ಮಾಜಿ ಲವರ್ ಕಾರ್ತಿಕ್ ಆರ್ಯನ್ ಜೊತೆ ಸಾರಾ ಅಲಿ ಖಾನ್ ಲಿಪ್ ಲಾಕ್; ವಿಡಿಯೋ ವೈರಲ್

ಸಾರಾ ಅಲಿ ಖಾನ್​ ಪ್ರೇಮ ಪುರಾಣವೂ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ನಟ ಕಾರ್ತಿಕ್​ ಆರ್ಯನ್​ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಹರಿದಾಡಿದ ಬೆನ್ನಲ್ಲೇ ಇಬ್ಬರ ಸಂಬಂಧ ಬ್ರೇಕಪ್​ನಲ್ಲಿ ಅಂತ್ಯವಾಗಿತ್ತು. ಅಚ್ಚರಿ ಎಂದರೆ, ಈಗ ಇಬ್ಬರ ಲಿಪ್​ಕಿಸ್​ ದೃಶ್ಯವೈರಲ್​ ಆಗಿದೆ!

news18-kannada
Updated:January 17, 2020, 3:21 PM IST
ಮಾಜಿ ಲವರ್ ಕಾರ್ತಿಕ್ ಆರ್ಯನ್ ಜೊತೆ ಸಾರಾ ಅಲಿ ಖಾನ್ ಲಿಪ್ ಲಾಕ್; ವಿಡಿಯೋ ವೈರಲ್
ಸಾರಾ ಅಲಿ ಖಾನ್​
  • Share this:
ಸ್ಟಾರ್​ ನಟಿಯ ಮಕ್ಕಳ ಪ್ರೇಮ ಕಹಾನಿ ವಿಚಾರ ಆಗಾಗ ಸುದ್ದಿಯಾಗುತ್ತವೆ. ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿ ಖಾನ್​ ಪ್ರೇಮ ಪುರಾಣವೂ ಭಾರೀ ಸುದ್ದಿಯಾಗಿತ್ತು. ನಟ ಕಾರ್ತಿಕ್​ ಆರ್ಯನ್​ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಹರಿದಾಡಿದ ಬೆನ್ನಲ್ಲೇ ಇಬ್ಬರ ಸಂಬಂಧ ಬ್ರೇಕಪ್​ನಲ್ಲಿ ಅಂತ್ಯವಾಗಿತ್ತು. ಅಚ್ಚರಿ ಎಂದರೆ, ಈಗ ಇಬ್ಬರ ಲಿಪ್​ಕಿಸ್​ ದೃಶ್ಯವೈರಲ್​ ಆಗಿದೆ!

ಅರೆ, ಇದೇನಪ್ಪ ಎಂದು ಅಚ್ಚರಿಗೊಳ್ಳಬೇಡಿ. ಅಷ್ಟಕ್ಕೂ ಇದು ರಿಯಲ್​ ಕಥೆಯಲ್ಲ, ರೀಲ್​ ಕಥೆ. ಹೌದು, ಕಾರ್ತಿಕ್​ ಆರ್ಯನ್​ ಹಾಗೂ ಸಾರಾ ‘ಲವ್​ ಆಜ್​ ಕಲ್​’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದ್ದು, ಸಾರಾ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.2009ರಲ್ಲಿ ಸೈಫ್​ ಅಲಿ ಖಾನ್ ನಟನೆಯ ‘ಲವ್​ ಆಜ್​ ಕಲ್​’ ಸಿನಿಮಾ ತೆರೆಗೆ ಬಂದಿತ್ತು. ದೀಪಿಕಾ ನಾಯಕಿಯಾಗಿದ್ದ ಈ ಚಿತ್ರಕ್ಕೆ ಇಮ್ತಿಯಾಜ್​ ಅಲಿ ಖಾನ್​ ಡೈರೆಕ್ಷನ್​ ಮಾಡಿದ್ದರು. ಇದಾದ ಸುಮಾರು 10 ವರ್ಷಗಳ ಬಳಿಕ ಇದೇ ಶೀರ್ಷಿಕೆ ಇಟ್ಟುಕೊಂಡು ಅವರು ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಸಾರಾ ನಾಯಕಿಯಾಗಿ ಕಾಣಿಸಿಕೊಂಡರೆ, ಕಾರ್ತಿಕ್​ ಆರ್ಯನ್​ ಹೀರೋ. ಪ್ರೇಮಿಗಳ ದಿನಾಚರಣೆ ಅಂಗವಾಗಿ ಫೆ.14ರಂದು ಚಿತ್ರ ತೆರೆಗೆ ಬರುತ್ತಿದೆ.
First published: January 17, 2020, 3:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading