Anitha EAnitha E
|
news18-kannada Updated:January 23, 2021, 8:42 AM IST
ಅಮ್ಮ ಹಾಗೂ ತಮ್ಮನೊಂದಿಗೆ ಸಾರಾ ಅಲಿ ಖಾನ್
ಕೊರೋನಾ ಲಾಕ್ಡೌನ್ ಹಾಗೂ ಸೋಂಕಿನ ಭೀತಿಯಿಂದಾಗಿ ಎಲ್ಲೆಡೆ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಿದೆ. ಇದಕ್ಕೆ ಮಾಲ್ಡೀವ್ಸ್ ಸಹ ಹೊರತಾಗಿಲ್ಲ. ಇದರಿಂದಾಗಿಯೇ ಭಾರತದಲ್ಲಿ ವೈಮಾನಿಕ ಸೇವೆ ಆರಂಭವಾದಾಗಿನಿಂದ ನೆರೆರಾಷ್ಟ್ರ ಮಾಲ್ಡೀವ್ಸ್ ನೆಲ ಕಚ್ಚಿರುವ ಪ್ರವಾಸೋದ್ಯವನ್ನು ಮತ್ತೆ ಮೇಲೆತ್ತುವ ಉದ್ದೇಶದಿಂದ ಭಾರತದಲ್ಲಿರುವ ಸಿನಿ ತಾರೆಯರಿಗೆ ರಿಯಾಯ್ತಿ ನೀಡುವ ಮೂಲಕ ತಮ್ಮ ದೇಶಕ್ಕೆ ಕರೆಸಿಕೊಳ್ಳುತ್ತಿದೆ. ಇದಿರಂದಾಗಿಯೇ ಟಾಲಿವುಡ್, ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ನ ನಟ-ನಟಿಯರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಮಾಲ್ಡೀವ್ಸ್ಗೆ ಭೇಟಿ ಕೊಡುತ್ತಿದ್ದಾರೆ. ಈ ಕಾರಣದಿಂದಲೇ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮಾಲ್ಡೀವ್ಸ್ ಅನ್ನು ಮುಂಬೈನ ಜುಹೂ ಹಾಗೂ ಬಾಂದ್ರಾ ಎಂದು ಟ್ರೋಲ್ ಮಾಡಿದ್ದರು. ಇನ್ನು ಮಾಲ್ಡೀವ್ಸ್ಗೆ ಹೋಗುತ್ತಿರುವ ಸೆಲೆಬ್ರಿಟಿಗಳ ಸಂಖ್ಯೆಯಲ್ಲಿ ಇನ್ನೂ ಯಾವುದೇ ಬದಲಾವಣೆ ಆಗಿಲ್ಲ. ಸಾಕಷ್ಟು ಮಂದಿ ಅಲ್ಲಿಗೆ ಭೇಟಿ ನೀಡುತ್ತಲದೇ ಇದ್ದಾರೆ.
ನಟಿ ಸಾರಾ ಅಲಿ ಖಾನ್ ಈ ಹಿಂದೆ ತಮ್ಮ ಸಹೋದರ ಇಬ್ರಾಹಿಂ ಜೊತೆ ಒಮ್ಮೆ ಮಾಲ್ಟೀವ್ಸ್ಗೆ ಹೋಗಿದ್ದರು. ಈಗ ಮತ್ತೆ ತಮ್ಮ ಅಮ್ಮ ಹಾಗೂ ಸಹೋದರನೊಂದಿಗೆ ಮತ್ತೆ ಮಾಲ್ಡೀವ್ಸ್ಗೆ ಭೇಟಿ ನೀಡಿದ್ದಾರೆ. ಅಲ್ಲಿ ಯಾವ ದ್ವೀಪದಲ್ಲಿ ಉಳಿದುಕೊಂಡಿದ್ದಾರೆ ಹಾಗೂ ಏನೆಲ್ಲ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದೆಲ್ಲ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಈ ಹಿಂದೆಯೇ ಹೇಳಿದಂತೆ ರೆಸಾರ್ಟ್ ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಉಳಿದುಕೊಂಡಿರುವ ದ್ವೀಪ ಹಾಗೂ ರೆಸಾರ್ಟ್ಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ಸ್ಟಾರ್ಗಳು ಪ್ರಚಾರ ಕೊಡಬೇಕು. ಅಂತೆಯೇ ಸಾರಾ ಸಹ ಮಾಡುತ್ತಿದ್ದಾರೆ.
ಮಾಲ್ಟೀವ್ಸ್ಗೆ ಹೋದರೂ ಅಲ್ಲಿಯೂ ಫಿಟ್ನೆಸ್ ಬಗ್ಗೆ ಕಾಳಜಿ ತಪ್ಪಿಲ್ಲ. ಉಳಿದುಕೊಂಡಿರುವ ರೆಸಾರ್ಟ್ನಲ್ಲಿರುವ ವ್ಯಾಯಾಮದ ಕೋಣೆಯಲ್ಲಿ ವಿಭಿನ್ನ ಪ್ರಕಾರದ ವರ್ಕೌಟ್ ಮಾಡುವುದನ್ನು ಅಭ್ಯಾಸ ಮಾಡುತ್ತಿದ್ದಾರೆ ಸಾರಾ.
ಅಮ್ಮ ಮತ್ತು ಸಹೋದರನೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್, ಮುಸಂಜೆಯಾಗುತ್ತಿದಂತೆಯೇ ಸೈಕ್ಲಿಂಗ್ ಹೀಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ ನವಾಬನ ಮಗಳು ಸಾರಾ.

ಅಮ್ಮ ಹಾಗೂ ತಮ್ಮನೊಂದಿಗೆ ಸಾರಾ ಅಲಿ ಖಾನ್
ಇನ್ನು ಅವರ ಸಿನಿಮಾದ ವಿಷಯಕ್ಕೆ ಬಂದರೆ ಡೇವಿಡ್ ಧವನ್ ನಿರ್ದೇಶನದ ಹಾಗೂ ವರುಣ್ ಧವನ್ ನಾಯಕನಾಗಿ ನಟಿಸಿರುವ ಕೂಲಿ ನಂ 1 ಸಿನಿಮಾ ಒಟಿಟಿ ಮೂಲಕ ರಿಲೀಸ್ ಆಗಿದ್ದು, ಅದು ಊಹಿಸಿದಷ್ಟು ಯಶಸ್ಸು ಕಾಣಲಿಲ್ಲ.
ಇದನ್ನೂ ಓದಿ: Pogaru: ಸಾವಿರ ಸ್ಕ್ರೀನ್ಗಳಲ್ಲಿ ಪೊಗರು ರಿಲೀಸ್: ಚಿರು ನೆನೆದು ಕಣ್ಣೀರಿಟ್ಟ ಧ್ರುವ ಸರ್ಜಾ..!
ಸಾರಾ ಅಲಿ ಖಾನ್ ಮಾತ್ರವಲ್ಲ, ಮಾಲ್ಡೀವ್ಸ್ನ ದ್ವೀಪಗಳಲ್ಲಿ ಯಶ್-ರಾದಿಕಾ, ತೆಲುಗಿನ ಹಿರಿಯ ನಟ ಮೋಹನ್ ಬಾಬು ಸಹ ತಮ್ಮ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ.
Published by:
Anitha E
First published:
January 23, 2021, 8:42 AM IST