Sara Ali Khan: ಅಂಗರಕ್ಷಕ ಮಾಡಿದ್ದ ತಪ್ಪಿಗೆ ಕ್ಷಮೆ ಕೇಳಿ ಹೃದಯ ಗೆದ್ದ ಸಾರಾ

ಸಾರಾ ಅಲಿ ಖಾನ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಅತ್ರಂಗಿ ರೇ' ಪ್ರಚಾರದಲ್ಲಿ ನಿರತರಾಗಿದ್ದಾರೆ. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾರಾ ಅವರು ಚಿತ್ರದ 'ಚಕ ಚಕ್' ಹಾಡಿನ ಲಾಂಚ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು

ಸಾರಾ ಅಲಿ ಖಾನ್

ಸಾರಾ ಅಲಿ ಖಾನ್

 • Share this:
  ಬಾಲಿವುಡ್ ನಟಿ ಸಾರಾ ಅಲಿ ಖಾನ್ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ನಟಿ, ಸಾರಾ ಇಲ್ಲಿಯವರೆಗೆ ಕೆಲವೇ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರೂ, ಅವರು ಇಂದು ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಪ್ರತಿಯೊಂದು ಲೈಫ್ ಸ್ಟೈಲ್ ಅವರ ಫ್ಯಾನ್ಸ್ ಗಳ (fans) ಹೃದಯವನ್ನು ಗೆಲ್ಲುತ್ತದೆ. ಈಗ ಸಾರಾ ಅಲಿ ಖಾನ್(Sara Ali Khan) ಅತ್ರಾಂಗಿ ರೇ (‘Atrangi Re) ಚಿತ್ರದ ಪ್ರಚಾರದಲ್ಲಿ (promoting) ಬ್ಯುಸಿಯಾಗಿದ್ದಾರೆ. ಈಗಾಗಲೇ ಸಕತ್‌ ಹಾಟ್‌ ಮೈಮಾಟದಿಂದ ಪಡ್ಡೆಗಳ ಮನಗೆದ್ದಿರುವ ಸಾರಾ ಅತ್ರಾಂಗಿ ರೇ ಚಿತ್ರದ ಹಾಡಿನ ಬಿಡುಗಡೆ ವೇಳೆ ತನ್ನ ಅಂಗರಕ್ಷಕ (Bodyguard) ಮಾಡಿದ ಎಡವಟ್ಟಿಗೆ ಕ್ಷಮೆಯಾಚಿಸಿ, ಮತ್ತೆ ಅಭಿಮಾನಿಗಳ ( winning the hearts)ಮನಗೆದ್ದಿದ್ದಾರೆ.

  'ಚಕ ಚಕ್' ಹಾಡಿನ ಲಾಂಚ್‌
  ಸಾರಾ ಅಲಿ ಖಾನ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಅತ್ರಂಗಿ ರೇ' ಪ್ರಚಾರದಲ್ಲಿ ನಿರತರಾಗಿದ್ದಾರೆ. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾರಾ ಅವರು ಚಿತ್ರದ 'ಚಕ ಚಕ್' ಹಾಡಿನ ಲಾಂಚ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು, ಕಾರ್ಯಕ್ರಮ ಮುಗಿದ ಬಳಿಕ ಕಾರಿನತ್ತ ಹೊರಟ ಸಾರಾ ನಗುತ್ತಲೇ ಬರುತ್ತಿದ್ದರು, ಆಗ ಕ್ಯಾಮಾರ ಹೊತ್ತು ಅನೇಕರು ಒಂದು ಪೋಸ್‌ ಗಾಗಿ ಹಿಂಬಾಲಿಸುತ್ತಿದ್ದರು, ಆ ವೇಳೆ ಸಾರಾಳ ಅಂಗರಕ್ಷಕ ಅವರನ್ನು ತಳ್ಳಿದ್ದಾನೆ. ಇದ್ದರಿಂದ ಕೋಪಗೊಂಡ ಸಾರಾ ಬಿಸಿ ಸಂಭಾಷಣೆ ನಡೆಸಿದ್ದಾರೆ.

  ನನ್ನನ್ನು ಕ್ಷಮಿಸಿ ಎಂದ ಸಾರ
  ಇದು ಸ್ಪಷ್ಟ ಕಾರಣಗಳಿಗಾಗಿ, ಸಾರಾಗೆ ಅವರು ಮಾಡಿದು ಸರಿ ಹೋಗಲಿಲ್ಲ, ಕೂಡಲೇ ಅವರನ್ನು ಗದರಿಸಿ, "ಢಕ್ಕಾ ಮತ್ ದೀಜಿಯೇ..." ಎಂದು ಹೇಳುತ್ತಾರೆ. ಅಲ್ಲದೇ ಕಾರಿನಲ್ಲಿ ಹೋಗುವಾಗ ಐಯಮ್‌ ಸಾರಿ ಎಂದು ಕ್ಷಮೆಯಾಚಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಡಿಯೊವೊಂದರಲ್ಲಿ, ಸಾರಾ ತನ್ನ ಕಾರಿನ ಬಳಿ ನಿಂತು ಯಾರನ್ನೂ ತಳ್ಳಬೇಡಿ ಎಂದು ವ್ಯಕ್ತಿಯೊಬ್ಬನಿಗೆ ಹೇಳುತ್ತಿರುವುದು ಕಂಡುಬಂದಿದೆ ಮತ್ತು ತನ್ನ ಸುತ್ತಲಿರುವವರಲ್ಲಿ ಕ್ಷಮೆಯನ್ನೂ ಕೇಳಿದ್ದಾರೆ,

  "ವೋ ಗಿರಾಯ ಕಿಸ್ಕೊ ​​ಆಪ್ನೆ (ನೀವು ಯಾರನ್ನು ಕೆಳಗೆ ತಳ್ಳಿದ್ದೀರಿ)?" "ಕೋಯಿ ನಹೀ ಗಿರಾ (ಯಾರೂ ಕೆಳಗೆ ಬೀಳಲಿಲ್ಲ) ಎಂದು ಸುತ್ತಮುತ್ತಲಿನ ಜನರು ಹೇಳಿದಾಗ, "ನಹೀ ನಹಿ, ಜಿಸ್ಕೋ ಗಿರಾಯ ವೋ ಚಲೇ ಗಯೇ (ಇಲ್ಲ ತಳ್ಳಲ್ಪಟ್ಟವರು ಹೋಗಲಿಲ್ಲ)" ಎಂದು ಸಾರಾ ಉತ್ತರಿಸಿದರು.

  ಇದನ್ನು ಓದಿ:Happy Birthday Sara Ali Khan: 96 ಕೆಜಿ ಇದ್ದ ಸಾರಾ ಅಲಿ ಖಾನ್​ ತೂಕ ಇಳಿಸಿಕೊಂಡ Weight Loss ಜರ್ನಿ ಇಲ್ಲಿದೆ..!

  ಆಗ ಸಾರಾ "ಸಾರಿ ಬೋಲ್ನಾ ಪ್ಲೀಸ್. ಧನ್ಯವಾದ" ಎಂದಿದ್ದಾರೆ. ಹೊರಡುವ ಮೊದಲು ಮತ್ತೆ ಆ ವ್ಯಕ್ತಿಯನ್ನು ಗದರಿಸಿದಳು, ಹೀಗೆ ಮಾಡಬೇಡಿ. ಯಾರನ್ನೂ ತಳ್ಳಬೇಡಿ " "ಧನ್ಯವಾದಗಳು. ನನ್ನನ್ನು ಕ್ಷಮಿಸಿ" ಎಂದು ಕಾರನ್ನು ಹತ್ತಿ ಹೊರಟ ದೃಶ್ಯಗಳು ಸೆರೆಯಾಗಿವೆ.

  ಸಾರಾ ನಡುವಳಿಕೆಗೆ ಫ್ಯಾನ್ಸ್‌ ಖುಷಿ
  ಸಾರಾ ಅಲಿ ಖಾನ್ ಅವರ ಈ ಗೆಸ್ಚರ್ ಎಲ್ಲರ ಮನ ಗೆಲ್ಲುತ್ತಿದೆ. ನೆಟಿಜನ್‌ಗಳು ಸಾರಾ ಅವರ ಈ ಪ್ರತಿಕ್ರಿಯೆ ಕಂಡು ಶೀಘ್ರವಾಗಿ ಪ್ರತಿಕ್ರಿಯಿಸಿದ್ದಾರೆ ಮತ್ತು, "ಎಲ್ಲರಿಗೂ ಅವರು ಎಷ್ಟು ಕಾಳಜಿವಹಿಸುತ್ತಾರೆ, ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ, ಮತ್ತೊಬ್ಬರು ಬಾಲಿವುಡ್ ನಕಲಿ ಜನರಿಂದ ಕೂಡಿದೆ. ಅದರಲ್ಲಿ ನಾನು ಇಷ್ಟಪಡುವ ಸಿಹಿ ಹೃದಯದ ಖ್ಯಾತನಾಮರಲ್ಲಿ ಇವರು ಒಬ್ಬರು ಎಂದು ಕಾಮೆಂಟ್ ಮಾಡಿದ್ದಾರೆ. ಅವರು ತುಂಬಾ ಕಾಳಜಿಯುಳ್ಳವರು ಎಂದೆಲ್ಲಾ ಜನರು ಹೊಗಳಿದ್ದಾರೆ, ಅತ್ರಾಂಗಿ ರೇ ನಟಿ ತನ್ನ ನಡುವಳಿಕೆ ತನ್ನ ಅಭಿಮಾನಿಗಳ ಹೃದಯವನ್ನು ಮತ್ತೆ ಮತ್ತೆ ಗೆದ್ದಿದ್ದಾರೆ.

  ಇದನ್ನು ಓದಿ:Sara Ali Khan: ನನ್ನ ತಾಯಿ ಅಶ್ಲೀಲ​ ವೆಬ್​ಸೈಟ್​ ನಡೆಸುತ್ತಿದ್ದರು ಎಂದು ವಿಚಲಿತಳಾಗಿದ್ದೆ ಎಂದ ಸಾರಾ ಅಲಿ ಖಾನ್​!

  ಚಕಾ ಚಕ್‌ ಹಾಡಿನಲ್ಲಿ ಸಾರಾ ಅಲಿ ಖಾನ್‌ ಹಸಿರು ಬಣ್ಣದ ಸೀರೆಯುಟ್ಟು ಸಕತ್‌ ಗೆ ಸೊಂಟ ಬಳಕಿಸಿದ್ದಾರೆ. ನಟ ಧನಷ್‌ ಮದುವೆ ಸಂಭ್ರಮದಲ್ಲಿ ಸಾರಾ ಕುಣಿದಿದ್ದಾರೆ ಎನ್ನಲಾಗಿದೆ. ಚಿತ್ರದ ಕಥೆಯ ಪ್ರಕಾರ ಇಬ್ಬರು ತಮ್ಮ ಹಳ್ಳಿಗೆ ಮರಳಿದ ನಂತರ ಅವರು ಬೇರೆಯಾಗಲು ನಿರ್ಧರಿಸುತ್ತಾರೆ. ಆಗ ಧನುಷ್‌ ಕುಟುಂಬದವರು ತನ್ನ ಕುಟುಂಬದ ಸಮ್ಮುಖದಲ್ಲಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಒಪ್ಪುತ್ತಾರೆ. ಈ ನಡೆಯುವ ಮದುವೆ ಸಿದ್ಧತೆ ವೇಳೆ ಸಾರಾ ಈ ಹಾಡಿಗೆ ನೃತ್ಯ ಮಾಡಿದ್ದಾರೆ ಎನ್ನಲಾಗಿದೆ.
  ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ ಈ ಹಾಡನ್ನು ಸಂಯೋಜಿಸಿದ್ದು, ಶ್ರೇಯಾ ಘೋಷಾಲ್‌ ಅವರು ಹಾಡಿಗೆ ಧ್ವನಿಯಾಗಿದ್ದಾರೆ, ವಿಜಯ್‌ ಗಂಗೋಲಿ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ.
  Published by:vanithasanjevani vanithasanjevani
  First published: