ಚೌತಿಯಂದು ಗಣಪತಿಯನ್ನು ಪೂಜಿಸಿ ಟ್ರೋಲ್ ಆದ ಖಾನ್ ಕುಡಿ!

ಈ ಫೋಟೋ ನೋಡಿದ ಅನೇಕರು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದಾರೆ. ಸಾರಾಗೆ ಹಿಂದೂ ದೇವರುಗಳ ಬಗ್ಗೆ ಚಿಂತೆಯೇಕೆ? ಅವರು ಪೂಜೆ ಮಾಡುವ ಅವಶ್ಯಕತೆಯಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

Rajesh Duggumane | news18-kannada
Updated:September 6, 2019, 2:00 PM IST
ಚೌತಿಯಂದು ಗಣಪತಿಯನ್ನು ಪೂಜಿಸಿ ಟ್ರೋಲ್ ಆದ ಖಾನ್ ಕುಡಿ!
ಈ ಫೋಟೋ ನೋಡಿದ ಅನೇಕರು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದಾರೆ. ಸಾರಾಗೆ ಹಿಂದೂ ದೇವರುಗಳ ಬಗ್ಗೆ ಚಿಂತೆಯೇಕೆ? ಅವರು ಪೂಜೆ ಮಾಡುವ ಅವಶ್ಯಕತೆಯಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
  • Share this:
ಬಾಲಿವುಡ್​ ನಟ-ನಟಿಯರು ಎಲ್ಲ ಹಬ್ಬಗಳಿಗೂ ಶುಭಕೋರುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಹಿಂದೂ ಕಲಾವಿದರು ಕೇವಲ ತಮ್ಮ ಹಬ್ಬ ಮಾತ್ರವಲ್ಲದೆ ಮುಸ್ಲಿಂ ಹಬ್ಬಕ್ಕೂ ಶುಭಕೋರಿದ ಉದಾಹರಣೆಗಳಿವೆ. ಮುಸ್ಲಿಂ ಕಲಾವಿದರೂ ಚೌತಿ, ದೀಪಾವಳಿಗೆ ಶುಭಾಶಯ ತಿಳಿಸಿದ್ದಿದೆ. ಇದೇ ರೀತಿ ಮಾಡಲು ಹೋಗಿ ಖಾನ್​ ಕುಟುಂಬದ ಕುಡಿ ಟ್ರೋಲ್​ ಆಗಿದ್ದಾರೆ.

ಅಷ್ಟಕ್ಕೂ ಟ್ರೋಲ್​ ಆದ ನಟಿ ಯಾರು? ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿ ಖಾನ್​. ಮುಂಬೈನಲ್ಲಿ ಗಣೇಶ ಚತುರ್ಥಿಯನ್ನು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ, ಸಾರಾ ಗಣಪತಿಗೆ ಪೂಜೆ ಸಲ್ಲಿಸಿದ್ದಾರೆ. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋ ನೋಡಿದ ಅನೇಕರು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದಾರೆ. ಸಾರಾಗೆ ಹಿಂದೂ ದೇವರುಗಳ ಬಗ್ಗೆ ಚಿಂತೆಯೇಕೆ? ಅವರು ಪೂಜೆ ಮಾಡುವ ಅವಶ್ಯಕತೆಯಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರಕ್ಕೆ ಸಾರಾ ಬೇಸರ ಹೊರಹಾಕಿದ್ದಾರಂತೆ. ಸಾರಾ ಕುಟುಂಬದಲ್ಲಿ ಕರೀನಾ ಕಪೂರ್​ ಸೇರಿ ಹಲವರು ಹಿಂದೂಗಳಿದ್ದಾರೆ. ಹಾಗಾಗಿ ಅವರ ಕುಟುಂಬದಲ್ಲಿ ಮುಸ್ಲಿಂ ಹಾಗೂ ಹಿಂದೂ ಹಬ್ಬಗಳನ್ನು ಒಂದೇ ರೀತಿಯಲ್ಲಿ ಆಚರಿಸಲಾಗುತ್ತಿದೆಯಂತೆ. ಹೀಗಿದ್ದರೂ ಟ್ರೋಲ್​ ಮಾಡುವುದು ಸರಿಯಲ್ಲ ಎಂಬುದು ಸಾರಾ ಅಭಿಪ್ರಾಯ. ಕೆಲವರು ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮಾತು ಸಾರಾಗೆ ಹೆಚ್ಚು ಬೇಸರ ಮೂಡಿಸಿದೆಯಂತೆ.

ಇದನ್ನೂ ಓದಿ: 2018ರಲ್ಲಿ ಗೂಗಲ್​ನಲ್ಲಿ ಜಾಲಾಡಿದ ಟಾಪ್​ 10 ಸೆಲೆಬ್ರಿಟಿಗಳು ಇವರು!

ಸಿನಿಮಾ ವಿಚಾರಕ್ಕೆ ಬರುವುದಾದರೆ ಕಳೆದಬಾರಿ ‘ಕೇದಾರನಾಥ್​’ ಹಾಗೂ ‘ಸಿಂಬಾ’ ಚಿತ್ರಗಳಲ್ಲಿ ಸಾರಾ ನಟಿಸಿದ್ದರು. ‘ಸಿಂಬಾ’ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಇದಲ್ಲದೆ ಸಾರಾ ‘ಕೂಲಿ ನಂಬರ್​ 1’ ಹಾಗೂ ಇನ್ನೂ ಹೆಸರಿಡದ ಇಮ್ತಿಯಾಜ್​ ಅಲಿ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

First published:September 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading