Bollywood: ದಂಪತಿಯಾಗಲಿರುವ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್

ರೊಮ್ಯಾಂಟಿಕ್ ಹಾಸ್ಯಭರಿತವಾದ ಚಿತ್ರದಲ್ಲಿ ವಿಕ್ಕಿ ಕೌಶಲ್​ ಮತ್ತು ಸಾರಾ ಅಲಿ ಖಾನ್​ ಇಬ್ಬರೂ ದಂಪತಿಯಾಗಿ ಮಿಂಚಲಿದ್ದಾರಂತೆ.

ಸಾರಾ ಅಲಿ ಖಾನ್ ಹಾಗೂ ವಿಕ್ಕಿ ಕೌಶಲ್​

ಸಾರಾ ಅಲಿ ಖಾನ್ ಹಾಗೂ ವಿಕ್ಕಿ ಕೌಶಲ್​

  • Share this:
ಹಿಂದಿ ಭಾಷೆಯ ‘ಉರಿ’ ಚಿತ್ರದ ಮೂಲಕ ಪ್ರಸಿದ್ಧಿ ಪಡೆದ ನಟ ಎಂದರೆ ನಮ್ಮೆಲ್ಲರ ಕಣ್ಣು ಮುಂದೆ ಬರುವುದು ನಟ ವಿಕ್ಕಿ ಕೌಶಲ್ (Vicky Kaushal). ಅಷ್ಟರ ಮಟ್ಟಿಗೆ ತಮ್ಮ ಅಮೋಘ ನಟನೆಯಿಂದ ಎಲ್ಲರ ಮನೆ ಮಾತಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.ಈಗ ವಿಕ್ಕಿ ಕೌಶಲ್ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರ ಮುಂದಿನ ರೋಮ್ಯಾಂಟಿಕ್ ಹಾಸ್ಯ ಭರಿತ ಚಿತ್ರವೊಂದರಲ್ಲಿ ಬಾಲಿವುಡ್‌ನ ಉದಯೋನ್ಮುಖ ನಟಿ ಸಾರಾ ಅಲಿ ಖಾನ್‌ರೊಂದಿಗೆ  ( Sara Ali Khan) ನಟಿಸಲಿದ್ದಾರೆ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದಂತಹ ವಿಷಯವಾಗಿದೆ.ಇವರಿಬ್ಬರು ಮೊದಲ ಬಾರಿಗೆ ಜೊತೆಗೂಡಿದ್ದು, ಈ ಚಿತ್ರಕ್ಕೆ ದಿನೇಶ್ ವಿಜಾನ್ ಅವರ ಮ್ಯಾಡಾಕ್ ಫಿಲ್ಮ್ಸ್ ಬೆಂಬಲ ನೀಡುತ್ತಿದೆ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ನಟ ವಿಕ್ಕಿ ಕೌಶಲ್​ ಮತ್ತು ನಟಿ ಸಾರಾ ಅಲಿ ಖಾನ್​ ಇಬ್ಬರೂ ಪತಿ ಮತ್ತು ಪತ್ನಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್ ಹಂಗಾಮಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ರೊಮ್ಯಾಂಟಿಕ್ ಹಾಸ್ಯಭರಿತವಾದ ಚಿತ್ರದಲ್ಲಿ ವಿಕ್ಕಿ ಕೌಶಲ್​ ಮತ್ತು ಸಾರಾ ಅಲಿ ಖಾನ್​ ಇಬ್ಬರೂ ದಂಪತಿಯಾಗಲಿದ್ದು, ತಮ್ಮದೇ ಆದ ಮನೆಯನ್ನು ಹೊಂದಲು ಬಯಸುತ್ತಾರಂತೆ.

Sara Ali Khan Fitness Secret, Sara Ali Khan Does Jump Squats for her Toned Legs and Abs, Sara Ali Khan Reveals her fitness Secret, ನಟಿ ಸಾರಾ ಅಲಿ ಖಾನ್​, ಫಿಡ್ನೆಸ್​ ಸೀಕ್ರೆಟ್​, ಸಾರಾ ಅಲಿ ಖಾನ್​ ಬಳುಕುವ ಬಳ್ಳಿಯಂತಹ ದೇಹ, ಸಾರಾ ಅಲಿ ಖಾನ್​ ಫಿಡ್ನೆಸ್ ಗುಟ್ಟು, Health Tips Sara Ali Khan Reveals her fitness Secret do this exercise and get toned legs and abs ae
ನಟಿ ಸಾರಾ ಅಲಿ ಖಾನ್​


ಭಾರತದ ಪ್ರಧಾನಿಯಾದ ನರೇಂದ್ರ ಮೋದಿ ಅವರು ಪರಿಚಯಿಸಿದ ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಈ ಚಿತ್ರದ ಕಥೆಯಲ್ಲಿ ಬಳಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಸ್ಕ್ರಿಪ್ಟ್ ಅನ್ನು ಕೆಲವು ತಿಂಗಳ ಹಿಂದೆಯೇ ಅಂತಿಮಗೊಳಿಸಲಾಗಿದೆ ಎಂದೂ ಹೇಳಲಾಗುತ್ತಿದೆ.

ಈ ಚಿತ್ರವು ನವೆಂಬರ್ 15, 2021ರಂದು ಸೆಟ್ಟೇರಲಿದೆ. ಉಜ್ಜಯಿನಿ ಮತ್ತು ಗ್ವಾಲಿಯರ್‌ನಲ್ಲಿ ಇದನ್ನು ಚಿತ್ರೀಕರಿಸಲಾಗುವುದು. ಈ ಹಿಂದೆ ಈ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಇನ್ನೊಬ್ಬ ನಟ ಆಯುಷ್ಮಾನ್ ಖುರಾನಾಗೆ ನೀಡಲಾಗಿತ್ತು. ಕಾರಣಾಂತರಗಳಿಂದ ಆಯುಷ್ಮಾನ್‌ಗೆ ಈ ಚಿತ್ರದಲ್ಲಿ ನಟಿಸಲು ಆಗದೆ ಇರುವುದರಿಂದ ಚಿತ್ರ ತಯಾರಕರು ವಿಕ್ಕಿ ಕೌಶಲ್‌ರನ್ನು ಈ ಚಿತ್ರದ ಮುಖ್ಯ ಪಾತ್ರದಲ್ಲಿ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: Vicky Kaushal: ವಿಕ್ಕಿ ಕೌಶಲ್ ಅಭಿನಯದ The Immortal Ashwatthama ಚಿತ್ರದ ಚಿತ್ರೀಕರಣ ಸ್ಥಗಿತ?

ಲಕ್ಷ್ಮಣ್​ ಉಟೇಕರ್ ಈ ಹಿಂದೆ ಸುದ್ದಿ ಮಾಧ್ಯಮದವರ ಜೊತೆಯಲ್ಲಿ ಮಾತನಾಡುತ್ತಾ "ರೊಮ್ಯಾಂಟಿಕ್-ಹಾಸ್ಯಭರಿತ ಚಿತ್ರಕ್ಕೆ ನಾವು ವಿಕ್ಕಿ ಮತ್ತು ಸಾರಾರನ್ನು ಹಾಕಿಕೊಂಡಿದ್ದು. ಇದು ಮಧ್ಯ ಪ್ರದೇಶದಲ್ಲಿರುವ ಉಜ್ಜಯಿನಿ ಅಥವಾ ಗ್ವಾಲಿಯರ್‌ನಲ್ಲಿ ನಡೆಯುವಂತಹ ಚಿತ್ರ ಕಥೆ ಹೊಂದಿದೆ. ಇದು ನನ್ನ ಹಿಂದಿನ ಚಲನಚಿತ್ರಗಳಂತೆ ಸಣ್ಣ-ಪಟ್ಟಣದ ಪ್ರೇಮ ಕಥೆಯಾಗಿದೆ, ಇದರಲ್ಲಿ ನಾನು ಸಾಮಾಜಿಕ ಸಂದೇಶ ಹೊಂದಿದ್ದೇನೆ ಎಂದು ವಿವರಿಸಿದ್ದಾರೆ.

“ನಾನು ಯಾವಾಗಲೂ ವಿಕ್ಕಿಯೊಂದಿಗೆ ಕೆಲಸ ಮಾಡಲು ಬಯಸುತ್ತಿದ್ದೆ, ಅವರು ಒಬ್ಬ ಅದ್ಭುತ ನಟ. ನಾನು ಅವರ ಅಭಿಮಾನಿ. ಸಾರಾ ಅಲಿ ಖಾನ್​ ಸಹ ಈ ಚಿತ್ರದಲ್ಲಿನ ಪಾತ್ರಕ್ಕೆ ಸೂಕ್ತವಾಗಿದ್ದಾರೆ. ಇವರಿಬ್ಬರ ಜೋಡಿಯು ಹೊಸದಾಗಿದ್ದು, ಪ್ರೇಕ್ಷಕರನ್ನು ರಂಜಿಸುವಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಹೇಳಿದ್ದಾರೆ ಉಟೇಕರ್​.

ಇದನ್ನೂ ಓದಿ: ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ Rashmika Mandanna: ಆರಂಭವಾಗಿದೆ ಪರ-ವಿರೋಧದ ಚರ್ಚೆ

ವಿಕ್ಕಿ ಕೌಶಲ್ ಕೈಯಲ್ಲಿ ಈ ಚಿತ್ರದ ಜೊತೆಗೆ ‘ಸರ್ದಾರ್ ಉಧಮ್’ ಮತ್ತು ‘ಶ್ರೀ ಲೆಲೆ’ ಸಿನಿಮಾಗಳೂ ಇವೆ.  ಸಾರಾ ಅಲಿ ಖಾನ್ ‘ಅತ್ರಂಗಿ ರೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆನಂದ್ ಎಲ್ ರೈ ಅವರ ಅತ್ರಂಗಿ ರೇ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್ ಹಾಗೂ ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಾರಾ ಅಲಿ ಖಾನ್ ಕಡೆಯದಾಗಿ ನಟಿಸಿದ ಸಿನಿಮಾ ಕೂಲಿ ನಂ. 1. ವರುಣ್ ಧವನ್ ಜೊತೆ ಅಭಿನಯಿಸಿದ ಈ ಚಿತ್ರ ಒಟಿಟಿ ಮೂಲಕ ತೆರೆಕಂಡಿತ್ತು. ಕಾಮಿಡಿ ಕಪಲ್ ಆಗಿ ಮಿಂಚಬೇಕಿದ್ದ ಈ ಜೋಡಿಯ ಮೇಲೆ ತುಂಬಾ ನಿರೀಕ್ಷೆ ಇತ್ತು. ಆದರೆ ಸಿನಿಮಾ ಹೇಳ ಹೆಸರಿಲ್ಲದಂತೆ ನೆಲ ಕಚ್ಚಿತ್ತು.
Published by:Anitha E
First published: