• Home
  • »
  • News
  • »
  • entertainment
  • »
  • Rakshit Shetty: ಸಿಂಪಲ್ ಸ್ಟಾರ್ ಬರ್ತ್ ಡೇಗೆ ಸಪ್ತಸಾಗರದಾಚೆ ಎಲ್ಲೋ ಸಿಕ್ಕಿತು ಗಿಫ್ಟ್! ಹೇಗಿದೆ ಗೊತ್ತಾ ಟೀಸರ್?

Rakshit Shetty: ಸಿಂಪಲ್ ಸ್ಟಾರ್ ಬರ್ತ್ ಡೇಗೆ ಸಪ್ತಸಾಗರದಾಚೆ ಎಲ್ಲೋ ಸಿಕ್ಕಿತು ಗಿಫ್ಟ್! ಹೇಗಿದೆ ಗೊತ್ತಾ ಟೀಸರ್?

ಸಪ್ತಸಾಗರದಾಚೆ ಎಲ್ಲೋ

ಸಪ್ತಸಾಗರದಾಚೆ ಎಲ್ಲೋ

'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಅಭಿನಯದ ಮತ್ತೊಂದು ಬಹು ನಿರೀಕ್ಷಿತ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದ ಟೀಸರ್ ಇಂದು ಸಂಜೆ 6 ಗಂಟೆಗೆ ರಿಲೀಸ್ ಆಗಿದೆ. 1 ನಿಮಿಷ 44 ಸೆಕೆಂಡ್‌ನ ಈ ಟೀಸರ್ ರಕ್ಷಿತ್ ಶೆಟ್ಟಿ ಬರ್ತ್ ಡೇ ಗಿಫ್ಟ್ ಎನ್ನುವಂತೆ ಭರ್ಜರಿಯಾಗಿ ಮೂಡಿ ಬಂದಿದೆ.

  • Share this:

‘ಸಿಂಪಲ್ ಸ್ಟಾರ್’ (Simple Star), ನಟ ರಕ್ಷಿತ್ ಶೆಟ್ಟಿ (ACtror Rakshit Shetty) ಇಂದು ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ಅವರ ನಟನೆಯ ‘777 ಚಾರ್ಲಿ’ ಸಿನಿಮಾ (777 Charlie) ತೆರೆಗೆ ಬರೋದಕ್ಕೆ ರೆಡಿಯಾಗಿದ್ದು, ಎಲ್ಲೆಡೆ ಕಟೌಟ್‌ಗಳು (Cutout) ರಾರಾಜಿಸುತ್ತಿದೆ. ಜೂನ್ 10ರಂದು ಸಿನಿಮಾ ತೆರೆಗೆ ಬರಲಿದ್ದು, ಕ್ಷಣಗಣನೆ ಆರಂಭವಾಗಿದೆ. ಇದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಗಿಫ್ಟ್ (Gift) ಅಂತಾನೇ ಹೇಳಲಾಗ್ತಿದೆ. ಇದರ ಜೊತೆಗೆ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ (Most Expected Movie) ‘ಸಪ್ತಸಾಗರದಾಚೆ ಎಲ್ಲೋ’ (Saptha Sagaradaache Ello) ಕೂಡ ರೆಡಿಯಾಗಿದೆ. ರಕ್ಷಿತ್ ಶೆಟ್ಟಿ ಬರ್ತ್ ಡೆ ಗಿಫ್ಟ್ ಎನ್ನುವಂತೆ ಈ ಸಿನಿಮಾದ ಟೀಸರ್ (Teaser) ಇಂದು ರೆಡಿಯಾಗಿದೆ. ಹಾಗಾದ್ರೆ ಸಪ್ತಸಾಗರದಾಚೆ ಎಲ್ಲೋ ಟೀಸರ್ ಹೇಗಿದೆ? ಈ ಟೀಸರ್ ನೋಡಿದ ಪ್ರೇಕ್ಷಕರು, ಅಭಿಮಾನಿಗಳು (Fans) ಏನು ಹೇಳಿದ್ದಾರೆ? ತಿಳಿದುಕೊಳ್ಳೋಣ ಬನ್ನಿ…


‘ಸಪ್ತಸಾಗರದಾಚೆ ಎಲ್ಲೋ’ ಟೀಸರ್ ರಿಲೀಸ್


ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಟೀಸರ್ ಇಂದು ಸಂಜೆ 6 ಗಂಟೆಗೆ ರಿಲೀಸ್ ಆಗಿದೆ. 1 ನಿಮಿಷ 44 ಸೆಕೆಂಡ್‌ನ ಈ ಟೀಸರ್ ರಕ್ಷಿತ್ ಶೆಟ್ಟಿ ಬರ್ತ್ ಡೇ ಗಿಫ್ಟ್ ಎನ್ನುವಂತೆ ರಿಲೀಸ್ ಆಗಿದೆ.
ಹೇಮಂತ್ ಕುಮಾರ್ ಆ್ಯಕ್ಷನ್ ಕಟ್


ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಹೇಮಂತ್ ರಾವ್ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್‌ ಬಹುತೇಕ ಮುಕ್ತಾಯವಾಗಿದೆ. ಈ ನಡುವೆ ಕೆಲವೊಂದಿಷ್ಟು ಭಾಗದ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಆ ಭಾಗವನ್ನು ಈ ಮಳೆಗಾಲದಲ್ಲಿ ಸೆರೆಹಿಡಿಯಲು ನಿರ್ದೇಶಕರು ಪ್ಲಾನ್‌ ಮಾಡಿದ್ದಾರೆ.


ಇದನ್ನೂ ಓದಿ: 777 Charlie: ತಮಿಳುನಾಡಿನಲ್ಲೂ ಚಾರ್ಲಿ ಹವಾ, ಈ ಥರ ಕಟೌಟ್​​ ಯಾವ್​ ಹೀರೋಗಳಿಗೂ ಹಾಕಿಲ್ಲ ರೀ


ಈ ಸಿನಿಮಾಕ್ಕಾಗಿ ತೂಕ ಹೆಚ್ಚಿಸಿಕೊಂಡ ರಕ್ಷಿತ್


ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಹೇಮಂತ್‌ ರಾವ್‌, ʼಈ ವರೆಗೂ ಚಿತ್ರದ ಮೊದಲ ಭಾಗವನ್ನು 70 ದಿನಗಳಲ್ಲಿ ಶೂಟಿಂಗ್‌ ಮುಗಿಸಿದ್ದೇವೆ. ಇದೀಗ ಎರಡನೇ ಭಾಗದ ಚಿತ್ರೀಕರಣಕ್ಕೆ ಪ್ಲಾನ್‌ ನಡೆಯುತ್ತಿದೆ. ನಮ್ಮ ಪ್ರಕಾರ ಸರಿ ಸುಮಾರು 50 ದಿನಗಳ ಯೋಜನೆ ಹಾಕಿದ್ದೇವೆ. ಈ ಪಾತ್ರಕ್ಕಾಗಿ ರಕ್ಷಿತ್‌ ಅವರು ಸರಿ ಸುಮಾರು 25 ಕೆಜಿ ತೂಕ ಹೆಚ್ಚಿಸಿಕೊಳ್ಳಲಿದ್ದಾರೆʼ ಎಂದಿದ್ದಾರೆ.


ತಮಿಳುನಾಡಿನಲ್ಲೂ ಚಾರ್ಲಿ ಹವಾ


ರಕ್ಷಿತ್ ಶೆಟ್ಟಿ ನಟನೆ ಜೊತೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ಟ್ರೆಂಡ್  ಸೃಷ್ಟಿ ಮಾಡಿದವರು ಎಂದರೆ ತಪ್ಪಾಗಲಾರದು. ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ವಿಭಿನ್ನ ಮ್ಯಾನರಿಸಂ, ಕಿಕ್ ಕೊಡುವ ಡೈಲಾಗ್ಸ್ ರಕ್ಷಿತ್ ಶೆಟ್ಟಿ ಅವರ ಟ್ರೇಡ್ ಮಾರ್ಕ್ ಎನ್ನಬಹುದು. ತುಘಲಕ್'ನಿಂದ ತಮ್ಮ ಸಿನಿಮಾ ಜರ್ನಿ ಆರಂಭಿಸಿ ಈಗ '777 ಚಾರ್ಲಿ'ಗೆ ಬಂದು ನಿಂತಿದ್ದಾರೆ. ಅವರ ಪ್ರತಿ ಸಿನಿಮಾವೂ ಡಿಫ್ರೆಂಟ್. ಇದೀಗ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ‘777 ಚಾರ್ಲಿ’ ಜೂನ್‌ 10ರಂದು ಬಿಡುಗಡೆಯಾಗಲಿದೆ. ಈ ಚಿತ್ರ ಎಷ್ಟು ನಿರೀಕ್ಷೆ ಹುಟ್ಟಿಸಿದೆ ಎಂದರೆ ತಮಿಳುನಾಡಿನಲ್ಲಿ ಚಾರ್ಲಿ ಕಟೌಟ್​ ರೆಡಿ ಇದೆ


ಇದನ್ನೂ ಓದಿ: 777 Charlie: ಜೂನ್ 10ರಿಂದ ಚಾರ್ಲಿ ಓಟ ಶುರು, 21 ಸಿಟಿಗಳಲ್ಲಿ ಚಾರ್ಲಿ ಪೇಯ್ಡ್ ಪ್ರೀಮಿಯರ್ ಶೋ


ಜೂನ್ 10ರಂದು ಚಾರ್ಲಿ ರಿಲೀಸ್


ಇನ್ನುಈ ಚಿತ್ರದ ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರೂ .21 ಕೋಟಿಗೆ ಕಲರ್ಸ್‌ ಕನ್ನಡದ ಪಾಲಾಗಿದೆ. ಡಿಜಿಟಲ್‌ ಹಕ್ಕು ಕಲರ್ಸ್‌ ಸಂಸ್ಥೆಯ ಒಡೆತನದ ವೂಟ್‌ ಓಟಿಟಿಗೆ ಸಿಕ್ಕಿದೆ. ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರೂ .21 ಕೋಟಿಗೆ ಕಲರ್ಸ್‌ ಕನ್ನಡದ ಪಾಲಾಗಿದೆ.  ಇನ್ನು ಜೂನ್​ 10ರಂದು ಬಿಡುಗಡೆಯಾಗುವ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Published by:Annappa Achari
First published: