• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sara Ali Khan: ಸಲ್ಮಾನ್ ಖಾನ್‍ಗೆ ‘ಅಂಕಲ್’ ಎಂದು ಕರೆದ ಸಾರಾ ಅಲಿ ಖಾನ್! ಬಳಿಕ ಆಗಿದ್ದೇನು ನೋಡಿ

Sara Ali Khan: ಸಲ್ಮಾನ್ ಖಾನ್‍ಗೆ ‘ಅಂಕಲ್’ ಎಂದು ಕರೆದ ಸಾರಾ ಅಲಿ ಖಾನ್! ಬಳಿಕ ಆಗಿದ್ದೇನು ನೋಡಿ

ಸಲ್ಮಾನ್ ಖಾನ್‍ ಮತ್ತು ಸಾರಾ ಅಲಿ ಖಾನ್

ಸಲ್ಮಾನ್ ಖಾನ್‍ ಮತ್ತು ಸಾರಾ ಅಲಿ ಖಾನ್

ಶುಕ್ರವಾರ ಕಲರ್ಸ್ ವಾಹಿನಿ ಬಿಡುಗಡೆ ಮಾಡಿದ, ಐಫಾ ಅವಾರ್ಡ್ಸ್ 2022 ನ ವಿಶೇಷ ಪ್ರೋಮೋದಲ್ಲಿ ಈ ದೃಶ್ಯ ಕಂಡು ಬಂತು. ಸಾರಾ ಅಲಿ ಖಾನ್‍ಗಿಂತ 30 ವರ್ಷ ದೊಡ್ಡವರಾದ ಸಲ್ಮಾನ್, ಐಫಾ ಅವಾರ್ಡ್ಸ್ 2022 ನ ವೇದಿಕೆಯಲ್ಲಿ ಸಾರಾ ಜೊತೆ ನಡೆಸಿದ ಒಂದು ಆ್ಯಕ್ಟಿನ ಸಂಭಾಷಣೆಗಳನ್ನು ಕೇಳಿ, ಅಲ್ಲಿ ನೆರೆದಿದ್ದ ಸಭಿಕರೆಲ್ಲಾ ಬಿದ್ದು ಬಿದ್ದು ನಕ್ಕರು.

ಮುಂದೆ ಓದಿ ...
  • Share this:

ಬಾಲಿವುಡ್ ಸೂಪರ್ ಸ್ಟಾರ್ ಒಬ್ಬರನ್ನು “ಅಂಕಲ್ ” ಎಂದು ಕರೆದು, ಆತನೊಂದಿಗೆ ನಟಿಸುವ ಅವಕಾಶವನ್ನೇ ಕಳೆದು ಕೊಂಡಿದ್ದಾರಂತೆ ನಟಿ ಸಾರಾ ಅಲಿ ಖಾನ್ (Sara Ali Khan). ಮತ್ತೇ? ಯಾವ ಸೂಪರ್ ಸ್ಟಾರ್ (Super Star) ತಾನೆ ‘ಅಂಕಲ್ ‘ ಎಂದೆನಿಸಿಕೊಳ್ಳಲು ಬಯಸುತ್ತಾರೆ ಅಲ್ಲವೇ? ಅಷ್ಟಕ್ಕೂ ಈ ಮುದ್ದಾದ ಯುವ ನಟಿಯಿಂದ (Actress) ಅಂಕಲ್ ಎಂದು ಕರೆಸಿಕೊಂಡ ಸ್ಟಾರ್ ಯಾರಪ್ಪಾ ಎನ್ನುತ್ತೀರಾ? ಆ ಸ್ಟಾರ್ ಬೇರೆ ಯಾರೂ ಅಲ್ಲ, ಬಾಲಿವುಡ್‍ನ ದಬ್ಬಂಗ್ ಖಾನ್ ಎನಿಸಿಕೊಂಡಿರುವ ಸಲ್ಮಾನ್ ಖಾನ್ (Salman Khan) ! ಅಬ್ಬಬ್ಬಾ, ಸಲ್ಮಾನ್ ಖಾನ್‍ಗೆ ‘ಅಂಕಲ್ ‘ ಎನ್ನುವಷ್ಟು ಧೈರ್ಯವೇ ಸಾರಾಗೆ ಎಂದು ಹುಬ್ಬೇರಿಸಬೇಡಿ. ಅಸಲಿಗೆ ಇದೆಲ್ಲವೂ ನಡೆದದ್ದು ತಮಾಷೆಗಾಗಿ. ಐಫಾ ಅವಾರ್ಡ್ಸ್ 2022 ನ ವೇದಿಕೆಯಲ್ಲಿ ನಟ ಸಲ್ಮಾನ್ ಖಾನ್ ಮತ್ತು ಸಾರಾ ಅಲಿ ಖಾನ್ ಪರಸ್ಪರ ಹಾಸ್ಯ ಸಂಭಾಷಣೆಯಲ್ಲಿ ತೊಡಗಿಕೊಂಡರು.


ಶುಕ್ರವಾರ ಕಲರ್ಸ್ ವಾಹಿನಿ ಬಿಡುಗಡೆ ಮಾಡಿದ, ಐಫಾ ಅವಾರ್ಡ್ಸ್ 2022 ನ ವಿಶೇಷ ಪ್ರೋಮೋದಲ್ಲಿ ಈ ದೃಶ್ಯ ಕಂಡು ಬಂತು. ಸಾರಾ ಅಲಿ ಖಾನ್‍ಗಿಂತ 30 ವರ್ಷ ದೊಡ್ಡವರಾದ ಸಲ್ಮಾನ್, ಐಫಾ ಅವಾರ್ಡ್ಸ್ 2022 ನ ವೇದಿಕೆಯಲ್ಲಿ ಸಾರಾ ಜೊತೆ ನಡೆಸಿದ ಒಂದು ಆ್ಯಕ್ಟಿನ ಸಂಭಾಷಣೆಗಳನ್ನು ಕೇಳಿ, ಅಲ್ಲಿ ನೆರೆದಿದ್ದ ಸಭಿಕರೆಲ್ಲಾ ಬಿದ್ದು ಬಿದ್ದು ನಕ್ಕರು.


ಆ ಪ್ರೋಮೋದಲ್ಲಿನ ದೃಶ್ಯ ಹೀಗಿದೆ
ಸಾರಾ ಅಲಿ ಖಾನ್, ಒಂದು ಬ್ರಾಂಡ್‍ನ ಎಂಡೋರ್ಸ್‍ಮೆಂಟ್‍ಗೆ ಸಹಾಯ ಮಾಡುವಂತೆ ಸಲ್ಮಾನ್ ಖಾನ್ ಅವರನ್ನು ಕೇಳಿಕೊಳ್ಳುತ್ತಾರೆ. ಆಕೆ ಸಲ್ಮಾನ್ ಖಾನ್ ಅವರನ್ನು “ಸಲ್ಮಾನ್ ಅಂಕಲ್” ಎಂದು ಕರೆದಾಗ, ಆಕೆ ತನ್ನ ಸಿನಿಮಾದ ನಾಯಕಿಯಾಗುವ ಅವಕಾಶವನ್ನು ಕಳೆದುಕೊಂಡಳು ಎಂದು ಹೇಳುತ್ತಾರೆ ಸಲ್ಮಾನ್. ಅವರ ಮಾತನ್ನು ಕೇಳಿದ ಸಾರಾ, ಆಶ್ಚರ್ಯ ಚಕಿತರಾಗುತ್ತಾರೆ ಮತ್ತು ಕ್ಷಮೆ ಯಾಚಿಸಲು ಪ್ರಯತ್ನಿಸುತ್ತಾರೆ.


ಇದನ್ನೂ ಓದಿ:  Allu Arjun ಗೆ ಸಡನ್​ ಆಗಿ ಏನಾಯ್ತು? ವಡಾ ಪಾವ್​, ಡುಮ್ಮ ಅಂಕಲ್​ ಅಂತ ಕಿಂಡಲ್​ ಮಾಡಿದ್ಯಾಕೆ ನೆಟ್ಟಿಗರು?


ಐಫಾ ಅವಾರ್ಡ್ಸ್ 2022 ಸಮಾರಂಭವು ಇತ್ತೀಚೆಗೆ ಅಬುಧಭಿಯಲ್ಲಿ ನಡೆಯಿತು. ಜೂನ್ 25 ರಂದು ಇದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಗುರುವಾರ ಕಲರ್ಸ್ ವಾಹಿನಿ ಇದೇ ಕಾರ್ಯಕ್ರಮದ ಮತ್ತೊಂದು ಪ್ರೋಮೋವನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನಿರೂಪಕರಾದ ರಿತೇಶ್ ದೇಶ್‍ಮುಖ್ ಮತ್ತು ಮನೀಶ್ ಪೌಲ್ ಅವರು ವಿಕ್ಕಿ ಕೌಶಲ್ ಅವರ ಮದುವೆಯ ದಿಬ್ಬಣವನ್ನು ಮರುಸೃಷ್ಟಿ ಮಾಡಿದ ದೃಶ್ಯವಿತ್ತು.

View this post on Instagram


A post shared by ColorsTV (@colorstv)
ಈ ವರ್ಷ ಐಫಾ ಅವಾರ್ಡ್ 2022 ರ ಸಮಾರಂಭದಲ್ಲಿ ಫರ್‍ಫಾರ್ಮಮೆನ್ಸ್ ಮಾಡುತ್ತಿರುವು ತಾರೆಯರಲ್ಲಿ ಸಾರಾ ಅಲಿ ಖಾನ್ ಕೂಡ ಒಬ್ಬರು. ಆಕೆ ಈ ಕಾರ್ಯಕ್ರಮಕ್ಕೆ, ತನ್ನ ತೆರೆಯ ಹಿಂದಿನ ತಯಾರಿಯ ಹಲವಾರು ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


ಐಫಾ 2022 ನಲ್ಲಿ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ಸಿನಿತಾರೆಯರು
ಐಫಾ ಅವಾರ್ಡ್ಸ್ 2022 ರಲ್ಲಿ ಸರ್ದಾರ್ ಉಧಮ್ ಸಿನಿಮಾದ ಅಭಿನಯಕ್ಕಾಗಿ ನಟ ವಿಕ್ಕಿ ಕೌಶಲ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಂಡರು. ಕೃತಿ ಸೇನನ್ ಅವರಿಗೆ ಮಿಮಿ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಶೇರ್‍ಶಾಹ್ ಸಿನಿಮಾ ಕೂಡ ಐಫಾ 2022 ನಲ್ಲಿ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.


ಸಾರಾ ಅಲಿ ಖಾನ್ ಮತ್ತು ಮತ್ತು ವಿಕ್ಕಿ ಕೌಶಲ್, ಲಕ್ಷ್ಮಣ್ ಉಟೇಕರ್ ಅವರ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದು, ಆ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಅವರಿಬ್ಬರೂ ಇತ್ತೀಚೆಗೆ ಆ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.


ಇದನ್ನೂ ಓದಿ:  Rakshit Shetty: ರಿಚರ್ಡ್​ ಆ್ಯಂಟೋನಿ ಬಗ್ಗೆ ಅಪ್​ಡೇಟ್​ ಕೊಟ್ಟ ರಕ್ಷಿತ್, ಮತ್ತೆ ರಿಚ್ಚಿ ಬಂದೇ ಬರ್ತಾನೆ!


ಸಾರಾ ಅಲಿ ಖಾನ್ ಅವರ ತಾಯಿ ಅಮೃತಾ ಸಿಂಗ್ ಈ ಹಿಂದೆ ಸಲ್ಮಾನ್ ಖಾನ್ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಸಾರಾ ತಂದೆ ಸೈಫ್ ಅಲಿ ಖಾನ್ ಕೂಡ ಸಲ್ಮಾನ್ ಜೊತೆ ಸಿನಿಮಾವೊಂದರಲ್ಲಿ ತೆರೆ ಹಂಚಿಕೊಂಡಿದ್ದರು.

Published by:Ashwini Prabhu
First published: