Sara Ali Khan: ಮನೆ ಅಳಿಯನಾಗುವವನನ್ನೇ ವರಿಸುತ್ತೇನೆಂದ ಸಾರಾ ಅಲಿ ಖಾನ್..! ಯಾಕೆ ಗೊತ್ತಾ?

ತಾಯಿ ಅಮೃತಾ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಾ ತಾಯಿಯ ಸಹಾಯವಿಲ್ಲದೆ ನನ್ನ ಉಡುಪಿನ ಜೊತೆ ಬಳೆಗಳನ್ನು ಮ್ಯಾಚ್ ಮಾಡಿಕೊಂಡು ಒಂದು ಸಂದರ್ಶನಕ್ಕೆ ಬರುವುದು ಕೂಡ ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ ಸಾರಾ

ಸಾರಾ ಆಲಿ ಖಾನ್

ಸಾರಾ ಆಲಿ ಖಾನ್

  • Share this:

ಸಾರಾ ಅಲಿಖಾನ್ (Sarah Ali khan)  ಪ್ರಸ್ತುತ ತಮ್ಮ ವೃತ್ತಿ ಜೀವನವನ್ನು (Career) ಆನಂದಿಸುತ್ತಿದ್ದಾರೆ. ಅವರು ಇತ್ತೀಚೆಗೆ, ಅಂತ್ರಂಗಿ ರೇ (Athrangi Ray) ಸಿನಿಮಾದಲ್ಲಿ ಅಕ್ಷಯ್ ಕುಮಾರ್ (Akshay Kumar) ಮತ್ತು ಧನುಷ್ (Dhanush) ಜೊತೆ ಅಭಿನಯಿಸಿದ್ದರು. ಇನ್ನು ಸಾರಾ ಅವರ ವೈಯುಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ, ಅವರು ಸದ್ಯಕ್ಕೆ ಯಾರ ಜೊತೆಗೂ ಡೇಟಿಂಗ್ ನಡೆಸುತ್ತಿಲ್ಲ. ಇತ್ತೀಚಿನ ಸಂದರ್ಶನವೊಂದರ ಸಂದರ್ಭದಲ್ಲಿ ಸಾರಾ ಭವಿಷ್ಯದಲ್ಲಿ ತಮ್ಮ ಪತಿಯಾಗುವವನ (Future Husband) ಕುರಿತು ಹೇಳಿಕೊಂಡಿದ್ದಾರೆ. ಅವರು ತಮ್ಮ ಮದುವೆಗೆ (Marriage) ಸಂಬಂಧಿಸಿದ ಒಂದು ಷರತ್ತನ್ನು ಬಹಿರಂಗಪಡಿಸಿದ್ದಾರೆ. ಅದು ಅವರ ತಾಯಿಗೆ(Mother)  ಸಂಬಂಧಿಸಿದ್ದಾಗಿದೆ.


ಭವಿಷ್ಯದ ಪತಿ, ತಾಯಿ ಅಮೃತಾ ಜೊತೆ ವಾಸಿಸಸಲು ಒಪ್ಪಬೇಕೆಂಬುದು ಸಾರಾ ಬಯಕೆ
ಸಾರಾ ಅಲಿ ಖಾನ್ , ತನ್ನ ಹೆತ್ತವರಾದ ಸೈಫ್ ಅಲಿಖಾನ್ ಮತ್ತು ಅಮೃತಾ ಸಿಂಗ್ ಇಬ್ಬರ ಜೊತೆಗೂ ಅತ್ಯಂತ ಅನ್ಯೋನ್ಯವಾಗಿದ್ದಾರೆ. ಸಾರಾ ಅವರು ತಮ್ಮ ತಾಯಿಯ ಸಾಂಗತ್ಯವನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದಾರೆ ಎಂದರೆ, ಭವಿಷ್ಯದಲ್ಲಿ ತಮ್ಮನ್ನು ಮದುವೆಯಾಗುವ ವ್ಯಕ್ತಿ ಕೂಡ ತಾಯಿ ಅಮೃತಾ ಜೊತೆ ವಾಸಿಸಬೇಕು ಎಂಬುವುದು ಅವರ ಆಸೆ. ಮಾಧ್ಯಮದ ಜೊತೆಗಿನ ಸಂದರ್ಶನ ಒಂದರಲ್ಲಿ ಈ ಕುರಿತು ಸಾರಾ ಅಲಿ ಖಾನ್ ಮಾತನಾಡಿದ್ದಾರೆ. “ ನಮ್ಮ ಮನೆಗೆ ಬಂದು ಮತ್ತು ನನ್ನ ತಾಯಿಗೆ ಜೊತೆಗೆ ವಾಸಿಸಬಲ್ಲ ವ್ಯಕ್ತಿಯನ್ನು ನಾನು ಮದುವೆಯಾಗಿತ್ತೇನೆ. ನಾನು ಯಾವತ್ತೂ ಆಕೆಯನ್ನು ಬಿಟ್ಟು ಹೋಗುವುದಿಲ್ಲ” ಎಂದು ಸಾರಾ ಹೇಳಿದ್ದಾರೆ.


ಇದನ್ನೂ ಓದಿ: Sara Ali Khan: ಅಂಗರಕ್ಷಕ ಮಾಡಿದ್ದ ತಪ್ಪಿಗೆ ಕ್ಷಮೆ ಕೇಳಿ ಹೃದಯ ಗೆದ್ದ ಸಾರಾ

ತಮ್ಮ ಮತ್ತು ತಾಯಿ ಅಮೃತಾ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಾ, “ ತಾಯಿಯ ಸಹಾಯವಿಲ್ಲದೆ, ನನ್ನ ಉಡುಪಿನ ಜೊತೆ ಬಳೆಗಳನ್ನು ಮ್ಯಾಚ್ ಮಾಡಿಕೊಂಡು ಒಂದು ಸಂದರ್ಶನಕ್ಕೆ ಬರುವುದು ಕೂಡ ನನ್ನಿಂದ ಸಾಧ್ಯವಿಲ್ಲ. ‘ನಿನ್ನ ದುಪಟ್ಟಾದ ಅಂಚಿನಲ್ಲಿ ಹಸಿರು ಬಣ್ಣದ ಚಲಕ್ ಇದೆ , ದಯವಿಟ್ಟು ಕೈಗೆ ಹಸಿರು ಬಳೆಗಳನ್ನು ಹಾಕಿಕೋ’ ಎಂದು ತಾಯಿ ಹೇಳುವವರೆಗೆ, ನಾನು ಸಂದರ್ಶನಕ್ಕೆ ಹೊರಡುವುದೇ ಇಲ್ಲ. ನನ್ನ ತಾಯಿಯಿಂದ ದೂರ ಓಡುವ ಯೋಗ್ಯತೆ ನನಗಿಲ್ಲ, ನಾನೆಲ್ಲೇ ಓಡಿದರೂ, ಪ್ರತೀ ದಿನ ಅದೇ ಮನೆಗೆ ಮರಳಬೇಕು” ಎಂದು ಸಾರಾ ಅಲಿ ಖಾನ್ ಹೇಳಿದ್ದಾರೆ.


ಸಾರಾ ಅವರ ಅತ್ರಂಗಿ ರೇ ಸಿನಿಮಾ ನೋಡಿ ಅತ್ತ ತಾಯಿ ಅಮೃತಾ ಸಿಂಗ್ ಮತ್ತು ತಂದೆ ಸೈಫ್ ಅಲಿ ಖಾನ್
ಡಿಸೆಂಬರ್ 24 ರಂದು ಸಾರಾ ಅಲಿ ಖಾನ್ ಅಭಿನಯದ ಅತ್ರಂಗಿ ರೇ ಸಿನಿಮಾ ಡಿಸ್ನಿ ಪ್ಲಸ್ ಹಾಟ್‍ಸ್ಟಾರ್‍ನಲ್ಲಿ ಬಿಡುಗಡೆ ಆಯಿತು. ಆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸಾರಾ ಅವರದ್ದು ವಿಭಿನ್ನವಾದ ಪಾತ್ರ. ಆ ಸಿನಿಮಾದಲ್ಲಿ ಸಾರಾ ಅವರು ನಿರ್ವಹಿಸಿರುವ ರಿಂಕು ಪಾತ್ರ, ಬಾಲ್ಯದ ಆಘಾತದ ಜೊತೆ ಮಾತ್ರವಲ್ಲ, ಇತರ ಮಾನಸಿಕ ಆರೋಗ್ಯ ಸಮಸ್ಯೆಗಳ ಜೊತೆ ಕೂಡ ಹೋರಾಡುತ್ತದೆ. ಮಾಧ್ಯಮದ ಜೊತೆಗಿನ ಸಂದರ್ಶನ ಒಂದರಲ್ಲಿ, ತಮ್ಮ ಸಿನಿಮಾದ ಕುರಿತ ಪ್ರತಿಕ್ರಿಯೆ ಬಗ್ಗೆ ಮತ್ತು ತಮ್ಮ ಹೆತ್ತವರಾದ ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ ಅವರಲ್ಲಿ, ಯಾರು ಕಠಿಣ ವಿಮರ್ಶಕರು ಎಂಬುದನ್ನು ಬಹಿರಂಗಪಡಿಸಿದ್ದಾರೆ.


ಅಮ್ಮ ತುಂಬಾ ಭಾವುಕರು ಮತ್ತು ಯಾವಾಗಲೂ ಹಾಗೆಯೇ ಇರುತ್ತಾರೆ ಎಂದು ನನಗೆ ಅನಿಸುತ್ತದೆ. ಮತ್ತು ನನ್ನ ತಂದೆ ಬಹಳ ಗಟ್ಟಿ ಮನಸ್ಸಿನ ಮತ್ತು ಅತ್ಯಾಧುನಿಕ ಸಂಭಾವಿತ ವ್ಯಕ್ತಿ. ಆದರೆ ನಾನು ತಂದೆ ಮತ್ತು ತಾಯಿ ಇಬ್ಬರೂ ಅಳುವಂತೆ ಮಾಡಿದ್ದೇನೆ ಎಂಬುವುದು ನನಗೆ ಗೊತ್ತು. ಹೆತ್ತವರು ನಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ ಎಂಬ ಭಾವನೆಯನ್ನು ಅನುಭವಿಸುವುದು ವಿಚಿತ್ರವಾಗಿರುತ್ತದೆ.


ಇದನ್ನೂ ಓದಿ: Sara Ali Khan: ಕೇದಾರನಾಥಕ್ಕೆ ಭೇಟಿ ನೀಡಿದ ನಟಿ ಸಾರಾ ಅಲಿ ಖಾನ್​​; ಧರ್ಮವನ್ನು ಉಲ್ಲೇಖಿಸಿ ಟ್ರೋಲ್​​​​​​

ಮತ್ತು ನನ್ನ ಸಹೋದರ ಇಬ್ರಾಹಿಂನ ಪ್ರತಿಕ್ರಿಯೆ ಅವೆಲ್ಲದ್ದಕ್ಕಿಂತ ಮೇಲಾಗಿತ್ತು. ನಮ್ಮ ನಡುವಿನ ಸಮೀಕರಣ ಎಂದರೆ ಜೊತೆಗೆ ಆಡುವುದು ಮತ್ತು ಪರಸ್ಪರ ತಮಾಷೆ ಮಾಡಿಕೊಳ್ಳುವುದು, ಕಾಲೇಜಿನಿಂದ ಇಲ್ಲಿಯವರೆಗೆ ನಾನು ಅವನ ಗೋಲು ಮೋಲು ಅಕ್ಕ. ಆದರೆ ಈಗ ಅವನು ನನ್ನ ಬಗ್ಗೆ ಹೆಮ್ಮೆ ಪಡುತ್ತಾನೆ ಅಥವಾ ಅವಳು ನನ್ನ ಅಕ್ಕ ಎಂದು ಎಲ್ಲರ ಬಳಿ ಹೇಳಿಕೊಳ್ಳುತ್ತಾನೆ ಕೂಡ. ಹಾಗಾಗಿ, ನನಗೆ ತುಂಬಾ ಸಂತೋಷವಾಗುತ್ತದೆ” ಎಂದು ಸಾರಾ ಅಲಿ ಖಾನ್ ಹೇಳಿದ್ದಾರೆ. ಸಾರಾ ಅಲಿ ಖಾನ್ ಅವರು , ವಿಕ್ಕಿ ಕೌಶಲ್ ಅವರ ಜೊತೆ, ಲಕ್ಷ್ಮಣ್ ಉಟೇಕರ್ ಅವರ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ.

Published by:vanithasanjevani vanithasanjevani
First published: