ಇತ್ತೀಚೆಗಷ್ಟೇ ಬಾಲಿವುಡ್ (Bollywood)ಸಿನಿಮಾ ‘ಅತ್ರಂಗೀ ರೇ’ಯ ಟ್ರೈಲರ್ ಬಿಡುಗಡೆ ಆಗಿತ್ತು. ಅಕ್ಷಯ್ ಕುಮಾರ್, ಧನುಷ್ ಮತ್ತು ಸಾರಾ ಅಲಿ ಖಾನ್ ಈ ಸಿನಿಮಾದ ಮುಖ್ಯಪಾತ್ರದಲ್ಲಿದ್ದಾರೆ. ಬಾಲಿವುಡ್ನ ಬ್ಯುಸಿ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧನುಷ್ (Dhanush)ಇದ್ದರೂ ಕೂಡ, ಚಿತ್ರದ ಟ್ರೈಲರ್ನಲ್ಲಿ(trailer) ಹೆಚ್ಚು ಗಮನ ಸೆಳೆದಿರುವುದು ನಾಯಕಿ ಸಾರಾ ಅಲಿ ಖಾನ್. ಟ್ರೈಲರ್ ಬಿಡುಗಡೆಯಾಗಿದ್ದೇ ತಡ, ಸಾರಾ ನಟನೆಯ (performance)ಬಗ್ಗೆ ಸಿಕ್ಕಾಪಟ್ಟೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಸಿನಿಮಾದಲ್ಲಿ ಸಾರಾ ನಿರ್ವಹಿಸಿರುವ ರಿಂಕು ಪಾತ್ರ ವೀಕ್ಷಕರಿಗೆ (audience)ಸಿಕ್ಕಾಪಟ್ಟೆ ಮೆಚ್ಚುಗೆ ಆಗಿದ್ದು, ಸಾರಾ ಅವರ ಮೇಲೆ ಅಭಿಮಾನಿಗಳು ಹೊಗಳಿಕೆಯ ಸುರಿಮಳೆ ಸುರಿಸುತ್ತಿದ್ದಾರೆ.
ಹಾಟ್ಸ್ಟಾರ್ನಲ್ಲಿ ಬಿಡುಗಡೆ
ಅತ್ರಂಗೀ ರೇ ಸಿನಿಮಾವನ್ನು ಆನಂದ್ ಎಲ್ ರೈ ನಿರ್ದೇಶಿಸುತ್ತಿದ್ದು, ಅದು ಡಿಸೆಂಬರ್ 24ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿದೆ. ಟ್ರೈಲರ್ನಲ್ಲಿ, ರಿಂಕು ಅಂದರೆ ಸಾರಾ, ಅವರಿಗೆ ಒತ್ತಾಯಪೂರ್ವಕವಾಗಿ ಧನುಷ್ ಜೊತೆ ಮದುವೆ ಮಾಡಿಸಲಾಗುತ್ತದೆ , ಆದರೆ ಸಾರಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದು ಆತನ ಜೊತೆ ಬದುಕಲು ಬಯಸುವುದನ್ನು ನೋಡಬಹುದು.
ಇದನ್ನೂ ಓದಿ: Happy Birthday Sara Ali Khan: 96 ಕೆಜಿ ಇದ್ದ ಸಾರಾ ಅಲಿ ಖಾನ್ ತೂಕ ಇಳಿಸಿಕೊಂಡ Weight Loss ಜರ್ನಿ ಇಲ್ಲಿದೆ..!
ಸಾರಾ ಷರತ್ತು
ಈ ಸಿನಿಮಾದಲ್ಲಿ ಸಾರಾ ಮದುವೆಯ ಕಥೆ ಆಸಕ್ತಿದಾಯಕವಾಗಿರಬಹುದು, ಆದರೆ ನಿಜ ಜೀವನದಲ್ಲಿ ತಮ್ಮ ಮದುವೆಯ ಕುರಿತು ಸಾರಾ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ಮನದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಸಾರಾ ಈಗ ತಾಯಿ ಮತ್ತು ತಮ್ಮನ ಜೊತೆ ವಾಸಿಸುತ್ತಿದ್ದಾರೆ. ಸಾರಾಗೆ ತಮ್ಮ ತಾಯಿಯನ್ನು ಯಾವತ್ತೂ ಬಿಟ್ಟಿರಲು ಇಷ್ಟವಿಲ್ಲವಂತೆ. ಹಾಗಾಗಿ, ಮುಂದೆ ತನ್ನನ್ನು ಮದುವೆಯಾಗುವ ಹುಡುಗ ಕೂಡ, ತಮ್ಮ ಮನೆಯಲ್ಲಿಯೇ ಅಂದರೆ ತನ್ನ ತಾಯಿಯ ಜೊತೆ ಬಂದು ನೆಲೆಸಬೇಕು ಎಂಬುವುದು ಸಾರಾ ಅಲಿ ಖಾನ್ ಅವರ ಷರತ್ತು.
ಪಾತ್ರ ತುಂಬಾ ವಿಭಿನ್ನ
ಮದುವೆಯಾದರೂ ಕೂಡ ತಾನು ತಾಯಿಯನ್ನು ಬಿಟ್ಟು ವಾಸಿಸುವುದಿಲ್ಲ ಎಂದು ಸಾರಾ ತಿಳಿಸಿದ್ದಾರೆ. ಸಾರಾಗೆ ತಮ್ಮ ತಾಯಿ ಎಂದರೆ ತುಂಬಾ ಪ್ರೀತಿ, ಅವರನ್ನು ತುಂಬಾ ಹಚ್ಚಿಕೊಂಡಿದ್ದಾರೆ. ಅದನ್ನು ಅವರಿಬ್ಬರ ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.
ಸಾರಾ ಅಲಿ ಖಾನ್ ತಮ್ಮ ಅತ್ರಂಗೀ ರೇ ಸಿನಿಮಾದ ಬಗ್ಗೆ ಮಾತನಾಡುತ್ತಾ, ತಮ್ಮ ಪಾತ್ರ ತುಂಬಾ ವಿಭಿನ್ನವಾಗಿದೆ ಮತ್ತು ತಮಗದು ಹೊಸದು ಎಂದು ಹೇಳಿದ್ದಾರೆ. ಅವರು ಅತ್ರಂಗೀ ರೇ ಸಿನಿಮಾದಲ್ಲಿ ಒಬ್ಬ ಬಿಹಾರಿ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಧನುಷ್ ನಿರ್ವಹಿಸುತ್ತಿರುವ ಪಾತ್ರದ ಹೆಸರು ವಿಶು. ಆದರೆ ಅಕ್ಷಯ್ ಕುಮಾರ್ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಚಿತ್ರ ತಂಡ ಯಾವುದೇ ಮಾಹಿತಿಯನ್ನು ಈವರೆಗೆ ಬಹಿರಂಗಪಡಿಸಿಲ್ಲ.
2 ವಿಭಿನ್ನ ಸಂಸ್ಕೃತಿಯುಳ್ಳ ಹುಡುಗ ಹುಡುಗಿಯ ನಡುವಿನ ಪ್ರೇಮ ಕಥೆ ಹೊಂದಿರುವ ಈ ರೋಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ, ಸಾರಾ ಅಲಿ ಖಾನ್ ಅಕ್ಷಯ್ ಕುಮಾರ್ ಮತ್ತು ಧನುಷ್ ಇಬ್ಬರನ್ನೂ ಪ್ರೇಮಿಸುವುದನ್ನು ನೋಡಬಹುದಾಗಿದೆ. ಈ ಸಿನಿಮಾಗೆ ಹಿಮಾಂಶು ಶರ್ಮಾ ಚಿತ್ರ ಕಥೆ ಬರೆದಿದ್ದಾರೆ. ಅತ್ರಂಗೀ ರೇ ಸಿನಿಮಾ ಭೂಷಣ್ ಕುಮಾರ್ ಅವರ ಟಿ -ಸಿರೀಸ್, ಕಲರ್ ಯಲ್ಲೋ ಪ್ರೊಡಕ್ಷನ್ಸ್ ಮತ್ತು ಕೇಪ್ ಆಫ್ ಗುಡ್ ಫಿಲ್ಮ್ಸ್ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿದೆ.
ನನ್ನನ್ನು ಕ್ಷಮಿಸಿ ಎಂದ ಸಾರ
ಸಾರಾ ಅಲಿ ಖಾನ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಅತ್ರಂಗಿ ರೇ' ಪ್ರಚಾರದಲ್ಲಿ ನಿರತರಾಗಿದ್ದಾರೆ. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾರಾ ಅವರು ಚಿತ್ರದ 'ಚಕ ಚಕ್' ಹಾಡಿನ ಲಾಂಚ್ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು, ಕಾರ್ಯಕ್ರಮ ಮುಗಿದ ಬಳಿಕ ಕಾರಿನತ್ತ ಹೊರಟ ಸಾರಾ ನಗುತ್ತಲೇ ಬರುತ್ತಿದ್ದರು, ಆಗ ಕ್ಯಾಮಾರ ಹೊತ್ತು ಅನೇಕರು ಒಂದು ಪೋಸ್ ಗಾಗಿ ಹಿಂಬಾಲಿಸುತ್ತಿದ್ದರು, ಆ ವೇಳೆ ಸಾರಾಳ ಅಂಗರಕ್ಷಕ ಅವರನ್ನು ತಳ್ಳಿದ್ದಾನೆ. ಇದ್ದರಿಂದ ಕೋಪಗೊಂಡ ಸಾರಾ ಬಿಸಿ ಸಂಭಾಷಣೆ ನಡೆಸಿದ್ದರು.
ಇದನ್ನೂ ಓದಿ: Sara Ali Khan: ನನ್ನ ತಾಯಿ ಅಶ್ಲೀಲ ವೆಬ್ಸೈಟ್ ನಡೆಸುತ್ತಿದ್ದರು ಎಂದು ವಿಚಲಿತಳಾಗಿದ್ದೆ ಎಂದ ಸಾರಾ ಅಲಿ ಖಾನ್!
ಇದು ಸ್ಪಷ್ಟ ಕಾರಣಗಳಿಗಾಗಿ, ಸಾರಾಗೆ ಅವರು ಮಾಡಿದು ಸರಿ ಹೋಗಲಿಲ್ಲ, ಕೂಡಲೇ ಅವರನ್ನು ಗದರಿಸಿ, "ಢಕ್ಕಾ ಮತ್ ದೀಜಿಯೇ." ಎಂದು ಹೇಳುತ್ತಾರೆ. ಅಲ್ಲದೇ ಕಾರಿನಲ್ಲಿ ಹೋಗುವಾಗ ಐಯಮ್ ಸಾರಿ ಎಂದು ಕ್ಷಮೆಯಾಚಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಡಿಯೊವೊಂದರಲ್ಲಿ, ಸಾರಾ ತನ್ನ ಕಾರಿನ ಬಳಿ ನಿಂತು ಯಾರನ್ನೂ ತಳ್ಳಬೇಡಿ ಎಂದು ವ್ಯಕ್ತಿಯೊಬ್ಬನಿಗೆ ಹೇಳುತ್ತಿರುವುದು ಕಂಡುಬಂದಿದೆ ಮತ್ತು ತನ್ನ ಸುತ್ತಲಿರುವವರಲ್ಲಿ ಕ್ಷಮೆಯನ್ನೂ ಕೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ