Sara Ali Khan: ನನ್ನ ತಾಯಿ ಅಶ್ಲೀಲ​ ವೆಬ್​ಸೈಟ್​ ನಡೆಸುತ್ತಿದ್ದರು ಎಂದು ವಿಚಲಿತಳಾಗಿದ್ದೆ ಎಂದ ಸಾರಾ ಅಲಿ ಖಾನ್​!

Saif Ali Khan-Amrita Singh: ಇತ್ತೀಚಿನ ಸಂದರ್ಶನವೊಂದರಲ್ಲಿ, ನಟಿ ಸಾರಾ ಅಲಿ ಖಾನ್​ ತಾನು ಚಿಕ್ಕವಳಿದ್ದಾಗ ತನ್ನ ತಂದೆ ಸೈಫ್ ಮತ್ತು ತಾಯಿ ಅಮೃತಾ ಬಗ್ಗೆ ಏನೆಲ್ಲಾ ಭಾವಿಸಿದ್ದೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.

Sara Ali Khan / ಸಾರಾ ಅಲಿ ಖಾನ್​

Sara Ali Khan / ಸಾರಾ ಅಲಿ ಖಾನ್​

 • Share this:
  ಸಾರಾ ಅಲಿ ಖಾನ್ (Sara Ali Khan) ಬಾಲಿವುಡ್‌ಗೆ (Bollywood) ಪಾದಾರ್ಪಣೆ ಮಾಡಿ ಸುಮಾರು ಮೂರು ವರ್ಷಗಳಾಗಿವೆ. ಹಿಂದಿ ಚಲನಚಿತ್ರ ಕೇದಾರನಾಥ್‌ ಮೂಲಕ ತೆರೆ ಮೇಲೆ ಪಾದಾರ್ಪಣೆ ಮಾಡಿದ ನಟಿ ಈಕೆ, ತನ್ನ ಮೊದಲ ಚಲನಚಿತ್ರದಲ್ಲಿಯೇ ತನ್ನ ಸರಳತೆ ಮತ್ತು ವಿಭಿನ್ನ ಉಪಸ್ಥಿತಿಯಿಂದ ಎಲ್ಲರ ಹೃದಯವನ್ನು ಗೆದ್ದರು. ನಂತರ ಅವರು ರಣವೀರ್ ಸಿಂಗ್ (Ranveer singh) ಜೊತೆ ‘‘ಸಿಂಬಾ’’, ಕಾರ್ತಿಕ್ ಆರ್ಯನ್ (Kartik Aryan) ಜೊತೆ ‘‘ಲವ್ ಆಜ್ ಕಲ್’’ ಮತ್ತು ವರುಣ್ ಧವನ್ (Varun Dhawan) ಜೊತೆ ‘‘ಕೂಲಿ ನಂ 1’’ ನಲ್ಲಿ ಕಾಣಿಸಿಕೊಂಡರು. ಸಾರಾ ವೃತ್ತಿಪರವಾಗಿ ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ. ಇನ್ನು ಅನೇಕ ಸಿನಿಮಾಗಳು ಸಾರಾ ಕೈಯಲ್ಲಿದ್ದು, ಒಂದೊಂದಾಗಿ ವೀಕ್ಷಕರಿಗೆ ಒಪ್ಪಿಸಲಿದ್ದಾರೆ.

  ಅಂದಹಾಗೆಯೇ ಸಾರಾ ಅಲಿ ಖಾನ್​ ಅವರು ಸೈಫ್ ಅಲಿ ಖಾನ್ (Saif Ali Khan) ಮತ್ತು ಅಮೃತಾ ಸಿಂಗ್ (Amruth Singh) ಅವರ ಮಗಳಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ, ಆದರು ಪೋಷಕರಂತೆಯೇ ತಾನು ಸಮಾಜದಲ್ಲಿ ತನ್ನದೇ ಆದ ಸ್ಥಾನ ಮತ್ತು ಗುರಿ ತಲುಪಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಅತರಂಗಿ ರೇ ಸಿನಿಮಾದಲ್ಲಿ ನಟಿಸುತ್ತಿದ್ದು, ಬೇಗನೇ ಅಭಿಮಾನಿಗಳೆದುರು ಬರಲಿದ್ದಾರೆ.

  ಇತ್ತೀಚಿನ ಸಂದರ್ಶನವೊಂದರಲ್ಲಿ, ನಟಿ ಸಾರಾ ಅಲಿ ಖಾನ್​ ತಾನು ಚಿಕ್ಕವಳಿದ್ದಾಗ ತನ್ನ ತಂದೆ ಸೈಫ್ ಮತ್ತು ತಾಯಿ ಅಮೃತಾ ಬಗ್ಗೆ ಏನೆಲ್ಲಾ ಭಾವಿಸಿದ್ದೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಸೈಫ್ ಮತ್ತು ಅಮೃತಾ ಇಬ್ಬರೂ ನಟನ ಪ್ರವೃತ್ತಿ ಹೊಂದಿದವರಾಗಿದ್ದು, ಅವರಿಬ್ಬರು 2004 ರಲ್ಲಿ ವಿಚ್ಚೇಧನದ ಮೂಲಕ ಬೇರ್ಪಡುತ್ತಾರೆ. ಅದಕ್ಕೂ ಮೊದಲು ಸುಮಾರು 13 ವರ್ಷಗಳ ಕಾಲ ಜೀವನ ಸಾಗಿಸಿದ್ದರು. ಆದರೆ ಸೈಫ್​ ಅಲಿ ಖಾನ್​ ಕರೀನಾ ಕಪೂರ್​ ಅವರನ್ನು ವಿವಾಹವಾಗಿ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ.

  Read Also: Puneeth Rajkumar: ಜಿಯೋ ಜೊತೆ ಸೇರಿ ಸಿನಿಮಾ ಮಾಡಲು ಹೊರಟಿದ್ದ ಅಪ್ಪು: ವಿಧಿಯಾಟದ ಮುಂದೆ ಕನಸು ಕಮರಿಹೋಯ್ತು!

  ಸಾರಾ ಎದುರಿಸದ ಸಂದರ್ಶನದ ವಿಚಾರಕ್ಕೆ ಬರುವುದದಾದರೆ, ಬಜಾರ್ ಇಂಡಿಯಾದ ಸಂದರ್ಶನದ ನಟಿಯನ್ನು ಸಂದರ್ಶನ ಮಾಡಿತ್ತು. ಈ ವೇಳೆ ಸಾರಾ "ನನಗೆ ಬಾಲ್ಯದಲ್ಲಿ ನೆನಪಿರುವಂತೆಯೇ ಓಂಕಾರ (2006) ಮತ್ತು ಕಲಿಯುಗ್ (2005) ಸಿನಿಮಾ ನೋಡಿ ಅವರ ಪಾತ್ರ ಗಮನಿಸಿದಾಗ ನನ್ನ ಹೆತ್ತವರು ಕೆಟ್ಟ ವ್ಯಕ್ತಿಗಳು ಎಂದು ನಂಬಿದ್ದೆ. ಇದರಿಂದ ನಿಜವಾಗಿಯೂ ವಿಚಲಿತನಾಗಿದ್ದೆ ಎಂದು ನಗುತ್ತಾ ಹೇಳಿದ್ದಾರೆ.



  Read Also: Puneeth Rajkumar: ಗರ್ಭಿಣಿ ಜಪಾನಿ ಮಹಿಳೆಯನ್ನು ಅಕ್ಕರೆಯಿಂದ ಮಾತನಾಡಿಸಿದ್ದ ಅಪ್ಪು, ಮಗನಿಗೆ ಅಣ್ಣಾವ್ರ ಚಿತ್ರದ ಹೆಸರಿಟ್ಟ ಮಹಿಳೆ!

  ನಂತರ ಮಾತು ಮುಂದುವರಿಸಿದ ಅವರು, ನಾನು ತುಂಬಾ ಚಿಕ್ಕವಳಾಗಿದ್ದೆ ಮತ್ತು ನನ್ನ ತಂದೆ ಕೆಟ್ಟ ಭಾಷೆಯನ್ನು ಬಳಸುತ್ತಾರೆ ಮತ್ತು ನನ್ನ ತಾಯಿ ಅಶ್ಲೀಲ ಸೈಟ್ ಅನ್ನು ನಡೆಸುತ್ತಾರೆ ಎಂದು ನಾನು ಭಾವಿಸಿದ್ದೆ. ಅಂದು ಈ ವಿಚಾರ ನನಗೆ ತಮಾಷೆಯಾಗಿರಲಿಲ್ಲ ಏಕೆಂದರೆ ನಾನು ಚಿಕ್ಕವಳಾಗಿದ್ದೆ. ಮತ್ತೊಂದು ವಿಚಾರವೆಂದರೆ ಅವರಿಬ್ಬರೂ ಒಂದೇ ವರ್ಷದಲ್ಲಿ 'ಋಣಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟ' ಎಂದು ನಾಮನಿರ್ದೇಶನಗೊಂಡಿದ್ದರು. ಇದು ಕೂಡ ನನ್ನನ್ನು ಅಚ್ಚರಿಗೂ ದೂಡಿತ್ತು ಎಂದು ಬಾಲ್ಯದ ಸವಿ ಘಟನೆಗಳನ್ನು ಸಾರಾ ಸಂದರ್ಶನದಲ್ಲಿ  ಹೇಳಿದ್ದಾರೆ.
  Published by:Harshith AS
  First published: