Adipurush Update: ಆದಿಪುರುಷ್​ ಚಿತ್ರದಲ್ಲಿ ಈ ಖ್ಯಾತ ಬಾಲಿವುಡ್​ ನಟಿ ಪ್ರಭಾಸ್​ಗೆ ಅಮ್ಮನಾಗಿ ನಟಿಸಲಿದ್ದಾರೆ..!

Prabhas: ಈಗಾಗಲೇ ಈ ಸಿನಿಮಾದ ಮೋಷನ್​ ಕ್ಯಾಪ್ಚರ್​ ಕೆಲಸ ಆರಂಭವಾಗಿದೆ. ಈ ಬಗ್ಗೆ ನಿರ್ದೇಶಕ ಓಂ ರಾವತ್​ ಪೋಸ್ಟ್​ ಮಾಡಿದ್ದು, ಮುಂದಿನ ತಿಂಗಳು ಅಂದರೆ ಫೆ. 2ರಂದು ಸಿನಿಮಾದ ಮುಹೂರ್ತ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಆದಿಪುರುಷ್​ ಚಿತ್ರದ ಪೋಸ್ಟರ್​.

ಆದಿಪುರುಷ್​ ಚಿತ್ರದ ಪೋಸ್ಟರ್​.

  • Share this:
ಬಾಹುಬಲಿ ಪ್ರಭಾಸ್ ಕೈಯಲ್ಲಿ ಸದ್ಯ ನಾಲ್ಕು ಸಿನಿಮಾಗಳಿವೆ. ರಾಧೆ ಶ್ಯಾಮ್​, ಇನ್ನೂ ಹೆಸರಿಡ ನಾಗ್​ ಅಶ್ವಿನ್​ ನಿರ್ದೇಶನದ ಚಿತ್ರ, ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಹಾಗೂ ಓಂ ರಾವರ್​ ಸಾರಥ್ಯದಲ್ಲಿ ಆದಿಪುರುಷ್​. ಇವುಗಳಲ್ಲಿ ರಾಧಾಕೃಷ್ಣ ಕುಮಾರ್ ಆ್ಯಕ್ಷನ್​ ಕಟ್​ ಹೇಳಿರುವ ರಾಧೆ ಶ್ಯಾಮಾ ರಿಲೀಸ್​ಗೆ ಸಜ್ಜಾಗುತ್ತಿದೆ. ರಾಧೆ ಶ್ಯಾಮ್​ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಪ್ರಭಾಸ್​ ಸಲಾರ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇದಾದ ನಂತರ ಉಳಿದ ಸಿನಿಮಾಗಳ ಶೂಟಿಂಗ್​ಗೆ ಹಾಜರಾಗಲಿದ್ದಾರೆ ಪ್ರಭಾಸ್​. ಇನ್ನು ಪ್ರಭಾಸ್​ ಅಭಿನಯದ ಈ ಎಲ್ಲ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದ್ದೇ ಆಗಿವೆ. ಇನ್ನು ಬಾಲಿವುಡ್​ ನಿರ್ದೇಶಕ ಓಂ ರಾವತ್​ ನಿರ್ದೇಶನದಲ್ಲಿ ಮೂಡಿ ಬರಲಿರುವ ಆದಿಪುರುಷ್​ ಚಿತ್ರತಂಡದಿಂದ ಒಂದು ಹೊಸ ಅಪ್ಡೇಟ್​ ಹೊರ ಬಿದ್ದಿದೆ. 

ಬಾಹುಬಲಿ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಪ್ರಕಟವಾದಾಗಿನಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ಬಾಹುಬಲಿ ಸಿರೀಸ್ ನಲ್ಲಿ ಸಿಕ್ಕ ಯಶಸ್ಸು ಆದಿಪುರುಷ್ ಮೂಲಕ ದುಪ್ಪಟ್ಟಾಗಲಿದೆ ಅಂತಲೇ ದೇಶದಾದ್ಯಂತ ಪ್ರಭಾಸ್ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.

Adipurush Poster
ರಾಮನ ಪಾತ್ರದಲ್ಲಿ ಪ್ರಭಾಸ್​


ಹೀಗಿರುವಾಗಲೇ ಸಿನಿಮಾದ ಕುರಿತಾಗಿ ಹೊಸ ಅಪ್ಡೇಟ್​ ಸಿಕ್ಕಿದೆ. ಪ್ರಭಾಸ್​ ತಾಯಿಯ ಪಾತ್ರದಲ್ಲಿ ಖ್ಯಾತ ನಟಿ ಹೇಮಾ ಮಾಲಿನಿ ಕಾಣಿಸಿಕೊಳ್ಳಲಿದ್ದಾರಂತೆ. ಹೌದು, ರಾಮನ ಪಾತ್ರದಲ್ಲಿ ಪ್ರಭಾಸ್​ ಅಭಿನಯಿಸಲಿದ್ದು, ಹೇಮಾ ಮಾಲಿನಿ ಕೌಸಲ್ಯಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎನ್ನಲಾಗುತ್ತಿದೆ.

hema malini reaction on allegation of drug in bollywood and sushant singh rajput death investigation.
ಹೇಮಾ ಮಾಲಿನಿ


ಈಗಾಗಲೇ ಈ ಸಿನಿಮಾದ ಮೋಷನ್​ ಕ್ಯಾಪ್ಚರ್​ ಕೆಲಸ ಆರಂಭವಾಗಿದೆ. ಈ ಬಗ್ಗೆ ನಿರ್ದೇಶಕ ಓಂ ರಾವತ್​ ಪೋಸ್ಟ್​ ಮಾಡಿದ್ದು, ಮುಂದಿನ ತಿಂಗಳು ಅಂದರೆ ಫೆ. 2ರಂದು ಸಿನಿಮಾದ ಮುಹೂರ್ತ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.


View this post on Instagram


A post shared by Om Raut (@omraut)


ರಾಮನಿಗೆ ಎದುರು ರಾವಣನಾಗಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳಲಿದ್ದು, ಅವರು ಮಾರ್ಚ್​ ತಿಂಗಳ ಅಂತ್ಯಕ್ಕೆ ಚಿತ್ರತಂಡ ಸೇರಿಕೊಳ್ಳಿದ್ದಾರೆ. ಕರೀನಾ ಅವರಿಗೆ ಮಗುವಾದ ನಂತರವೇ ಶೂಟಿಂಗ್​ಗೆ ಬರುವುದಾಗಿ ಈ ಹಿಂದೆಯೇ ಸೈಫ್​ ಅಲಿ ಖಾನ್​ ಹೇಳಿದ್ದರು. ಅದಕ್ಕಾಗಿ ಸೈಫ್​ ಪೆಟರ್ನಿಟಿ ರಜೆ ಸಹ ಪಡೆದಿದ್ದಾರೆ.

ಇದನ್ನೂ ಓದಿ: ಕರೀನಾಗಾಗಿ ಪೆಟರ್ನಿಟಿ ರಜೆಯಲ್ಲಿ ಸೈಫ್​ ಅಲಿ ಖಾನ್: ಮಗುವಾದ ನಂತರವೇ ಆದಿಪುರುಷ್ ಚಿತ್ರೀಕರಣ ಎಂದ ನಟ..!

ಪ್ರಭಾಸ್​ ಅವರನ್ನು ರಾಮನಂತೆ ಊಹಿಸಿಕೊಂಡು ಅಭಿಮಾನಿಗಳೇ ಪೋಸ್ಟರ್​ಗಳನ್ನು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿದ್ದರು. ಇನ್ನು ರಾವಣ ಪಾತ್ರಕ್ಕೆ ಸೈಫ್​ ಅಲಿ ಖಾನ್​ ಅವರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಸಾಕಷ್ಟು ಮಂದಿ ಸಿಟ್ಟಿಗೆದ್ದು, ಅವರನ್ನು ಸಿನಿಮಾದಿಂದ ಕೈ ಬಿಡುವಂತೆ ಒತ್ತಾಯಿಸಿದ್ದರು.

Saif Ali Khan, Saif Ali Khan on paternity leave, Adipurush, Kareena Kapoor Khan, Saif Ali Khan take paternity leave, Social Media, Viral News, Kareena Kapoor delivery, News18, ಕರೀನಾ ಕಪೂರ್​, ಸೈಫ್​ ಅಲಿ ಖಾನ್​, ಆದಿಪುರುಷ್​, ಪ್ರಭಾಸ್​, ರಾವಣನಾಗಿ ಸೈಫ್​
ಸೈಫ್​ ಅಲಿ ಖಾನ್​


ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಜೊತೆ ಅವರ ಜೊತೆ ಪ್ರಭಾಸ್ ಮಾಡಲಿರುವ ಸಿನಿಮಾ ಸೈನ್ಸ್ ಫಿಕ್ಷನ್ ಕಥೆಯುಳ್ಳದ್ದಾಗಿದೆ. ಆದರೆ ಈ ಸಿನಿಮಾದ ಚಿತ್ರೀಕರಣ ದೀಪಿಕಾ ಅವರಿಂದಾಗಿ ಇನ್ನೂ ತಡವಾಗಲಿದೆ. ದೀಪಿಕಾ ಈ ವರ್ಷಾಂತ್ಯಕ್ಕೆ ಬೇರೆ ಸಿನಿಮಾಗಳ ಶೂಟಿಂಗ್​ ಮುಗಿಸಿ, ಫ್ರೀ ಆಗಲಿದ್ದಾರೆ. ಆಗ ಇನ್ನೂ ಹೆಸರಿಡದ ಪ್ರಭಾಸ್​ ಅವರ ಸಿನಿಮಾ ಆರಂಭವಾಗಲಿದೆ.
Published by:Anitha E
First published: