭದಲ್ಲಿಯೂ ಸಾರಾ ತಮ್ಮ ಇನ್ಸ್ ಟಾಗ್ರಾಮ್ ಪುಟದಲ್ಲಿ ಜಾಹೀರಾತೊಂದನ್ನು ಶೇರ್ ಮಾಡಿದ್ದರು. ಜಿಮ್ ವೇರ್ ಬ್ರ್ಯಾಂಡ್ ಗೆ ಪೋಟೋಶೂಟ್ ಮಾಡಿಸಿರುವ ಚಿತ್ರವನ್ನು ತಮ್ಮ ಹ್ಯಾಂಡಲ್ ನಲ್ಲಿ ಪ್ರಕಟಿಸಿದ್ದರು. ಕಳೆದ ತಿಂಗಳು, ಬ್ಲಾಕ್ ಬಾರ್ಡೋಟ್ ಲೆಹೆಂಗಾ ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಈ ಚಿತ್ರ ಸಾಮಾಜಾಕಿ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.
ಇದನ್ನು ಓದಿ: ಇಷ್ಟೆಲ್ಲಾ ಅದ್ಧೂರಿಯಾಗಿ ಮದ್ವೆಯಾದ್ರೂ, ಹನಿಮೂನ್ ಮಾತ್ರ ಇಲ್ವಂತೆ: ಏನಾಗಿದ್ಯೋ ಏನೋ..!
ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿ ಶಿಕ್ಷಣ ಪಡೆದ ಅವರು ಇಂಗ್ಲೆಂಡ್ನ ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ನಿಂದ ಮೆಡಿಸಿನ್ನಲ್ಲಿ ಪದವಿ ಪಡೆದರು. ಆದರೆ, ಫ್ಯಾಶನ್ ಡಿಸೈನಿಂಗ್ ಮತ್ತು ಮಾಡೆಲಿಂಗ್ ಬಗ್ಗೆ ಒಲವು ಬೆಳೆದಿದೆ.
ಶುಭ್ಮನ್ ಗಿಲ್ ಜೊತೆ ಕೇಳಿ ಬಂದಿತ್ತು ಸಾರಾ ಹೆಸರು!
ಟೀಂ ಇಂಡಿಯಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಓಪನರ್ ಶುಭಮನ್ ಗಿಲ್ ಮತ್ತು ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಶುಭ್ಮನ್ ಮತ್ತು ಸಾರಾ ಒಂದೇ ಕ್ಯಾಪ್ಷನ್ ಜೊತೆ ತಮ್ಮ ಫೋಟೋವನ್ನು ಹಂಚಿಕೊಂಡ ಕ್ಷಣದಿಂದ ಈ ಸಂಬಂಧದ ವದಂತಿಗಳನ್ನು ಹುಟ್ಟು ಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ