ಮುಸುಮುಸು ನಕ್ಕ Sara Ali Khan! ಇದಕ್ಕೆ ಕಾರಣ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಮದುವೆ ಸುದ್ದಿಯಂತೆ!

Vicky Kaushal and Katrina Kaif wedding: ಇತ್ತೀಚೆಗೆ ವಿಕ್ಕಿ ಕೌಶಲ್ ತಮ್ಮ ಕಣ್ಣಿಗೆ ಕಾಣಿಸಿಕೊಂಡಿದ್ದೇ ತಡ, ಪಾಪರಾಜಿಗಳು ಮದುವೆಯ ಸುದ್ದಿ ನಿಜವೇ ಎಂದು ಅವರನ್ನೇ ಕೇಳಿಬಿಟ್ಟರು. ಪಾಪರಾಜಿಗಳ ಆ ಪ್ರಶ್ನೆ ಕೇಳಿದ್ದೇ ತಡ, ಸಾರಾ ಅಲಿ ಖಾನ್ (Sara Ali Khan) ಕೈಯಲ್ಲಿ ನಗು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲವಂತೆ

ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್

ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್

 • Share this:
  ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರೀನಾ ಕೈಫ್ (Katrina Kaif) ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿ ಬಹಳ ದಿನಗಳಿಂದ ಅಭಿಮಾನಿಗಳ ಕುತೂಹಲ ಕೆರಳಿಸುತ್ತಿದೆ. ಆದರೆ, ಸುದ್ದಿ ನಿಜವೇ ಸುಳ್ಳೆ ಎಂದು ಯಾರಲ್ಲಿ ಕೇಳುವುದು ? ಇತ್ತೀಚೆಗೆ ವಿಕ್ಕಿ ಕೌಶಲ್ ತಮ್ಮ ಕಣ್ಣಿಗೆ ಕಾಣಿಸಿಕೊಂಡಿದ್ದೇ ತಡ, ಪಾಪರಾಜಿಗಳು ಮದುವೆಯ ಸುದ್ದಿ ನಿಜವೇ ಎಂದು ಅವರನ್ನೇ ಕೇಳಿಬಿಟ್ಟರು. ಪಾಪರಾಜಿಗಳ ಆ ಪ್ರಶ್ನೆ ಕೇಳಿದ್ದೇ ತಡ, ಸಾರಾ ಅಲಿ ಖಾನ್ (Sara Ali Khan) ಕೈಯಲ್ಲಿ ನಗು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲವಂತೆ. ವಿಕ್ಕಿ ಕೌಶಲ್‍ ಸುದ್ದಿಯಲ್ಲಿ ಸಾರಾ ಎಲ್ಲಿಂದ ಬಂದರು ಎನ್ನುತ್ತೀರಾ..? ಏಕೆಂದರೆ ಸಾರಾ ಕೂಡ ವಿಕ್ಕಿಯ ಜೊತೆಯಲ್ಲಿಯೇ ಇದ್ದರು.

  ಈ ಕುರಿತ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ. ಸಾರಾ ಮತ್ತು ವಿಕ್ಕಿ ಕೌಶಲ್ ಜೊತೆಯಾಗಿ ಪೋಸ್ ನೀಡುವಾಗ, ಪಾಪರಾಜಿಯೊಬ್ಬರು ಕೇಳುತ್ತಾರೆ, “ವಿಕ್ಕಿ ಭಾಯ್ ಮದುವೆ ಯಾವಾಗ?”. ಇತ್ತೀಚೆಗೆ ವಿಕ್ಕಿ ಕೌಶಲ್ ಮತ್ತು ನಟಿ ಕತ್ರೀನಾ ಕೈಫ್ ಮದುವೆ, ಆ ಮದುವೆಯ ನಡೆಯುವ ಸ್ಥಳ, ವರ - ವಧು ಧರಿಸುವ ಉಡುಗೆ ಇತ್ಯಾದಿಗಳ ಬಗ್ಗೆ ನಾನಾ ರೀತಿಯ ವರದಿಗಳು ಬರುತ್ತಲೇ ಇವೆ. ಆದರೆ ಈ ಕುರಿತು ಆ ಇಬ್ಬರು ತಾರೆಯರು ಕೂಡ ತುಟಿಕ್ ಪಿಟಿಕ್ ಎಂದಿಲ್ಲ. ಕೆಲವು ತಿಂಗಳ ಹಿಂದೆ ಅವರಿಬ್ಬರ ರೋಕಾ ( ವರ ವಧುವಿನ ಮನೆಯವರು ಮದುವೆಯನ್ನು ನಿಗದಿಪಡಿಸುವ ಆಚರಣೆ) ಕೂಡ ಆಯಿತು ಎಂಬ ಸುದ್ದಿಯಿತ್ತು. ಆಗಸ್ಟ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಗುಪ್ತವಾಗಿ ರೋಕಾ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಂದಾಗ, ಕತ್ರೀನಾ ಅವರ ತಂಡ ಆ ಸುದ್ದಿಯನ್ನು ನಿರಾಕರಿಸಿತ್ತು.

  ಇದನ್ನು ಓದಿ: Kangana Ranaut: ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಕಂಗನಾ, 5 ವರ್ಷದಲ್ಲಿ ಮದುವೆ-ಮಕ್ಕಳು ರೆಡಿ!


  ಸಂದರ್ಶನವೊಂದರ ಸಂದರ್ಭದಲ್ಲಿ, ಆ ಸುದ್ದಿಗೆ ತಾನು ಯಾಕೆ ಪ್ರತಿಕ್ರಿಯೆ ನೀಡಲಿಲ್ಲ ಎಂಬ ಸಂಗತಿಯನ್ನು ಬಿಚ್ಚಿಟ್ಟರು. “ಪ್ರಾಮಾಣಿಕವಾಗಿ ಹೇಳುವುದಾದರೆ, ನನ್ನ ಬಳಿ ಆ ಮನಸ್ಥಿತಿ ಇರಲಿಲ್ಲ, ಏಕೆಂದರೆ ನಾನು ಚಿತ್ರೀಕರಣದ ಮಧ್ಯದಲ್ಲಿ ಇದ್ದೆ.. ಇದು ತಮಾಷೆಯಾಗಿದೆ, ಏನಾಗುತ್ತದೆ ಅಂದರೆ, ಬೆಳಗ್ಗೆ 9 ಗಂಟೆಗೆ ಮಾಧ್ಯಮಗಳೇ ಗಾಳಿ ಸುದ್ದಿ ಹರಡುತ್ತವೆ ಮತ್ತು ಸಂಜೆ 4.30 ರ ಹೊತ್ತಿಗೆ ಮಾಧ್ಯಮಗಳೇ ಆ ಸುದ್ದಿಯನ್ನು ಅಲ್ಲಗಳೆಯುತ್ತವೆ ಹಾಗೂ, ‘ಇಲ್ಲ, ಇದು ನಿಜವಲ್ಲ’ ಎನ್ನುತ್ತವೆ. ಹಾಗಾಗಿ, ನೀವೇನೂ ಮಾಡಬೇಕಾಗಿ ಇರುವುದಿಲ್ಲ” ಎಂದು ವಿಕ್ಕಿ ರೇಡಿಯೋ ನಿರೂಪಕ ಸಿದ್ದಾರ್ಥ್ ಕಣ್ಣನ್‍ಗೆ ಹೇಳಿದ್ದಾರೆ.

  “ನಾನು ನನ್ನ ಕೆಲಸದ ಮೇಲೆ ನಿಗಾ ಇಟ್ಟಿದ್ದೇನೆ ಮತ್ತು ನನ್ನ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದನ್ನು ಮುಂದುವರೆಸುತ್ತೇನೆ” ಎಂದು ಅವರು ಹೇಳಿದ್ದಾರೆ.


  ಕತ್ರೀನಾ ಕೈಫ್ ಕೂಡ, ತಾನು ಮತ್ತು ವಿಕ್ಕಿ ಕೌಶಲ್ ಈ ವರ್ಷ ಮದುವೆ ಆಗುತ್ತಿದ್ದೇವೆ ಎಂಬ ಸುದ್ದಿ ನಿಜವಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹಾಗಾದರೆ ಈ ಗಾಳಿ ಸುದ್ದಿಗಳು ಏಕೆ ಹುಟ್ಟಿಕೊಂಡಿವೆ ಎಂದು ಆಕೆಯನ್ನು ಕೇಳಿದರೆ, “ ಕಳೆದ 15 ವರ್ಷಗಳಿಂದ ನನ್ನಲ್ಲೂ ಆ ಪ್ರಶ್ನೆ ಇದೆ” ಎಂದು ಉತ್ತರಿಸಿದ್ದಾರೆ ಅವರು.


  ಇದನ್ನು ಓದಿ: Mona Rai: ಮಾಡೆಲ್​ ಮೋನ ರೈ ಹತ್ಯೆ, ಕೊನೆಗೂ ಕೊಲೆಯ ಹಿಂದಿನ ಮಾಸ್ಟರ್​​ ಮೈಂಡ್​ ಲಾಕ್​!

  ವರುಣ್ ಧವನ್ ನಾಯಕನಾಗಿದ್ದ ಕೂಲಿ ನಂಬರ್ 1 ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಾರಾ ಅಲಿ ಖಾನ್, ಆ ಬಳಿಕ ಬೇರೆ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ. ಅವರು , ಆನಂದ್ ಎಲ್ ರೈ ಅವರ ಅತ್‍ರಂಗೀ ರೇ ಚಿತ್ರದಲ್ಲಿ , ಅಕ್ಷಯ್ ಕುಮಾರ್ ಮತ್ತು ಧನುಷ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಮೇಘನಾ ಗುಲ್ಜಾರ್ , 1971ರಲ್ಲಿ ಭಾರತ - ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ, ಸ್ಯಾಮ್ ಮಾನೆಕ್‍ಶಾ ಅವರ ಜೀವನ ಕಥೆಯುಳ್ಳ ಚಿತ್ರವನ್ನು ನಿರ್ದೇಶಿಸುತ್ತಿದ್ದು, ವಿಕ್ಕಿ ಕೌಶಲ್ ಅದರಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


  Published by:Harshith AS
  First published: