ಬೆರಳು ಮುರಿದುಕೊಂಡ ದಂಗಲ್ ಚೆಲುವೆ! ಕುಸ್ತಿ ಕಾರಣವಲ್ಲ!; ಮತ್ತೇನು? 

Sanya Malhotra: ಲಾಕ್​ಡೌನ್​​ನಿಂದಾಗಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿರುವ ಕಾರಣ ಅತ್ತ ವಾಪಸ್ ದೆಹಲಿಗೂ ಹೋಗಲಾರದೇ, ಮುಂಬೈನಲ್ಲಿ ಒಂಟಿಯಾಗಿ ವಾಸವಾಗಿದ್ದರು ಈ ದಂಗಲ್ ಚೆಲುವೆ. ಮನೆಯಲ್ಲಿ ಒಬ್ಬರೇ ಇರುವ ಕಾರಣ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಸಾನ್ಯಾ

ಸಾನ್ಯಾ ಮಲ್ಹೋತ್ರಾ

ಸಾನ್ಯಾ ಮಲ್ಹೋತ್ರಾ

  • Share this:
ಸಾನ್ಯಾ ಮಲ್ಹೋತ್ರಾ. ದಂಗಲ್ ಮೂಲಕ 2016ರಲ್ಲಿ ಬಾಲಿವುಡ್​ಗೆ ಪದಾರ್ಪಣೆ ಮಾಡಿದ  ದೆಹಲಿ ಮೂಲದ ಚೆಲುವೆ. ಎಂಟ್ರಿಯಲ್ಲೇ ಬಾಕ್ಸ್​ಆಫೀಸ್ ದಾಖಲೆ ಬರೆದ ಈ ಸುಂದರಿ ಮತ್ತೆ ಹಿಂದಿರುಗಿ ನೋಡಲಿಲ್ಲ. ಪಟಾಖಾ, ಬಧಾಯಿ ಹೋ, ಫೋಟೋಗ್ರಾಫ್ ಸೇರಿದಂತೆ ಇನ್ನೂ ಮೂರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ ಸದ್ಯ ಲಾಕ್​ಡೌನ್​​ನಿಂದಾಗಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿರುವ ಕಾರಣ ಅತ್ತ ವಾಪಸ್ ದೆಹಲಿಗೂ ಹೋಗಲಾರದೇ, ಮುಂಬೈನಲ್ಲಿ ಒಂಟಿಯಾಗಿ ವಾಸವಾಗಿದ್ದರು ಈ ದಂಗಲ್ ಚೆಲುವೆ. ಮನೆಯಲ್ಲಿ ಒಬ್ಬರೇ ಇರುವ ಕಾರಣ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಸಾನ್ಯಾ.

ಹೀಗೆ ಒಮ್ಮೆ ಚಟ್ನಿ ಮಾಡಿಕೊಳ್ಳಲು ಅವರು ಮಿಕ್ಸಿ ಆನ್ ಮಾಡಿದರಂತೆ. ತಕ್ಷಣ ಮಿಕ್ಸಿ ಜಾರ್​​​ ಮುಚ್ಚಳ ಹಾರಿದೆ. ತಕ್ಷಣ ಮಿಕ್ಸಿ ಆಫ್ ಮಾಡಿ ಮುಚ್ಚಳವನ್ನು ಮತ್ತೆ ಹಾಕುವ ಬದಲು, ಗಾಬರಿಯಾದ ಸಾನ್ಯಾ ಮಿಕ್ಸಿ ಆನ್​​ನಲ್ಲಿರುವಾಗಲೇ ಮುಚ್ಚಳ ಹಾಕಲು ಯತ್ನಿಸಿದ್ದಾರೆ. ಆಗ ಅಚಾನಕ್ಕಾಗಿ ಮುಚ್ಚಳದ ಬದಲು ತಮ್ಮ ಕೈಯನ್ನೇ ಜಾರ್ ಒಳಗಿಟ್ಟಿದ್ದಾರೆ. ಅಡಗೈ ಕಿರುಬೆರಳು ಛಿದ್ರವಾಗಿ, ಜಾರ್ ಒಳಗೇ ರಕ್ತಸುರಿದು, ಚಟ್ನಿಯೆಲ್ಲಾ ಕೆಂಪಗಾಗಿದೆ. ತಕ್ಷಣ ಕೈವಾಪಸ್ ಎತ್ತುಕೊಂಡಿದ್ದಾರಾದರೂ ಅಷ್ಟರಲ್ಲಿ ಸಾಕಷ್ಟು ರಕ್ತ ಸೋರಿ ನಿತ್ರಾಣರಾಗಿದ್ದಾರೆ.

  
View this post on Instagram
 

Mah house mah rulezzzz @harshita02


A post shared by Sanya Malhotra💥 (@sanyamalhotra_) on


ಹೀಗಾಗಿ ತಮ್ಮ ಫ್ರೆಂಢ್ಸ್​​ಗೆ ಕರೆ ಮಾಡಿ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಆಗಲೇ ಅವರ ಮನೆಗೆ ಧಾವಿಸಿರುವ ಇಬ್ಬರು ಫ್ರೆಂಡ್ಸ್, ಸಾನ್ಯಾರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಸಾನ್ಯಾ ಕೈಯನ್ನು ಪರೀಕ್ಷಿಸಿದ ವೈದ್ಯರೇ ತಲೆಕೆಡಿಸಿಕೊಂಡಿದ್ದಾರೆ. ಯಾಕೆಂದರೆ ಅವರ ಕಿರುಬೆರಳಿನ ಮೂಳೆ ಎರಡು ಕಡೆ ಮುರಿದಿದ್ದು, ಒಂದು ಕಡೆ ಡಿಸ್ಲೊಕೇಟ್ ಆಗಿದೆ, ಜತೆಗೆ ಮೂರ್ನಾಲ್ಕು ಕಡೆ ಕತ್ತರಿಸಿಕೊಂಡಿದೆ. ತಕ್ಷಣ ಚಿಕಿತ್ಸೆ ಪ್ರಾರಂಭಿಸಿರುವ ವೈದ್ಯರು ಅವರ ಎಡಗೈ ಕಿರುಬೆರಳಿನ ಸರ್ಜರಿಯನ್ನೂ ಮಾಡಿದ್ದಾರೆ.

ಸುಮಾರು ಎರಡು ವಾರಗಳ ಬಳಿಕ ಸಾನ್ಯಾ ಈ ಘಟನೆಯ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟಿನಲ್ಲಿ ಹೇಳಿಕೊಂಡಿದ್ದಾರೆ. ಘಟನೆಯ ಬಳಿಕ ಒಬ್ಬರೇ ಮನೆಯಲ್ಲಿದ್ದುಕೊಂಡು, ಎಲ್ಲ ಕೆಲಸಗಳನ್ನೂ ಮಾಡುವುದು ಕಷ್ಟವಾಗಲಿದೆ ಅಂತ ಅರಿವಾಗಿ, ತಮ್ಮ ಹಳೆಯ ರೂಮ್​​ಮೇಟ್​​  ಹರ್ಷಿತಾ ಕಾಲ್ರಾರನ್ನು ಜೊತೆಗೆ ಇರಿಸಿಕೊಂಡಿದ್ದಾರೆ. ಜತೆಗೆ ಇನ್ನು ಕೆಲವೇ ದಿನಗಳಲ್ಲಿ ಮುಂಬೈನಿಂದ ದೆಹಲಿಯ ತಮ್ಮ ಮನೆಗೆ ಹೋಗಿ, ಬೆರಳು ಸರಿಯಾಗುವವರೆಗೂ ರೆಸ್ಟ್ ಮಾಡಲು ಆಲೋಚಿಸಿದ್ದಾರೆ ಸಾನ್ಯಾ. ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ದಂಗಲ್ ಚಿತ್ರದ ಮತ್ತೊಬ್ಬ ನಟಿ ಫಾತಿಮಾ ಸನಾ ಶೇಖ್, ಯಾಮಿ ಗೌತಮ್, ಅಪಾರಶಕ್ತಿ ಖುರಾನಾ ಸೇರಿದಂತೆ ಹಲವು ಸ್ಟಾರ್ಸ್ ಸಾನ್ಯಾಗೆ ಬೇಗ ಗುಣಮುಖರಾಗಲು ಹಾರೈಸಿದ್ದಾರೆ.

ಕಬೀರ್ ಸಿಂಗ್ ಸಿನಿಮಾದಿಂದ ಪ್ರೇರಿತನಾಗಿ ವೈದ್ಯನೆಂದು ವಂಚಿಸುತ್ತಿದ್ದ ವ್ಯಕ್ತಿ ಪೊಲೀಸರ ಬಲೆಗೆ
First published: